LATEST NEWS
ದೇಶದಲ್ಲಿ ಅತೀ ಹೆಚ್ಚು ನಾನ್ವೆಜ್ ತಿನ್ನೋ ರಾಜ್ಯ ಇದು!
Published
1 day agoon
By
NEWS DESK2ಭಾರತದಲ್ಲಿ ಸಾಮಾನ್ಯವಾಗಿ ತರಕಾರಿ, ನಾನ್ವೆಜ್ ತಿನ್ನುತ್ತಾರೆ. ಆದರೆ ಹೆಚ್ಚಾಗಿ ಮೀನು ಮತ್ತು ಕೋಳಿ ಮಾಂಸ ತಿನ್ನಲು ಇಷ್ಟಪಡುತ್ತಾರೆ. ಇದೀಗ ಅಚ್ಚರಿಯ ಸಮೀಕ್ಷೆಯೊಂದು ಹೊರಬಿದ್ದಿದ್ದು, ಇದರಲ್ಲಿ ಭಾರತದಲ್ಲಿ ನಾನ್ವೆಜ್ ತಿನ್ನುವವರ ವರದಿಯೂ ಬಹಿರಂಗವಾಗಿದೆ.
ಭಾರತದಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಜನರು ನಾನ್ವೆಜ್ ಇಷ್ಟಪಡುತ್ತಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಹಾಗದರೇ ಅತಿ ಹೆಚ್ಚು ಮಾಂಸ ತಿನ್ನುವ ರಾಜ್ಯ ಯಾವುದು ಗೊತ್ತಾ? ಅದನ್ನು ತಿಳಿಯಲು, ಈ ಲೇಖನವನ್ನು ಓದಿ.
ಅಧ್ಯಯನದ ಪ್ರಕಾರ, ನಾಗಾಲ್ಯಾಂಡ್ ಭಾರತದಲ್ಲಿ ಅತಿ ಹೆಚ್ಚು ಮಾಂಸ ತಿನ್ನುವ ರಾಜ್ಯವಾಗಿದೆ. ಈ ರಾಜ್ಯದಲ್ಲಿ ಶೇಕಡಾ 99.8 ರಷ್ಟು ಜನರು ಮಾಂಸಾಹಾರಿ ತಿನ್ನುತ್ತಾರೆ. ಅದೇ ರೀತಿ ಪಶ್ಚಿಮ ಬಂಗಾಳ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇಲ್ಲಿ 99.3 ರಷ್ಟು ಜನರು ಮಾಂಸಾಹಾರಿ ತಿನ್ನುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಪಟ್ಟಿಯಲ್ಲಿ ಕೇರಳ ಮೂರನೇ ಸ್ಥಾನದಲ್ಲಿದೆ. ಮಾಂಸಾಹಾರಿಗಳೂ ಇಲ್ಲಿ ಹೇರಳವಾಗಿದ್ದಾರೆ. ಕೇರಳದಲ್ಲಿ ಶೇಕಡಾ 99.1 ರಷ್ಟು ಜನರು ಮಾಂಸಾಹಾರಿ ಆಹಾರವನ್ನು ಸೇವಿಸುತ್ತಾರೆ ಎಂದು ಹೇಳಿದ್ದಾರೆ.
ಅತಿ ಹೆಚ್ಚು ಮಾಂಸ ತಿನ್ನುವವರ ಪಟ್ಟಿಯಲ್ಲಿ ತೆಲುಗು ರಾಜ್ಯವಾದ ಆಂಧ್ರ ನಾಲ್ಕನೇ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ 98.25 ರಷ್ಟು ಜನರು ಮಾಂಸಾಹಾರ ಸೇವಿಸುತ್ತಾರೆ.
International news
ಕಾಟನ್ ಕ್ಯಾಂಡಿ ಸೇವಿಸಿ ವಿಶ್ವ ದಾಖಲೆ ಬರೆದ ಮಹಿಳೆ !
Published
1 hour agoon
25/12/2024By
NEWS DESK3ಮಂಗಳೂರು/ಇಂಗ್ಲೆಂಡ್: ಕೇವಲ ಒಂದು ನಿಮಿಷದಲ್ಲಿ 49 ಗ್ರಾಂ. ಕಾಟನ್ ಕ್ಯಾಂಡಿ ತಿನ್ನುವ ಮೂಲಕ ಇಂಗ್ಲೆಂಡ್ ನ ಯೂಟ್ಯೂಬರ್, ಲೀ ಶಟ್ ಕೀವರ್ ಹೊಸ ಗಿನ್ನೆಸ್ ವಿಶ್ವದಾಖಲೆ ಸ್ಥಾಪಿಸಿದ್ದಾರೆ.
ತಿಳಿ ಹಸಿರು ಬಣ್ಣದ ಈ ತಿಂಡಿಯನ್ನು ಲೀ ತಿನ್ನುತ್ತಿರುವ ವೀಡಿಯೋವನ್ನು ಗಿನ್ನೆಸ್ ಸಂಸ್ಥೆಯು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ.
ಇದನ್ನೂ ಓದಿ: ಕನ್ನಡಿಗ ಕೆ.ಎಲ್ ರಾಹುಲ್ ಗೆ ಬಿಗ್ ಶಾಕ್ !
ಈ ಮೊದಲು ಕೂಡ ಹಾಟ್ ಡಾಗ್ ಸೇರಿದಂತೆ ವಿವಿಧ ಪದಾರ್ಥಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸೇವಿಸುವ ಮೂಲಕ ಅನೇಕ ದಾಖಲೆಗಳನ್ನು ಲೀ ಶಟ್ ಕೀವರ್ ಸ್ಥಾಪಿದ್ದರು.
LATEST NEWS
ವಾಜಪೇಯಿ ಜನ್ಮಶತಮಾನೋತ್ಸವಕ್ಕೆ ಮೋದಿ ಗಿಫ್ಟ್; ದೇಶದ ಮೊದಲ ನದಿ ಜೋಡಣೆಗೆ ಶಿಲಾನ್ಯಾಸ
Published
1 hour agoon
25/12/2024By
NEWS DESK4ಮಂಗಳೂರು/ಭೋಪಾಲ್ : ಇಂದು (ಡಿ.25) ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವ. ಅವರ ಬಹುದೊಡ್ಡ ಕನಸನ್ನು ಈಡೇರಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುಂದಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ನದಿಗಳ ಜೋಡಣೆಗೆ ತಯಾರಿ ನಡೆಸಿದೆ. ಇಂದು ಮಧ್ಯಪ್ರದೇಶದ ಖಜ್ರಾಹೋದಲ್ಲಿ ಕೆನ್-ಬೆಟ್ವಾ ನದಿಗಳ ಜೋಡಣೆಗೆ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ.
ಮುಖ್ಯಮಂತ್ರಿ ಡಾ. ಮೋಹನ್ ಯಾದವ್, ಬಿಜೆಪಿ ರಾಜ್ಯಾಧ್ಯಕ್ಷ ವಿ.ಡಿ.ಶರ್ಮಾ, ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ, ಸಚಿವ ಪ್ರಹ್ಲಾದ್ ಪಟೇಲ್, ಉಪಮುಖ್ಯಮಂತ್ರಿ ಜಗದೀಶ್ ದೇವ್ರಾ, ಸಚಿವ ರಾಕೇಶ್ ಸಿಂಗ್, ಜಲಸಂಪನ್ಮೂಲ ಸಚಿವೆ ತುಳಸಿ ಸಿಲಾವತ್, ಕೃಷಿ ಸಚಿವ ಇಂದಲ್ ಸಿಂಗ್ ಕಂಸಾನಾ, ಕೇಂದ್ರ ಕೇಂದ್ರ ಕೃಷಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ ವಾಜಪೇಯಿ ಅವರು ತಮ್ಮ ನದಿಗಳ ಜೋಡಣೆಯ ಯೋಜನೆಯ ಕನಸನ್ನು ಜಾರಿಗೆ ತರಲು ಬಯಸಿದ್ದರು. ಆದರೆ, ಅಗ ಅದು ಸಾಧ್ಯವಾಗಿರಲಿಲ್ಲ. ಈಗ ಅವರ ಕನಸು ಸಾಕಾರಗೊಳ್ಳುತ್ತಿದೆ.
ಇದನ್ನೂ ಓದಿ : ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ; ವಿಶೇಷ ಲೇಖನ ಬರೆದ ಪ್ರಧಾನಿ ನರೇಂದ್ರ ಮೋದಿ
ಕೆನ್-ಬೆಟ್ಟಾ ನದಿಗಳ ಜೋಡಣೆ ಯೋಜನೆಯಿಂದ ವಾರ್ಷಿಕ 10.62 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಮಧ್ಯಪ್ರದೇಶದ ಮತ್ತು ಉತ್ತರಪ್ರದೇಶದ ಸುಮಾರು 62 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. 103 ಮೆಗಾವಾಟ್ ಜಲವಿದ್ಯುತ್ ಉತ್ಪಾದನೆಯಾಗುತ್ತದೆ. ಈ ಯೋಜನೆಗೆ ಸುಮಾರು 44,605 ಕೋಟಿ ವೆಚ್ಚವಾಗುತ್ತದೆ ಎಂದು ಹೇಳಲಾಗಿದೆ.
ಈ ಯೋಜನೆಯು ನೀರಿನ ಅಭಾವದಿಂದ ಬಳಲುತ್ತಿರುವ ಬುಂದೇಲ್ ಖಂಡ್‌ನ ಪ್ರದೇಶಕ್ಕೆ ಅದರಲ್ಲೂ ಪನ್ನಾ, ಟಿಕಮ್‌ಗಡ, ಛತ್ತರ್‌ಪುರ್, ಸಾಗರ್, ದಮೋಹ್, ದಾಟಿಯಾ, ವಿದಿಶಾಮ, ಶಿವಪುರಿ ಮತ್ತು ಮಧ್ಯಪ್ರದೇಶದ ರೈಸನ್, ಉತ್ತರ, ಬಾಂಡಾ, ಮಹೋಬಾ, ಝೂನ್ಸಿ, ಮತ್ತು ಲಲಿತಪುರ ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ ಎನ್ನಲಾಗಿದೆ.
LATEST NEWS
SESIPL ಸಂಸ್ಥೆಗೆ ಗೂಗಲ್‌ನಿಂದ ಪಿನಾಕಲ್ ಪ್ರಶಸ್ತಿ
Published
2 hours agoon
25/12/2024By
NEWS DESK4ಮಂಗಳೂರು/ಬೆಂಗಳೂರು : ಗೂಗಲ್ ತಂಡದಿಂದ APAC ಮೂಲಕ ಪ್ರತಿಷ್ಠಿತ ವೆಂಡರ್ ಟಾಕ್ಸ್ ಸರಣಿಗೆ SESIPL ಸಂಸ್ಥೆ ಆಯ್ಕೆಯಾಗಲು ಅವಕಾಶ ಪಡೆದುಕೊಂಡಿದೆ. ಈ ಮೂಲಕ ಏಷ್ಯಾ , ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನ್ನು ಒಳಗೊಂಡಿರುವ ಪ್ರದೇಶದಲ್ಲಿ ಸಂಸ್ಥೆಯ ಅತ್ಯಾಧುನಿಕ ತಂತ್ರಜ್ಞಾನದ ಪರಿಹಾರಗಳನ್ನು ಪ್ರದರ್ಶಿಸಲು ಅವಕಾಶ ಸಿಕ್ಕಿದೆ.
ಕಳೆದ ವರ್ಷದ ತ್ರೈಮಾಸಿಕ ಸರಣಿಯ ಭಾಗವಾಗಿ SESIPLನ ಕೊಡುಗೆಗಳು ಮತ್ತು ಸಂಸ್ಥೆಯ ಶ್ರೇಷ್ಠ ನಿರ್ವಹಣೆಗಾಗಿ ಗುರುತಿಸಿಕೊಂಡಿದೆ. ಈ ಕೊಡುಗೆಗಾಗಿ ಗೂಗಲ್ ತಂಡದ APAC ನೀಡುವ ಪಿನಾಕಲ್ ಪ್ರಶಸ್ತಿಯನ್ನು SESIPL ಸಂಸ್ಥೆ ಪಡೆದುಕೊಂಡಿದೆ.
APAC ನೀಡಿರುವ ಈ ಗೌರವ ಪ್ರಶಸ್ತಿಯ ಸಂಸ್ಥೆಯ ಸ್ಟೇಕ್ ಹೋಲ್ಡರ್‌ಗಳಿಗೆ ಹೊಸ ಹಾಗೂ ಸುಸ್ಥಿರ ತಾಂತ್ರಿಕ ಪರಿಹಾರ ಒದಗಿಸಲು SESIPL ಸಂಸ್ಥೆಗೆ ಇನ್ನಷ್ಟು ಅವಕಾಶ ಸಿಕ್ಕಂತಾಗಿದೆ ಎಂದು ಸಂಸ್ಥೆಯ ಸಿಎಂಡಿ ರಾಜೇಶ್ ಶೆಟ್ಟಿ ಅವರು ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಕನ್ನಡಿಗ ಕೆ.ಎಲ್ ರಾಹುಲ್ ಗೆ ಬಿಗ್ ಶಾಕ್ !
SESIPL ಸಂಸ್ಥೆಯು ಪ್ರಮುಖ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಗುತ್ತಿಗೆದಾರರು ಮತ್ತು ಎಲ್ಲಾ ವಿದ್ಯುತ್ ಕೆಲಸಗಳಲ್ಲಿ ವ್ಯಾಪಕ ಜ್ಞಾನವನ್ನು ಹೊಂದಿರುವ ಸಲಹೆಗಾರರಾಗಿದ್ದಾರೆ. ದೇಶದ ಸುಮಾರು 500 ಕ್ಕೂ ಹೆಚ್ಚಿನ ಕಂಪೆನಿಗಳಿಗೆ ಹಲವಾರು ಎಲೆಕ್ಟ್ರಿಕಲ್ ಇಪಿಸಿ ಯೋಜನೆಯನ್ನು ಈ ಸಂಸ್ಥೆ ಮಾಡಿಕೊಟ್ಟಿದೆ.