ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಪತ್ರಕರ್ತರಿಗೆ ರೋಗ ನಿರೋಧಕ ಔಷಧ ವಿತರಣೆ,
ಗ್ರಾಮೀಣ ಕೂಟ ಸಂಸ್ಥೆ ವತಿಯಿಂದ ಪತ್ರಕರ್ತರಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಣಾ ಸಮಾರಂಭ ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆಯಿತು.
ಪತ್ರಕರ್ತರಿಗೆ ಔಷಧ, ಮಾಸ್ಕ್, ಸ್ಯಾನಿಟೈಜರ್ ವಿತರಿಸಿ ಮಾತನಾಡಿದ ಶಾಸಕ ಡಿ. ವೇದವ್ಯಾಸ ಕಾಮತ್,
ಕೊರೋನಾ ವಾರಿಯರ್ಸ್‌ಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ವಿತರಣೆ ಮಾಡುವ ಮೂಲಕ ಆಯುಷ್ ಇಲಾಖೆ ಉತ್ತಮ ಕಾರ್ಯ ನಡೆಸಿದೆ.
ಪತ್ರಕರ್ತರು ಜನರ ನಡುವೆ, ಜನಸಂದಣಿ ಇರುವಲ್ಲಿಗೆ ತೆರಳಬೇಕಾಗುತ್ತದೆ.
ಈ ಹಿನ್ನಲೆಯಲ್ಲಿ ಪತ್ರಕರ್ತರೂ ಮುನ್ನೆಚ್ಚರಿಕೆ ವಹಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆಯುಷ್ ಇಲಾಖೆ ಔಷಧ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮ್ಮದ್ ಇಕ್ಬಾಲ್ ಮಾತನಾಡಿ, ಆಯುಷ್ ಇಲಾಖೆ ವತಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧವನ್ನು 50 ಸಾವಿರ ಮಂದಿ ಮುಂಚೂಣಿ ಕಾರ್ಯಕರ್ತರಿಗೆ ವಿತರಿಸಲಾಗುತ್ತಿದೆ.
ಸೋಮವಾರ ಪತ್ರಕರ್ತರಿಗೆ ಮತ್ತು ಕೆ.ಎಸ್.ಆರ್.ಟಿ.ಸಿ.ಯ 4 ಸಾವಿರ ಸಿಬ್ಬಂದಿಗೆ ಔಷಧ ವಿತರಿಸಲಾಗಿದೆ.
ಮುಂದಕ್ಕೆ ಇಲಾಖೆಯಿಂದ ಪಂಚಾಯತ್ ಮಟ್ಟದಲ್ಲಿ ವಿತರಿಸಲಾಗುವುದು.
ಔಷಧ ವಿತರಣೆಯಲ್ಲಿ ವೃದ್ಧರ ಸಹಿತ ದುರ್ಬಲ ವರ್ಗದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಸಾರ್ವಜನಿಕರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಅಗತ್ಯವಿದ್ದಲ್ಲಿ ಮಂಗಳೂರಿನ ಹ್ಯಾಟ್ ಹಿಲ್ ಹಾಗೂ ಜಿಲ್ಲೆಯ ವಿವಿಧ ಕಡೆ ಇರುವ ಆಯುಷ್ ಆಸ್ಪತ್ರೆ ಸಂಪರ್ಕಿಸಬಹುದು ಎಂದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಆಯುಷ್ ಇಲಾಖೆಯ ಡಾ. ಶೋಭಾರಾಣಿ, ಡಾ. ಸಹನಾ ಉಪಸ್ಥಿತರಿದ್ದರು.
ಮಂಗಳೂರು/ಪ್ರಯಾಗ್ ರಾಜ್ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ಪ್ರಯಾಗ್ರಾಜ್ನ ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕುಂಭಮೇಳ ಪ್ರದೇಶದ ಸೆಕ್ಟರ್ 19ರಲ್ಲಿ ಸುಮಾರು 12ಕ್ಕೂ ಹೆಚ್ಚು ಸಿಲಿಂಡರ್ಗಳು ಸ್ಫೋಟಗೊಂಡಿರುವಂತಹ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಟೆಂಟ್ಗಳು ಹೊತ್ತಿ ಉರಿದಿದ್ದು, ಕುಂಭಮೇಳ ಪ್ರದೇಶದ ಸೆಕ್ಟರ್ 20ಕ್ಕೂ ಬೆಂಕಿ ವ್ಯಾಪಿಸುತ್ತಿದೆ. ಸದ್ಯ ಯಾವುದೇ ಸಾವು ನೋವು ಸಂಭವಿಸಿಲ್ಲ.
ಈ ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇನ್ನೂ, ಈ ಮಹಾ ಕುಂಭಮೇಳಕ್ಕೆ ಸಾಧು ಸಂತರು ಸೇರಿದಂತೆ ಕೋಟ್ಯಾಂತರ ಭಕ್ತರು ಆಗಮಿಸಿದ್ದರು.
ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಪುನೀತರಾಗುತ್ತಿದ್ದರು. ಆದ್ರೆ ಇದೇ ಹೊತ್ತಲ್ಲಿ ಪ್ರಯಾಗ್ರಾಜ್ನ ಶಾಸ್ತ್ರಿ ಬ್ರಿಡ್ಜ್ ಸೆಕ್ಟರ್ 19ರಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಕರ ಸಂಕ್ರಾಂತಿಯದ್ದೇ ಕೋಟ್ಯಂತರ ಭಕ್ತರು ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದರು.
ಘಟನೆಯ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಮಾಹಿತಿ ಪಡೆದಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
ಮಂಗಳೂರು/ಗಾಜಿಯಾಬಾದ್ : ಮನೆಯೊಂದು ಬೆಂ*ಕಿಗಾಹುತಿಯಾಗಿ, ಒಳಗಿದ್ದ ನಾಲ್ವರು ಸಜೀವದ*ಹನವಾದ ಘಟನೆ ಇಂದು(ಜ.19) ಗಾಜಿಯಾಬಾದ್‌ನ ಲೋನಿ ಪ್ರದೇಶದ ಕಾಂಚನ್ ಪಾರ್ಕ್ ಬಳಿ ನಡೆದಿದೆ. ಕಟ್ಟಡದ ಮೂರನೇ ಮಹಡಿಯ ಮನೆಯಲ್ಲಿ ಬೆಂ*ಕಿ ಕಾಣಿಸಿಕೊಂಡಿದೆ. ಮನೆಯಲ್ಲಿ 8 ಮಂದಿ ವಾಸವಾಗಿದ್ದರು. ಬೆಂ*ಕಿ ಕಾಣಿಸಿಕೊಂಡಾಗ ಮನೆಯವರೆಲ್ಲಾ ನಿದ್ರೆಯಲ್ಲಿದ್ದರು ಎನ್ನಲಾಗಿದೆ.
ಗುಲ್ಬಹಾರ್ (32), ಮಕ್ಕಳಾದ ಶಾನ್ (8) ಮತ್ತು ಜಾನ್ (9), ಅವರ ಸಂಬಂಧಿಕರ ಮಗ ಜೀಶನ್ (5) ಮೃತಪಟ್ಟವರು. ಮೃತ ಗುಲ್ಬಹಾರ್‌ನ ಪತಿ ಶಹನವಾಜ್ ಯಾವುದೇ ಗಾ*ಯಗಳಿಲ್ಲದೆ ಪಾರಾಗಿದ್ದಾರೆ. ಇನ್ನು ಉಳಿದವರು ಗಾ*ಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರು/ಬೆಂಗಳೂರು : ಭಾನುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಸುರಿದ ಮಳೆ ಅಚ್ಚರಿ ಮೂಡಿಸಿದೆ. ಈ ನಡುವೆ ರಾಜ್ಯದ ಹಲವೆಡೆ ಮುಂದಿನ ಐದು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಕುರಿತು ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವು (KSNDMC) ಹವಾಮಾನ ಇಲಾಖೆ ಮುನ್ಸೂಚನೆಯನ್ನು ಉಲ್ಲೇಖಿಸಿ ಎಚ್ಚರಿಕೆ ನೀಡಿದೆ. ‘ರಾಜ್ಯದ ದಕ್ಷಿಣ ಒಳಭಾಗ, ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮುಂದಿನ 5 ದಿನ ಸಾಧಾರಣ ಮಳೆ ಸುರಿಯುವ ಸಾಧ್ಯತೆಯಿದೆ. ಉತ್ತರದ ಜಿಲ್ಲೆಗಳ ಶುಷ್ಕ ಗಾಳಿ ಇರಲಿದೆ. ರಾಜ್ಯದಾದ್ಯಂತ ಸಾಧಾರಣದಿಂದ ಮಂಜು ಮತ್ತು ಅಲ್ಲಲ್ಲಿ ತುಂತುರು ಮಳೆ ಇರುತ್ತದೆ’ ಎಂದು ಹೇಳಿದೆ.
ಎಲ್ಲೆಲ್ಲಿ ಮಳೆ ?
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತೀವ್ರ ಚಳಿ ಇರಲಿದೆ ಎಂದು ತಿಳಿಸಿದೆ.