Connect with us

LATEST NEWS

‘ಡಾ. ಎಪಿಜೆ ಅಬ್ಧುಲ್ ಕಲಾಂ’ರವರ 90ನೇ ವರ್ಷದ ಜನ್ಮದಿನ; ‘ವಿಶ್ವ ವಿದ್ಯಾರ್ಥಿಗಳ ದಿನ’ದ ಸಂಭ್ರಮಾಚರಣೆ

Published

on

ಮಂಗಳೂರು: ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಅವರು ತಮಿಳುನಾಡು ರಾಜ್ಯದ ರಾಮೇಶ್ವರಂನಲ್ಲಿ, 15 ಅಕ್ಟೋಬರ್ 1931 ರಂದು ತಮಿಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಕಡು ಬಡ ಕುಟುಂಬದಿಂದ ಬಂದ ಕಲಾಂ ನಂತರದಲ್ಲಿ ಶ್ರೇಷ್ಠ ವಿಜ್ಞಾನಿ ಹಾಗೂ ಭಾರತದ ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿದ್ದರು. ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಬರುತ್ತಿದ್ದ ಕಲಾಂರವರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ ಪ್ರತೀ ವರ್ಷ ಅವರ ಜನ್ಮ ದಿನದ ಸ್ಮಮರಣಾರ್ಥವಾಗಿ ಈ ದಿನವನ್ನು ‘ವಿಶ್ವ ವಿದ್ಯಾರ್ಥಿಗಲ ದಿನ” ಎಂದು ಆಚರಿಸಲಾಗುವುದು.

ಬೋಧಿಸುವುದನ್ನು ಹೆಚ್ಚು ಇಷ್ಟಪಡುತ್ತಿದ್ದ ಕಾರಣ ‘ನಾನು ಶಿಕ್ಷಕನಾಗಿ ನೆನಪಿನಲ್ಲಿರಲು ಇಷ್ಟಪಡುತ್ತೇನೆ ಎನ್ನುತ್ತಿದ್ದರು. ಅಷ್ಟೇ ಅಲ್ಲದೇ, ಉತ್ತಮ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ದೇಶದ ಭವಿಷ್ಯ ಎಂದು ನಂಬಿದ್ದವರು. ಹೀಗಾಗಿ ಶಿಕ್ಷಣವನ್ನು ಉತ್ತೇಜಿಸುವಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಮಾಡುವಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.


ಮೊದಲ ಬಾರಿಗೆ 2010 ರಲ್ಲಿ, ಕಲಾಂ ಅವರ 79ನೇ ಜನ್ಮದಿನದಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಯಿತು. ಶಿಕ್ಷಣ, ಪ್ರಪಂಚದಾದ್ಯಂತ ವಿದ್ಯಾರ್ಥಿಗಳ ಪ್ರಗತಿಗಾಗಿ ಅವರು ಮಾಡಿದ ಕಾರ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕಲಾಂ ಅವರ ಮಹತ್ವದ ಕೊಡುಗೆಯನ್ನು ಗೌರವಿಸಲು ಸಲುವಾಗಿ ವಿಶ್ವ ಸಂಸ್ಥೆಯು ಈ ದಿನದ ಆಚರಣೆಯನ್ನು ಕಡ್ಡಾಯವಾಗಿ ಜಾರಿಗೊಳಿಸಿತು.


ಡಾ. ಎ.ಪಿ.ಜೆ ಅಬ್ದುಲ್ ಕಲಾಂರವರ ನುಡಿಮುತ್ತುಗಳು:

  • ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ, ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ.
  • ನಿದ್ರೆಯಲ್ಲಿ ಕಾಣುವುದು ಕನಸಲ್ಲ, ನಿದ್ದೆ ಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು.
  •  ಸೋಲೆಂಬ ರೋಗಕ್ಕೆ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ಮದ್ದು, ಇದು ಯಾರಲ್ಲಿರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.
  •  ಒಬ್ಬರನ್ನ ಸೋಲಿಸೋದು ಸುಲಭ, ಆದರೆ ಒಬ್ಬರ ಮನಸ್ಸನ್ನು ಗೆಲ್ಲೋದು ಕಷ್ಟ.
  • ಇತರರಿಗಾಗಿ ನಿಮ್ಮ ಸ್ವಂತಿಕೆಯನ್ನು ಎಂದಿಗೂ ಬಿಟ್ಟುಕೊಡಬೇಡಿ. ಏಕೆಂದರೆ ಈ ಪ್ರಪಂಚದಲ್ಲಿ ನಿಮ್ಮ ಪಾತ್ರವನ್ನು ನಿಮಗಿಂತ ಚೆನ್ನಾಗಿ ಯಾರೂ ನಿಭಾಯಿಸಲು ಸಾಧ್ಯವಿಲ್ಲ.
  • ಈ ಜಗತ್ತು ನಾವು ಹೇಳುವ ಸತ್ಯಕ್ಕಿಂತ ಮಿಗಿಲಾಗಿ ನಮ್ಮ ಕುರಿತು ಇತರರು ಹೇಳುವ ಸುಳ್ಳನ್ನು ನಂಬುತ್ತದೆ.
  • ನೀವಂದುಕೊಂಡಿದ್ದನ್ನು ಸಾಧಿಸಲು ಮೊಟ್ಟಮೊದಲನೆಯದಾಗಿ ಬೇಕಿರುವುದು ಗುರಿಯೆಡೆಗಿನ ಏಕಾಗ್ರಚಿತ್ತ ಬದ್ಧತೆ ಅದರಲ್ಲಿ ಪ್ರೀತಿ.

Click to comment

Leave a Reply

Your email address will not be published. Required fields are marked *

LATEST NEWS

ಭಾರತದ ಮನೆ ಒಂದರ ಬಾವಿಯಲ್ಲಿ ಉಕ್ಕಿದ ಪೆಟ್ರೋಲ್; ಕೊಡಪಾನ ಹಿಡಿದು ಸಾಲುಗಟ್ಟಿ ನಿಂತ ಜನ!

Published

on

ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆ ಕಳೆದ ಎರಡು ದಿನಗಳಿಂದ ಭಾರೀ ಸುದ್ದಿಯಲ್ಲಿದೆ. ಮನೆಯೊಂದರ ಬಾವಿಯಲ್ಲಿ ನೀರಿನ ಬದಲು ಪೆಟ್ರೋಲ್ ಬರುತ್ತಿದೆ! ವಿಷಯ ತಿಳಿದ ಗ್ರಾಮಸ್ಥರು ಪೆಟ್ರೋಲ್ ತುಂಬಿಸಿಕೊಳ್ಳಲು ಬಾವಿ ಬಳಿ ಓಡೋಡಿ ಬಂದಿದ್ದಾರೆ. ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಬಾವಿಯನ್ನು ಬಂದ್ ಮಾಡಿದ್ದಾರೆ.

ನಂತರ ಬಾವಿಯಿಂದ ಪೆಟ್ರೋಲ್ ಹೇಗೆ ಬರುತ್ತದೆ ಅನ್ನೋದ್ರ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇದೀಗ ಬಾವಿ ಒಳಗೆ ಪೆಟ್ರೋಲ್ ಬಂದಿರುವ ಅಸಲಿ ಕಾರಣ ರಿವೀಲ್ ಆಗಿದೆ. ಇದು ಪೊಲೀಸರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಅಂದ್ಹಾಗೆ ಇದು ಗೀಡಂ (Geedam) ಪ್ರದೇಶಕ್ಕೆ ಸಂಬಂಧಿಸಿದ್ದಾಗಿದೆ.

ಇಲ್ಲಿ ಭೋಲು ಜೈನ್ ಅನ್ನೋರ ಕುಟುಂಬ ವಾಸವಿದೆ. ಬುಧವಾರ ಬೆಳಗ್ಗೆ ಮನೆಯವರು ನೀರಿಗಾಗಿ ಬಾವಿಗೆ ಬಕೆಟ್ ಇಳಿಸಿದ್ದರು. ಬಾವಿಯಿಂದ ಬಕೆಟ್ ತೆಗೆದಾಗ ನೀರು ವಿಚಿತ್ರವಾಗಿ ಕಂಡಿದೆ. ಸ್ವಲ್ಪ ಹೊತ್ತು ಪರಿಶೀಲಿಸಿದಾಗ ಇದು ಪೆಟ್ರೋಲ್‌ ಅನ್ನೋದು ಗೊತ್ತಾಗಿದೆ. ಈ ವಿಚಾರ ಆ ಭಾಗದ ತುಂಬಾ ಹರಡಿತು.

‘ಬಾವಿಯಿಂದ ಪೆಟ್ರೋಲ್ ಬರುತ್ತಿದೆ..’ ಅನ್ನೋ ಮಾತು ಕೇಳಿದ ಜನ ಮನೆಯಿಂದ ಬಕೆಟ್ ಹಿಡಿದು ಬಾವಿಗೆ ಬರತೊಡಗಿದರು. ಭಾರೀ ಸಂಖ್ಯೆಯಲ್ಲಿ ಜನ ಪೆಟ್ರೋಲ್‌ಗಾಗಿ ಮುಗಿಬಿದ್ದರು. ಮನೆ ಬಳಿ ದೊಡ್ಡ ಸರತಿ ಸಾಲುಗಳು ಶುರುವಾದವು. ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಯಿತು. ನಂತರ ಪೊಲೀಸರ ಎಂಟ್ರಿಯಾಗಿದೆ.

ಪೆಟ್ರೋಲ್ ಕಳ್ಳತನ ಪ್ರಕರಣ

ಕೆಲವು ದಿನಗಳ ಹಿಂದೆ ಪೆಟ್ರೋಲ್ ಪಂಪ್ ಮಾಲೀಕರು ಪೆಟ್ರೋಲ್ ಕಳ್ಳತನದ ಕೇಸ್ ದಾಖಲಿಸಿದ್ದರು. ಬಫ್ನಾ ಪೆಟ್ರೋಲ್ ಪಂಪ್ ಮಾಲೀಕರು, ಪ್ರತಿದಿನ ಪೆಟ್ರೋಲ್ ಕಳ್ಳತನವಾಗುತ್ತಿದೆ ಎಂದು ದೂರು ನೀಡಿದ್ದರು. ಈ ವಿಚಾರವನ್ನೇ ತಲೆಯಲ್ಲಿಟ್ಟುಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಮೀಪದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಯಾರೋ ದುಷ್ಕರ್ಮಿಗಳು ಪೆಟ್ರೋಲ್ ಕದ್ದು ಬಾವಿಗೆ ಸುರಿದಿದ್ದಾರೆ ಎಂಬ ಅನುಮಾನ ಪೊಲೀಸರನ್ನು ಕಾಡಿತ್ತು. ಆದರೆ ಅವರ ಸಂಶಯ ಸುಳ್ಳಾಗಿತ್ತು.

ನಿಜವಾದ ಕಾರಣ!

ನಂತರ ಇನ್ನೊಂದು ಆಯಾಮದಲ್ಲಿ ಪೊಲೀಸರು ತನಿಖೆಗೆ ಮುಂದಾಗುತ್ತಾರೆ. ಈ ಮನೆಯಿಂದ 100 ಮೀಟರ್ ದೂರದಲ್ಲಿ ಪೆಟ್ರೋಲ್ ಬಂಕ್ ಇದೆ. ಅಲ್ಲಿನ ಪೆಟ್ರೋಲ್ ಟ್ಯಾಂಕ್ ಸೋರಿಕೆಯಾಗಿದೆ. ಇಲ್ಲಿಂದ ಭೂಮಿಗೆ ನುಗ್ಗಿದ ಪೆಟ್ರೋಲ್, ಈ ಬಾವಿಗೆ ತಲುಪಿದೆ ಅನ್ನೋದನ್ನು ಕಂಡುಕೊಂಡಿದ್ದಾರೆ. ಸದ್ಯ ಯಾವುದೇ ಅಹಿತಕರ ಘಟನೆ ನಡೆಯದಂತೆ ಮನೆಯ ಸುತ್ತ ಅಗ್ನಿಶಾಮಕ ದಳ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲ, ಪೆಟ್ರೋಲ್ ಟ್ಯಾಂಕ್ ದುರಸ್ತಿ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದೆ.

Continue Reading

LATEST NEWS

BPL ಕಾರ್ಡ್​​ ಇರೋರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್.. APL ಆಗಿದೆಯಾ ಅಂತ ಚೆಕ್ ಮಾಡಿಕೊಳ್ಳಿ!

Published

on

ಬೆಂಗಳೂರು: ಗೃಹಲಕ್ಷ್ಮಿಯ ಬೆನ್ನಲ್ಲೆ ಬಿಪಿಎಲ್ ಕಾರ್ಡುದಾರರಿಗೂ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಜಿಎಸ್​ಟಿ, ಐಟಿ ತೆರಿಗೆ ಪಾವತಿ ಹಾಗೂ ಸರ್ಕಾರಿ ಅಧಿಕಾರಿ ಆಗಿದ್ದು ಬಿಪಿಎಲ್​ ಕಾರ್ಡ್​ಗಳನ್ನು ಹೊಂದಿರುವಂತರ ಕಾರ್ಡ್​ಗಳನ್ನು ರದ್ದು ಮಾಡಲಾಗಿದೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಜಿಎಸ್​​ಟಿ ಪಾವತಿಸುತ್ತಿದ್ದ 16 ಸಾವಿರ ಫಲಾನುಭವಿಗಳನ್ನ ಯೋಜನೆಯಿಂದ ಹೊರಗುಳಿಸಲಾಗಿತ್ತು. ಇದೀಗ ಬಿಪಿಎಲ್ ಕಾರ್ಡ್​ನಲ್ಲಿ 10 ಸಾವಿರ ಫಲಾನುಭವಿಗಳ ಕಾರ್ಡ್​ಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ಇವರು ಪಡೆಯುತ್ತಿದ್ದ ಸೌಕರ್ಯಗಳನ್ನ ರದ್ದು ಆಗಿವೆ. ಬಿಪಿಎಲ್ ಕಾರ್ಡ್​ ರದ್ದು ಆದರೆ ಆಯುಷ್ಮಾನ್, ವಿದ್ಯಾರ್ಥಿ ವೇತನ, ಸಿಎಂ‌ ಪರಿಹಾರ ನಿಧಿ, ನರೇಗಾ ಯೋಜನೆ ಸೇರಿದಂತೆ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಆಗಲ್ಲ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಲ ಫಲಾನುಭವಿಗಳು ನಮಗೆ ಯಾವುದೇ ಜಿಎಸ್​ಟಿ ಇಲ್ಲ. ಅನ್ನಭಾಗ್ಯ ಹಣ, ಗೃಹಲಕ್ಷ್ಮಿ ಹಣನೂ ಬರುತ್ತಿಲ್ಲ. ಆದರೂ ಕಾರ್ಡ್​ಗಳನ್ನು ನಿಲ್ಲಿಸಲಾಗಿದೆ ಎನ್ನುತ್ತಿದ್ದಾರೆ.

ಸದ್ಯ ರಾಜ್ಯ ಸರ್ಕಾರ ಮಾನದಂಡದ ಅನ್ವಯಿಸುವ ಪ್ರಕಾರ ಬಿಪಿಎಲ್​ ಕಾರ್ಡ್​​ಗಳನ್ನು ರದ್ದು ಮಾಡಿದೆ. ಅಲ್ಲದೇ ಇನ್ನು ಕೆಲವು ಬಿಪಿಎಲ್ ಕಾರ್ಡ್​​ಗಳನ್ನು ಬದಲಾವಣೆ ಮಾಡಲಾಗಿದ್ದು ಎಪಿಎಲ್​ ಕಾರ್ಡ್​ಗೆ ಬದಲಾವಣೆ ಮಾಡಲಾಗಿದೆ.

ಆದಾಯ ತೆರಿಗೆ ಪಾವತಿ, ವಾರ್ಷಿಕ ಆದಾಯ ಸೇರಿ, ಸರ್ಕಾರಿ ನೌಕರರು ಎಂಬ ಮಾನದಂಡ ಇಟ್ಟುಕೊಂಡು ಕಾರ್ಡ್​ಗಳನ್ನ ರದ್ದು ಮಾಡಲಾಗಿದೆ. ಚಿಕ್ಕಮಗಳೂರಲ್ಲಿ 9,441 ಬಿಪಿಎಲ್ ಕಾರ್ಡ್​ಗಳನ್ನ ಎಪಿಎಲ್ ಆಗಿ ಬದಲಾಯಿಸಲಾಗಿದೆ. ಇದೇ ರೀತಿ ಕೋಲಾರದಲ್ಲಿ 6,500, ಉಡುಪಿಯಲ್ಲಿ 6,422, ಬಾಗಲಕೋಟೆಯಲ್ಲಿ 6,299, ಬೆಂಗಳೂರು ಗ್ರಾಮಾಂತರ 5,973, ವಿಜಯಪುರದಲ್ಲಿ 4,359, ಮೈಸೂರು 4,221, ಹಾಸನ 3,925, ಮಂಡ್ಯದಲ್ಲಿ 2,824, ಶಿವಮೊಗ್ಗದಲ್ಲಿ 2,346, ಕಾರ್ಡ್​ಗಳನ್ನ ಎಪಿಎಲ್​​ ಕಾರ್ಡ್​ಗಳಾಗಿ ಬದಲಾವಣೆ ಮಾಡಲಾಗಿದೆ.

Continue Reading

LATEST NEWS

ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ

Published

on

ಬೆಂಗಳೂರು: ಎಸ್​ಎಸ್​ಎಲ್​ಸಿಯಲ್ಲಿ ಮೂರು ಬಾರಿ ಫೇಲ್ ಆಗಿದ್ದಕ್ಕೆ ಬಾಲಕ ತಿಪ್ಪಸಂದ್ರದ ಸರ್ಕಲ್​ನಲ್ಲಿದ್ದ ಲಕ್ಷ್ಮೀ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ್ದಾನೆ.

ಬಾಲಕ ಗುರುವಾರ ರಾತ್ರಿ ವಿಗ್ರಹ ವಿರೂಪಗೊಳಿಸಿ ಹೋಗಿದ್ದಾನೆ. ಮರುದಿನ ದೇವಸ್ಥಾನಕ್ಕೆ ಬಂದ ಭಕ್ತರು ವಿಗ್ರಹ ವಿರೂಪಗೊಂಡಿದ್ದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೀವನ್ ಭೀಮಾನಗರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಬಾಲಕ ಕೃತ್ಯ ಬೆಳಕಿಗೆ ಬಂದಿದೆ.

ತಿಪ್ಪಸಂದ್ರದ ನಿವಾಸಿಯಾಗಿರುವ ಅಪ್ರಾಪ್ತ ಬಾಲಕ ದೈವ ಭಕ್ತನಾಗಿದ್ದನು. ಭುವನೇಶ್ವರಿ ದೇವಿಯನ್ನು ನಿತ್ಯವೂ ದೇವಿಯನ್ನು ಪೂಜಿಸುತ್ತಿದ್ದನಂತೆ. ಆದರೆ, ಎಸ್​ಎಸ್​ಎಲ್‌ಸಿಯಲ್ಲಿ ಫೇಲ್ ಆಗಿದ್ದಕ್ಕೆ ದೇವರ ಮೇಲೆ ವಿಗ್ರಹ ವಿರೂಪಗೊಳಿಸಿದ್ದಾನೆ. ಬಾಲಕ ವಿಗ್ರಹ ವಿರೂಪಗೊಳಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಲ್ಲದೇ ಬಾಲಕ ಮಧ್ಯರಾತ್ರಿ ಒಬ್ಬನೇ ಓಡಾಡುವುದು, ಒಬ್ಬೊಬ್ಬನೇ ಮಾತಾಡೋದು ಮಾಡುತ್ತಿದ್ದನು. ಜೀವನ್ ಭೀಮಾನಗರ ಪೊಲೀಸರು ಸದ್ಯ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

Continue Reading

LATEST NEWS

Trending

Exit mobile version