ಶ್ವಾನ-ಚಿರತೆ ಮರಿ ಕಾದಾಟ; ಸಾವನ್ನಪ್ಪಿದ ಎರಡೂ ಪ್ರಾಣಿಗಳು.. !
Dog leopard cub fight; Both animals killed ..
ಮಂಡ್ಯ: ಚಿರತೆ ಹಾಗೂ ನಾಯಿಗಳ ನಡುವೆ ಕಾದಾಟ ನಡೆದು ಎರಡೂ ಪ್ರಾಣಿಗಳು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಣ್ಣೆಚಾಕನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ನಾಯಿ ಹಾಗೂ ಎಂಟು ತಿಂಗಳ ಚಿರತೆ ಮರಿ ಸೆಣೆಸಾಡಿದ್ದವು.
ಆದರೆ ಈ ಕಾದಾಟದಲ್ಲಿ ಚಿರತೆ ಹಾಗೂ ನಾಯಿ ಎರಡು ಕೂಡಾ ಸಾವನ್ನಪ್ಪಿದೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿರತೆ ಹಾವಳಿಗೆ ಅಣ್ಣೇಚಾಕನಹಳ್ಳಿ ಗ್ರಾಮದಲ್ಲಿ ಭಯದ ವಾತಾವರಣ ಮೂಡಿದ್ದು, ಬೋನು ಇರಿಸಿ ಚಿರತೆ ಸೆರೆ ಹಿಡಿಯುವ ಭರವಸೆಯನ್ನು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳ ತಂಡ ನೀಡಿದೆ.