ಪುತ್ತೂರು: ಪುತ್ತೂರು ನಗರದ ಆದರ್ಶ ಆಸ್ಪತ್ರೆಯ ವೈದ್ಯ ಡಾ. ಪ್ರಸಾದ್ ಎಮ್.ಕೆ. ಭಂಡಾರಿಯವರಿಗೆ ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ(IMA) ಡಾಕ್ಟರ್ಸ್ ಡೇ ಅವಾರ್ಡ್ ಲಭಿಸಿದೆ.
ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಸ್ಟೇಟ್ ಬೋರ್ಡ್‌ನಿಂದ ಪ್ರತಿ ವರ್ಷ ಕೆಲವೇ ಕೆಲವು ವೈದ್ಯರಿಗೆ ಐ.ಎಮ್.ಎ, ಕೆ.ಎಸ್.ಬಿ ಡಾಕ್ಟರ್ಸ್‌ಡೇ ಅವಾರ್ಡ್ ನೀಡುತ್ತಿದ್ದು ಈ ಬಾರಿ ಪುತ್ತೂರಿನ ವೈದ್ಯ ಡಾ. ಪ್ರಸಾದ್ ಭಂಡಾರಿ ಅವರಿಗೆ ಒಲಿದಿದೆ.
ಡಾ. ಪ್ರಸಾದ್ ಭಂಡಾರಿಯವರು ಐಎಮ್‌ಎಯ ಕಾರ್ಯಚಟುವಟಿಕೆಗಳಲ್ಲಿ ಅತ್ಯುತ್ತಮವಾಗಿ ತೊಡಗಿಸಿಕೊಂಡಿದ್ದು ಅವರು ನೀಡಿದ ಉತ್ತಮ ವೈದ್ಯಕೀಯ ಸೇವೆ ಹಾಗೂ ಅವರ ಸಮಾಜಮುಖೀ ಕೆಲಸಗಳಿಗಾಗಿ ಈ ಪ್ರಶಸ್ತಿ ನೀಡಲಾಗಿದೆ.