ಮಂಗಳೂರು: ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಕೊಲೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಅವರು ತಮ್ಮ ಒಂದು ತಿಂಗಳ ವೇತನವನ್ನು ನೀಡುವುದಾಗಿ ತಿಳಿಸಿದ್ದಾರೆ.
ಈ ಘಟನೆಯ ಬಳಿಕ ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ಅವರು ಮೃತ ಹರ್ಷನ ಮನೆಯವರ ಜೊತೆ ನಾವು ಕೂಡ ನಿಲ್ಲೋಣ ಎಂದು ಟ್ವೀಟ್ ಮಾಡಿದ್ದರು.
ನೊಂದ ಕುಟುಂಬಕ್ಕೆ ಆಸರೆಯಾಗೋಣ ಎಂದು ಕೂಡ ಅದರಲ್ಲಿ ಬರೆದಿದ್ದರು. ‘ಕೊಲೆ ಮಾಡಿದ್ದು ಮುಸ್ಲಿಂ ಗೂಂಡಾಗಳೆಂದು ಹೇಳಿದ್ದೆ, ಈಗಲಾದ್ರೂ ಹರಿಪ್ರಸಾದ್ ಒಪ್ಕೋತಾರಾ?’
ಈ ಟ್ವೀಟ್ ರೀಟ್ವೀಟ್ ಮಾಡಿರುವ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ನಾವು ಈಗಾಗಲೇ ಕಾರ್ಯಕರ್ತನನ್ನು ಕಳೆದುಕೊಂಡಿದ್ದು,
ಆತನ ಕುಟುಂಬದ ಜೊತೆಗೆ ನಿಲ್ಲಬೇಕು. ನಾನು ಒಂದು ತಿಂಗಳ ವೇತನ ಮತ್ತು ಅಲೋವೆನ್ಸ್‌ನ್ನು ಆತನ ಕುಟುಂಬಕ್ಕೆ ನೀಡುವುದಾಗಿ ತಿಳಿಸಿದ್ದಾರೆ.