Friday, July 1, 2022

25.5 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಗೊಂಡ ರಸ್ತೆ ಉದ್ಘಾಟಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ

25.5 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಗೊಂಡ ರಸ್ತೆ ಉದ್ಘಾಟಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ..

ಮಂಗಳೂರು : ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ವಾರ್ಡ್ 22 ರ ಕದ್ರಿ ಬಿ ಪದವು ವಾರ್ಡಿನ ನೂತನವಾಗಿ ಕಾಂಕ್ರೀಟಿಕರಣಗೊಂಡು ಅಭಿವೃದ್ಧಿಗೊಂಡಿರುವ ಬಾಂದೊಟ್ಟು- ಗಾಂಧೀಜಿ ರಸ್ತೆಯನ್ನು ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಉದ್ಘಾಟಿಸಿದರು.

25.5 ಲಕ್ಷ ರೂಪಾಯಿ ಅನುದಾನದಲ್ಲಿ ಈ ರಸ್ತೆ ಸಂಪೂರ್ಣ ಅಭಿವೃದ್ಧಿಯಾಗಿದೆ. ಶಾಸಕರ 2019 – 20 ರ ಸಾಲಿನ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ಈ ರಸ್ತೆಗೆ ಅನುದಾನ ಒದಗಿಸಲಾಗಿದೆ.

ಈ ಸಂದರ್ಭದಲ್ಲಿ ಪಾಲಿಕೆಯ ಸ್ಥಳೀಯ ಕಾರ್ಪೋರೇಟರ್ ಜಯಾನಂದ ಅಂಚನ್, ಮಂಗಳೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಎಂಜಿನಿಯರ್ ರಘುಪಾಲ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಜೀತ್ ಶೆಟ್ಟಿ, ಬೂತ್ ಅಧ್ಯಕ್ಷರಾದ ಕಾರ್ತಿಕ್ ನಾಯಕ್, ಬೂತ್ ಕಾರ್ಯದರ್ಶಿ ಜಯಪ್ರಕಾಶ್ ಭಟ್, ಪಕ್ಷದ ಪ್ರಮುಖರಾದ ಗುರುರಾಜ್ ಭಟ್, ಚಂದ್ರಣ್ಣ, ಹರಿಪ್ರಸಾದ್, ಜಯರಾಮ್ ಶೆಟ್ಟಿ, ಅಶ್ವಥ್, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ: ಬೀದಿ ಬದಿ ಅಂಗಡಿ ತೆರವು ಪ್ರಕರಣದ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಿಂದ ಕೊಕ್ಕಡ ಸಂಪರ್ಕಿಸುವ ನಿಡ್ಲೆ ಪಂಚಾಯತ್‌ ವ್ಯಾಪ್ತಿಯ ಪಾರ್ಪಿಕಲ್‌ ರಸ್ತೆಯಲ್ಲಿರುವ ಬೀದಿ ಬದಿ ವ್ಯಾಪಾರಸ್ಥರನ್ನು PWD ತೆರವುಗೊಳಿಸಿರುವ ವಿರುದ್ಧ ಬೃಹತ್ ಪ್ರತಿಭಟನೆ ಇಂದು ಬೆಳ್ತಂಗಡಿಯ ಪಿಡಬ್ಲ್ಯೂಡಿ...

ಟೈಲರ್ ಕನ್ನಯ್ಯ ಲಾಲ್ ಕೊಲೆಗೈದವರಿಗೆ ಮರಣದಂಡನೆ ವಿಧಿಸಿ: ಶಾಸಕ ಕಾಮತ್‌ ಆಗ್ರಹ

ಮಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಬಡ ಟೈಲರ್ ಕನ್ನಯ್ಯ ಲಾಲ್ ಹತ್ಯೆಗೈದು ಪ್ರಧಾನಮಂತ್ರಿಗಳಿಗೆ ಬೆದರಿಕೆಯೊಡ್ಡಿದ ಹಂತಕರಿಗೆ ಮರಣ ದಂಡನೆ ವಿಧಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಕುಕೃತ್ಯ ಎಸಗುವವರಿಗೆ ಎಚ್ಚರಿಕೆಯ ಸಂದೇಶ ನೀಡಬೇಕೆಂದು ಮಂಗಳೂರು...

ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದರಿಂದ ಮನನೊಂದು ಪಿಯುಸಿ ವಿದ್ಯಾರ್ಥಿನಿ ಜೀವಾಂತ್ಯ

ಉಡುಪಿ: ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಮತ್ತೆ ಅನುತ್ತೀರ್ಣಳಾಗಿದ್ದರಿಂದ ಮನನೊಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದಲ್ಲಿ ನಿನ್ನೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಮಾನಸ (17)...