Connect with us

BANTWAL

ಬಂಟ್ವಾಳ: ವರದಕ್ಷಿಣೆ ತರುವಂತೆ ಪೀಡಿಸಿ ದೈಹಿಕ ಹಲ್ಲೆ-ಪತಿ ಸಹಿತ ಮನೆಯರ ವಿರುದ್ಧ ದೂರು ದಾಖಲು

Published

on

ಬಂಟ್ವಾಳ: ವರದಕ್ಷಿಣೆ ಕಿರುಕುಳ ನೀಡುತ್ತಿರುವ ಆರೋಪದಲ್ಲಿ ಪತಿಯ ಕುಟುಂಬದ ವಿರುದ್ಧ ಯುವತಿಯೋರ್ವರು ದೂರು ದಾಖಲು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಎಂಬಲ್ಲಿ ನಡೆದಿದ್ದು, ಇಲ್ಲಿನ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಕಾಪಿಗುಡ್ಡೆ ನಿವಾಸಿ ದಿ.ವಿನ್ಸೆಂಟ್ ಲೋಬೋ ಅವರ ಪುತ್ರ ಕಿರಣ್ (32)ಲೋಬೊನೊಂದಿಗೆ ಮೂಲತಃ ಅಸ್ಸಾಂ ಮೂಲದವರಾದ ಶಿಲ್ಪಿ ಚಾಸಾ (25) ಅವರಿಗೆ 2021 ಜನವರಿ 2 ರಂದು ಸಿದ್ದಕಟ್ಟೆಯಲ್ಲಿ ವಿವಾಹವಾಗಿತ್ತು.

ವಿವಾಹ ನಂತರ ಪತಿಯ ಮನೆಯಲ್ಲಿ ವಾಸವಿದ್ದು ಮದುವೆಯಾದ ಮರುದಿನದಿಂದ ಪತಿ ಕಿರಣ್ ಲೋಬೋ ಸಹಿತ ಪತಿಯ ಮನೆಯವರಾದ ರೀಟಾ ಲೋಬೊ, ಹಿಲ್ಡಾ ಲೋಬೊ, ಐಡಾ ಲೊಬೊ, ವಾಲ್ಟರ್ ಲೋಬೊ ಅವರು ತನ್ನ ಮನೆಯಿಂದ ಹಣ ಮತ್ತು ಚಿನ್ನಾಭರಣವನ್ನು ವರದಕ್ಷಿಣೆಯಾಗಿ ತಂದು ಕೊಡಲಿಲ್ಲ ಎಂಬುದಾಗಿ ಪೀಡಿಸುತ್ತಿದ್ದಲ್ಲದೆ ದೈಹಿಕವಾಗಿ ಹಲ್ಲೆ ನಡೆಸಿ, ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಶಿಲ್ಪಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮದುವೆಯ 2 ತಿಂಗಳ ನಂತರ ಪತಿ ಕಿರಣ್ ಲೋಬೊ ವರದಕ್ಷಿಣೆ ತರುವಂತೆ ನಿರಂತರ ಮಾನಸಿಕ ಹಿಂಸೆಯನ್ನು ನೀಡಲು ಪ್ರಾರಂಭಿಸಿದ್ದ.

ಮದುವೆ ಬಳಿಕ ಶಿಲ್ಪಿ ಅವರ ಸ್ವಂತ ಊರಾದ ಅಸ್ಸಾಂನಲ್ಲಿ ಅವರ ಪೋಷಕರು ಔತಣ ಕೂಟ ಏರ್ಪಡಿಸಿದ್ದು, ಶಿಲ್ಪಿ ಅವರು ತನ್ನ ಗಂಡನ ಮನೆಯವರನ್ನು ಬರುವಂತೆ ಕೋರಿಕೊಂಡಾಗ ಆರೋಪಿಗಳು ಔತಣಕೂಟಕ್ಕೆ ಬರಬೇಕಾದರೆ 50 ಸಾವಿರ ರೂಪಾಯಿ ಹಣವನ್ನು ನೀಡುವಂತೆ ಪೀಡಿಸಿದ್ದರು.

ಈ ಸಮಯದಲ್ಲಿ ಹಣವನ್ನು ಹೊಂದಿಸಲು ಅನಾನೂಕೂಲವಾಗುತ್ತಿರುವ ಬಗ್ಗೆ ತಿಳಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬದು ಹಲ್ಲೆ ನಡೆಸಿ, ಮಾನಸಿಕ ಹಿಂಸೆಯನ್ನು ನೀಡಿರುತ್ತಾರೆ. ಆದರೂ ಶಿಲ್ಪಿ ಅವರು ತನ್ನ ತಾಯಿ ಹಾಗೂ ಅಕ್ಕ ನಿಂದ ಹಣವನ್ನು ಪಡೆದು ಗಂಡನಿಗೆ ನೀಡಿದ್ದರು.

ಔತಣ ಕೂಟವಾದ ಬಳಿಕವೂ ಆರೋಪಿಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆಯನ್ನು ನೀಡುವುದನ್ನು ಮುಂದುವರೆಸಿದ್ದಲ್ಲದೇ, ಅನಾರೋಗ್ಯ ಪೀಡಿತಳಾದ ಸಮಯ ಚಿಕಿತ್ಸೆ ಯನ್ನು ಕೂಡ ಕೊಡಿಸದೇ ತೊಂದರೆ ನೀಡಿದ್ದರು. ಕೆಲವು ಸಮಯ ಶಿಲ್ಪಿ ಅವರನ್ನು ಮನೆಯೊಳಗೆ ಗೃಹಬಂಧನದಲ್ಲಿರಿಸಿ ಆರೋಪಿಗಳು ಹೊರಗಡೆ ಹೋಗುತ್ತಿದ್ದರು.

ಈ ವೇಳೆ ಆರೋಪಿಗಳಲ್ಲೋರ್ವನಾದ ವಾಲ್ಟರ್ ಲೋಬೋ ಎಂಬಾತ ಶಿಲ್ಪಿ ಅವರಿಗೆ ಕರೆ ಮಾಡಿ ನಗ್ನ ವಿಡಿಯೋ ಕಳುಹಿಸುವಂತೆ ಪೀಡಿಸುತ್ತಾ ತೊಂದರೆ ನೀಡುತ್ತಿದ್ದು, ಈ ವಿಷಯವನ್ನು ತನ್ನ ಗಂಡ, ಅತ್ತೆಯವರ ಬಳಿ ತಿಳಿಸಿದರೂ ಸ್ಪಂದಿಸಿಲ್ಲ ಎಂದು ಶಿಲ್ಪಿ ಅವರು ಆರೋಪಿಸಿದ್ದಾರೆ.

ಶಿಲ್ಪಿ ಅವರು 2021ನೇ ಮಾರ್ಚ್ ಹಾಗೂ 2022ನೇ ಫೆಬ್ರವರಿ ತಿಂಗಳಲ್ಲಿ, ಗರ್ಭವತಿಯಾದಾಗ ಆರೋಪಿಗಳು ಅವರನ್ನು ಸಿದ್ದಕಟ್ಟೆಯ ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಮಾತ್ರೆ ನೀಡಿದ್ದು ಈ ಕಾರಣದಿಂದ ಗರ್ಭಪಾತವಾಗಿರುತ್ತದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ನಂತರದ ದಿನಗಳಲ್ಲಿ ಆರೋಪಿಗಳು ವರದಕ್ಷಿಣೆ ಯನ್ನು ನೀಡುವಂತೆ ಪದೇ ಪದೇ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆಯನ್ನು ಮುಂದುವರೆಸಿದ್ದಲ್ಲದೇ, ಸೆಪ್ಟೆಂಬರ್ 26, ಅಕ್ಟೋಬರ್ 4 ಮತ್ತು 5ರಂದು ವಿಪರೀತವಾಗಿ ದೈಹಿಕವಾಗಿ ಹಲ್ಲೆ ನಡೆಸಿದ್ದು, ಜೀವಬೆದರಿಕೆಯನ್ನು ಒಡ್ಡಿರುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

ಈ ವಿಚಾರವನ್ನು ಶಿಲ್ಪಿ ತನ್ನ ತಾಯಿ ಮತ್ತು ಅಕ್ಕನಿಗೆ ತಿಳಿಸಿದ್ದು ಅವರು ಅಸ್ಸಾಂನಿಂದ ಆಗಮಿಸಿ ಅಕ್ಟೋಬರ್ 7ರಿಂದ 9ರವರೆಗೆ ದೈಹಿಕ ಹಲ್ಲೆಯಿಂದಾಗಿ ಬಳಲಿದ ಶಿಲ್ಪಿ ಅವರನ್ನು ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.

ಈ ಬಗ್ಗೆ ಅಕ್ಟೋಬರ್ 12ರಂದು ಪುಂಜಾಲಕಟ್ಟೆ ಠಾಣೆಗೆ ಮಹಿಳೆ ದೂರು ನೀಡಿದ್ದು, ಠಾಣಾಧಿಕಾರಿ ಸುತೇಶ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

BANTWAL

ವಿಟ್ಲ: ವಿದ್ಯಾರ್ಥಿನಿಗೆ ಕಿರುಕುಳ-ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

Published

on

ಬಂಟ್ವಾಳ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ವಿಚಾರದಲ್ಲಿ ಪೆರುವಾಯಿ ಮೂಲದ ಯುವಕನ ವಿರುದ್ಧ ವಿಟ್ಲ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಕೇಪು ಗ್ರಾಮದ 9ನೇ ತರಗತಿ ವಿದ್ಯಾರ್ಥಿಯೊಬ್ಬಳನ್ನು ಯುವಕ ಕೆಲವು ದಿನಗಳಿಂದ ಹಿಂಬಾಲಿಸುತ್ತಿದ್ದು, ಮೊಬೈಲ್ ನಂಬರ್ ನೀಡುವಂತೆ ಕಿರುಕುಳ ನೀಡಿದ್ದಾನೆ. ಶಾಲೆ ಸಮೀಪ ಬಂದು ಬೈಕ್ ನಲ್ಲಿ ಕೂರುವಂತೆ ಹೇಳಿದ್ದಾನೆ.

ಈ ಎಲ್ಲಾ ವಿಚಾರವನ್ನು ಬೇರೆ ಕಡೆ ಹೇಳಬಾರದೆಂದು ಬೆದರಿಸುವ ಕಾರ್ಯ ಮಾಡಿದ್ದಾನೆ. ಇದರಿಂದ ಭಯಗೊಂಡ ಬಾಲಕಿ ಶಾಲೆಯ ಶಿಕ್ಷಕರಲ್ಲಿ ತಿಳಿಸಿದ್ದು, ಅವರು ಪೋಷಕರಿಗೆ ಮಾಹಿತಿ ನೀಡಿ, ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Continue Reading

BANTWAL

Bantwala: ಹೃದಯ ಸಂಬಂಧಿ ಖಾಯಿಲೆಯಿಂದ 4 ವರ್ಷದ ಬಾಲಕಿ ನಿಧನ..!

Published

on

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ 4 ವರ್ಷದ ಪುಟ್ಟ ಬಾಲಕಿಯೋರ್ವಳು ಮೃತಪಟ್ಟ ಘಟನೆ ಸೆ.24ರಂದು ಬಂಟ್ವಾಳದ ಮಿತ್ತೂರಿನಲ್ಲಿ ನಡೆದಿದೆ.

ಬಂಟ್ವಾಳ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ 4 ವರ್ಷದ ಪುಟ್ಟ ಬಾಲಕಿಯೋರ್ವಳು ಮೃತಪಟ್ಟ ಘಟನೆ ಸೆ.24ರಂದು ನಡೆದಿದೆ.

ಮೃತ ಬಾಲಕಿಯನ್ನು ಬಂಟ್ವಾಳ ಮಿತ್ತೂರು ಸಮೀಪದ ಪಾಟ್ರಕೋಡಿ ನಿವಾಸಿ ಇಬ್ರಾಹಿಂ ಬಾತಿಷಾ ರವರ ಪುತ್ರಿ ಜಮೀಲಾ ಸನಿಕ (4) ಎಂದು ತಿಳಿದು ಬಂದಿದೆ.

ಜಮೀಲಾ  ಬಾಲಕಿ ಪುತ್ತೂರಿನ ಮುರದಲ್ಲಿರುವ ಅಲ್ ಬಿರ್ರ್ ಸ್ಕೂಲ್ ನ ಎಲ್.ಕೆ.ಜಿ. ಯಲ್ಲಿ ಕಲಿಯುತ್ತಿದ್ದಳು.

ಈಕೆ ಅನಾರೋಗ್ಯದಿಂದ ಇದ್ದು, ಬೆಂಗಳೂರಿನ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

Continue Reading

BANTWAL

Bantwala: ಓವರ್ ಟೇಕ್ ಮಾಡಲು ಹೋದ ಟೆಂಪೋ ರಿಕ್ಷಾ – ಕರೆಂಟ್ ಕಂಬಕ್ಕೆ ಗುದ್ದಿದ ಬಸ್..!

Published

on

ಬಂಟ್ವಾಳ: ಸರಕಾರಿ ಬಸ್ ಒಂದು ಓವರ್ ಟೇಕ್ ಮಾಡುತ್ತಿದ್ದ ಟೆಂಪೋ ರಿಕ್ಷಾವನ್ನು ತಪ್ಪಿಸಲು ಹೋಗಿ ಕರೆಂಟ್ ಕಂಬಕ್ಕೆ ಗುದ್ದಿದ ಘಟನೆ ಬಂಟ್ವಾಳದ ಸಜಿಪಮೂಡ ಗ್ರಾಮದ ಕಂದೂರು ಎಂಬಲ್ಲಿ ನಡೆದಿದೆ.

ಮೆಲ್ಕಾರಿನಿಂದ ಬರುತ್ತಿದ್ದ ಇಲ್ಯಾಸ್ ಟೆಂಪೋ ರಿಕ್ಷಾ ಚಾಲಕನು ಕಂದೂರಿನ ಬಜಾರ್ ಅಡಿಟೋರಿಯಮ್ ಬಳಿ ಬರುತ್ತಿದ್ದ ಆಕ್ಟಿವಾ ಗಾಡಿಯೊಂದನ್ನು ಓವರ್ ಟೇಕ್ ಮಾಡುತ್ತಿದ್ದ.

ಈ ವೇಳೆ ಮುಡಿಪು ಮಾರ್ಗವಾಗಿ ಬರುತ್ತಿದ್ದ ಕಾಸರಗೋಡು ಬಿ.ಸಿ.ರೋಡ್ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಬಸ್ ಗುದ್ದಿದ್ದ ರಭಸಕ್ಕೆ ಕರೆಂಟ್ ಕಂಬ ತುಂಡಾಗಿದೆ.

ಬಸ್ಸಿನಲ್ಲಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೋಲಿಸರು ಆಗಮಿಸಿ, ಪರಿಶೀಲನೆ ನಡೆಸಿದರು.

Continue Reading

LATEST NEWS

Trending