Connect with us

FILM

ಅಬ್ಬಬ್ಬಾ! 31 ಕೋಟಿಗೆ ಅಪಾರ್ಟ್ಮೆಂಟ್ ಖರೀದಿಸಿದ್ದ ಅಮಿತಾಬ್ ಬಚ್ಚನ್  ಮಾರಿದ್ದೆಷ್ಟು ರೇಟ್‌ಗೆ ಗೊತ್ತಾ!?

Published

on

ಮಂಗಳೂರು/ಮುಂಬೈ : ಬಿಗ್ ಬಿ ಅಮಿತಾಬ್ ಬಚ್ಚನ್   ಮುಂಬೈನ ಓಶಿವಾರಾದಲ್ಲಿರುವ ತಮ್ಮ  ಡುಪ್ಲೆಕ್ಸ್ ಅಪಾರ್ಟ್ಮೆಂಟ್ ಅನ್ನು ಮಾರಾಟ ಮಾಡಿದ್ದಾರೆ. ಭಾರೀ ಮೊತ್ತಕ್ಕೆ ಅಪಾರ್ಟ್ಮೆಂಟ್ ಮಾರಾಟವಾಗಿದೆ. ಹೌದು, 31 ಕೋಟಿ ಕೊಟ್ಟು ಅಪಾರ್ಟ್ಮೆಂಟ್ ಖರೀದಿಸಿದ್ದ ಬಿಗ್ ಬಿ ಈಗ ಲಾಭ ಪಡೆದಿದ್ದಾರೆ.

ಓಶಿವಾರಾದಲ್ಲಿ ಕ್ರಿಸ್ಟಲ್ ಗ್ರೂಪ್‌ನ ವಸತಿ ಸಮುಚ್ಚಯವಾದ ‘ದಿ ಅಟ್ಲಾಂಟಿಸ್‌’ನಲ್ಲಿ ಅಮಿತಾಬ್ ಅಪಾರ್ಟ್ಮೆಂಟ್ ಇದೆ. 2021ರ ಎಪ್ರಿಲ್‌ನಲ್ಲಿ ಈ ಅಪಾರ್ಟ್ಮೆಂಟ್ ಅನ್ನು ಅಮಿತಾಬ್ ಖರೀದಿಸಿದ್ದರು. ಅವರು 31 ಕೋಟಿ ಕೊಟ್ಟಿದ್ದರು. ಅದೇ ವರ್ಷ ನವೆಂಬರ್‌ನಲ್ಲಿ ನಟಿ ಕೃತಿ ಸನೋನ್‌ಗೆ ಭದ್ರತಾ ಠೇವಣಿ 60 ಲಕ್ಷ ಮತ್ತು ಮಾಸಿಕ 10 ಲಕ್ಷ ರೂ. ಬಾಡಿಗೆಗೆ ನೀಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ಮಹಿಳಾ ನಾಗಸಾಧ್ವಿಗಳು ಮುಟ್ಟಿನ ಸಮಯದಲ್ಲಿ ಏನು ಮಾಡುತ್ತಾರೆ ಗೊತ್ತಾ ?

ಈಗ ಈ ಅಪಾರ್ಟ್ಮೆಂಟ್‌ನ್ನು  ಅಮಿತಾಬ್ ಬಚ್ಚನ್ 83 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ. ನೋಂದಣಿ ಮಹಾಪರಿವೀಕ್ಷಕ ಹಾಗೂ ಮುದ್ರಾಂಕ ಆಯುಕ್ತರ(ಐಜಿಆರ್) ಪ್ರಕಾರ, ಈ ಅಪಾರ್ಟ್ಮೆಂಟ್ ಅನ್ನು 83 ಕೋಟಿ ರೂ. ಗೆ ಮಾರಾಟ ಮಾಡಲಾಗಿದೆ.  ಈ ಮೂಲಕ ಅವರು ಶೇ.168ರಷ್ಟು ಲಾಭ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಅಂದ್ಹಾಗೆ ಮುಂಬೈನ ಓಶಿವಾರಾವು ಉತ್ತಮ ಮೂಲಭೂತ ಸೌಕರ್ಯ ಹೊಂದಿರುವ ಪ್ರದೇಶ. ಆಧುನಿಕ ಜೀವನಶೈಲಿಗೆ ತಕ್ಕ ಜಾಗ. ಉತ್ತಮ ರಸ್ತೆಗಳು, ಮೆಟ್ರೋ ಸಂಪರ್ಕಗಳನ್ನು ಹೊಂದಿದೆ.

Click to comment

Leave a Reply

Your email address will not be published. Required fields are marked *

FILM

ಚೂರಿ ಇರಿತ ಪ್ರಕರಣ : ಆಸ್ಪತ್ರೆಯಿಂದ ಸೈಫ್ ಆಲಿ ಖಾನ್ ಬಿಡುಗಡೆ

Published

on

ಮಂಗಳೂರು/ಮುಂಬೈ : ಬಾಲಿವುಡ್ ನಟ ಸೈಫ್ ಆಲಿ ಖಾನ್ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಚೂರಿ ಇ*ರಿತಕ್ಕೊಳಗಾಗಿ ಗಂ*ಭೀರವಾಗಿ ಗಾ*ಯಗೊಂಡ ಸೈಫ್ ಆಲಿ ಖಾನ್‌ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೈಫ್ ಆಲಿ ಖಾನ್‌ಗೆ 2 ಸರ್ಜರಿ ಮಾಡಲಾಗಿದೆ. ಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಸೈಫ್ ಆಲಿ ಖಾನ್ ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸೈಫ್ ಪತ್ನಿ ಕರೀನಾ ಕಪೂರ್ ಖಾನ್, ತಾಯಿ ಶರ್ಮಿಳಾ ಠಾಗೂರ್ ಜೊತೆ ಬಾಂದ್ರಾ ಮನೆಗೆ ಮರಳಿದ್ದಾರೆ ಎಂದು ತಿಳಿದುಬಂದಿದೆ. ಸೈಫ್‌ಗೆ ಕೆಲ ತಿಂಗಳುಗಳ ಕಾಲ ವಿಶ್ರಾಂತಿಯ ಅಗತ್ಯವಿದೆ ಎನ್ನಲಾಗಿದೆ.

ಇದನ್ನೂ ಓದಿ : ಹೊಸ ಲುಕ್‌ನಲ್ಲಿ ಮಹಾಕುಂಭಮೇಳದ ಸುಂದರಿ ‘ಮೊನಾಲಿಸಾ’

ಗಾ*ಯ ಗುಣವಾಗಲು ಹಾಗೂ ಸೈಫ್ ಸಂಪೂರ್ಣ ಚೇತರಿಸಿಕೊಳ್ಳಲು ಕೆಲವು ಸಮಯ ಹಿಡಿಯಲಿದೆ. ಹೀಗಾಗಿ ವಿಶ್ರಾಂತಿ ಅಗತ್ಯವಿದೆ. ಇನ್ಫೆಕ್ಷನ್ ಆಗದಂತೆ ಎಚ್ಚರ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಸೈಫ್ ಅಲಿ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವೇಳೆ ಮುಂಬೈನ ಲೀಲಾವತಿ ಆಸ್ಪತ್ರೆ ಬಳಿ ಭಾರಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿತ್ತು. ಅಲ್ಲದೇ, ಸೈಫ್ ಆಲಿ ಖಾನ್ ಮನೆ ಬಳಿಯೂ ಪೊಲೀಸರನ್ನು ನಿಯೋಜಿಸಲಾಗಿದೆ.

Continue Reading

FILM

ಕಾಂತಾರ ಚಾಪ್ಟರ್ 1 ಗೆ ಸಂಕಷ್ಟ; ಎಡವಟ್ಟು ಮಾಡಿಕೊಂಡ್ರಾ ರಿಷಬ್ ಶೆಟ್ಟಿ!

Published

on

ಬೆಂಗಳೂರು/ಮಂಗಳೂರು : ಚಂದನವನದ ಯಶಸ್ವಿ ಚಿತ್ರ ಕಾಂತಾರದ ಪ್ರೀಕ್ವೆಲ್‌ಗಾಗಿ ಸಿನಿರಸಿಕರು ಕಾಯುತ್ತಿರೋದು ಸುಳ್ಳಲ್ಲ. ಚಿತ್ರದ ಶೂಟಿಂಗ್ ಏನೋ ಭರದಿಂದ ಸಾಗುತ್ತಿದೆ. ಈ ನಡುವೆ ಚಿತ್ರತಂಡದ ಎಡವಟ್ಟಿಗೆ ದಂಡ ತೆರುವಂತಾಗಿದೆ.

ಚಿತ್ರೀಕರಣದ ವೇಳೆ ಸಕಲೇಶಪುರ ಅರಣ್ಯದಲ್ಲಿ ಅಕ್ರಮವಾಗಿ ಶೂಟಿಂಗ್ ಸೆಟ್ ವಸ್ತುಗಳನ್ನು ಸುರಿದಿದ್ದಕ್ಕಾಗಿ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಗೆ ಅರಣ್ಯ ಇಲಾಖೆ ಅಧಿಕಾರಿಗಳು 50,000 ರೂ. ದಂಡ ವಿಧಿಸಿದ್ದಾರೆ.

ಇದನ್ನೂ ಓದಿ  : ಏನಿದು ಸಿಂಹಸ್ಥ ಕುಂಭಮೇಳ? ಇದರ ವಿಶೇಷತೆ ಏನು?

ಸಕಲೇಶಪುರ ಅರಣ್ಯದ ಸರ್ವೇ ಸಂಖ್ಯೆ 131 ರ ಡೀಮ್ಡ್ ಫಾರೆಸ್ಟ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಜನವರಿ 2 ರಿಂದ ಪ್ರೀಕ್ವೆಲ್‌ನ ಚಿತ್ರೀಕರಣ ಮಾಡಲಾಗುತ್ತಿದೆ. ಚಿತ್ರತಂಡ, ಶೂಟಿಂಗ್​ಗಾಗಿ ಗೋಮಾಳ ಜಾಗಕ್ಕೆ ಪರವಾನಗಿ ಪಡೆದಿದೆ. ಅರಣ್ಯ ಜಾಗದಲ್ಲಿ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿಮಾಡುತ್ತಿರುವ ಆರೋಪವನ್ನು ಗ್ರಾಮಸ್ಥರು ಮಾಡಿದ್ದು, ಚಿತ್ರತಂಡದ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಗ್ರಾಮಸ್ಥರ ಆರೋಪದ ಬೆನ್ನಲ್ಲೇ ಅರಣ್ಯ ಇಲಾಖೆ ಚಿತ್ರತಂಡದ ವಿರುದ್ಧ ಕ್ರಮ ಕೈಗೊಂಡಿದೆ.

Continue Reading

FILM

ಅತ್ತ ಬಿಗ್‌ ಬಾಸ್ ಫಿನಾಲೆ ತಲುಪಿದ ರಜತ್…ಇತ್ತ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ!

Published

on

ಮಂಗಳೂರು/ಬೆಂಗಳೂರು : ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿ ರಜತ್ ಕಿಶನ್ ಅವರು ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ಅತ್ತ ಅವರು ಅದೃಷ್ಟ ಪರೀಕ್ಷೆಗಿಳಿದ್ದಿದ್ದರೆ, ಇತ್ತ ಅವರ ಪತ್ನಿ ಅಕ್ಷಿತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅದಕ್ಕೆ ಕಾರಣ ಟ್ರೋಲ್ ಪೇಜ್‌ಗಳು.

ಆ ಒಂದು ಫೋಟೋದಿಂದ ಅಕ್ಷಿತಾ ಪೊಲೀಸರ ಮೊರೆ ಹೋಗುವಂತಾಗಿದೆ.  ದೊಡ್ಮನೆಯೊಳಗಿರುವ ರಜತ್ ಗೆಲುವಿನ ಸನಿಹದಲ್ಲಿದ್ದಾರೆ. ಆದ್ರೆ,  ಹೊರಗಡೆ ಅವರ ಹಳೆ ಫೋಟೋವೊಂದು ವೈರಲ್ ಆಗಿದೆ. ರಜತ್ ಹಾಗೂ ಅವರ ಮಾಜಿ ಗೆಳತಿಯ ಜೊತೆಗಿನ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಿಡಿಗೇಡಿಯೊಬ್ಬ ಈ ಫೋಟೋವನ್ನು ವೈರಲ್ ಮಾಡಿದ್ದಾನೆ. ಇದೀಗ ಆ ಫೋಟೋವನ್ನು ಟ್ರೋಲ್ ಪೇಜ್‌ಗಳು ಬಳಸಿಕೊಳ್ಳುತ್ತಿವೆ. ಆ ಫೋಟೋ ಡಿಲೀಟ್ ಮಾಡುವಂತೆ ರಜತ್ ಪತ್ನಿ ಅಕ್ಷಿತಾ ಮನವಿ ಮಾಡಿದ್ದಾರೆ. ಆದರೆ, ಟ್ರೋಲ್ ಪೇಜ್‌ಗಳು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಫೋಟೋ ಡಿಲೀಟ್ ಮಾಡಲು ಅಕ್ಷಿತಾ ಅಪರಿಚಿತ ವ್ಯಕ್ತಿ ನೀಡಿದ ಯುಪಿಐ ಐಡಿಗೆ  6,500 ರೂಪಾಯಿ ಹಣವನ್ನು ಹಾಕಿದ್ದಾರೆ. ಬಳಿಕ ಬೇರೆ ಬೇರೆ ಟ್ರೋಲ್ ಪೇಜ್‌ಗಳಲ್ಲಿ ಫೋಟೋ ಅಪ್ಲೋಡ್ ಆಗಿದೆ. ಫೋಟೋ ಡಿಲೀಟ್ ಮಾಡಲು ಹೇಳಿದಾಗ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ : ಕಾಂತಾರ ಚಿತ್ರತಂಡಕ್ಕೆ ಎಚ್ಚರಿಕೆ ಕೊಟ್ಟ ಗ್ರಾಮಸ್ಥರು

ಟ್ರೋಲ್ ಪೇಜ್‌ಗಳ ಕಾಟಕ್ಕೆ ಬೇಸತ್ತ ಅಕ್ಷಿತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ಹತ್ತಕ್ಕೂ ಹೆಚ್ಚು ಟ್ರೋಲ್ ಪೇಜ್ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತ ಕೇಸ್ ದಾಖಲಾಗುತ್ತಿದ್ದಂತೆ ಅತ್ತ ಟ್ರೋಲ್ ಪೇಜ್‌ಗಳು ಫೋಟೋ ಡಿಲೀಟ್ ಮಾಡಿವೆ. ಅಲ್ಲದೇ, ಖಾತೆಗಳನ್ನೂ ಡಿಲೀಟ್ ಮಾಡಿದ್ದಾರೆ. ಸದ್ಯ, ಟ್ರೋಲ್ ಮಾಡಿ ಹಣ ಸುಲಿಗೆ ಮಾಡುತ್ತಿರುವ ಖದೀಮರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

 

Continue Reading

LATEST NEWS

Trending

Exit mobile version