ಮಂಗಳೂರು : ಹಿಂದೆಲ್ಲಾ ಕೇವಲ ಗಂಡಸರು ಮಾತ್ರ ಕೈಗೆ ವಾಚ್ ಕಟ್ಟಿಕೊಳ್ಳುತ್ತಿದ್ದರು. ಆದರೆ ಈಗ ಗಂಡಸರು, ಹೆಂಗಸರು ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ವಾಚ್‌ನ್ನು ಹೊಂದಿದ್ದಾರೆ. ಅದೂ ಕೂಡ ಹಲವರು ಸ್ಮಾರ್ಟ್ ವಾಚನ್ನೇ ಬಳಸುತ್ತಿದ್ದಾರೆ. ಆದರೆ ಗಂಡಸರ ಜೊತೆಗೆ ಹೆಂಗಸರು ಕೂಡ ಹಲವು ವರ್ಷಗಳಿಂದ ವಾಚ್ ಧರಿಸುತ್ತಾ ಬಂದಿದ್ದಾರೆ.
ಆದರೆ ಪ್ರತಿಯೊಬ್ಬರೂ ಈ ವಾಚನ್ನು ಎಡಗೈ ಮಣಿಕಟ್ಟಿಗೆ ಮಾತ್ರ ಹಾಕಿಕೊಳ್ಳುತ್ತಾರೆ. ಬಲಗೈಗೆ ಯಾಕೆ ಹಾಕಿಕೊಳ್ಳುವುದಿಲ್ಲ ಎಂಬ ಪ್ರಶ್ನೆ ಹಲವರಿಗೆ ಬರುತ್ತದೆ. ವಾಚನ್ನು ಎಡಗೈಗೆ ಹಾಕಿಕೊಳ್ಳುವುದರ ಹಿಂದಿನ ನಿಜವಾದ ಕಾರಣವನ್ನು ಇಲ್ಲಿ ನೀಡಲಾಗಿದೆ.
ಬಲಗೈಗೆ ವಾಚ್ ಯಾಕೆ ಹಾಕುವುದಿಲ್ಲ ?
ನಮ್ಮಲ್ಲಿ ಪ್ರತಿಯೊಬ್ಬರೂ ಎಲ್ಲಾ ಕೆಲಸಗಳನ್ನು ಮಾಡಲು ಎಡಗೈಗಿಂತ ಬಲಗೈಯನ್ನೇ ಹೆಚ್ಚಾಗಿ ಬಳಸುತ್ತೇವೆ. ಹಾಗಾಗಿ ವಾಚನ್ನು ಈ ಕೈಗೆ ಹಾಕಿಕೊಂಡರೆ ಕೆಲಸ ಮಾಡಲು ತೊಂದರೆಯಾಗುತ್ತದೆ. ಅಷ್ಟೇ ಅಲ್ಲ ಅದು ಒಡೆದು ಹೋಗುವ ಸಾಧ್ಯತೆ ಕೂಡ ಇರುತ್ತದೆ. ಅದಕ್ಕಾಗಿಯೇ ಬಲಗೈ ಬದಲಿಗೆ ಎಡಗೈಗೇ ವಾಚನ್ನು ಹಾಕಿಕೊಳ್ಳುತ್ತಾರೆ.
ಕೆಲಸದ ಸರಳತೆ :
ಎಡಗೈಗೆ ವಾಚನ್ನು ಹಾಕಿಕೊಳ್ಳುವುದರಿಂದ ನಾವು ಬಲಗೈಯಿಂದ ಟೈಪಿಂಗ್ ಮಾಡುವುದು, ಬರೆಯುವುದು ಮುಂತಾದ ಕೆಲಸಗಳು ತುಂಬಾ ಸುಲಭವಾಗಿ ಪೂರ್ಣಗೊಳ್ಳುತ್ತವೆ. ವಾಚಿನಿಂದ ಕೆಲಸಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದಲೇ ಬಲಗೈ ಬದಲಿಗೆ ಎಡಗೈಗೆ ವಾಚನ್ನು ಹಾಕಿಕೊಳ್ಳುತ್ತಾರೆ.
ಸುಲಭವಾಗಿ ಧರಿಸಬಹುದು :
ಚೈನ್ ಅಥವಾ ಸ್ಟ್ರಾಪ್ ವಾಚನ್ನು ಹಾಕಿಕೊಳ್ಳುವಾಗ ಅದನ್ನು ಎಡಗೈಯಿಂದ ಬಲಗೈಗೆ ಹಾಕಿಕೊಳ್ಳುವುದು ಕಷ್ಟವಾಗುತ್ತದೆ. ಎಡಗೈಯಿಂದ ವಾಚನ್ನು ಹಾಕಿಕೊಳ್ಳಲು ಬರುವುದಿಲ್ಲ. ಅದೇ ಬಲಗೈಯಿಂದ ಎಡಗೈಗೆ ವಾಚನ್ನು ತುಂಬಾ ಸುಲಭವಾಗಿ ಹಾಕಿಕೊಳ್ಳಬಹುದು.
ಒಡೆದು ಹೋಗುವ ಭಯ :
ಹಲವು ವಾಚ್‌ಗಳಿಗೆ ಗ್ಲಾಸ್ ಇರುತ್ತದೆ. ಆದರೆ ಇಂತಹ ವಾಚನ್ನು ನಾವು ಬಲಗೈಗೆ ಹಾಕಿಕೊಂಡು ನಾನಾ ಕೆಲಸಗಳನ್ನು ಮಾಡುತ್ತಿದ್ದರೆ ಯಾವುದಕ್ಕೋ ಒಂದಕ್ಕೆ ತಾಗಿ ಅದು ಒಡೆದು ಹೋಗುತ್ತದೆ ಎಂಬ ಭಯ ಹಲವರಿಗೆ ಇರುತ್ತದೆ. ಹಾಗೆಯೇ ಗ್ಲಾಸ್‌ಗೆ ಏನಾದರೂ ಗೀರು ಬೀಳಬಹುದು. ಅದಕ್ಕಾಗಿಯೇ ಬಲಗೈಗೆ ವಾಚನ್ನು ಹಾಕಿಕೊಳ್ಳಲು ಇಷ್ಟಪಡುವುದಿಲ್ಲ.
ವಾಚ್‌ನ ಸುರಕ್ಷತೆಗಾಗಿ :
ನಾವು ಬಹುತೇಕ ಎಲ್ಲಾ ಕೆಲಸಗಳನ್ನು ಬಲಗೈಯಿಂದಲೇ ಮಾಡುತ್ತಿರುತ್ತೇವೆ. ಹಾಗಾಗಿ ವಾಚನ್ನು ಎಡಗೈಗೆ ಹಾಕಿಕೊಂಡರೆ ವಾಚ್ ಒಡೆಯದೆ ಸುರಕ್ಷಿತವಾಗಿರುತ್ತದೆ. ಹಾಗೆಯೇ ಯಾವುದೇ ಕೆಲಸ ಮಾಡಿದರೂ ಅದರ ಮೇಲೆ ಒಂದು ಗೀರು ಕೂಡ ಬೀಳುವುದಿಲ್ಲ.
ವಾಚ್ ಧರಿಸುವ ಐತಿಹಾಸಿಕ ಕಾರಣ :
ಪೂರ್ವಕಾಲದಲ್ಲಿ ಕೈಗಳಿಗೆ ವಾಚ್‌ಗಳನ್ನು ಹಾಕಿಕೊಳ್ಳುತ್ತಿರಲಿಲ್ಲ. ಆದರೆ ಚಿಕ್ಕ ವಾಚ್‌ಗಳನ್ನು ಮಾತ್ರ ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಇದರಿಂದ ಅದು ಯಾವುದಕ್ಕಾದರೂ ತಾಗಿ ಒಡೆದು ಹೋಗುತ್ತದೆ, ಮುರಿದು ಹೋಗುತ್ತದೆ ಎಂಬ ಭಯ ಅವರಲ್ಲಿ ಇರುತ್ತಿತ್ತು.
ಎಡಗೈಗೆ ವಅಚ್ ಧರಿಸುವುದು ಟ್ರೆಂಡ್ :
ದಕ್ಷಿಣ ಆಫ್ರಿಕಾದಲ್ಲಿ ರೈತರ ಯುದ್ಧ ಶುರುವಾದಾಗ ಜೇಬಿನಲ್ಲಿ ಇಟ್ಟ ವಾಚ್ ಒಡೆದು ಹೋಗುತ್ತದೆ ಎಂಬ ಭಯದಿಂದ ಅಂದಿನಿಂದ ಅಧಿಕಾರಿಗಳು ವಾಚಿಗೆ ಬೆಲ್ಟ್‌ಗಳನ್ನು ಧರಿಸಿ ಕೈಗೆ ಹಾಕಿಕೊಳ್ಳುವುದನ್ನು ಪ್ರಾರಂಭಿಸಿದರು. ಹಾಗಾಗಿ ಇಂದಿಗೂ ಎಡಗೈಗೆ ವಾಚನ್ನು ಹಾಕಿಕೊಳ್ಳುವ ಟ್ರೆಂಡ್ ಇಂದಿಗೂ ಮುಂದುವರೆದಿದೆ.
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆಲಂಗಾಣದ ಸಾರಿಗೆ ಸಚಿವ ಪೊಣ್ಣಂ ಪ್ರಭಾಕರ್ ಮತ್ತು ಕುಟುಂಬದವರು ನ.21ರಂದು ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಸಚಿವರ ಜತೆಯಲ್ಲಿ ಪತ್ನಿ ಪ್ರಮೀಳಾ ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮೈಸೂರಿನ ಉದ್ಯಮಿ ಎಂ.ಕೆ.ಪೋತ್‌ರಾಜ್, ಉದ್ಯಮಿ ಕಲಬುರಗಿಯ ಸಂತೋಷ್ ಗುತ್ತೆದಾರ್, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ವಿತ್ ಕಟೀಲ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಮೊಹಮ್ಮದ್ ಹನೀಫ್ ಉಜಿರೆ, ಬೆಳ್ತಂಗಡಿ ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯ ನವೀನ್ ಗೌಡ ಸವಣಾಲು, ಕಾಂಗ್ರೆಸ್ ಮುಖಂಡ ರಾಘವೇಂದ್ರ ಪೂಜಾರಿ ಮತ್ತಿತರಿದ್ದರು.
ಮಂಗಳೂರು/ಕೇರಳ: ನರ್ಸಿಂಗ್ ವಿದ್ಯಾರ್ಥಿನಿಯೋಬ್ಬಳು ಹಾಸ್ಟೆಲ್‌ನ ಮೂರನೇ ಮಹಡಿಯಿಂದ ಬಿದ್ದು ಮೃ*ತಪಟ್ಟ ಘಟನೆ ಕೇರಳದ ಪತ್ತನಂತಟ್ಟದಲ್ಲಿ ನಡೆದಿದೆ. ಈ ಘಟನೆಗೆ ಸಹಪಾಠಿಗಳ ಪ್ರಚೋದನೆಯೇ ಕಾರಣವೆಂದು ಮೂವರು ಗೆಳತಿಯರನ್ನು ಬಂಧಿಸಲಾಗಿದೆ.
ಅಮ್ಮು ಸಜೀವ್ (21) ಮೃ*ತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಪಠಾಣಪುರಂ ನಿವಾಸಿ ಅಲೀನಾ, ಚಂಗನಾಶ್ಶೇರಿ ನಿವಾಸಿ ಅಕ್ಷಿತಾ ಮತ್ತು ಕೊಟ್ಟಾಯಂ ನಿವಾಸಿ ಅಂಜನಾ ಬಂಧಿತ ಆರೋಪಿಗಳು ಎನ್ನಲಾಗಿದೆ. ಚುಟ್ಟಿಪಾರ ಎಸ್‌ಎಸ್‌ಇ ನರ್ಸಿಂಗ್ ಕಾಲೇಜಿನ ನಾಲ್ಕನೇ ವರ್ಷದ ವಿದ್ಯಾರ್ಥಿನಿ ಅಮ್ಮು ನವೆಂಬರ್ 15 ರಂದು ಹಾಸ್ಟೆಲ್ ಕಟ್ಟಡದ ಮೇಲಿನಿಂದ ಬಿದ್ದು ಸಾ*ವನ್ನಪ್ಪಿದ್ದರು. ಆದರೆ ಆಕೆ ಆ*ತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದು, ಸಹಪಾಠಿಗಳ ವಿರುದ್ಧ ಸಂಶಯ ವ್ಯಕ್ತಪಡಿಸಿದ್ದಾರೆ.
ಅಮ್ಮು ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಲು ಕೇವಲ ಒಂದೇ ಒಂದು ತಿಂಗಳು ಬಾಕಿ ಇದ್ದು, ಸಾವಿಗೆ ಶರಣಾಗುವ ಮೂಲಕ ತನ್ನ ಆಸೆ, ಕನಸ್ಸುಗಳನ್ನು ನುಚ್ಚನೂರು ಮಾಡಿಕೊಂಡಿದ್ದಾಳೆ. ಈ ಬಗ್ಗೆ ತನಿಖೆ ಆಗಬೇಕು. ಸಾ*ವಿನಲ್ಲಿ ನಿಗೂಢತೆ ಇದೆ ಎಂದು ಪೋಷಕರು ಆರೋಪಿಸಿದ್ದಾರೆ. ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳ ಕಿರುಕುಳವೇ ಮಗಳ ಸಾ*ವಿಗೆ ಕಾರಣ ಎಂದು ಕುಟುಂಬಸ್ಥರು ವಾದಿಸಿದ್ದಾರೆ. ಸದ್ಯ ಮೂವರು ವಿದ್ಯಾರ್ಥಿನಿಯರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್.
ಕಾಸರಗೋಡು: ಪೋಲೀಸ್ ಉದ್ಯೋಗದಲ್ಲಿರುವ ಪತ್ನಿಯನ್ನು ಸ್ವತಃ ಪತಿಯೇ ಅಟ್ಟಾಡಿಸಿ ಕೊಚ್ಚಿ ಕೊಲೆಗೈದು, ಪತ್ನಿಯ ಅಪ್ಪನಾದ ಮಾವನನ್ನೂ ಕೊಲೆಗೆಯತ್ನಿಸಿದ ಘಟನೆ ಕಾಸರಗೋಡು ಜಿಲ್ಲೆಯ ಗಡಿಯಲ್ಲೇ ನಡೆದಿದೆ.
ಕಾಸರಗೋಡು ಜಿಲ್ಲೆಯ ಚಂದೇರ ಪೋಲೀಸ್ ಠಾಣಾ ಸಿಪಿಒ ಉದ್ಯೋಗಿ ದಿವ್ಯಶ್ರೀ ಎಂಬಾಕೆ ತನ್ನ ಪತಿಯಿಂದಲೇ ಕೊಲೆಗೀಡಾದ ಮಹಿಳೆ. ಈಕೆ ಕೊಲೆ ನಡೆಯುವಾಗ ತಡೆಯಲು ಬಂದ ಆಕೆಯ ತಂದೆ ವಾಸು ಎಂಬವರ ಕೊರಳು, ಹೊಟ್ಟೆಗೆ ಕತ್ತಿ ಇರಿತ, ಕಡಿತಗಳ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಗುರುವಾರ (ನ.21) ಮುಸ್ಸಂಜೆ ಈ ದುಷ್ಕೃತ್ಯ ನಡೆದಿದ್ದು, ಆರೋಪಿ ರಾಜೇಶ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.
ಪತಿ-ಪತ್ನಿಯರಾದ ರಾಜೇಶ ಮತ್ತು ದಿವ್ಯಶ್ರೀ ಕಳೆದ ಕೆಲ ಸಮಯಗಳಿಂದ ಒಟ್ಟಿಗೆ ಬದುಕುತ್ತಿರಲಿಲ್ಲ. ಅವರ ದಾಂಪತ್ಯದಲ್ಲಿ ಸಮಸ್ಯೆಗಳಿದ್ದ ಕಾರಣ ಈರ್ವರೂ ಬೇರೆಯೇ ವಾಸಿಸುತ್ತಿದ್ದರು. ಗುರುವಾರ ಸಂಜೆ ಪತ್ನಿ ಮನೆಯಲ್ಲಿದ್ದಾಳೆಂದು ತಿಳಿದೇ ಬಂದ ಆರೋಪಿ ಆಕೆಯನ್ನು ಆಕ್ರಮಿಸಿ, ಓಡಿಸಿ ಕೊಲೆಗೈದನೆಂದೂ, ಈ ವೇಳೆ ತಡೆಯಲು ಬಂದ ಮಾವನನ್ನೂ ಆಕ್ರಮಿಸಿ ಕೊಲೆಗೆತ್ನಿಸಿದನೆಂದೂ ಮಾಹಿತಿ ಲಭಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಮೃತ ಪೋಲೀಸ್ ಉದ್ಯೋಗಿ ದಿವ್ಯಶ್ರೀಯ ಪತಿ ರಾಜೇಶನನ್ನು ಪೋಲೀಸರು ಬಂಧಿಸಿದ್ದಾರೆ.
Pingback: ದೀಪಾವಳಿ ಹಬ್ಬದ ಪ್ರಯುಕ್ತ ಕ್ಯಾಥೋಲಿಕ್ ಸಭೆಯಿಂದ ರಾಮಕೃಷ್ಣ ಮಿಷನ್ ಆಶ್ರಮಕ್ಕೆ ಭೇಟಿ - NAMMAKUDLA NEWS - ನಮ್ಮಕುಡ್ಲ ನ್ಯ