Connect with us

  DAKSHINA KANNADA

  ರಾಹುಲ್ ಗಾಂಧಿ ಹಿಂದೂ ವಿರೋಧಿ..! ಯುವ ಮೋರ್ಚಾ ಅಧ್ಯಕ್ಷ ಹೇಳಿಕೆ

  Published

  on

  ಮಂಗಳೂರು: ರಾಹುಲ್ ಗಾಂಧಿಯವರು ಲೋಕಸಭೆ ಚುನಾವಣೆಯ ಮೊದಲು ಜನಿವಾರ ಕುಂಕುಮ ಹಚ್ಚಿಕೊಂಡು ತಾನೊಬ್ಬ ದೊಡ್ಡ ಹಿಂದು ಎಂದು ತಿರುಗಾಡುತ್ತಾ ಚುನಾವಣೆ ಮುಗಿದ ತಕ್ಷಣ ತನ್ನ ಹಿಂದು ವಿರೋಧಿಯಾಗಿ ಬದಲಾಗಿ ನಿಜಬಣ್ಣ ತೋರಿಸಿದರು ಎಂದು ದ.ಕ. ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ನಂದನ್ ಮಲ್ಯ ಅಕ್ರೋಶ ವ್ಯಕ್ತ ಪಡಿಸಿದರು.

  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಹಿಂದುಗಳನ್ನು ಹಿಂಸೆ ಮಾಡುವವರು, ಅಸತ್ಯ ಮಾತಾಡುವವರು ಎಂದು ಇಡೀ ಹಿಂದೂ ಸಮಾಜವನ್ನು ಮೂದಲಿಸಿದರು. ಅಡ್ವಾಣಿ ಅವರ ಹಿಂದುತ್ವದ ಆಂದೋಲನವನ್ನು ಇದೀಗ ಹೊಸಕಿ ಹಾಕಿದ್ದೇವೆ ಎಂದು ತಮ್ಮ ಹಿಂದೂ ದ್ವೇಷವನ್ನು ಮತ್ತೆ ಸಾಬೀತುಪಡಿಸಿದರು.

  ಸಂಸತ್ತಿನಲ್ಲಿ ಏನೂ ಮಾತಾಡಿದರೂ ಕಾನೂನು ಸಂರಕ್ಷಣೆ ಸಿಗುತ್ತೆ ಎಂಬೂದನ್ನು ಅರಿತು ಈ ಅವಕಾಶವನ್ನು ದುರುಪಯೋಗ ಪಡಿಸಿ ಹಿಂದೂಗಳ ಅಪಮಾನ ಮಾಡಿದ್ದಾರೆ. ಇವರ ಇಂಡಿ ಘಟಬಂಧನದ DMK ಮುಖಂಡ ಉದಯನಿಧಿ ಸ್ಟಾಲಿನ್ ಸನಾತನ ಹಿಂದೂ ಧರ್ಮವನ್ನು ಸಮೂಲ ಸರ್ವ ನಾಶ ಮಾಡಬೇಕು ಎಂದಾಗ ಇವರು ಸುಮ್ಮನಿದ್ದರು.

  ಕೇರಳದಲ್ಲಿ ಮುಸ್ಲಿಂ ಲೀಗ್ ದೇವಸ್ಥಾನದ ಮುಂದೆ ಹಿಂದುಗಳನ್ನು ಸುಟ್ಟುಹಾಕಬೇಕು ಅಂದಾಗಲೂ ಮೌನವಾಗಿದ್ದರು. TMC ಯ ಮೇಯರ್ ಎಲ್ಲರನ್ನು ಮುಸ್ಲಿಂ ಮತಕ್ಕೆ ಮತಾಂತರ ಮಾಡಬೇಕು ಎಂದು ಸಾರ್ವಜನಿಕವಾಗಿ ಮಾತಾಡಿದರೂ ಕಾಂಗ್ರೇಸ್ ಮೌನ ಸಮ್ಮತಿಸಿತ್ತು. ರಾಹುಲ್ ಗಾಂಧಿ ಶಿವನ ಫೋಟೋ ಹಿಡಿದವರು, ಇವರ ಯುಪಿಎ ಸರಕಾರದಲ್ಲಿ ರಾಮ ದೇವರು ಕೇವಲ ಕಾಲ್ಪನಿಕ ಅಂತ ಅಫಿಡವಿಟ್ ಸಲ್ಲಿಸಿದ ಈ ಕಾಂಗ್ರೇಸ್ ತಮ್ಮ ಎಪ್ಪತ್ತು ವರ್ಷಗಳ ಅಧಿಕಾರ ಅವಧಿಯಲ್ಲಿ ಹಿಂದುಗಳಿಗಾಗಿ ಏನು ಮಾಡಿದರು ಎಂಬ ಪಟ್ಟಿ ಕೊಡಲಿ. ದ.ಕ. ಕಾಂಗ್ರೇಸ್ ನ ಹಿರಿಯರಾದ ರಮಾನಾಥ ರೈ ಅವರು ಈ ಬಾಲ ಬುದ್ದಿಯ ಕಾಂಗ್ರೇಸ್ ನಾಯಕರನ್ನು ತಿದ್ದುವ ಬದಲು ಅಧಿಕಾರದ ಆಸೆಗೆ ಅವರ ಗುಲಾಮಗಿರಿಗೆ ಇಳಿದದ್ದು ದುರಾದೃಷ್ಟ.

  ತನಗೆ ಶಾಸಕ ಸ್ಥಾನಕ್ಕಿಂತ ಹಿಂದುತ್ವವೇ ಮುಖ್ಯ ಎಂಬೂದನ್ನು ತತ್ವ ಆಗಿರಿಸಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮತಗಳಿಂದ ಗೆದ್ದಿರುವ ನಮ್ಮ ಶಾಸಕರಾದ ಭರತ್ ಶೆಟ್ಟಿ ಅವರನ್ನು ಹಿಂಬಾಗಿಲಿನಿಂದ ಅಧಿಕಾರ ಹಿಡಿದ ಐವನ್ ಡಿಸೋಜಾ ಮೂದಲಿಸಿರುವುದು ಹಾಸ್ಯಾಸ್ಪದವಾಗಿದೆ. ಕಾಂಗ್ರೇಸ್ ನ ಈ ಓಲೈಕೆ ರಾಜಕಾರಣಕ್ಕೆ ಹಾಗೂ ಹಿಂದೂ ಧರ್ಮದ ವಿರೋಧಿ ರಾಜಕಾರಣಕ್ಕೆ ಧಿಕ್ಕಾರವಿರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ವಕ್ತಾರರಾದ ಅರುಣ್ ಜಿ ಶೆಟ್, ಯುವ ಮೋರ್ಚಾದ ಪ್ರಮುಖರಾದ ಭರತರಾಜ್ ಕೃಷ್ಣಾಪುರ, ಉಮೇಶ್ ಕುಲಾಲ್, ಪ್ರಕಾಶ್ ಗರೋಡಿ, ವರುಣ್ ಅಂಬಟ್, ನಿಶಾನ್ ಪೂಜಾರಿ, ಅವಿನಾಶ್ ಸುವರ್ಣ ಹಾಗೂ ರಕ್ಷಿತ್ ಪೂಜಾರಿ ಉಪಸ್ಥಿತರಿದ್ದರು.

  Click to comment

  Leave a Reply

  Your email address will not be published. Required fields are marked *

  DAKSHINA KANNADA

  ಬಜಪೆ: ಅದ್ಯಪಾಡಿ ಗ್ರಾಮದ 30ಕ್ಕೂ ಹೆಚ್ಚು ಮನೆಗಳು ಜಲಾವೃತ

  Published

  on

  ಬಜಪೆ ಸಮೀಪದ ಅದ್ಯಪಾಡಿ ಗ್ರಾಮದ ಸುಮಾರು 30ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, 80 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಲ್ಗುಣಿ ನದಿಗೆ ಮರವೂರಿನಲ್ಲಿ ನಿರ್ಮಸಿದ ಕಿಂಡಿ ಅಣೆಕಟ್ಟು ಈ ನೆರೆಗೆ ಕಾರಣವಾಗಿದೆ ಎಂದು ಜನರು ಆರೋಪಿಸಿದ್ದಾರೆ.

  ಕಳೆದ ಹತ್ತು ವರ್ಷದಿಂದ ಈ ಗ್ರಾಮದ ಜನರು ಮಳೆಗಾಲದಲ್ಲಿ ಸಂಕಷ್ಟಕ್ಕೆ ಗುರಿಯಾಗುತ್ತಿದ್ದು, ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅವೈಜ್ಞಾನಿಕವಾಗಿ ನಿರ್ಮಿಸಿದ ಕಿಂಡಿ ಅಣೆಕಟ್ಟಿನಿಂದ ಇಲ್ಲಿನ ರೈತರು ಈಗಾಗಲೇ ತಮ್ಮ ಕೃಷಿ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ ಉಂಟಾಗುವ ನೆರೆಯಿಂದ ಮನೆಗಳೂ ಕುಸಿಯುವ ಭೀತಿ ಎದುರಾಗಿದೆ.

  ಈ ಗ್ರಾಮಕ್ಕೆ ಇಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭೇಟಿ ನೀಡಿ ಜನರ ಸಂಕಷ್ಟ ಕೇಳಿದ್ದಾರೆ. ದೋಣಿಯ ಮೂಲಕ ಇಲ್ಲಿನ ಮನೆಗಳಿಗೆ ತೆರಳಿದ ಜಿಲ್ಲಾದಿಕಾರಿ ಮನೆಯಲ್ಲಿದ್ದ ವೃದ್ಧರಿಗೆ ಸಾಂತ್ವಾನ ಹೇಳಿದ್ದಾರೆ. ಸುಮಾರು 80 ಜನರು ಇಲ್ಲಿ ವಾಸವಾಗಿದ್ದು, ಜನರನ್ನು ಸ್ಥಳಾಂತರ ಮಾಡಿ ಸುರಕ್ಷಿತ ಜಾಗಕ್ಕೆ ಕಳುಹಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

  ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸ್ಥಳೀಯ ಜನರ ಬಳಿ ಮಾತನಾಡಿದ್ದು, ಅವರು ಪ್ರಮುಖ ಸಮಸ್ಯೆಯ ಬಗ್ಗೆ ಗಮನಕ್ಕೆ ತಂದಿದ್ದಾರೆ. ಆ ಬಗ್ಗೆ ಗಮನ ಹರಿಸಲಾಗುವುದು ಆದ್ರೆ ಅದಕ್ಕೂ ಮೊದಲು ಈಗ ಇವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.

  Continue Reading

  BANTWAL

  ವಿಟ್ಲದಲ್ಲಿ ಕುಸಿದು ಬಿದ್ದ ಕೋಳಿ ಶೆಡ್; 1500ಕ್ಕೂ ಅಧಿಕ ಕೋಳಿ ಸಾ*ವು

  Published

  on

  ವಿಟ್ಲ: ಕೋಳಿ ಸಾಕಾಣೆ ಮಾಡುವ ಶೆಡ್ ನೆಲಕ್ಕುರುಳಿ ಸುಮಾರು ಒಂದೂವರೆ ಸಾವಿರ ಕೋಳಿಗಳು ಮೃ*ತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ ನಡೆದಿದೆ.

  ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ನಿವಾಸಿ ರಾಘವರವರ ಮಾಲಕತ್ವದ ಶೆಡ್ ಇದಾಗಿದ್ದು, ಸುಮಾರು 2200 ಕೋಳಿಗಳನ್ನು ಅವರು ಸಾಕಾಣೆ ಮಾಡುತ್ತಿದ್ದರು.

  ಶೆಡ್ಡಿನ ಮೇಲ್ಚಾವಣಿ ಒಮ್ಮೆಲೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸುಮಾರು 1500 ಕೋಳಿಗಳು ಅದರಡಿಗೆ ಬಿದ್ದು ಸತ್ತುಹೋಗಿವೆ. ಘಟನೆಯಿಂದಾಗಿ ಶೆಡ್ ಸಂಪೂರ್ಣ ನಾ*ಶವಾಗಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

  Continue Reading

  DAKSHINA KANNADA

  ಒಂದೇ ಗಂಟೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರಕ್ಕೆ ಸ್ಪಂದಿಸಿದ ರೈಲ್ವೆ ಇಲಾಖೆ

  Published

  on

  ಮಂಗಳೂರು: ರೈಲ್ವೇ ಇಲಾಖೆಗೆ ಹೆಚ್ಚುವರಿ ರೈಲು ಓಡಿಸುವಂತೆ ಸಂಸದ ಬ್ರಿಜೇಶ್ ಚೌಟ ಮಾಡಿದ ಮನವಿಗೆ ನೈರುತ್ಯ ರೈಲ್ವೇ ಇಲಾಖೆ ಸ್ಪಂಧಿಸಿದೆ.

  ಗುಡ್ಡ ಕುಸಿತದಿಂದ ಮಂಗಳೂರು-ಬೆಂಗಳೂರು ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ತುರ್ತಾಗಿ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಸಂಸದರ ಮನವಿಗೆ ತಕ್ಷಣ ಸ್ಪಂದಿಸಿ ಆದೇಶ ಹೊರಡಿಸಿದೆ. ಶುಕ್ರವಾರ ಹಾಗೂ ಶನಿವಾರದಂದು ತಲಾ ಒಂದು ಹಾಗೂ ಶನಿವಾರ ಹಾಗೂ ಭಾನುವಾರದಂದು ತಲಾ ಎರಡು ಹೆಚ್ಚುವರಿ ರೈಲು ಓಡಿಸುವ ಬಗ್ಗೆ ರೈಲ್ವೇ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

  ಮಂಗಳೂರು ಬೆಂಗಳೂರು ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಓಡಾಡುತ್ತಿದ್ದು, ಮಳೆಯ ಕಾರಣ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿದೆ. ಶಿರಾಡಿ ಘಾಟ್, ಸಂಪಾಜೆ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಭಂದ ವಿಧಿಸಲಾಗಿದೆ. ಹೀಗಾಗಿ ಜನರ ಅಗತ್ಯತೆ ಪೂರೈಸಲು ಹೆಚ್ಚುವರಿ ರೈಲು ಓಡಿಸುವಂತೆ ಸಂಸದರು ರೈಲ್ವೇ ಇಲಾಖೆಗೆ ಪತ್ರ ಬರೆದಿದ್ದರು.

  ಸಂಸದರ ಪತ್ರ ಕೈ ಸೇರಿದ ಒಂದೇ ಘಂಟೆಯಲ್ಲಿ ನೈರುತ್ಯ ರೈಲ್ವೇ ಇಲಾಖೆ ಹೆಚ್ಚುವರಿ ರೈಲು ಓಡಿಸುವ ಬಗ್ಗೆ ಒಪ್ಪಿಗೆ ಸೂಚಿಸಿದ್ದು, ಹೆಚ್ಚುವರಿ ರೈಲು ಓಡಾಟದ ಸಮಯವನ್ನು ನಿಗಧಿ ಪಡಿಸಿದೆ. ಈ ಕಾರಣದಿಂದ ಮಾಮೂಲ ರೈಲಿನಲ್ಲಿ ಪ್ರಯಾಣಿಕರಿಗೆ ಸೀಟು ಸಿಗದ ಪರದಾಡುವುದು ಕೂಡಾ ತಪ್ಪಿದಂತಾಗಿದೆ.

  Continue Reading

  LATEST NEWS

  Trending