Wednesday, December 1, 2021

ಮುಕೇಶ್ ಅಂಬಾನಿಯ ಡ್ರೈವರ್: ಸಂಬಳ ಕೇಳಿದ್ರೆ ನೀವು ಕೂಡ ಬೆಚ್ಚಿ ಬೀಳ್ತೀರಿ..!!

ಮುಕೇಶ್ ಅಂಬಾನಿಯ ಡ್ರೈವರ್ ನ ಸಂಬಳ ಕೇಳಿದ್ರೆ ನೀವು ಕೂಡ ಬೆಚ್ಚಿ ಬೀಳುತ್ತೀರಿ..!!

ಮುಂಬೈ: ಮುಕೇಶ್ ಅಂಬಾನಿಯ ಮನೆ ಆರಮನೆಗಿಂತ ಕಮ್ಮಿ ಇಲ್ಲ. ವಿಶ್ವದಲ್ಲಿ ಅತ್ಯಂತ ದುಬಾರಿ ಮನೆಗಳ ಪಟ್ಟಿ ಮಾಡಿದರೆ ಅದರಲ್ಲಿ ಅಂಬಾನಿ ಮನೆಯ ಸ್ಥಾನ ಇದ್ದೆ ಇರುತ್ತೆ.

ಇಷ್ಟೆಲ್ಲಾ ಇರುವ ಮುಕೇಶ್ ಅಂಬಾನಿ ಕೆಲಸಕ್ಕೆ ಉಪಯೋಗಿಸುವ ಕಾರುಗಳ ಲೆಕ್ಕ ಏಷ್ಟು ಅಂತ ಕೇಳಬೇಡಿ! ಅವರಿಗೆ ಬಗೆ ಬಗೆಯ ಕಾರು ಗಳನ್ನು ಖರೀದಿಸುವುದು ಇಷ್ಟ ಅಂತೆ! ಅದರಲ್ಲಿ ಇರೋದೆಲ್ಲ ದುಬಾರಿ ಕಾರುಗಳೇ.

ಇಂತಹ ದುಬಾರಿ ಕಾರು ನಡೆಸಲು ಒಬ್ಬ ಚಾಲಾಕಿ ಡ್ರೈವರ್ ಬೇಕೆ ಬೇಕು. ಆದರೆ ಆ ಚಾಲಕನ ಸಂಬಳ ಎಷ್ಟು ಅಂತ ನಿಮಗೆ ತಿಳಿದರೆ ಆಶ್ಚರ್ಯವಾಗಬಹುದು.
ಒಂದು ವೆಬ್‌ಸೈಟ್‌ನ ಪ್ರಕಾರ, ಮುಂಕೇಶ್ ಅಂಬಾನಿ ತನ್ನ ಚಾಲಕರಿಗೆ ಪ್ರತಿ ತಿಂಗಳು ದೊಡ್ಡ ಸಂಬಳವನ್ನೇ ನೀಡುತ್ತಾರೆ. ಅವರ ಚಾಲಕರೊಬ್ಬರ ಮಾಸಿಕ ವೇತನ ಬರೋಬ್ಬರಿ 2 ಲಕ್ಷ ರೂ. ಅಂತೆ! ಸಾಮಾನ್ಯವಾಗಿ ಚಾಲಕರ ವೇತನ 20,000 ರೂಪಾಯಿ ಇರುತ್ತದೆ. ಆದ್ರೆ ಇಲ್ಲಿ ಇರೋದು ಅಂಬಾನಿಯ ಡ್ರೈವರ್ ಆಗಿ ಅಂದ್ರೆ ಸಂಬಳಾನು ಅಂಬಾನಿ ರೇಂಜ್ ಗೆ ಬೇಡವಾ?

ಸುಮ್ಮನೆ ಯಾರಿಗೂ ಡ್ರೈವರ್ ಆಗಿ ಚಾನ್ಸ್ ಇಲ್ಲ  ಅಂಬಾನಿಯ ಡ್ರೈವರ್ ಆಗಲು ಚಾಲಕನ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಬೇಕು.ಮುಖೇಶ್ ಅಂಬಾನಿಯ ಚಾಲಕನನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಒಂದು ದೊಡ್ಡ ಕಂಪನಿಯೊಂದಕ್ಕೆ ನೀಡಲಾಗಿದೆ.

ಈ ಕಂಪನಿಯು ಅವರ ಚಾಲಕನನ್ನು ಆಯ್ಕೆ ಮಾಡುತ್ತದೆ. ನಂತರ ಅವರಿಗೆ ತರಬೇತಿ ಸಹ ನೀಡಲಾಗುತ್ತದೆ. ಇದೆಲ್ಲ ಆದ ಮೇಲೆ ಕಂಪನಿ ಕಡೆಯಿಂದ ಡ್ರೈವರ್ ಗೆ ಗ್ರೀನ್ ಸಿಗ್ನಲ್ ಸಿಕ್ಕ ಮೇಲೇನೆ ಅವನನ್ನು ನಂತರ ಮುಖೇಶ್ ಅಂಬಾನಿಯ ಕಾರನ್ನು ಓಡಿಸಲು ಚಾಲಕನನ್ನು ಕಳುಹಿಸಲಾಗುತ್ತದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...