Tuesday, May 30, 2023

ಡಾಲಿ ಧನಂಜಯ್ ಈಗ ‘ಕೋಟಿ’ ಬೆಲೆಯ ಕಾರಿನ ಒಡೆಯ..!

ಡಾಲಿ ಧನಂಜಯ್ ನಟನೆಯ 25ನೇ ಸಿನಿಮಾ `ಗುರುದೇವ್ ಹೊಯ್ಸಳ’ ಮಾರ್ಚ್ 30ರಂದು ತೆರೆ ಕಂಡಿದ್ದು ಬಾಕ್ಸ್ ಆಫೀಸ್‌ನಲ್ಲಿ ಸಕತ್ ಸೌಂಡ್ ಮಾಡ್ತಿದೆ.

ಬೆಂಗಳೂರು : ಡಾಲಿ ಧನಂಜಯ್ ನಟನೆಯ 25ನೇ ಸಿನಿಮಾ `ಗುರುದೇವ್ ಹೊಯ್ಸಳ’ ಮಾರ್ಚ್ 30ರಂದು ತೆರೆ ಕಂಡಿದ್ದು ಬಾಕ್ಸ್ ಆಫೀಸ್‌ನಲ್ಲಿ ಸಕತ್ ಸೌಂಡ್ ಮಾಡ್ತಿದೆ.

ಡಾಲಿ- ಅಮೃತಾ ನಟನೆಯ `ಹೊಯ್ಸಳ’ ಸಿನಿಮಾ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಡಾಲಿ, ಅಮೃತಾ, ನವೀನ್ ಶಂಕರ್, ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. `ಗುರುದೇವ್ ಹೊಯ್ಸಳ’ ಕಥೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

25ನೇ ಸಿನಿಮಾ ರಿಲೀಸ್ ಆಗಿರುವ ಶುಭ ಸಂದರ್ಭದಲ್ಲಿ ಡಾಲಿಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ. ಈ ಖುಶಿಯನ್ನು ಡಾಲಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿ ಸಂಭ್ರಮಿಸಿದ್ದಾರೆ.

ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಡಾಲಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ದುಬಾರಿ ಬೆಲೆಯ Toyota Vellfire ಕಾರನ್ನ ಚಿತ್ರದ ನಿರ್ಮಾಪಕರಾದ ಕಾರ್ತಿಕ್- ಯೋಗಿ ಡಾಲಿಗೆ ಉಡುಗೊರೆಯಾಗಿ ನೀಡಿದ್ದಾರೆ.

ನಿರ್ಮಾಪಕರಾದ ಕಾರ್ತಿಕ್-ಡಾಲಿ ಉಡುಗೊರೆ ನೀಡಿರುವ Toyota Vellfire ಕಾರಿಗೆ 1 ಕೋಟಿ ಬೆಲೆಯದಾಗಿದೆ.

25ನೇ ಚಿತ್ರ ಮತ್ತು ನನ್ನ ವಿಶೇಷ ವ್ಯಕ್ತಿಗಳಿಂದ ವಿಶೇಷ ಉಡುಗೊರೆ. ಲವ್‌ ಯೂ ನಾವು ಒಟ್ಟಿಗೆ ಮಾಡಲಿರುವ ಹೆಚ್ಚು ಹೆಚ್ಚು ಕೆಲಸಗಳಿಗಾಗಿ ಚೀರ್ಸ್. ಇಂತಹ ಒಳ್ಳೆಯ ನೆನಪುಗಳಿಗೆ ಧನ್ಯವಾದಗಳು ಎಂದು ಡಾಲಿ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

 

LEAVE A REPLY

Please enter your comment!
Please enter your name here

Hot Topics