Tuesday, July 5, 2022

ಕೊಣಾಜೆ: ಮಸೀದಿ ಬಳಿ ಅಶಾಂತಿಗೆ ಯತ್ನ-ಮೂವರು ವಶಕ್ಕೆ

ಉಳ್ಳಾಲ: ಇಲ್ಲಿನ ಕುರ್ನಾಡು ಸುಬ್ಬಗೋಳಿ ಮಸೀದಿ ಬಳಿ ಒಂದು ಸಮುದಾಯವನ್ನು ನಿಂದಿಸಿದ ಮೂವರು ಯುವಕರನ್ನು ಸ್ಥಳೀಯರು ಹಿಡಿದು ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದೆ.


ಹರ್ಷಿತ್, ವಿಘ್ಣೇಶ್ ಮತ್ತು ಶರಣ್ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಿನ್ನೆ ರಾತ್ರಿ ಮೂವರು ಮುಡಿಪು ಸಮೀಪದ ಬಾರ್‌ಲ್ಲಿ ನ್ಯೂಜಿಲ್ಯಾಂಡ್- ಆಸ್ಟ್ರೇಲಿಯಾ ಪಂದ್ಯಾಟ ವೀಕ್ಷಿಸಿದ ಬಳಿಕ ಬೈಕಿನಲ್ಲಿ ತೆರಳುವ ವೇಳೆ ಒಂದು ಸಮುದಾಯಕ್ಕೆ ಧಿಕ್ಕಾರ ಎಂದು ಬೊಬ್ಬಿಡುತ್ತಾ ತೆರಳಿದ್ದಾರೆ.

ಸುಬ್ಬಗೋಳಿ ಮಸೀದಿ ಬಳಿ ಎರಡು ಬಾರಿ ಧಿಕ್ಕಾರ ಕೂಗುತ್ತಾ ಹೋಗುವುದನ್ನು ಗಮನಿಸಿದ ಸ್ಥಳೀಯರು ಹಿಡಿದು ತರಾಟೆಗೆ ತೆಗೆದು ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ‌. ಈ ಪರಿಸರದಲ್ಲಿ ಎಲ್ಲಾ ಧರ್ಮದವರು ಶಾಂತಿಯಿಂದ ಇದ್ದು, ಸಾಮರಸ್ಯದಿಂದಿದ್ದಾರೆ.

ಆದರೆ ಕೆಲವು ಕಿಡಿಗೇಡಿಗಳು ಇಂತಹ ಕೃತ್ಯಕ್ಕೆ ಯತ್ನಿಸಿದ್ದಾರೆ. ಇದರಿಂದ ಒಂದು ಸಮುದಾಯದ ಮೇಲೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಅಂತಹ ಕಿಡಿಗೇಡಿಗಳನ್ನು ಬಂಧಿಸಿ, ಶಿಕ್ಷಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ

 

ಹೆಚ್ಚಿನ ವಿವರಕ್ಕೆ ನಿರೀಕ್ಷಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ : ಶಾಲಾ- ಕಾಲೇಜುಗಳಿಗೆ ಇಂದು (ಜು5) ರಜೆ ಘೋಷಿಸಿದ ಜಿಲ್ಲಾಧಿಕಾರಿ..!

ಮಂಗಳೂರು " ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ದಿನಾಂಕ 05/07/ 2022ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ...

ಮಂಗಳೂರು: ವರ್ಕ್ ಶಾಪ್‌ಗೆ ನೀರು ನುಗ್ಗಿ ಅಪಾರ ಹಾನಿ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವರ್ಕ್ ಶಾಪ್‌ಗೆ ನೀರು ನುಗ್ಗಿ ಅಪಾರ ಹಾನಿಯಾದ ಘಟನೆ ಮಂಗಳೂರು ನಗರ ಹೊರವಲಯದ ಕುಲಶೇಖರದ ಬಜ್ಜೋಡಿ ಎಂಬಲ್ಲಿ ನಡೆದಿದೆ.ಭಾರೀ ಮಳೆ ಹಿನ್ನಲೆ ವರ್ಕ್ ಶಾಪ್...