Saturday, May 21, 2022

ಪುನೀತ್ ರಾಜ್ ಕುಮಾರ್ ಅವರ ಕೊನೆಯ 5 ನಿಮಿಷ..! ಅಪ್ಪು ಕಾರ್ ಡ್ರೈವರ್ ಬಿಚ್ಚಿಟ್ಟ ಸತ್ಯ..!!

ಬೆಂಗಳೂರು: ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಹೃದಯಾಘಾತದಿಂದ ಶುಕ್ರವಾರ ಬೆಳಗ್ಗೆ ಅಸುನೀಗಿದ್ದು ಅವರ ಅಗಲಿಕೆ ಹೊಂದುವುದಕ್ಕೆ ಮೊದಲು ಆರೋಗ್ಯದಲ್ಲಿ ಏನೇನು ವ್ಯತ್ಯಾಸವಾಯಿತು ಎಂದು ವಿಕ್ರಂ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ರಂಗನಾಥ್ ನಾಯಕ್ ಮಾಹಿತಿ ನೀಡಿದ್ದರು.

ಹೌದು ಶುಕ್ರವಾರ ಬೆಳಗ್ಗೆ ಎದ್ದ ಪುನೀತ್ ರಾಜ್ ಕುಮಾರ್ ರವರು ಎಂದಿನಂತೆ ವರ್ಕೌಟ್ ಗೆ ಜಿಮ್ ಗೆ ಹೋಗಿದ್ದರು. ಅಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದು ಪಕ್ಕದ ಫ್ಯಾಮಿಲಿ ಡಾಕ್ಟರ್ ಆದ ಡಾ.ರಮಣರ ಬಳಿಗೆ ಹೋಗಿದ್ದಾರೆ.


ಅಲ್ಲಿ ಇಸಿಜಿ ಮಾಡಿದ್ದು ಇಸಿಜಿಯಲ್ಲಿ ಹೃದಯಾಘಾತವಾಗಿದೆ ಎಂದು ತೋರಿಸಿತ್ತು. ಕೂಡಲೇ ವಿಕ್ರಂ ಆಸ್ಪತ್ರೆಗೆ ಪುನೀತ್ ಅವರನ್ನು ಕರೆತರಲಾಗಿತ್ತು.

ದಾರಿಮಧ್ಯದಲ್ಲಿ ಅವರಿಗೆ ಹೃದಯಾಘಾತವಾಗಿದ್ದು ಕರೆದುಕೊಂಡು ಬರುವಾಗ ಅವರ ಹೃದಯ ಚಟುವಟಿಕೆ ಮಾಡುತ್ತಿರಲಿಲ್ಲ ನಂತರ ಸುಮಾರು 3 ಗಂಟೆಗಳ ಕಾಲ ವೆಂಟಿಲೇಟರ್ ನಲ್ಲಿಟ್ಟು ಹೃದಯಕ್ಕೆ ಮಸಾಜ್ ಮಾಡಿ ನಮ್ಮ ಕೈಲಾದ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಆದರೆ ಅಷ್ಟಕ್ಕೂ ಆ ಕೊನೆಯ ಕ್ಷಣದಲ್ಲಿ‌ ನಿಜಕ್ಕೂ ಏನು ನಡೆಯಿತೆಂದು ಅಪ್ಪು ಕೊನೆಯದಾಗಿ ಮಲಗಿದ್ದ ಅದೇ ಕಾರ್ ನ ಡ್ರೈವರ್ ಬಾಬು ಸತ್ಯ ಬಿಚ್ಚಿಟ್ಟಿದ್ದಾರೆ. ಗುರುವಾರ ರಾತ್ರಿಯಷ್ಟೆ ಗುರುಕಿರಣ್ ಅವರ ಮನೆಯಲ್ಲಿ ಬರ್ತ್ ಡೆ ಪಾರ್ಟಿ ಮಾಡುತ್ತಾ ಹಾಡಿ ನಲಿದ ಅಪ್ಪು ರಾತ್ರಿ 11.20 ರ ತನಕ ಕೂಡ ಎಂಜಾಯ್ ಮಾಡಿದ್ದರು.


ಅಲ್ಲದೇ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ಧ್ ಅವರ ಜೊತೆ ಮಾತನಾಡುತ್ತಾ ಕುಳಿತಿದ್ದು ಅಲ್ಲಿಯೂ ಕೂಡ ಅನಿರುದ್ಧ್ ಅವರ ಜೊತೆ ವ್ಯಾಯಾಮ ಹಾಗೂ ಸೈಕ್ಲಿಂಗ್ ಬಗ್ಗೆ ಅಪ್ಪು ಮಾತನಾಡಿದ್ದರು.

ಅನಿರುದ್ಧ್ ಅವರು ಸೈಕ್ಲಿಂಗ್ ಸ್ಪರ್ಧೆಯೊಂದರ ಬಗ್ಗೆ ತಿಳಿಸಿ ಅದರಲ್ಲಿ ಭಾಗವಹಿಸುವಂತೆ ತಿಳಿಸಿದ್ದು ಎಂದಿನಂತೆ ಪುನೀತ್ ತಮ್ಮ ಮುಗ್ಧತೆಯಿಂದ ನಕ್ಕು ಸುಮ್ಮನಾಗಿದ್ದರು. ಆನಂತರ ಕಾರ್ಯಕ್ರಮ ಮುಗಿಸಿ 11.45ರ ಸಮಯಕ್ಕೆ ಮನೆಗೆ ಮರಳಿದ್ದರು.


ಮನೆಗೆ ಬಂದು ಆರಾಮಾಗೇ ಅಪ್ಪು ಬೆಳಿಗ್ಗೆ ಎಂದಿನಂತೆ ತಮ್ಮ ದಿನಚರಿಗಳನ್ನು‌ ಮುಗಿಸಿ ಯಾಕೋ ಸ್ವಲ್ಪ ಸುಸ್ತಾಗ್ತಾ ಇದೆ ಎಂದು ಅಶ್ವಿನಿ ಅವರ ಬಳಿ ಹೇಳಿಕೊಂಡಿದ್ದಾರೆ.

ಗಾಬರಿಗೊಂಡ ಅಶ್ವಿನಿ ಅವರು ಆಸ್ಪತ್ರೆಗೆ ಹೋಗೋಣ ಎಂದಿದ್ದು ಆದರೆ ಆಗಲೂ ಸಹ ಅಪ್ಪು ಬೇಡ ರೆಸ್ಟ್ ಮಾಡಿದರೆ ಸರಿ ಹೋಗುತ್ತದೆ ಎಂದಿದ್ದಾರೆ.

ಆದರೆ ಅಶ್ವಿನಿ ಮಾತ್ರ ಫ್ಯಾಮಿಲಿ ಡಾಕ್ಟರ್ ಬಳಿಯಾದರೂ ಹೋಗಿ ಬರೋಣ ಎಂದು ಕಾಳಜಿ ತೋರಿದ್ದು ಕೊನೆಗೆ ಇಬ್ಬರೂ ಕಾರ್ ನಲ್ಲಿ ರಮಣ ಕ್ಲಿನಿಕ್ ಗೆ ತೆರಳಿದ್ದಾರೆ. ಇನ್ನು ಮನೆಯಿಂದ ಹೊರಡುವಾಗ ಪುನೀತ್ ಅವರು ಬಹಳ ಹಾರಾಮಾಗಿದ್ದ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದೆ.
ಇನ್ನು ಬಾಡಿಗಾರ್ಡ್ ಚಲಪತಿ ಅವರನ್ನು ಬರೋದು ಬೇಡ ಎಂದು ಹೇಳಿದ ಪುನೀತ್ ಅವರು ಅಶ್ವಿನಿ ಅವರ ಜೊತೆ ಕ್ಲಿನಿಕ್ ಗೆ ಹೊರಟಿದ್ದು ಅಲ್ಲಿ ಜೊತೆಗಿದ್ದದ್ದು ಕೇವಲ ಡ್ರೈವರ್ ಬಾಬು ಅಶ್ವಿನಿ ಅವರು ಹಾಗೂ ಮತ್ತೊಬ್ಬ ಸಹಾಯಕ ಅಷ್ಟೇ.

ಆಗಲೂ ಕೂಡ ಪುನೀತ್ ಅವರು ಕಾರಿ ನಲ್ಲಿ ಭಜರಂಗಿ ಚಿತ್ರ ವಿತರಕರಿಗೆ ಫೋನ್ ಮಾಡಿ ಹೇಗಿದೆ ರೆಸ್ಪಾನ್ಸ್ ಎಂದು ವಿಚಾರಿಸಿಕೊಂಡಿದ್ದಾರೆ. ನಂತರ ಡಾಕ್ಟರ್ ರಮಣ್ ಅವರ ಕ್ಲಿನಿಕ್ ನಲ್ಲಿ ಅಪ್ಪುವಿಗೆ ಪರೀಕ್ಷೆ ನಡೆಸಲಾಗಿದ್ದು,

ಎಲ್ಲವೂ ನಾರ್ಮಲ್ ಆಗಿದ್ದರು ಕೂಡ ಇಸಿಜಿ ಮಾಡಿಸಲಾಯಿತು. ಆಗ ಅಲ್ಲಿ ಅವರ ಹಾರ್ಟ್ ರೇಟ್ ನಲ್ಲಿ‌ ಒತ್ತಡ ಇರುವುದು ಕಂಡು ಬಂದಿದ್ದು ಅದಾಗಲೇ ಪುನೀತ್ ಬಹಳ ಬೆವರಲು ಶುರು ಮಾಡಿದ್ದರು.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: SVS ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಬಂಟ್ವಾಳ: ತಾಲೂಕಿನ ಪ್ರತಿಷ್ಠಿತ ಎಸ್‌.ವಿ.ಎಸ್ ಕಾಲೇಜು ಈಗ ಅವ್ಯವಸ್ಥೆ ಹಾಗೂ ಗೊಂದಲದ ತಾಣವಾಗಿದ್ದು, ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡಿದರು.ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಪ್ರಕಾಶ್ ಶೆಣೈ ವಿರುದ್ಧ...

ಕರಾವಳಿ ಜಿಲ್ಲೆಯಲ್ಲಿ ‘ಧರ್ಮ ದಂಗಲ್‌’ಗೆ ಬಲಿಯಾಯಿತೇ ‘SSLC’ ಫಲಿತಾಂಶ..!?

ಮಂಗಳೂರು:ಬಹುನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಪ್ರತೀ ಬಾರಿಯೂ ಜಿಲ್ಲಾವಾರು ಫಲಿತಾಂಶದಲ್ಲಿ ಮೊದಲ ಸ್ಥಾನಕ್ಕಾಗಿ ನೇರಾ-ನೇರಾ ಪೈಪೋಟಿ ನಡೆಸುತ್ತಿದ್ದ ದಕ್ಷಿಣ ಕನ್ನಡ 20ನೇ ಸ್ಥಾನಕ್ಕೆ ಕುಸಿದರೆ ಉಡುಪಿ ಜಿಲ್ಲೆ 13ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಗುಣಾತ್ಮಕ...

ಹೈಕೋರ್ಟ್‌ನಲ್ಲಿ ನಮಾಝ್‌ ಮಾಡುತ್ತಿದ್ದ ದೃಶ್ಯ ಚಿತ್ರೀಕರಿಸಿದ ‘ಮಾಧ್ಯಮ’ದ ವಿರುದ್ಧ FIR

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ಕೊಠಡಿ ಒಳಗೆ ಮಹಿಳೆಯರು ನಮಾಜ್ ಮಾಡುತ್ತಿರುವ ದೃಶ್ಯವನ್ನು ಕೋರ್ಟ್‌ ಆವರಣದಲ್ಲಿ ಚಿತ್ರೀಕರಿಸಿ ಪ್ರಸಾರ ಮಾಡಿದ ಮಾಧ್ಯಮ ಸಂಸ್ಥೆ ವಿರುದ್ಧ ಹೈಕೋರ್ಟ್‌ ರಿಜಿಸ್ಟ್ರಾರ್ ದೂರು ದಾಖಲಿಸಿದ್ದಾರೆ.ಹೈಕೋರ್ಟ್ ನ ಉಸ್ತುವಾರಿ ರಿಜಿಸ್ಟ್ರಾರ್...