Sunday, November 27, 2022

ಪವಿತ್ರವಾಗಿರುವ ದೇವಸ್ಥಾನದ ವೇದಿಕೆಯನ್ನು ರಾಜಕಾರಣಕ್ಕೆ ಬಳಸಬೇಡಿ -ರಮಾನಾಥ ರೈ

ಮಂಗಳೂರು: ದೇವಸ್ಥಾನದ ವೇದಿಕೆಯಲ್ಲಿ ರಾಜಕಾರಣವನ್ನು ಬಳಸಿಕೊಂಡು ಕೆಟ್ಟ ಭಾಷೆಯಲ್ಲಿ ಮತ್ತೊಂದು ಧರ್ಮಕ್ಕೆ ನೇರವಾಗಿ ಬಯ್ಯುವವರಿಗೆ ದೇವಸ್ಥಾನ ಎಂಬುವುದು ಪವಿತ್ರ ಸ್ಥಳ ಎಂಬುವುದು ಮನವರಿಕೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಇಂಧನ, ಗ್ಯಾಸ್‌, ವಿದ್ಯುತ್‌ ಬೆಲೆ ಏರಿಕೆ ಆಗಿದೆ. ಇದರ ಪರಿಣಾಮ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದೆ.

ಇದನ್ನು ಮರೆಮಾಚಲು ಬಿಜೆಪಿಯ ಸಂಘಟನೆಗಳು ನೀಚ ರಾಜಕೀಯ ಮಾಡುತ್ತಿದೆ. ಬಿಜೆಪಿಯವರಿಗೆ ಸಾಧನೆ ತೋರಿಸಿ ಓಟು ಕೇಳಲು ಸಾಧ್ಯವಾಗದೆ ಧರ್ಮಸಂಸತ್ ನಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.


ಇದು ಪರಾಕಾಷ್ಠೆಗೆ ತಲುಪಿದೆ. ದ.ಕ ಜಿಲ್ಲೆಯನ್ನು ಕೋಮುವಾದದ ಪ್ರಯೋಗ ಶಾಲೆ ಅನ್ನುತ್ತಾರೆ. ಯಾಕೆ ಅದನ್ನು ನಾವೆಲ್ಲ ಒಟ್ಟು ಸೇರಿ ಬದಲಾವಣೆ ಮಾಡಲು ಆಗುವುದಿಲ್ಲ.

ಜಾತ್ರೆಯಲ್ಲಿ ಒಂದು ಸಮುದಾಯದವರು ಸಂತೆ ಇಡಬಾರದು ಎಂದು ಬ್ಯಾನರ್‌ ಹಾಕ್ತಾರೆ ಅಂದರೆ ಇದಕ್ಕಿಂತ ದೊಡ್ಡ ತಪ್ಪು ಯಾವುದೂ ಇಲ್ಲ.

ಧರ್ಮದ ಹೆಸರಿನಲ್ಲಿ ನಡೆದ ಹತ್ಯೆಯಲ್ಲಿ ನಡೆದ ಎಫ್‌ಐಆರ್‌ನಲ್ಲಿ ಎರಡು ಮತೀಯ ಸಂಘಟನೆಗಳ ಜನರ ಹೆಸರಿರುತ್ತದೆ. ಆದರೆ ಒಬ್ಬನೇ ಒಬ್ಬ ಕಾಂಗ್ರೆಸ್‌ನ ಹಿಂದೂ ಅಥವಾ ಮುಸಲ್ಮಾನ ಕಾರ್ಯಕರ್ತನ ಹೆಸರು ಎಫ್‌ಐಆರ್‌ನಲ್ಲಿ ಇಲ್ಲ. ಹಿಂಸೆಗೆ ಹಿಂಸೆ, ದ್ವೇಷಕ್ಕೆ ದ್ವೇಷ ಉತ್ತರ ಅಲ್ಲ. ಮನುಷ್ಯನನ್ನು ದ್ವೇಷ ಮಾಡುವ ವ್ಯಕ್ತಿಯನ್ನು ದೇವರು ಕೂಡ ಪ್ರೀತಿ ಮಾಡುವುದಿಲ್ಲ.

ಕೆಲವರು ಹೇಳುತ್ತಾರೆ ಆ್ಯಕ್ಷನ್‌ಗೆ ರಿಯಾಕ್ಷನ್‌ ಅದು ಸರಿಯಲ್ಲ. ಮತೀಯ ಸಂಘರ್ಷ ಅದು ಸಣ್ಣ ವಿಚಾರವಲ್ಲ. ಹಿಜಾಬ್ ಬಂದ ಮೇಲೆ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿದ್ದಲ್ಲ.

ಅದಕ್ಕಿಂತ ಮೊದಲೇ ಬಂದಿತ್ತು. ಜಟಿಲ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಹೋಗುವ ಬದಲು ನಾವು ನೈಜ ಸಂಗತಿಯ ಮೇಲೆ ದೃಷ್ಠಿ ಹರಿಸೋಣ.

ಜನಾಂಗೀಯ ಘರ್ಷಣೆ ನಡೆಸಿದ ದೇಶಗಳು ದೇಶಗಳಾಗಿ ಉಳಿಯಲಿಲ್ಲ. ಇದು ಮುಂದುವರೆದರೆ ಸಮಾಜ ಎಲ್ಲಿ ಹೋಗಬಹುದು ಎಂದು ಪ್ರಶ್ನಿಸಿದರು. ನೀವು ಕಪ್ಪುಹಣ, ಉದ್ಯೋಗ ಕೊಡುತ್ತೇವೆ, ಇಂಧನ ದರ ಇಳಿಸುತ್ತೇವೆ ಎಂದು ಓಟು ಪಡೆದು ಅಧಿಕಾರಕ್ಕೆ ಬಂದವರು ಈಗ ಏನು ಮಾಡುತ್ತಿದ್ದೀರಿ?.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಲ್ಲಾ ನಾಗರಿಕರನ್ನು ಕರೆದು ಶಾಂತಿ ಸಭೆ ನಡೆಸಬೇಕು. ಮುಂದಕ್ಕೆ ಆಗದ ಹಾಗೆ ನೋಡಿಕೊಳ್ಳಬೇಕು. ಸರ್ಕಾರ ನಮ್ಮಿಂದಲೇ ರೂಪಿತವಾಗಿರುವುದು.

ಹಾಗಿರುವಾಗ ಸರ್ಕಾರದ ಯಾವುದೇ ಸಂಸ್ಥೆ ತಪ್ಪು ಮಾಡಿದರೆ ನಾವೂ ಭಯವಿಲ್ಲದೆ ಪ್ರಶ್ನೆ ಮಾಡಬಹುದು ಎಂದು ಹೇಳಿದರು.

LEAVE A REPLY

Please enter your comment!
Please enter your name here

Hot Topics

ಉಡುಪಿಯ ಮಂದಾರ್ತಿಯಲ್ಲೂ ಸ್ಯಾಟ್‌ಲೈಟ್ ಫೋನ್ ಸಕ್ರಿಯ-ಉಗ್ರ ಕೃತ್ಯಕ್ಕೆ ಸಂಚು ಶಂಕೆ..?

ಉಡುಪಿ: ಇದುವರೆಗೆ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಷ್ಟೇ ಕೇಳಿ ಬರುತ್ತಿದ್ದ ಸ್ಯಾಟಲೈಟ್‌ ಫೋನ್‌ ಕರೆ ಈಗ ದೇವಾಲಯಗಳ ನಗರಿ ಉಡುಪಿ ಜಿಲ್ಲೆಯಲ್ಲೂ ಮೊಳಗಿದೆ. ಉಡುಪಿಯಲ್ಲೂ ಉಗ್ರರ ಕರಿನೆರಳು ಕಾಣಿಸಿದೆ.ಉಡುಪಿಯ ಮಂದಾರ್ತಿ ಸಮೀಪದ ಅರಣ್ಯ...

ಮಂಗಳೂರು: ಬೆಳ್ಮ ಬೋಲ್ದನ್‌ ಕುಟುಂಬಿಕರ ನಿವಾಸದಲ್ಲಿ ಕೋಲೋತ್ಸವ

ಮಂಗಳೂರು: ಮಂಗಳೂರು ನಗರ ಹೊರವಲಯದ ದೇರಳಕಟ್ಟೆ ಅಡ್ಕರಮಜಲು ಬೆಳ್ಮದ ಬೋಲ್ದನ್‌ ಕುಟುಂಬಿಕರ ತರವಾಡಿನ ಮನೆಯಲ್ಲಿ ಪಂಜುರ್ಲಿ, ಕಲ್ಲುರ್ಟಿ , ಗುಳಿಗ ದೈವಗಳ ನರ್ತನ ಸೇವೆ ವೈಭವದಿಂದ ಜರುಗಿತು.ನವೆಂಬರ್‌ 24ರಂದು ಬೆಳಿಗ್ಗೆ ತರವಾಡು ಮನೆಯಲ್ಲಿ...

ಸುಳ್ಯದಲ್ಲಿ ಪತ್ನಿಯನ್ನು ಕೊಂದು ಮೃತದೇಹವನ್ನು ಗೋಣಿಚೀಲದಲ್ಲಿಟ್ಟಿದ್ದ ಪಾಪಿ ಪತಿ ಪ.ಬಂಗಾಳದಲ್ಲಿ ಅರೆಸ್ಟ್

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೀರಮಂಗಲ ಸಮೀಪದ ಬಾಡಿಗೆ ಮನೆಯೊಂದರಲ್ಲಿ ಗೋಣಿಚೀಲದೊಳಗೆ ಮಹಿಳೆಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಪಶ್ಚಿಮ ಬಂಗಾಲದಲ್ಲಿ ಬಂಧಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿ ಇಬ್ರಾನ್ ಶೇಖ್...