Tuesday, March 28, 2023

ಉಡುಪಿ: ಸಮುದ್ರ ತೀರದಲ್ಲಿ ಡಾಲ್ಫಿನ್ ಜಾತಿಯ ಮೀನಿನ ಕಳೇಬರ ಪತ್ತೆ

ಉಡುಪಿ: ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಕೋಡಿ ಗ್ರಾಮದ ಬೆಂಗ್ರೆ ಎಂಬಲ್ಲಿ ಸಮುದ್ರ ತೀರದಲ್ಲಿ ಡಾಲ್ಫಿನ್ ಜಾತಿಯ ಮೀನು ಸತ್ತಿರುವುದು ನಿನ್ನೆ ಕಂಡು ಬಂದಿದೆ.


ಈ ಬಗ್ಗೆ ಮಾಹಿತಿ ಪಡೆದ ಉಡುಪಿ ವಲಯದ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್‌ ಅವರ ಮಾರ್ಗದರ್ಶನದಲ್ಲಿ ಸರಕಾರೇತರ ಸಂಸ್ಥೆ ರೀಫ್‌ ವಾಚ್‌ ಮತ್ತು ಅರಣ್ಯ ಇಲಾಖೆಯ ಜಂಟಿ ಕಾರ್ಯಾಚರಣೆ ನಡೆಸಿ ಡಾಲ್ಫಿನ್ ಮೀನಿನ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಜಮೀನಿನಲ್ಲಿ ದಫನ ಮಾಡಲಾಯಿತು.

ಈ ಕಾರ್ಯಾಚರಣೆಯಲ್ಲಿ ಉಡುಪಿ ಕೇಂದ್ರ ಸ್ಥಾನದ ಉಪವಲಯ ಅರಣ್ಯಾಧಿಕಾರಿ ಗುರುರಾಜ ಕೆ., ಅರಣ್ಯ ರಕ್ಷಕ ಕೇಶವ್ ಪೂಜಾರಿ ಎಂ., ವಾಹನ ಚಾಲಕ ಜೋಯ್ ಹಾಗೂ ರಿಫ್ ವಾಚ್ ಸಂಸ್ಥೆಯ ಡಾ। ತೇಜಸ್ವಿನಿ ಶೆಟ್ಟಿಗಾರ್ ಮತ್ತು ವಿರಿಲ್ಲ್ ಅವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Hot Topics

puttur : ಉಪ್ಪಿನಂಗಡಿಯಲ್ಲಿ ಬೈಕುಗಳ ಮುಖಾಮುಖಿ ಢಿಕ್ಕಿ – ಓರ್ವ ಸ್ಥಳದಲ್ಲೇ ಮೃತ್ಯು..!

ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕಕ್ಕೆಪದವಿನಲ್ಲಿ ನಿನ್ನೆ ಸೋಮವಾರ ಸಂಜೆ ನಡೆದಿದೆ. ಪುತ್ತೂರು: ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ...

ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ-20 ಉಮ್ರಾ ಯಾತ್ರಾರ್ಥಿಗಳ ದಾರುಣ ಮೃತ್ಯು..!

ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 20 ಉಮ್ರಾ ಯಾತ್ರಿಕರು ಸಾವನ್ನಪ್ಪಿದ್ದಾರೆ ಮತ್ತು 29 ಮಂದಿ ಗಾಯಗೊಂಡಿದ್ದಾರೆ.ಜಿದ್ದಾ: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 20 ಉಮ್ರಾ...

ಪತ್ನಿ ಆತ್ಮಹತ್ಯೆ ಬಗ್ಗೆ ಸಂಶಯ- ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಠಾಣೆ ಮೆಟ್ಟಲೇರಿದ ಪತಿ..!

ತನ್ನ ಪತ್ನಿ ಆತ್ಮಹತ್ಯೆ ಮಾಡಿದ ಬಗ್ಗೆ ಸಂಶಯವಿದ್ದು, ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಪತಿ ಜಿಲ್ಲಾ ಪೋಲೀಸ್ ವರಿಷ್ಢಾಧಿಕಾರಿಗೆ ಮನವಿ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ...