ಭಕ್ತರ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡೋದು ……ಯಾರು?
ಮುಂಬೈ: ನಾಯಿಗೆ ಇರೋ ನಿಯತ್ತು ಮನುಷ್ಯನಗೆ ಇಲ್ಲ.. ನಾಯಿಗಿಂತ ನಿಯತ್ತಿನ ಪ್ರಾಣಿ ಇನ್ನೊಂದಿಲ್ಲ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ನಾಯಿಯನ್ನು ಸ್ವಂತ ಮಕ್ಕಳಂತೆ ಪ್ರೀತಿಸುತ್ತ ಬೆಳೆಸುವವರೂ ಇದ್ದಾರೆ.ಆದರೆ ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ನಾಯಿ ಕೈ ಕೊಟ್ಟು ವಿದಾಯ ಹೇಳುವುದರ ಜೊತೆ ತಲೆ ಮೇಲೆ ಕೈ ಇಟ್ಟು ಆಶೀರ್ವಾದವನ್ನೂ ಮಾಡುತ್ತದೆ.
ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರತಿಯೊಬ್ಬರೂ ಈ ಶ್ವಾನಕ್ಕೆ ಮನಸೋತಿದ್ದಾರೆ. ಮಹಾರಾಷ್ಟ್ರದ ಸಿದ್ಧತೆಕ್ ನಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಾಯಿಯೊಂದು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಆಶೀರ್ವಾದ ಮಾಡುತ್ತದೆ.
ಆ ನಾಯಿ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು, ದೇವಸ್ಥಾನದಿಂದ ಹೊರಬರುವ ಜನರಿಗೆ ಪ್ರೀತಿಯಿಂದ ಕೈ ಕೊಡುತ್ತದೆ.ಇನ್ನೊಬ್ಬ ವ್ಯಕ್ತಿ ಬಂದು ನಾಯಿಯ ಮುಂದೆ ಕೈ ಮುಗಿದು ತಲೆ ಬಾಗುತ್ತಾನೆ. ಅವನಿಗೆ ನಾಯಿ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡುತ್ತದೆ.
ಈ ವಿಶೇಷ ನಾಯಿಯ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಾಯಿಯ ನಡವಳಿಕೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.