Saturday, July 2, 2022

ಅನಿವಾಸಿ ವೈದ್ಯ, ಸಮಾಜ ಸೇವಕ ಡಾ. ಎ.ಕೆ. ಖಾಸಿಮ್ ಇನ್ನಿಲ್ಲ

ಅನಿವಾಸಿ ವೈದ್ಯ, ಸಮಾಜ ಸೇವಕ ಡಾ. ಎ.ಕೆ. ಖಾಸಿಮ್ ಇನ್ನಿಲ್ಲ..!

ಮಂಗಳೂರು:ಸೌದಿ ಅರೇಬಿಯಾದ ಮಕ್ಕಾ ನಗರದ ಝಹ್ರತುಲ್ ಕುದಾಯಿ ಏಷಿಯನ್ ಪಾಲಿಕ್ಲಿನಿಕ್ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದ ಉಪ್ಪಳ ಮೂಲದ, ಪ್ರಸ್ತುತ ಮಂಗಳೂರು ಫಳ್ನೀರ್ ನಿವಾಸಿಯಾಗಿದ್ದ ಡಾ. ಎ.ಕೆ. ಖಾಸಿಮ್ (51) ಮಕ್ಕಾದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಗುರುವಾರ ರಾತ್ರಿ ಸೌದಿ ಸಮಯ ರಾತ್ರಿ 11 ಗಂಟೆಗೆ ಜಿದ್ದಾದಲ್ಲಿರುವ ಸಂಬಂಧಿಕರ ಜೊತೆಗೆ ಫೋನಲ್ಲಿ ಮಾತನಾಡಿ ಮರುದಿನ ಶುಕ್ರವಾರ ಜುಮಾ ನಮಾಝ್ ಗೆ ಜಿದ್ದಾಕ್ಕೆ ಆಗಮಿಸುವ ಬಗ್ಗೆ ತಿಳಿಸಿದ್ದರು.

ಆದರೆ ಶುಕ್ರವಾರ ಎಷ್ಟೇ ಫೋನ್ ಮಾಡಿದರೂ ಸ್ವೀಕರಿಸದೇ ಇದ್ದಾಗ ಸಂಶಯಗೊಂಡು ಮನೆಯ ಬಾಗಿಲು ಮುರಿದಾಗ ಡಾ. ಖಾಸಿಮ್ ಅವರ ದೇಹ ಮನೆಯ ಕಿಚನ್ ಸಮೀಪ ನಿಶ್ಚಲವಾಗಿ ಬಿದ್ದಿತ್ತು.

ಅವರು ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನ ಮಧ್ಯೆ ಹೃದಯಾಘಾತದಿಂದ ನಿಧನರಾಗಿರಬಹುದೆಂದು ಸಂಶಯಿಸಲಾಗಿದೆ. ಡಾ.ಎ.ಕೆ. ಖಾಸಿಮ್ ಅವರು ಮೂಲತಃ ಕನ್ಯಾನದ ಕಡೂರಿನ ತರವಾಡಿನವರು.

ಉಪ್ಪಳದ ಪೈವಳಿಕೆಯ ಅಟ್ಟೆಗೋಳಿಯಲ್ಲಿ ವಾಸಿಸುತ್ತಿದ್ದರು. ಡಾ. ಖಾಸಿಮ್ ಪ್ರಸ್ತುತ ಮಂಗಳೂರಿನ ಫಳ್ನೀರ್ ನಲ್ಲಿ ಕುಟುಂಬ ಸಹಿತ ವಾಸ ಮಾಡುತ್ತಿದ್ದರು.

ಕಳೆದ ಒಂದು ವರ್ಷದ ಹಿಂದೆ ಊರಿಗೆ ಬಂದು ಸೌದಿಗೆ ತೆರಳಿದ್ದರು. ಕಳೆದ 26 ವರ್ಷಗಳಿಂದ ಉಪ್ಪಳ, ಮಂಗಳೂರು, ಸೌದಿ ಅರೇಬಿಯಾದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರು.

ಮಂಗಳೂರು ಕೆ.ಎಂ.ಸಿ.ಯಲ್ಲಿ ಎಂಬಿಬಿಎಸ್ ಮುಗಿಸಿ ಎಮರ್ಜೆನ್ಸಿ ಹೆಲ್ತ್ ಕೋರ್ಸ್ ಮಾಡಿದ್ದರು. ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿದ್ದರು.

ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸಹಪಾಠಿಯಾಗಿದ್ದ ಖಾಸಿಮ್ ಅವರ ಜೊತೆ ಅನ್ಯೋನ್ಯವಾಗಿದ್ದರು. ಖಾಸಿಮ್ ಸಂಘಟನಾತ್ಮಕವಾಗಿ ತೊಡಗಿಸಿಕೊಂಡಿದ್ದು, ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಎನ್ನಾರೈ ಸದಸ್ಯರಾಗಿ ಸಕ್ರಿಯರಾಗಿದ್ದರು.

ಎಂ.ಫ್ರೆಂಡ್ಸ್ ನ ಪ್ರತಿಯೊಂದು ಸೇವಾ ಚಟುವಟಿಕೆಗಳಿಗೂ ದೇಣಿಗೆ ನೀಡುತ್ತಿದ್ದರು. ಜಾತಿ ಮತ ನೋಡದೇ ನೂರಾರು ವಿಕಲಾಂಗರಿಗೆ ಗಾಲಿಕುರ್ಚಿ ಪ್ರಾಯೋಜಿಸಿ ಸಂತ್ರಸ್ಥರ ನೋವಿಗೆ ಸ್ಪಂದಿಸಿದ್ದಾರೆ. ಸೌದಿಗೆ ಉದ್ಯೋಗಕ್ಕೆ ತೆರಳುವ ಮುನ್ನ ಉಪ್ಪಳದ ಕೈಕಂಬದಲ್ಲಿ ಸೊಸೈಟಿ ಆಸ್ಪತ್ರೆ ತೆರೆದು ಬಡರೋಗಿಗಳ ಪಾಲಿಗೆ ನೆರವಾಗುತ್ತಿದ್ದರು.

ಮಂಗಳೂರಿನಲ್ಲಿ ಕೂಡಾ ಹಲವಾರು ಕಾರುಣ್ಯ ಯೋಜನೆಯಲ್ಲಿ ಸಕ್ರಿಯರಾಗಿದ್ದರು. ಮಂಗಲ್ಪಾಡಿ ಅರ್ಬನ್ ಸೇವಾ ಸಹಕಾರಿ ಬ್ಯಾಂಕಿನ ಸ್ಥಾಪಕಾಧ್ಯಕ್ಷರಾಗಿದ್ದ ಡಾ. ಖಾಸಿಮ್ ಸರಳ ಸಜ್ಜನಿಕೆಯ ವ್ಯಕ್ತಿತ್ವ ಉಳ್ಳವರು.

ಕಳೆದ ಕೆಲ ವರ್ಷಗಳಿಂದ ಪವಿತ್ರ ಮಕ್ಕಾ ನಗರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ ಡಾ. ಖಾಸಿಮ್ ಊರಿನಿಂದ ಅಲ್ಲಿಗೆ ತೆರಳುತ್ತಿದ್ದ ಪ್ರವಾಸಿಗರ ಪಾಲಿಗೆ ಆಪತ್ಬಾಂಧವರಾಗುತ್ತಿದ್ದರು.

ಹಜ್ ಸಂದರ್ಭ ಬಡರೋಗಿಗಳ ಶುಶ್ರೂಷೆಯಲ್ಲಿ ದಿನದ 24 ಗಂಟೆಯೂ ಸೇವೆ ಸಲ್ಲಿಸಿ ಪ್ರಶಸ್ತಿಗೆ ಭಾಜನರಾಗಿದ್ದರು. ಕಳೆದ ಬಾರಿ ಊರಿಗೆ ಬರುವ ಸಂದರ್ಭ ಅದೇ ವಿಮಾನದಲ್ಲಿ ಓರ್ವ ಮಹಿಳೆಗೆ ಹೃದಯಾಘಾತವಾದಾಗ ಅವರಿಗೆ ನಿದ್ದೆಗೆಟ್ಟು ವಿಮಾನದಲ್ಲೇ ತುರ್ತು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದರು.

ಈ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಯಾರೇ ಕಷ್ಟದಲ್ಲಿದ್ದರೂ ಜಾತಿ ಮತ ನೋಡದೇ ಸಹಾಯಕ್ಕೆ ನೆರವಾಗುತ್ತಿದ್ದ ಡಾ. ಖಾಸಿಮ್ ಅವರ ಅಕಾಲಿಕ ನಿಧನವು ದೇಶ ವಿದೇಶದ ಸಹಸ್ರಾರು ಹಿತೈಷಿಗಳಿಗೆ ನೋವು ತಂದಿದೆ.

ಡಾ. ಖಾಸಿಮ್ ಅವರು ತಮ್ಮ ಹೆತ್ತವರನ್ನಲ್ಲದೇ ಪತ್ನಿ, ಇಬ್ಬರು ಮಕ್ಕಳಾದ ಹಿರಿಯ ಪುತ್ರ ಡಾ. ಕಾಮಿಲ್, ಕಿರಿಯ ಪುತ್ರ ಎಂಬಿಬಿಎಸ್ ವಿದ್ಯಾರ್ಥಿ ಶಾಮಿಲ್ ಸೇರಿದಂತೆ ಕುಟುಂಬಿಕರನ್ನು, ಹಿತೈಷಿಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

Hot Topics

ವಿಟ್ಲ: ಅಕ್ರಮ ಗಾಂಜಾ ಸಾಗಾಟ-ಮೂವರ ಬಂಧನ

ವಿಟ್ಲ: ಮಾದಕ ವಸ್ತುಗಳಾದ ಎಂಡಿಎಮ್ಎ, ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ವಿಟ್ಲದಲ್ಲಿ ನಡೆದಿದೆ.ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನೆಲ್ಲಿಗುಡ್ಡೆ ನಿವಾಸಿ...

ವಿಶ್ವೇಶತೀರ್ಥ ಶ್ರೀಪಾದರ ವೃಂದಾವನ ಸನ್ನಿಧಿಯಲ್ಲಿ ಕರಾವಳಿ ಸಂತರ ಸಮಾಗಮ

ಉಡುಪಿ: ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವೃಂದಾವನ ಸನ್ನಿಧಿಯಲ್ಲಿ ಶುಕ್ರವಾರ (ಜು.1) ಕರಾವಳಿ ಸಂತರ ಸಮಾಗಮ ವೈಭವದಿಂದ ನೆರವೇರಿತು.ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ,ಬೆಂಗಳೂರು ಆರ್ಯ ಈಡಿಗ...

ಮಳೆ ಹಾನಿ ಪರಿಶೀಲಿಸಿದ ಶಾಸಕ ಡಾ. ಭರತ್‌ ಶೆಟ್ಟಿ

ಸುರತ್ಕಲ್‌: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಯಿಂದ ಕೆಲವು ಪ್ರದೇಶಗಳಲ್ಲಿ ಉಂಟಾಗಿರುವ ಹಾನಿ ಪರಿಶೀಲಿಸಲು ಶಾಸಕರಾದ ಡಾ.ಭರತ್ ಶೆಟ್ಟಿ ನಿನ್ನೆ ಪಾಲಿಕೆ ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ...