Connect with us

ವೆನ್ಲಾಕ್ ವ್ಯವಸ್ಥೆ ಬಗ್ಗೆ ಜಿಲ್ಲಾ ಮುಖ್ಯ ನ್ಯಾಯಾಧೀಶರಿಂದ ಮಾಹಿತಿ, ನೂತನ ಡಿಹೆಚ್ಒ ನೇಮಕ ಮಾಡುತ್ತೇವೆ ಎಂದ ಕೋಟಾ

Published

on

ಕೊರೊನಾ ಭೀತಿ: ವೆನ್ಲಾಕ್ ಆಸ್ಪತ್ರೆ ವ್ಯವಸ್ಥೆ ಬಗ್ಗೆ ವೈದ್ಯಾಧಿಕಾರಿಯಿಂದ ಮಾಹಿತಿ ಪಡೆದುಕೊಂಡ ಜಿಲ್ಲಾ ಮುಖ್ಯ ನ್ಯಾಯಾಧೀಶ

ಮಂಗಳೂರು: ಮಂಗಳೂರಿನ ವೆನ್ ಲಾಕ್ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೋನಾ ಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅವ್ಯವಸ್ಥೆ ಮತ್ತು ಕ್ವಾರಂಟೈನ್ ಕುರಿತ ಗೊಂದಲಗಳ ಬಗ್ಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಡ್ಲೂರು ಸತ್ಯನಾರಾಯಣಾಚಾರ್ಯ ಅವರು ಮಾಹಿತಿ ಪಡೆದುಕೊಂಡರು.

ದೂರವಾಣಿ ಮೂಲಕ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ರಾಜೇಶ್ವರಿ ದೇವಿ ಅವರನ್ನು ಸಂಪರ್ಕಿಸಿದ ನ್ಯಾಯಾಧೀಶರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ, ಆಸ್ಪತ್ರೆ ಮುಖ್ಯ ಅಧೀಕ್ಷಕಿ  ರಾಜೇಶ್ವರಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಐಸೊಲೇಷನ್ ವಾರ್ಡ್ ಮತ್ತು ಪ್ರತ್ಯೇಕ ವ್ಯವಸ್ಥೆ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ವೆನ್ಲಾಕ್ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಗೊಂದಲದ ಬಗ್ಗೆ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಧೀಶರು ಈ ಮಾಹಿತಿಯನ್ನು ಪಡೆದುಕೊಂಡರು.

ಮಾಧ್ಯಮ ವರದಿ ಹಿನ್ನೆಲೆಯಲ್ಲಿ ಅವರು, ಆಸ್ಪತ್ರೆಯ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಲು ಮಂಗಳೂರು ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆ  ವೈಯಕ್ತಿಕವಾಗಿ ವೆನ್ಲಾಕ್ ಗೆ ಭೇಟಿ ನೀಡಿ ಪರಿಶೀಲನೆ ಮಾಡುವ ತಯಾರಿ ಮಾಡಿದ್ದರು.

ಆದರೆ, ಹೈಕೋರ್ಟ್ ನ್ಯಾಯಾಧೀಶರೊಂದಿಗೆ ವಿಡಿಯೋ ಕಾನ್ಪರೆನ್ಸ್ ನಲ್ಲಿ ಭಾಗವಹಿಸಬೇಕಾದ ಕಾರಣ ಈ ಭೇಟಿಯನ್ನು ಅನಿರೀಕ್ಷಿತವಾಗಿ ರದ್ದುಗೊಳಿಸಲಾಯಿತು.

ಇನ್ನು ಈ ಬಗ್ಗೆ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನಿಡಿದ್ದು, ಜಿಲ್ಲಾಡಳಿತ ಸರಿಯಾದ ಕ್ರಮ ಕೈಗೊಂಡಿದೆ. ಹಿರಿಯ ಅನುಭವಿ ವ್ಯಕ್ತಿಯೊಬ್ಬರನ್ನು ಡಿ.ಹೆಚ್.ಓ ಆಗಿ ನೇಮಕ ಮಾಡಲಾಗುವುದು ಎಂಬ ಮಾಹಿತಿ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ರಾಜ್ಯ ಮಟ್ಟದ ತ್ರೋಬಾಲ್ : ದರ್ಬೆ ಬೆಥನಿ ಶಾಲೆ ದ್ವಿತೀಯ

Published

on

ಪುತ್ತೂರು : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೋಲಾರ ಜಿಲ್ಲೆಯ  ಕೆಜಿಎಫ್  ಪ್ರೌಢ ಶಾಲೆಯಲ್ಲಿ ಜ. 8 ಮತ್ತು 9 ರಂದು ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಪುತ್ತೂರು ದರ್ಬೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ತಂಡದಲ್ಲಿ ಆದ್ಯ ಕೆ, ಶಾನ್ವಿ ಪ್ರೀಷ್ಮ, ಫಾತಿಮಾತ್ ಮುನವರ, ಫಾತಿಮಾತ್ ಝುಲ್ಫ, ನಿರೀಕ್ಷಾ H ಶೆಟ್ಟಿ, ಸ್ನಿಗ್ಧ, ಆಯಿಷಾತ್ ಹಿಬಾ ಉತ್ತಮ ಪ್ರದರ್ಶನವನ್ನು ನೀಡಿ ಗೆಲುವಿಗೆ ಕಾರಣೀಭೂತರಾದರು. ಹಿಬಾ ಉತ್ತಮ ಆಟಗಾರ್ತಿಯಾಗಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.

ಇದನ್ನೂ ಓದಿ : ಕಾಲೇಜು ಕಾರ್ಯಕ್ರಮದಲ್ಲಿ ಅಶ್ವಿನ್ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ ಫ್ಯಾನ್ಸ್

ತಂಡಕ್ಕೆ ದೈಹಿಕ ಶಿಕ್ಷಕರಾದ  ನಿರಂಜನ್ ಹಾಗೂ ಅಕ್ಷಯ್ ತರಬೇತಿಯನ್ನು ನೀಡಿದ್ದಾರೆ. ತಂಡದ ವ್ಯವಸ್ಥಾಪಕಿಯಾಗಿ ಅನಿತಾಸಿಯ ಗೋನ್ಸಲ್ವಸ್ ಇವರು ತಂಡವನ್ನು ಮುನ್ನಡೆಸಿದರು ಎಂಬುದಾಗಿ ಶಾಲಾ ಮುಖ್ಯ ಶಿಕ್ಷಕಿ ಭಗಿಣಿ ಸೆಲಿನ್ ಪೇತ್ರ ಮಾಹಿತಿ ನೀಡಿದ್ದಾರೆ.

Continue Reading

LATEST NEWS

ಬಿಜೆಪಿ ಶಾಸಕನ ಕಾರು ಚಾಲಕ ಆತ್ಮಹ*ತ್ಯೆ!

Published

on

ಮಂಗಳೂರು/ಗದಗ : ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿಯ ಕಾರು ಚಾಲಕ ನೇ*ಣಿಗೆ ಶರಣಾಗಿದ್ದಾರೆ. ಸುನಿಲ್ ಲಮಾಣಿ(25) ಆತ್ಮಹ*ತ್ಯೆ ಮಾಡಿಕೊಂಡವರು. ಸುನಿಲ್ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಮಲ್ಲಾಡ್ ಕಾಲೋನಿಯಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಆತ್ಮಹ*ತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸುನೀಲ್ ಲಮಾಣಿ ಆತ್ಮಹ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಶಾಸಕ ಚಂದ್ರು ಲಮಾಣಿ ಇತ್ತೀಚೆಗೆ ಖರೀದಿಸಿದ್ದ ಮನೆಯಲ್ಲಿ ಸುನೀಲ್ ಆತ್ಮಹ*ತ್ಯೆ ಮಾಡಿಕೊಂಡಿದ್ದು, ಆತ ಚಂದ್ರು ಅವರ ಸಂಬಂಧಿ ಎಂದು ತಿಳಿದುಬಂದಿದೆ . ಮನೆ ಕಟ್ಟುವ ವಿಚಾರದಲ್ಲಿ ಸಹೋದರರ ನಡುವೆ ಕಲಹ ಉಂಟಾಗಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಸುನಿಲ್ ಆತ್ಮಹ*ತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ : ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!

ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹ*ತ್ಯೆಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Continue Reading

LATEST NEWS

ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!

Published

on

ನೀವು ಚಿಕ್ಕವರಾಗಿರಲಿ ಅಥವಾ ವಯಸ್ಸಾದವರಾಗಿರಲಿ ಸಿಹಿತಿಂಡಿ ಸೇವಿಸಿದ ನಂತರ ಹಲ್ಲುಗಳನ್ನ ಸ್ವಚ್ಛಗೊಳಿಸುವಲ್ಲಿನ ಅಜಾಗರೂಕತೆಯು ಹಲ್ಲುಗಳಿಗೆ ಸೋಂಕು ತಗುಲಿಸಬಹುದು. ಇದು ಇಡೀ ಹಲ್ಲನ್ನು ಹಾನಿಗೊಳಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಜನರು ದಂತವೈದ್ಯರ ಬಳಿಗೆ ಹೋಗುತ್ತಾರೆ ಮತ್ತು ಆಗಾಗ್ಗೆ ಹಲ್ಲುಗಳನ್ನ ಕೀಳಬೇಕಾಗುತ್ತದೆ. ಯಾಕಂದ್ರೆ, ಇದು ಇತರ ಹಲ್ಲುಗಳಿಗೆ ಹಾನಿ ಮಾಡುವ ಅಪಾಯವನ್ನ ಹೆಚ್ಚಿಸುತ್ತದೆ.

ಇಂದಿಗೂ ಸಹ ನಾವು ನಮ್ಮ ಹಿರಿಯರ ಹಳೆಯ ಪರಿಹಾರಗಳನ್ನ ಅನುಸರಿಸುವ ಮೂಲಕ ಹಲ್ಲಿನ ಹುಳುಗಳನ್ನ ತೊಡೆದು ಹಾಕಬಹುದು. ಇಂದು ನಾನು ನಿಮಗೆ ಅಂತಹ ಮನೆಮದ್ದನ್ನ ಹೇಳಲಿದ್ದೇನೆ, ಅದನ್ನು ಬಳಸಿಕೊಂಡು ನೀವು ದಂತವೈದ್ಯರ ಬಳಿಗೆ ಹೋಗದೆ ಹಲ್ಲಿನ ಹುಳುಗಳನ್ನ ತೊಡೆದು ಹಾಕಬಹುದು.

ಚಾಕೊಲೇಟ್ ತಿನ್ನುವುದರಿಂದ ಮಕ್ಕಳ ಹಲ್ಲುಗಳು ಹಾನಿಗೊಳಗಾಗುತ್ತವೆ. ಆಹಾರ ಅಥವಾ ಸಿಹಿತಿಂಡಿಗಳನ್ನು ಸೇವಿಸಿದ ನಂತರ ನಾವು ತೊಳೆಯುವುದಿಲ್ಲ. 10 ರಿಂದ 12 ವರ್ಷ ವಯಸ್ಸಿನಲ್ಲಿ, ಕುಳಿಗಳಿಂದಾಗಿ ಮಕ್ಕಳ ಹಲ್ಲುಗಳು ಕ್ಷೀಣಿಸಲು ಪ್ರಾರಂಭಿಸುತ್ತವೆ.

ಇದನ್ನು ತಡೆಗಟ್ಟಲು ಸುಲಭ ಮಾರ್ಗವಿದೆ. ಯಾರಿಗಾದರೂ ಹಲ್ಲಿನಲ್ಲಿ ಕುಳಿ ಇದ್ದರೆ, ನೀವು ಅದನ್ನು ಮನೆಯಲ್ಲಿಯೇ ತೆಗೆದುಹಾಕಬಹುದು. ಮೊದಲಿಗೆ, ಈರುಳ್ಳಿ ಬೀಜಗಳನ್ನ ಮಾರುಕಟ್ಟೆಯಿಂದ ತರಬೇಕು. ನಂತರ ಬೆಂಕಿಯನ್ನ ಹೊತ್ತಿಸಿ ಕೆಂಡದ ಮೇಲೆ ಈರುಳ್ಳಿ ಬೀಜಗಳನ್ನ ಹಾಕಿ ಬಂದ ಹೊಗೆಯನ್ನ ಬಾಯಿಯಲ್ಲಿ ಶೇಖರಿಸಿ ನಂತ್ರ ಮುಚ್ಚಿ. ಈ ಪ್ರಕ್ರಿಯೆಯನ್ನ ಎರಡರಿಂದ ಮೂರು ಬಾರಿ ಮಾಡಿ. ಈಗ ನಿಮ್ಮ ಬಾಯಿಯಲ್ಲಿ ನೀರು ಹಾಕಿಕೊಂಡು ಮುಕ್ಕಳಿಸಿ ಆ ಬಟ್ಟಲಿನಲ್ಲಿ ಉಗುಳಿ. ಈಗ ಆ ಬಟ್ಟಲಿನಲ್ಲಿರುವ ನೀರಿನಲ್ಲಿ ಎಲ್ಲಾ ಹುಳುಗಳು ಗೋಚರಿಸುತ್ತವೆ.

Continue Reading

LATEST NEWS

Trending

Exit mobile version