BANTWAL
ದೈವ ನರ್ತಕ ಶತಾಯುಷಿ ದೊಡ್ಡಬಾಬು ಪಂಡಿತ್ ವಿ*ಧಿವಶ
Published
14 hours agoon
ವಿಟ್ಲ: ದೈವ ನರ್ತಕ ಶತಾಯುಷಿ ದೊಡ್ಡಬಾಬು ಪಂಡಿತ್(100) ಅಲ್ಪಕಾಲದ ಅ*ಸೌಖ್ಯದಿಂದ ನಿ*ಧನರಾಗಿದ್ದಾರೆ. ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಸುರುಳಿ ಮೂಲೆಯ ಹಿರಿಯ ದೈವ ನರ್ತಕರಾಗಿದ್ದ ಪಂಡಿತ್ ಇ*ಹಲೋಕ ತ್ಯಜಿಸಿದ್ದಾರೆ.
ದೈವಾರಾಧನೆಯಲ್ಲಿ ಭಕ್ತಿ ನಿಷ್ಠೆಯಿಂದ ಸೇವೆ ಸಲ್ಲಿಸಿ ಹೆಸರುವಾಸಿಯಾಗಿದ್ದರು. ಶತಾಯುಶಿಯಾಗಿದ್ದ ಪಂಡಿತ್ ಕೆಲಕಾಲದ ಅಸೌಖ್ಯದಿಂದ ಬಳಲುತ್ತಿದ್ದರು. ಕೊರಗಜ್ಜ, ಪಂಜುರ್ಲಿ, ಕಲ್ಲುಟ್ಟಿ, ಸೇರಿ ಇತರ ದೈವಗಳಿಗೆ ದೈವ ನರ್ತಕನಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾ*ವು
ನಲಿಕೆ ಸಮುದಾಯದ ಹಿರಿಯ ವ್ಯಕ್ತಿಯಾದ ದೊಡ್ಡಬಾಬು ಅನೇಕ ಯುವ ದೈವನರ್ತಕರಿಗೆ ಮಾರ್ಗದರ್ಶಕರಾಗಿದ್ದರು. ಡಿ23 ಸೋಮವಾರ ತಮ್ಮ ಸ್ವಗ್ರಹದಲ್ಲಿ ದೊಡ್ಡಬಾಬು ನಿ*ಧನರಾಗಿದ್ದಾರೆ.
BANTWAL
ಬಂಟ್ವಾಳ: ಶಾಲಾ ವಾರ್ಷಿಕೋತ್ಸವಕ್ಕೆ ಬಂದಿದ್ದ ಯುವತಿಯ ಮೇಲೆ ಅತ್ಯಾಚಾರ; ಆರೋಪಿ ಅರೆಸ್ಟ್
Published
2 days agoon
23/12/2024By
NEWS DESK2ಬಂಟ್ವಾಳ: ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವತಿಯೋರ್ವಳ ಮೇಲೆ ಯುವಕನೋರ್ವ ಅತ್ಯಾಚಾರಗೈದ ಘಟನೆ ನಡೆದಿರುವ ಬಗ್ಗೆ ತಡವಾಗಿ ವರದಿಯಾಗಿದ್ದು, ಅತ್ಯಾಚಾರ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ನಾವೂರ ನಿವಾಸಿ ಜಯಂತ ಎಂಬಾತ ಆರೋಪಿಯಾಗಿದ್ದು, ಸದ್ಯ ಜೈಲುವಾಸ ಆನುಭವಿಸುತ್ತಿದ್ದಾನೆ.
ಡಿ. 14 ರಂದು ನಾವೂರು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ನೋಡುಲು ಮನೆಯವರ ಜೊತೆ ತೆರಳಿದ್ದ ಯುವತಿಯನ್ನು ಆರೋಪಿ ಜಯಂತ ಶಾಲಾ ಕೊಠಡಿಯಲ್ಲಿ ಕೂಡಿ ಹಾಕಿ ಅತ್ಯಾಚಾರ ಮಾಡಿದ್ದಾನೆ. ಈ ಬಗ್ಗೆ ನೊಂದ ಯುವತಿಯ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಳು.
ಇದೀಗ ಗ್ರಾಮಾಂತರ ಎಸ್.ಐ.ಹರೀಶ್ ಅವರ ಪೋಲೀಸ್ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯವು ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಟ್ವಾಳ: ಅಕ್ರಮವಾಗಿ ಮನೆಯಲ್ಲಿ ಜುಗಾರಿ ಆಟ ಆಡುತ್ತಿದ್ದ ವೇಳೆ ಬಂಟ್ವಾಳ ಪೊಲೀಸರು ದಾಳಿ ನಡೆಸಿ ಒಟ್ಟು 33 ಜನರನ್ನು ಹಾಗೂ ಬರೋಬ್ಬರಿ ಏಳು ಲಕ್ಷಕ್ಕೂ ಅಧಿಕ ಮೌಲ್ಯದ ನಗದು ವಶಪಡಿಸಿಕೊಂಡ ಘಟನೆ ನಿನ್ನೆ (ಡಿ.17) ಮುಂಜಾನೆ ವೇಳೆ ಬಂಟ್ವಾಳ ತಾಲೂಕು, ಬಡಗಬೆಳ್ಳೂರು ಗ್ರಾಮದ, ಬಡಗಬೆಳ್ಳೂರು ಎಂಬಲ್ಲಿ ನಿಶಾಂತ್ ಎಂಬವರ ಮನೆಯಲ್ಲಿ ನಡೆದಿದೆ.
ಅಕ್ರಮವಾಗಿ ಜುಗಾರಿ ಆಟ ಆಡುತ್ತಿದ್ದಾಗ, ಬಂಟ್ವಾಳ ಡಿವೈಎಸ್‌ಪಿ ವಿಜಯ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ ಬಿ, ಸಬ್ ಇನ್ಸ್ಪೆಕ್ಟರ್ ಹರೀಶ್ ಹಾಗೂ ಪೊಲೀಸ್ ಸಿಬ್ಬಂದಿಗಳ ತಂಡ ದಾಳಿ ನಡೆಸಿ ಕಾರ್ಯದಕ್ಷತೆ ಮೆರೆದಿದ್ದಾರೆ. ದಾಳಿ ವೇಳೆ ಸದ್ರಿ ಸ್ಥಳದಲ್ಲಿ ಅಕ್ರಮವಾಗಿ “ಉಲಾಯಿ-ಪಿದಾಯಿ” ಜುಗಾರಿ ಆಟ ಆಡುತ್ತಿರುವುದು ಕಂಡುಬಂದಿರುತ್ತದೆ. ದಾಳಿ ವೇಳೆ ಜುಗಾರಿ ಆಟ ಆಡಿಸುತ್ತಿದ್ದ ಆರೋಪಿತ ನಿಶಾಂತ್ ತಪ್ಪಿಸಿಕೊಂಡಿದ್ದು, ಆಟದಲ್ಲಿ ನಿರತರಾಗಿದ್ದ ಒಟ್ಟು 33 ಜನರನ್ನು ವಶಕ್ಕೆ ಪಡೆದುಕೊಂಡು, ಅಪಾದಿತರಿಂದ ಜುಗಾರಿ ಆಟಕ್ಕೆ ಬಳಸಿದ ನಗದು ರೂ. 7,81,420/-, ಇಸ್ಪೀಟ್ ಎಲೆಗಳು, ಸ್ಟೀಲ್ ಟೇಬಲ್, ಪ್ಲಾಸ್ಟಿಕ್ ಚೆಯರ್ ಹಾಗೂ ಇತರೆ ಸೊತ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು :
ರಾಜೇಶ್ (35 ವರ್ಷ), ಆನಂದ ಡಿ.ಸೋಜ (46 ವರ್ಷ), ಚೇತನ್ (39 ವರ್ಷ), ನಿತಿನ್ (34 ವರ್ಷ), ಪುಷ್ಪರಾಜ್ ಬಳ್ಳಾಲ್ (52 ವರ್ಷ) ನೌಷಾದ್ (37 ವರ್ಷ), ನಾಗೇಶ್ (36 ವರ್ಷ), ಅಬ್ದುಲ್ ಮಜೀದ್ (37 ವರ್ಷ), ಹರೀಶ್ (45 ವರ್ಷ), ಉಮೇಶ್ (52 ವರ್ಷ), ವಿನಾಯಕ (47 ವರ್ಷ), ಅಜಿತ್ ಕುಮಾರ್ (36 ವರ್ಷ), ರಾಘವೇಂದ್ರ (34 ವರ್ಷ), ಪ್ರವೀಣ್ ಕುಮಾರ್ (58 ವರ್ಷ), ಚೆನ್ನಕೇಶವ (42 ವರ್ಷ), ಭಾಸ್ಕರ (36 ವರ್ಷ), ವಿಘ್ನೇಶ (42 ವರ್ಷ), ಸಂಕೇತ್ (35 ವರ್ಷ), ಪವನ್ ರಾಜ್ (37 ವರ್ಷ), ಲೋಹಿತ್ (42 ವರ್ಷ), ಸತೀಶ್ ಇ., ಧೀರಜ್ ಕುಮಾರ್ (28 ವರ್ಷ), ಚಿದಾನಂದ (30 ವರ್ಷ), ಪ್ರಸಾದ್ (37 ವರ್ಷ), ಸಂದೀಪ್ (34 ವರ್ಷ), ಅನಿಲ್ ಕುಮಾರ್ (30 ವರ್ಷ), ನಿತೀಶ್ (21 ವರ್ಷ), ಸತೀಶ್ (36 ವರ್ಷ), ಮುಸ್ತಾಫ ಕೆ.ಪಿ. (33 ವರ್ಷ), ಅರುಣ್ ಡಿ.ಸೋಜ (50 ವರ್ಷ), ರೋಹಿತಾಶ್ವ ಪೂಜಾರಿ (46 ವರ್ಷ), ವಿಜೇತ್ ಕುಮಾರ್ (39 ವರ್ಷ), ನಿಖಿಲ್ (34 ವರ್ಷ), ನಿಶಾಂತ್ ಪರಾರಿಯಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ಸಿ.ಜೆ. & ಜೆ.ಎಂ.ಎಫ್. ಸಿ. ನ್ಯಾಯಾಲಯ, ಬಂಟ್ವಾಳ ಅವರ ಡಿಸ್ ನಂ: 1770 /2024 ರ ಆದೇಶದಂತೆ ಪ್ರಕರಣ ದಾಖಲಾಗಿದೆ.
ಸ್ವಾಧೀನಪಡಿಸಿದ ಸ್ವತ್ತುಗಳ ಒಟ್ಟು ಮೌಲ್ಯ ರೂ.7,90,220/- ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 112/2024 ಕಲಂ: 79,80 ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
BANTWAL
ಡಿ.19 ರಂದು ಕಡ್ತಾಲಬೆಟ್ಟು ದ.ಕ ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ
Published
7 days agoon
18/12/2024By
NEWS DESK2ಬಂಟ್ವಾಳ: ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಕಡ್ತಾಲಬೆಟ್ಟು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಇದರ ಸಹಯೋಗದಲ್ಲಿ ಶಾಲಾ ವಾರ್ಷಿಕೋತ್ಸವವು ಡಿಸೆಂಬರ್ 19 ರಂದು ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ಪ್ರಗತಿಪರ ಕೃಷಿಕರು ಮತ್ತು ಉದ್ಯಮಿಗಳು ಆದ ಜಯಪ್ರಕಾಶ್ ಶೆಟ್ಟಿ ಬುಳೇರಿ ಉದ್ಘಾಟನೆಯನ್ನು ಮಾಡಲಿದ್ದಾರೆ. ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಭಾರತಿ ರಾಜೇಂದ್ರ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಗತಿಪರ ಕೃಷಿಕ ಕೃಷ್ಣ ಶೆಟ್ಟಿ ಗೋಂಜಗುತ್ತು ಧ್ವಜಾರೋಹಣ ಮಾಡಲಿದ್ದು, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಸದಸ್ಯೆ ಮುತ್ತಮ್ಮ, ಪುಷ್ಪಾವತಿ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6.30 ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಆ ಬಳಿಕ ಶ್ರೀ ವಿಠಲ ನಾಯಕ್ ಮತ್ತು ಬಳಗದವರಿಂದ ನಿತ್ಯ ನೂತನ ಕಾರ್ಯಕ್ರಮ ಗೀತಾ ಸಾಹಿತ್ಯ ಸಂಭ್ರಮ, ಹಳೇ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶಾಲಾ ಹಳೇ ವಿದ್ಯಾರ್ಥಿ ಭರತ್ ರಾಜ್ ಶೆಟ್ಟಿ ಮತ್ತು ಬಳಗದವರಿಂದ ಯಕ್ಷ-ಗಾನ-ವೈಭವ ನಡೆಯಲಿದೆ.