ಕಷ್ಟಗಳು ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತಾ ಎನ್ನುವ ಮಾತಿದೆ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಕಷ್ಟ ಸುಖ ಎರಡನ್ನು ಸಮಭಾಗವಾಗಿ ಸ್ವೀಕರಿಸಬೇಕು. ಆದರೆ ಜ್ಯೋತಿಷ್ಯದ ಪ್ರಕಾರ ಈ ಪ್ರಾಣಿ ಪಕ್ಷಿಗಳು ಮನೆಯೊಳಗೆ ಬಂದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಹೀಗಾಗಿ ಈ ಕೆಲವು ಪ್ರಾಣಿ ಹಾಗೂ ಪಕ್ಷಿಗಳು ಮನೆಯನ್ನು ಪ್ರವೇಶಿಸಬಾರದು ಎಂದು ಹೇಳುತ್ತಾರೆ. ಆದರೆ ಇದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ.
ಏಡಿ : ಏಡಿಯು ಮನೆಯೊಳಗೆ ಪ್ರವೇಶಿಸಿದರೆ ಮನೆಗೆ ಮಾಟ ಮಾಡಿದ್ದಂತೆ ಎನ್ನಲಾಗುತ್ತದೆ. ಇದು ಪ್ರವೇಶಿಸಿದರೆ ಮನೆಯಲ್ಲಿ ಸಂಕಷ್ಟಗಳು ಎದುರಾಗಿ ಮನೆಯೇ ಸರ್ವನಾಶವಾಗುತ್ತದೆ ಎನ್ನಲಾಗುತ್ತದೆ.
ಕಪ್ಪು ಬೆಕ್ಕು : ಕೆಲವೊಮ್ಮೆ ಬೇರೆಯವರ ಮನೆಯ ಬೆಕ್ಕು ಮನೆಗೆ ಬಂದು ಉಳಿಯುತ್ತವೆ. ಆದರೆ ಕಪ್ಪು ಬೆಕ್ಕು ಮನೆಯನ್ನು ಪ್ರವೇಶಿಸುವುದು ಒಳ್ಳೆಯದಲ್ಲ. ಈ ಬೆಕ್ಕು ಅಪಶಕುನವಂತೆ, ಮನೆಗೆ ಬಂದರೆ ಕೆಟ್ಟದಾಗುತ್ತದೆ ಎನ್ನಲಾಗುತ್ತದೆ.
ಉಡ : ಅಪರೂಪವಾಗಿ ಕಾಣಸಿಗುವ ಉಡವನ್ನು ನೋಡುವುದೇ, ಅದರ ಬಗ್ಗೆ ಮಾತನಾದುವುದೇ ಕೆಟ್ಟದಂತೆ. ಈ ಪ್ರಾಣಿಯು ಅನಿಷ್ಟವಂತೆ, ಹೀಗಾಗಿ ಮನೆಗೆ ಬರುವುದು ಒಳ್ಳೆಯದಲ್ಲ. ಒಂದು ವೇಳೆ ಅಪ್ಪಿ ತಪ್ಪಿ ಮನೆಯನ್ನು ಪ್ರವೇಶಿಸಿದರೆ ಮನೆಗೆ ಮಾಟ ಮಾಡಿದ್ದಂತೆ. ಇದರಿಂದ ಮನೆಯೇ ನಾಶವಾಗುತ್ತದೆ ಎನ್ನಲಾಗುತ್ತದೆ.
ಕಾಗೆ : ಕಾಗೆಯು ಮನೆಗೆ ಬಂದರೆ ಶನಿಯು ಮನೆಗೆ ಪ್ರವೇಶಿಸುತ್ತಿದ್ದಾನೆ ಎನ್ನುವುದರ ಸೂಚಕ. ಕಾಗೆಯೂ ಮನೆಯೊಳಗೆ ಬಂದರೆ ಸಂಕಷ್ಟಗಳು ಎದುರಾಗುತ್ತದೆ. ಆರ್ಥಿಕ ಧನನಷ್ಟ ಹಾಗೂ ಆರೋಗ್ಯ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ.
ಬಾವುಲಿ : ಬಾವಲಿಯು ಮನೆಗೆ ಪ್ರವೇಶಿಸುವುದರಿಂದ ಮನೆಯು ಹಾಳಾಗುತ್ತಿದೆ ಎಂದು ಸೂಚಿಸುತ್ತದೆ. ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಉಳಿಯುತ್ತವೆ. ಅಷ್ಟೇ ಅಲ್ಲದೇ, ಮನೆಯಲ್ಲಿ ವಾಸಿಸುವ ಜನರ ಜೀವನದಲ್ಲಿ ಸಮಸ್ಯೆಗಳು ಆರಂಭವಾಗುತ್ತದೆಯಂತೆ.
ಜೇನುಗೂಡು ಅಥವಾ ಜೇನುಹುಳ: ಮನೆಯೊಳಗೆ ಜೇನುಹುಳಗಳು ಒಂದೆರಡು ಬಂದರೆ ಪರವಾಗಿಲ್ಲ. ಆದರೆ ಜೇನುಹುಳಗಳು ಮನೆಯೊಳಗೆ ಗೂಡು ಕಟ್ಟುವುದು ಒಳ್ಳೆಯದಲ್ಲ. ಇದರಿಂದ ಆ ಮನೆಯಲ್ಲಿ ವಾಸಿಸುತ್ತಿರುವವರಿಗೆ ಸಂಕಷ್ಟ ಎದುರಾಗುತ್ತದೆ.
ಗೂಬೆ : ಗೂಬೆಯು ಅನಿಷ್ಟ ವಾಗಿದ್ದು ಇದರ ಆಗಮನವು ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಮನೆಗೆ ಗೂಬೆ ಬಂದರೆ ಮನೆಯ ಪ್ರಗತಿಯು ಕುಂಠಿತವಾಗುತ್ತದೆ. ಮನೆಯಲ್ಲಿ ವಾಸಿಸುವ ಸದಸ್ಯರ ನಡುವೆ ವೈಮನಸ್ಸು ಉಂಟಾಗಿ ಮನೆಯೇ ನಾಶವಾಗುವ ಸಾಧ್ಯತೆ ಇರುತ್ತದೆ.
ರಣಹದ್ದುಗಳು : ರಣ ಹದ್ದುಗಳು ಮನೆಯೊಳಗೆ ಪ್ರವೇಶಿಸಿದರೆ ಯಜಮಾನನಿಗೆ ಸಮಸ್ಯೆಯಾಗುತ್ತದೆ. ಅದಲ್ಲದೇ, ಮನೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತದೆ ಎನ್ನಲಾಗಿದೆ.
Pingback: WATCH VIDEO : ಮದುವೆ ಮನೆಗೆ ಎಂಟ್ರಿ ಕೊಟ್ಟ ಕಪಿರಾಯ; ಮಾಡಿದ್ದೇನು ನೋಡಿ - NAMMAKUDLA NEWS - ನಮ್ಮಕುಡ್ಲ ನ್ಯೂಸ್