Connect with us

DAKSHINA KANNADA

ಮೀನುಗಾರರ ಸಾಲಕ್ಕೆ ಸರ್ಕಾರವೇ ಜಾಮೀನು ಹಾಕಬೇಕು: ಡಿಕೆಶಿ

Published

on

ಮಂಗಳೂರು: ಮೀನುಗಾರರ ಸಾಲಕ್ಕೆ ಸರ್ಕಾರವೇ ಜಾಮೀನು ಹಾಕಬೇಕು. ಮೀನುಗಾರಿಕೆ ಇಲ್ಲದಿದ್ದರೆ ಮಂಗಳೂರಿಗೆ ಬೆಲೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪಕ್ಷದ ಕಾರ್ಯಕ್ರಮಕ್ಕೆ ಮಂಗಳೂರಿಗೆ ಬಂದಿಲ್ಲ. ಬದಲಾಗಿ ಮೊಗವೀರರ ಕುಂದು ಕೊರತೆ ಗಳ ಬಗ್ಗೆ ಚರ್ಚೆ ಮಾಡೋಕೆ ಕರಾವಳಿಗೆ ಬಂದಿದ್ದೇನೆ. ರಾಜ್ಯದ ಆರ್ಥಿಕ ಚಟುವಟಿಕೆಗೆ ಮೀನುಗಾರಿಕೆ ಮೂಲ ಕಾರಣ. ಮೀನುಗಾರರ ಕಷ್ಟ-ನಷ್ಟಗಳ ಬಗ್ಗೆ ಮೀನುಗಾರರೊಂದಿಗೆ ಈಗಾಗಲೇ ಚರ್ಚೆ ಮಾಡಿದ್ದೇನೆ. ಮೀನುಗಾರರಿಗೆ ಸರ್ಕಾರ ಪರಿಹಾರವನ್ನು ನೀಡಿಲ್ಲ. ಜೊತೆಗೆ ಯಾವುದೇ ಸಬ್ಸಿಡಿಯನ್ನೂ ನೀಡಿಲ್ಲ. ಮೀನುಗಾರರಿಗೆ ಸಾಲ ನೀಡುತ್ತಿಲ್ಲ. ಮೀನುಗಾರರ ಸಾಲಕ್ಕೆ ಸರ್ಕಾರವೇ ಜಾಮೀನು ಹಾಕಬೇಕು.  ಎಂದು ಡಿಕೆಶಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಈ ವೇಳೆ ಮಾಜಿ ಸಚಿವ ರಮಾನಾಥ್‌ ರೈ, ಶಾಸಕ ಯು.ಟಿ ಖಾದರ್‌, ಮಾಜಿ ಶಾಸಕ ಜೆ.ಆರ್‌. ಲೋಬೊ, ಮಾಜಿ ವಿಧಾನಪರಿಷತ್‌ ಸದಸ್ಯ ಐವನ್‌ ಡಿ.ಸೋಜ, ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಇದ್ದರು.

 

 

 

DAKSHINA KANNADA

ಬಿಜೆಪಿಯಿಂದ ಬಿಲ್ಲವ ನಾಯಕ ಔಟ್..? ನಾರಾಯಣ ಗುರು ಹೈಜಾಕ್..!

Published

on

ಮಂಗಳೂರು : ‘ಬಿರುವೆರ ಕುಡ್ಲ‘ದ ಮುಖಂಡ ಉದಯ ಪೂಜಾರಿಯನ್ನು ತುಳಿಯಲು ಹೋಗಿ ಬಿಜೆಪಿ ಮತ್ತೆ ದೊಡ್ಡ ಯಡವಟ್ಟು ಮಾಡಿಕೊಂಡಿತಾ ಇಂತಹ ಒಂದು ಪ್ರಶ್ನೆ ಸದ್ಯ ಸಾಮಾಜಿಕ‌ ಜಾಲತಾಣದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷರ ಪತ್ರಿಕಾಗೋಷ್ಠಿಯಲ್ಲಿ ಬಯಲಾದ ಅಸಲಿಯತ್ತು..!

ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನಾರಾಯಣ ಗುರು ವೃತ್ತವನ್ನು ನಿರ್ಮಾಣ ಮಾಡಿದ್ದು ‘ಬಿರುವೆರ ಕುಡ್ಲ‘ ಅಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಸತೀಶ್ ಕುಂಪಲ ಅವರ ಈ ಹೇಳಿಕೆ ಈಗ ‘ಬಿರುವೆರ ಕುಡ್ಲ’ದ ಮುಖಂಡ ಉದಯ ಪೂಜಾರಿ ಅವರಲ್ಲೂ ಅಸಮಾಧಾನ ಮೂಡಿಸಿದೆ.

                      ನಾರಾಯಣ ಗುರು ವೃತ್ತ

ಸತೀಶ್ ಕುಂಪಲ ಹೇಳಿದ್ದೇನು ?

“ನಾರಾಯಣ ಗುರು ವೃತ್ತ ನಿರ್ಮಾಣ ವಿಚಾರದಲ್ಲಿ ಸಾಕಷ್ಟು ಸಂಘರ್ಷ ಆಗಿತ್ತು. ಈ ವೇಳೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಪೊರೇಟರ್ ದಿವಾಕರ್ ವೃತ್ತ ನಿರ್ಮಾಣದ ವಿಚಾರ ಪ್ರಸ್ತಾವಿಸಿದ್ದರು. ಮೇಯರ್ ಆಗಿದ್ದ ಪ್ರೇಮಾನಂದ ಶೆಟ್ಟಿ, ವೃತ್ತ ನಿರ್ಮಾಣದ ಬಗ್ಗೆ ಮೂಡಾದಿಂದ ಅನುದಾನ ಕೊಡಿಸಿದ್ದರು. ಮೂಡಾದ ಅಂದಿನ ಅಧ್ಯಕ್ಷರಾಗಿದ್ದ ರವಿಶಂಕರ್ ಮಿಜಾರ್ ಅನುದಾನ ನೀಡಿದ್ದರು. ಇನ್ನು ವೃತ್ತ ನಿರ್ಮಾಣದ ಬಗ್ಗೆ ಸಂಸದ ನಳಿನ್ ಕುಮಾರ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಮುತುವರ್ಜಿ ವಹಿಸಿದ್ದರು. ಪ್ರಧಾನಿ ಮೋದಿ ಅವರು ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡಿರುವುದು ಇವರೆಲ್ಲರಿಗೂ ಸಾರ್ಥಕತೆ ತರಿಸಿದೆ” ಎಂದು ಹೇಳುವ ಮೂಲಕ ಇಲ್ಲಿ ‘ಬಿರುವೆರ ಕುಡ್ಲ‘ದ ಪಾತ್ರ ಏನು ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಮೋದಿ ಅಭಿಮಾನಿ ಉದಯ ಪೂಜಾರಿ ..!

ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಉದಯ ಪೂಜಾರಿ ಈ ಬಾರಿ ನ್ಯೂಟ್ರಲ್ ಆಗಿದ್ದರು. ಅಸಲಿಗೆ ನಳಿನ್ ಕುಮಾರ್ ಅವರ ಆಪ್ತರಾಗಿ, ಬಿಜೆಪಿಯ ಬೆಂಬಲಿಗರಾಗಿ, ಮೋದಿಯ ಅಭಿಮಾನಿಯೂ ಆಗಿದ್ದರು.

   ನಳಿನ್ ಹಾಗೂ ವೇದವ್ಯಾಸ್ ಜೊತೆ ಉದಯ ಪೂಜಾರಿ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ತಮ್ಮದೇ ಸಮೂದಾಯದ ರಕ್ಷಿತ್ ಶಿವರಾಂ ಸ್ಪರ್ಧೆ ಮಾಡಿದ್ರೂ ಹರೀಶ್ ಪೂಂಜಾ ಪರ ಪ್ರಚಾರ ಮಾಡಿದ್ರು. ಬಿಜೆಪಿ ಪಕ್ಷ ಹಾಗೂ ಮೋದಿಯ ಅಭಿಮಾನಿಯಾಗಿ ಜೊತೆಗೆ ತನ್ನ ಸಮಾಜದ ಜನರಿಗೆ ಸಹಾಯ ಹಸ್ತ ಚಾಚುವ ಮೂಲಕ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು.

                 ಸಮಾಜಕ್ಕೆ ಅಂಬ್ಯಲೆನ್ಸ್ ಹಸ್ತಾಂತರ

ಆದರೆ ‘ಬಿರುವೆರ ಕುಡ್ಲ‘ದ ಉದಯ ಪೂಜಾರಿ ಸದ್ಯ ಬಿಜೆಪಿಗೆ ಬೇಡದವರಾಗಿದ್ದಾರೆ. ಆದರೆ ‘ಬಿರುವೆರ ಕುಡ್ಲ‘ ಸಂಘಟನೆಯ ಮೂಲಕ ಸಾಕಷ್ಟು ಬಡ ಜನರಿಗೆ ಸಹಾಯ ಮಾಡಿದ ಉದಯ ಪೂಜಾರಿ ಬೆನ್ನ ಹಿಂದೆ ಸಾವಿರಾರು ಬಿಲ್ಲವ ಯುವಕರ ಪಡೆ ಇದೆ ಅನ್ನೋದು ಬಿಜೆಪಿ ಮರೆತಿದೆ. ಆದರೆ ಇದು ರಾಜಕೀಯವಾಗಿ ಉದಯ ಪೂಜಾರಿ ಬೆಳೆಯಬಹುದು ಎಂಬ ಕಾರಣಕ್ಕೆ ಮೋದಿ ಅವರ ಭೇಟಿಯಿಂದ ಅವರನ್ನು ದೂರ ಇರಿಸಲಾಗಿತ್ತು ಅನ್ನೋದು ಈಗ ರಾಜಕೀಯವಾಗಿ ಚರ್ಚಿತದಲ್ಲಿದೆ.

ಸಮಾಜಿಕ ಜಾಲತಾಣದಲ್ಲಿ ಆಕ್ರೋಶ…!

ಉದಯ ಪೂಜಾರಿಯನ್ನು ತುಳಿಯಲು ಬಿಜೆಪಿ ನಾರಾಯಣ ಗುರುಗಳನ್ನೇಹೈಜಾಕ್ ಮಾಡಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡಿತಾ ಇದೆ. ಬಿರುವೆರ ಕುಡ್ಲದ ಶ್ರಮ ಹಾಗೂ ಕೊಡುಗೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರು ಬಿಜೆಪಿ ಸಾಧನೆ ಅಂದಿದ್ದಾರೆ. ಹೇಗೆ ಹಿಂದುತ್ವವನ್ನು ರಾಜಕೀಯವಾಗಿ ಬಿಜೆಪಿ ಬಳಸಿಕೊಂಡಿದೋ ಅದೇ ರೀತಿ ಈಗ ಬಿಲ್ಲವ ಸಮೂದಾಯವನ್ನು ಬಳಸಲು ಹೊರಟಿದೆ. ಒಂದೇ ಜಾತಿ ಒಂದೇ ಮತ ಒಂದೇ ದೇವರು ಅಂದಿದ್ದ ನಾರಾಯಣಗುರುಗಳನ್ನು ಓಟಿಗಾಗಿ ಹೈಜಾಕ್ ಮಾಡಲು ಹೊರಟಿದೆ ಎಂದು ಚರ್ಚೆ ನಡೆಯುತ್ತಿದೆ. ವಿಮಾನ ನಿಲ್ದಾಣದಲ್ಲಿ ಪ್ರವೀಣ್ ನೆಟ್ಟಾರು ತಾಯಿಯನ್ನು ಕರೆತಂದು ಪ್ರಧಾನಿಗೆ ಪರಿಚಯಿಸಿ ಬಿಲ್ಲವರನ್ನು ಓಲೈಸಿದೆ. ಮತ್ತೊಂದೆಡೆ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿಸಿ ಬಿಲ್ಲವರನ್ನು ಖುಷಿ ಪಡಿಸಿದೆ. ಆದರೆ ಸೈಲೆಂಟ್ ಆಗಿ ಬೆಳೆಯುವ ಯುವ ನಾಯಕನನ್ನು ಚಿವುಟಿ ಹಾಕುವ ಎಲ್ಲಾ ಪ್ಲ್ಯಾನ್ ಬಿಜೆಪಿಯಿಂದ ಆಗಿದೆ ಅನ್ನೋ ವಿಚಾರ ಚರ್ಚೆ ಆಗುತ್ತಿದೆ.

 

Continue Reading

DAKSHINA KANNADA

ದಂತ ವೈದ್ಯೆಯಾಗಿ ಸೇವೆ ಆರಂಭದ ದಿನವೇ ವಿಧಿಯಾಟ..! ಯುವ ವೈದ್ಯೆ ಸಾ*ವು..!

Published

on

ಮಂಗಳೂರು : ಆಕೆ ಆರೋಗ್ಯವಾಗಿದ್ದು, ಇನ್ನೊಬ್ಬರ ಆರೋಗ್ಯ ವಿಚಾರಿಸುವ ವೈದ್ಯೆಯಾಗಿದ್ದವರು. ದಂತ ವೈದ್ಯಕೀಯ ಪದವಿ ಮುಗಿಸಿ ಇನ್ನೇನು ಕೆಲಸಕ್ಕೆ ಸೇರಬೇಕು ಅಂತ ಒಂದು ಕ್ಲಿನಿಕ್‌ಗೆ ಜಾಯಿನ್ ಆಗಿದ್ದಾರೆ. ಆದ್ರೆ ದುರಾದೃಷ್ಟ ಅಂದ್ರೆ ಕೆಲಸಕ್ಕೆ ಜಾಯಿನ್ ಆಗುವ ದಿನವೇ ಆಕೆ ಇಹಲೋಕ ತ್ಯಜಿಸಿದ್ದಾರೆ. ಉಳ್ಳಾಲ ತಾಲೂಕಿನ ನರಿಂಘಾನ ಗ್ರಾಮದ ಆಳ್ವರಬೆಟ್ಟು ನಿವಾಸಿ 24 ವರ್ಷದ ಸ್ವಾತಿ ಶೆಟ್ಟಿ ಇಹಲೋಕ ತ್ಯಜಿಸಿದ ವೈದ್ಯೆಯಾಗಿದ್ದಾರೆ. ಉಳ್ಳಾಲ ತಾಲೂಕಿನ ನರಿಂಗಾನ‌ ಗ್ರಾಮದ ಆಳ್ವರಬೆಟ್ಟು ನಿವಾಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ, ಶಾಂತಿಪಳಿಕೆ ಶ್ರೀ ಮಹಾಮ್ಮಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಆಳ್ವರಬೆಟ್ಟು ಹಾಗೂ ಜ್ಯೋತಿ ಶೆಟ್ಟಿ ದಂಪತಿ ಪುತ್ರಿ ಇವರು.

ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಪದವಿ ಮುಗಿಸಿ ಮಂಗಳವಾರದಿಂದ(16-04-2024) ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ಕೆಲಸಕ್ಕೆ ಜಾಯಿನ್ ಆಗುವವರಿದ್ದರು. ಹೀಗಾಗಿ ಸೋಮವಾರ (15-04-2024) ಸಂಜೆ ಪಾಂಡೇಶ್ವರದ ಪಿಜಿ ಬಂದು ಜಾಯಿನ್ ಆಗಿದ್ದರು. ಮರುದಿನ ಹೊಸ ಕೆಲಸಕ್ಕೆ ಹೋಗುವ ಕಾರಣ ಸಾಕಷ್ಟು ಎಕ್ಸೈಟ್ ಆಗಿದ್ದ ಸ್ವಾತಿ ತಂದೆ ತಾಯಿ ಜೊತೆ ಫೋನ್ ಮೂಲಕ ಮಾತನಾಡಿದ್ದರು. ಈ ವೇಳೆ ವಿಪರೀತ ತಲೆನೋವು ಕಾಣಿಸಿಕೊಂಡ ಕಾರಣ ಬೇಗನೆ ಮಲಗುವುದಾಗಿ ಹೇಳಿ ಸ್ವಾತಿ ನಿದ್ರೆಗೆ ಜಾರಿದ್ದರು. ಈ ವೇಳೆ ರೂಮ್ ಮೇಟ್ ಕೂಡಾ ಜೊತೆಯಲ್ಲಿ ಇದ್ದರಾದ್ರೂ ತಲೆನೋವಿನ ಕಾರಣ ತೊಂದರೆ ಕೊಡದೆ ಅವರೂ ಕೂಡಾ ಮಲಗಿದ್ದರು. ಮುಂಜಾನೆ ಸ್ವಾತಿ ಎದ್ದಿಲ್ಲ ಅನ್ನೋ ಕಾರಣಕ್ಕೆ ಅವರನ್ನು ಅಲುಗಾಡಿಸಲು ಹೋದಾಗ ಮೈ ತಣ್ಣಗಾಗಿರುವುದು ಗೊತ್ತಾಗಿದೆ.  ತಕ್ಷಣ ಅಂಬ್ಯುಲೆನ್ಸ್ ಮೂಲಕ ನಗರದ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಅಷ್ಟರಲ್ಲಾಗಲೇ ಅವರು ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ವಾತಿ ಅವರಿಗೆ ಅಪರೂಪಕ್ಕೆ ತಲೆ ನೋವು ಕಾಣಿಸಿಕೊಳ್ಳುತ್ತಿತ್ತು. ಆದ್ರೆ ಅವರ ಈ ಧಿಡೀರ್ ಸಾವಿಗೆ ಕಾರಣ ಏನು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಾಗಿದೆ.

 

 

Continue Reading

DAKSHINA KANNADA

ದೇಶದಲ್ಲಿ ಮೊದಲ ಬಾರಿಗೆ QR ಕೋಡ್ ವೋಟರ್ ಸ್ಲಿಪ್

Published

on

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಮತದಾರರಿಗೆ ಕ್ಯೂ ಆರ್‌ ಕೋಡ್‌ ಹೊಂದಿರುವ ವೋಟರ್‌ ಸ್ಲಿಪ್‌ ನೀಡಲಾಗುವುದು.

ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತಗಟ್ಟೆ ಸುಲಭವಾಗಿ ಹುಡುಕಲು ಸಾಧ್ಯವಾಗದಂತೆ ಮನೆ ಮನೆಗೆ ನೀಡಲಾಗುವ ವೋಟರ್‌ ಸ್ಲಿಪ್‌ ಗಳಲ್ಲಿ ಮತಗಟ್ಟೆಯ ಕ್ಯೂ ಆರ್‌ ಕೋಡ್‌ ಮುದ್ರಿಸಲಾಗಿದೆ.

ನಗರದ ನಿವಾಸಿಗಳು ಕ್ಯೂ ಆರ್‌ ಕೋಡ್‌ ಮೂಲಕ ತಮ್ಮ ಮತಗಟ್ಟೆಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಮತದಾರರ ಮಾಹಿತಿ ಚೀಟಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ನೋಂದಾಯಿತ ಎಲ್ಲಾ ಮತದಾರರಿಗೆ ಒದಗಿಸಲಾಗುವುದು.

Continue Reading

LATEST NEWS

Trending