Monday, January 24, 2022

ರಾಸಲೀಲೆಯ ವೈದ್ಯ ಡಾ. ರತ್ನಾಕರ ಪಾಂಡೇಶ್ವರ ಮಹಿಳಾ ಪೊಲೀಸ್‌ ವಶಕ್ಕೆ..!

ಮಂಗಳೂರು : ಡಾ.ರತ್ನಾಕರ್ ತಮ್ಮ ಕಚೇರಿಯ ಮಹಿಳಾ ಸಿಬ್ಬಂದಿಯೊಂದಿಗೆ ಚೆಲ್ಲಾಟವಾಡಿರುವ ವಿಡಿಯೋ, ಫೋಟೋ ಸಹಿತ ಇಂದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾದ  ಬೆನ್ನಲ್ಲೇ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದೂರು ದಾಖಲಾಗಿದೆ.

ಸಾಮಾಜಿಕ ಕಾರ್ಯಕರ್ತೆಯೋರ್ವರು ಮಂಗಳೂರು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ  ದೂರು ನೀಡಿದ್ದು ಕಠಿಣ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ  ಮಹಿಳಾ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಅಮಾನತಾದ ವೈದ್ಯಾಧಿಕಾರಿ ಡಾ.ರತ್ನಾಕರನನ್ನು ಪಾಂಡೇಶ್ವ ಮಹಿಳಾ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ವೈದ್ಯಾಧಿಕಾರಿ ಡಾ.ರತ್ನಾಕರ ಎಂಬುವವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಮಾನತು ಮಾಡಿತ್ತು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತರು ಈ ಬಗ್ಗೆ ಮಹಿಳಾ ಠಾಣೆಯ ಪೊಲೀಸರು ಸಂಪರ್ಕಕ್ಕೆ ಸಿಕ್ಕ ಮಹಿಳಾ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ‌.

ಆದರೆ, ಅವರಲ್ಲಿ ಯಾರೂ ದೂರು ನೀಡಲು ಮುಂದೆ ಬರುತ್ತಿಲ್ಲ. ಆದರೆ, ತನಿಖೆಗೆ ಸಹಕಾರ ನೀಡುತ್ತೇವೆ ಎಂದು ಹೇಳಿದ್ದಾರೆ. ಇದೀಗ ಡಾ.ರತ್ನಾಕರ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

 

Hot Topics

ಕವಿ ಮುದ್ದಣ ಜನ್ಮದಿನಾಚರಣೆ ಪ್ರಯುಕ್ತ 150 ರೂ. ನಾಣ್ಯ ಬಿಡುಗಡೆಗೊಳಿಸಿದ ಸಂಸದ ನಳಿನ್‌

ಮಂಗಳೂರು: ಹೊಸಗನ್ನಡದ ಮುಂಗೋಳಿ ಎಂದು ಪ್ರಖ್ಯಾತರಾಗಿದ್ದ ಕವಿ ಮುದ್ದಣ ಅವರ 150ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ 150 ರೂ. ಹೊಸ ನಾಣ್ಯವನ್ನು ಇಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅನಾವರಣ.ಬಳಿಕ...

‘ಪುಷ್ಪ’ ಸಿನಿಮಾ ನೋಡಿ ಅಪ್ರಾಪ್ತರಿಂದ ಯುವಕನ ಬರ್ಬರ ಹತ್ಯೆ- ಕೃತ್ಯದ ವೀಡಿಯೋ ಚಿತ್ರೀಕರಣ

ನವದೆಹಲಿ: ಟಾಲಿವುಡ್‌ನ ಅಲ್ಲು ಅರ್ಜುನ್‌ ನಟನೆಯ ಸೂಪರ್‌ ಹಿಟ್‌ 'ಪುಷ್ಪ' ಸಿನಿಮಾ ನೋಡಿ ಅದರಿಂದ ಪ್ರಭಾವಿತರಾಗಿ ಯುವಕನನ್ನು ಮೂವರು ಆರೋಪಿಗಳು ಬರ್ಬರವಾಗಿ ಥಳಿಸಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.ಕೊಲೆಗೀಡಾದ ಯುವಕ...

ಕಿನ್ನಿಗೋಳಿ ಶಾಂಭವಿ ನದಿಯಲ್ಲಿನ ಅಕ್ರಮ ಮರಳುಗಾರಿಕೆ ಅಡ್ಡೆಗೆ ಅಧಿಕಾರಿಗಳ ದಾಳಿ..!

ಮಂಗಳೂರು : ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಏಳಿಂಜೆ ಪಟ್ಟೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಗೆ ಮಂಗಳೂರು ಗಣಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಇಲ್ಲಿನ ಶಾಂಭವಿ ನದಿಯಲ್ಲಿ ಕಳೆದ ಹಲವು ವರ್ಷಗಳಿಂದ ರಾತ್ರಿ ಹಗಲೆನ್ನದೆ...