ಮಂಗಳೂರು: ಪ್ರವಾದಿ ನಿಂದನೆಗೈದ ನೂಪುರ್ ಶರ್ಮಾ ರನ್ನು ಬೆಂಬಲಿಸಿ ಹೇಳಿಕೆ ನೀಡಿದ ಕನ್ನಯ್ಯ ಲಾಲ್ ನನ್ನು ಇತ್ತೀಚೆಗೆ ರಾಜಸ್ತಾನದ ಉದಯಪುರದಲ್ಲಿ ಹತ್ಯೆ ಮಾಡಿದ ಆರೋಪಿಗಳು ಸ್ಥಳೀಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯರು ಆಗಿದ್ದು,
ಅಂತಹ ಖಂಡನಾರ್ಹ ಕೃತ್ಯ ವೆಸಗಿದ ವ್ಯಕ್ತಿಗಳಿಗೂ ಅಥವಾ ಮುಸ್ಲಿಮ್ ನಾಮಧಾರಿ ಹೆಸರನ್ನು ಒಳಗೊಂಡ ವ್ಯಕ್ತಿಗಳಿಗೂ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ.
ಇಸ್ಲಾಮ್ ಧರ್ಮ ಇಂತಹ ನಾಮಧಾರಿ ಮುಸ್ಲಿಮರನ್ನು ಒಳಗೊಂಡಿಲ್ಲ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ದೇಶದ ಮುಸ್ಲಿಮರ ವಿರುದ್ಧ ಆರೋಪ ಹೊರಿಸಿ, ವಿದ್ವೇಶ ಸೃಷ್ಟಿಸ ಬಾರದು. ಕನ್ನಯ್ಯ ಲಾಲ್ ಕೊಲೆಯಲ್ಲಿ ಬಿಜೆಪಿಯ ವ್ಯವಸ್ಥಿತ ಗೂಡಾಲೋಚನೆ ಅಡಗಿದೆ.
ನೂಪುರ್ ಶರ್ಮಾ ಹೇಳಿಕೆ, ಕನ್ನಯ್ಯ ಲಾಲ್ ಹೇಳಿಕೆ ಮತ್ತು ಆನಂತರದ ರಿಯಾಝ್ ಅಕ್ತರಿಯನ್ನು ರಾಜಸ್ತಾನದ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಬಳಸಿ ಇಡೀ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುವ ಷಡ್ಯಂತ್ರ ರೂಪಿಸಿದೆ.
ಈ ಸರ್ವ ಕೃತ್ಯಗಳು ಏಕ ಪಕ್ಷೀಯವಾಗಿದೆ. ಇಲ್ಲಿನ ಸಂಗ್ಹೀ ಮಾಧ್ಯಮಗಳು ಈ ಕೃತ್ಯದ ಹೊಣೆಯನ್ನು ದೇಶದ ಮುಸ್ಲಿಮರ ಮೇಲೆ ಹೊರಿಸಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕಾಗುತ್ತದೆ.
ಕೃತ್ಯದ ದುಷ್ಕರ್ಮಿಗಳನ್ನು ಕಠಿಣ ಕಾನೂನು ಕ್ರಮ ಕ್ಕೆ ಒಳಪಡಿಸಿ ಶಿಕ್ಷಿಸಿ.
ಅದರ ಬದಲಾಗಿ ದೇಶದ ಮುಸ್ಲಿಮರ ಮೇಲೆ, ಇಸ್ಲಾಮ್ ಧರ್ಮದ ಮೇಲೆ, ಈ ದೇಶದ ನೈತಿಕ ಪಾಠ ಕೇಂದ್ರವಾದ ಮದರಸ ಶಿಕ್ಷಣ ವ್ಯವಸ್ಥೆ ಮೇಲೆ ಹರಿಹಾಯ್ದರೆ ಅದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ.
ಈ ಬಗ್ಗೆ ಸಂಘಟನೆಗಳು ಖುದ್ದು ಮನವರಿಕೆ ಹೊಂದುವುದು ಒಳಿತು. ಮಂಗಳೂರಿನಲ್ಲಿನ ಕೆಲವು ಧರ್ಮಗಳ ಗುತ್ತಿಗೆ ಪಡೆದ ಸ್ಥಳೀಯ ನಾಯಕರು ಇತ್ತೀಚೆಗೆ ಮದರಸ ಬಗ್ಗೆಗಿನ ತಮ್ಮ ಹೇಳಿಕೆಯನ್ನು ಉದುರುವಾಗ ನಾಲಗೆ ಹದ್ದು ಬಸ್ತಿನಲ್ಲಿ ಇಟ್ಟು ಮಾತನಾಡುವುದು ಒಳಿತು.
ಪ್ರಚೋದಿತ ಕೃತ್ಯಗಳನ್ನು ತಾವೇ ಹೆಣೆದು ಮುಸ್ಲಿಮರ ತಲೆ ಮೇಲೆ ಕಟ್ಟುವಾಗ ಮುಂಜಾಗ್ರತೆ ವಹಿಸುವುದು ಒಳಿತು. ಮಾನ್ಯ ಸುಪ್ರೀಂ ಕೋರ್ಟ್ ಸಲಹೆಯಂತೆ ನೂಪುರ್ ಶರ್ಮಾ ಪ್ರವಾದಿ ನಿಂದನೆಯ ವಿಷಯದಲ್ಲಿ ದೇಶದ ಜನತೆಯ ಕ್ಷಮೆ ಯಾಚಿಸಲಿ.
ಈ ಬಗ್ಗೆ ಇಲ್ಲಿನ ಸರ್ವ ಸಂಸ್ಕೃತಿ ಸಂಘಟನೆಗಳು ನೂಪುರ್ ಶರ್ಮಾ ಳಿಗೆ ದೇಶದ ಜನತೆಯ ಕ್ಷಮೆ ಯಾಚಿಸಲು ಸಲಹೆ ನೀಡಲಿ. ಅಂದು ಹಿಜಾಬ್ ಇಸ್ಲಾಮಿನಲ್ಲಿ ಕಡ್ಡಾಯವಲ್ಲ ಎಂಬ ಕರ್ನಾಟಕ ಉಚ್ಛ ನ್ಯಾಯಾಲಯದ
ತೀರ್ಪನ್ನು ವಿಮರ್ಶಿಸಿ ಮುಸ್ಲಿಮರು ಸ್ವಯಂ ಪ್ರೇರಿತ ಶಾಂತಿಯುತ ವ್ಯವಹಾರ ಸ್ಥಗಿತ ಗೊಳಿಸಿ ಒಂದು ದಿವಸ ತಮ್ಮ ಧಾರ್ಮಿಕ ಪದ್ಧತಿಗೆ ಸಂಭವಿಸಿದ ನೋವನ್ನು ಪ್ರಕಟ ಪಡಿಸಿದಾಗ,
ನ್ಯಾಯಾಲಯದ ತೀರ್ಪನ್ನು ಮುಸ್ಲಿಮರು ಗೌರವಿಸುವುದಿಲ್ಲ ಎಂಬಿತ್ಯಾದಿಯಾಗಿ ಮಾಧ್ಯಮಗಳಲ್ಲಿ ಬೊಬ್ಬೆ ಹಾಕಿದ ವ್ಯಕ್ತಿಗಳು ನಾಯಕರು ಪ್ರಸ್ತುತ ಸುಪ್ರೀಂ ಕೋರ್ಟಿನ ಸಲಹೆಯನ್ನು
ಪಾಲಿಸಲು ನೂಪುರ್ ಶರ್ಮಾಳಿಗೆ ಜನರ ಕ್ಷಮೆ ಯಾಚಿಸಲು ಸಲಹೆ ನೀಡಲಿ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಕೆ.ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.