Connect with us

LATEST NEWS

ಫೇಸ್‌ಬುಕ್ ಗೆಳತಿಯಿಂದ ಬಂದ ಸಂಕಷ್ಟ; ಬಿಜೆಪಿ ನಾಯಕನಿಗೂ ಮಂಡೆಬಿಸಿ

Published

on

ಮಂಗಳೂರು/ಬೆಂಗಳೂರು : ‘ತಾನು ವಂಚಿಸಿ ಸಂಪಾದಿಸಿದ್ದ ಚಿನ್ನದಲ್ಲಿ ವರ್ತೂರು ಪ್ರಕಾಶ್‌ ಅವರಿಗೆ ಸಹ ಪಾಲು ಕೊಟ್ಟಿದ್ದೇನೆ. ನನಗೆ ಚಿನ್ನದ ವ್ಯಾಪಾರಿ ಸಂಜಯ್ ಬಾಪ್ನ ಅವರನ್ನು ಮಾಜಿ ಸಚಿವರೇ ಪರಿಚಯಿಸಿದ್ದರು’ ಎಂದು ಮಾಜಿ ಸಚಿವ ವರ್ತೂರು ಪ್ರಕಾಶಶ್‌ನ ಫೇಸ್‌ಬುಕ್‌ ಗೆಳತಿ ಶ್ವೇತಾಗೌಡ ಹೇಳಿಕೆ ನೀಡಿದ್ದಾಳೆ. ಚಿನ್ನದ ವ್ಯಾಪಾರಿಗೆ ಆಕೆ ಕೋಟ್ಯಂತರ ರು. ವಂಚನೆ ಎಸಗಿದ ಪ್ರಕರಣದಲ್ಲಿ ಮಾಜಿ ಸಚಿವರಿಗೆ ಬಂಧನ ಭೀತಿ ಎದುರಾಗಿದೆ.

ವಂಚನೆ ಪ್ರಕರಣ ಸಂಬಂಧ ನೋಟಿಸ್‌ ಹಿನ್ನೆಲೆಯಲ್ಲಿ ಸೋಮವಾರ ತನಿಖಾಧಿಕಾರಿ ಹಾಗೂ ಪುಲಕೇಶಿನಗರ ಉಪ ವಿಭಾಗದ ಎಸಿಪಿ ಗೀತಾ ಅವರ ಮುಂದೆ ವಿಚಾರಣೆಗೆ ವರ್ತೂರು ಪ್ರಕಾಶ್ ಹಾಜರಾಗಬೇಕಿತ್ತು. ಆದರೆ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಮಾಜಿ ಸಚಿವರಿಗೆ ಎರಡನೇ ಬಾರಿ ನೋಟಿಸ್ ನೀಡಿದ್ದು, ಮತ್ತೆ ವಿಚಾರಣೆಗೆ ಗೈರಾದರೆ ಮಾಜಿ ಸಚಿವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಶುಕ್ರವಾರ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಶ್ವೇತಾಗೌಡ ಸಮಾಜ ಸೇವಕಿ ಎಂದು ತಮಗೆ ಪರಿಚಯವಾಗಿದ್ದಳು. ಆದರೆ ಆಕೆಯ ವಂಚನೆ ಕೃತ್ಯಕ್ಕೂ ತಮಗೂ ಸಂಬಂಧವಿಲ್ಲ. ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ಶನಿವಾರ ಮಾಜಿ ಸಚಿವರು ಹೇಳಿಕೆ ಕೊಟ್ಟಿದ್ದರು. ಆದರೆ ಸೋಮವಾರ ದಿನವಿಡೀ ಎಸಿಪಿ ಕಚೇರಿ ಕಡೆ ಅವರು ಸುಳಿದಿಲ್ಲ ಎಂದು ತಿಳಿದು ಬಂದಿದೆ.

ಫೇಸ್‌ಬುಕ್‌ನಲ್ಲಿ  6 ತಿಂಗಳ ಹಿಂದೆ ಸ್ನೇಹ:

ಆರು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಶ್ವೇತಾಗೌಡಳಿಗೆ ವರ್ತೂರು ಪ್ರಕಾಶ್ ಪರಿಚಯವಾಗಿದ್ದರು. ತಾನಾಗಿಯೇ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ ಮಾಜಿ ಸಚಿವರನ್ನು ಸ್ನೇಹದ ಬಲೆಗೆ ಶ್ವೇತಾ ಬೀಳಿಸಿಕೊಂಡಿದ್ದಳು. ಬಳಿಕ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಪರಸ್ಪರ ಚಾಟಿಂಗ್ ಶುರುವಾಗಿದ್ದು, ಬಳಿಕ ಇಬ್ಬರ ನಡುವೆ ಮೊಬೈಲ್ ಸಂಖ್ಯೆ ವಿನಿಮಯವಾಗಿ ವಾಟ್ಸಾಪ್‌ ಮಾತುಕತೆ ಮುಂದುವರೆದಿತ್ತು. ಕಳೆದ ನಾಲ್ಕೈದು ತಿಂಗಳಿಂದ ಶ್ವೇತಾ ಹಾಗೂ ವರ್ತೂರು ಪ್ರಕಾಶ್ ನಡುವೆ ಆತ್ಮೀಯ ಒಡನಾಟವಿತ್ತು. ಈ ಸ್ನೇಹದ ವಿಚಾರವಾಗಿ ಇಬ್ಬರ ನಡುವೆ ಚಾಟಿಂಗ್ ವಿವರ ಹಾಗೂ ಪೋಟೋಗಳು ಸಿಕ್ಕಿವೆ .

ಬಿಜೆಪಿ ನಾಯಕನಿಗೂ ಮಂಡೆಬಿಸಿ :

ಕೋಲಾರ ಜಿಲ್ಲೆಯ ಬಿಜೆಪಿ ನಾಯಕನಿಗೆ ಸಹ ಶ್ವೇತಾಗೌಡಳನ್ನು ವರ್ತೂರು ಪ್ರಕಾಶ್‌ ಪರಿಚಯ ಮಾಡಿಕೊಟ್ಟಿದ್ದರು. ಈ ಪರಿಚಯದ ಬಳಿಕ ಆ ಬಿಜೆಪಿ ಮುಖಂಡನ ಜತೆ ಆಕೆ ಆತ್ಮೀಯವಾಗಿದ್ದಳು. ಈ ಸ್ನೇಹದ ಕಾರಣಕ್ಕೆ ತಮ್ಮ ಕಾರಿನಲ್ಲೇ ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಶ್ವೇತಾಗೌಡಳನ್ನು ಕೋಲಾರದ ಬಿಜೆಪಿ ನಾಯಕ ಕಳುಹಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆ ನಾಯಕ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾಗಿದ್ದರು ಎಂದು ಮೂಲಗಳು ಹೇಳಿವೆ. ಪ್ರಕರಣದಲ್ಲಿ ಕಾರು ಬಳಕೆ ಸಂಬಂಧ ಕೋಲಾರ ಬಿಜೆಪಿ ನಾಯಕನಿಗೆ ಕೂಡ ಪೊಲೀಸರ ತನಿಖೆ ತಲೆಬಿಸಿ ತಂದಿದ್ದು, ಅವರಿಗೂ ನೋಟಿಸ್ ನೀಡಲಾಗಿದೆ.

ಸದ್ಯ ಪೊಲೀಸರು ಈ ಘಟನೆ ಕುರಿತು ಸೂಕ್ಷ್ಮ ರೀತಿಯಿಂದ ತನಿಖೆ ನಡೆಸುತ್ತಿದ್ದಾರೆ. ದಿನದಿಂದ ದಿನಕ್ಕೆ ಒಂದೊಂದೆ ಸತ್ಯ ಹೊರ ಬರುತ್ತಿದೆ.

International news

ವಿಶ್ವ ಪ್ರಸಿದ್ದ ಪ್ಯಾರೀಸ್ ನ ಐಫೆಲ್ ಟವರ್ ನಲ್ಲಿ ಬೆಂಕಿ ಅವಘಡ; 1200 ಪ್ರವಾಸಿಗರ ಸ್ಥಳಾಂತರ

Published

on

ಮಂಗಳೂರು/ಪ್ಯಾರಿಸ್: ಪ್ಯಾರಿಸ್ ನ ಐಫೆಲ್ ಟವರ್ ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಈಗಗಾಲೇ 1200 ಜನರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ. ಪ್ಯಾರಿಸ್ ನ ಐಕಾನಿಕ್ ಲ್ಯಾಂಡ್ ಮಾರ್ಕ್ ನಲ್ಲಿ ಬೆಂಕಿ ಕಾಣಿಸಿಕೊಂಡ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಬೆಂಕಿಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಸೇವೆಗಳನ್ನು ನಿಯೋಜಿಸಲಾಯಿತು.

ಫ್ರೆಂಚ್ ಅಧಿಕಾರಿಗಳ ಪ್ರಕಾರ, ಐಫೆಲ್ ಟವರ್ ನಲ್ಲಿ ಬೆಂಕಿ ಅದರ ಲಿಫ್ಟ್ ನಲ್ಲಿ ಕಾಣಿಸಿಕೊಂಡಿದೆ. ಈ ಬೆಂಕಿಯು ಮೊದಲ ಮತ್ತು ಎರಡನೇ ಮಹಡಿಯ ನಡುವಿನ ಲಿಫ್ಟ್ ಶಾಫ್ಟ್ ನಲ್ಲಿ ಕಾಣಿಸಿಕೊಂಡಿತು. ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ತುರ್ತು ಸಹಾಯಕರು, ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ನಂತರ ಬೆಂಕಿ ತೀವ್ರವಾಗಿ ಹರಡಿದ್ದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಯಿತು. ಸುಮಾರು 1200 ಜನರನ್ನು ಟವರ್ ನಿಂದ ಹೊರಕ್ಕೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕ್ ನಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಗರ್ಭಿಣಿ !

ಅವಘಡದಲ್ಲಿ ಸಿಲುಕಿ ಹಾಕಿಕೊಂಡ ಎಲ್ಲರನ್ನೂ ರಕ್ಷಣೆ ಮಾಡಲಾಗಿದೆ, ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಘಟನೆ ಬಳಿಕ ಐಫೆಲ್ ಟವರ್ ಗೋಪುರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಐಫೆಲ್ ಟವರ್ ವಿಶ್ವದ ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದಾಗಿದೆ. ಅಂಕಿಅಂಶಗಳ ಪ್ರಕಾರ ಪ್ರತಿದಿನ 15,000 ಮತ್ತು 25,000 ಸಂದರ್ಶಕರು ಇಲ್ಲಿಗೆ ಭೇಟಿ ನೀಡುತ್ತಾರೆ.

ಸ್ಮಾರಕಕ್ಕೆ ಬೆಂಕಿ ಬಿದ್ದಿರುವುದು ಇದು ಮೊದಲನೇ ಸಲ ಅಲ್ಲ. ಜನವರಿ 1956 ರಲ್ಲಿ, ಗೋಪುರದ ದೂರದರ್ಶನ ಪ್ರಸರಣ ಕೊಠಡಿಯಲ್ಲಿ ಬೆಂಕಿ ಸಂಭವಿಸಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿತ್ತು.

 

Continue Reading

LATEST NEWS

ಬಿಹಾರದಲ್ಲಿ ಪುರುಷ ಶಿಕ್ಷಕ ಗರ್ಭಿಣಿ : ಶಿಕ್ಷಣ ಇಲಾಖೆಯಿಂದಲೂ `ಹೆರಿಗೆ ರಜೆ’ ಮಂಜೂರು.!

Published

on

ಪಾಟ್ನಾ: ಬಿಹಾರದ ಶಿಕ್ಷಣ ಇಲಾಖೆ ಆಗಾಗ ಸುದ್ದಿಯಲ್ಲಿದೆ. ಶಿಕ್ಷಣ ಇಲಾಖೆ ಪುರುಷ ಬಿಪಿಎಸ್‌ಸಿ ಶಿಕ್ಷಕನನ್ನು ಗರ್ಭಿಣಿಯನ್ನಾಗಿ ಮಾಡಿ ಹೆರಿಗೆ ರಜೆಯನ್ನೂ ನೀಡಿದೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಇದೀಗ ಬಿಹಾರ ಶಿಕ್ಷಣ ಇಲಾಖೆ ಎಡವಟ್ಟು ಹೊರಬಿದ್ದಿದೆ.

ಶಿಕ್ಷಣ ಇಲಾಖೆಯು ಹಾಜಿಪುರ್ ಮಹುವಾ ಬ್ಲಾಕ್ ಪ್ರದೇಶದ ಹಸನ್‌ಪುರ ಒಸಟಿ ಪ್ರೌಢಶಾಲೆಗೆ ಸಂಬಂಧಿಸಿದೆ. ಇಲ್ಲಿ ನೇಮಕಗೊಂಡಿರುವ ಬಿಪಿಎಸ್‌ಸಿ ಶಿಕ್ಷಕ ಜಿತೇಂದ್ರ ಕುಮಾರ್ ಸಿಂಗ್ ಅವರು ಗರ್ಭಿಣಿ ಎಂದು ಹೆರಿಗೆ ರಜೆ ಮಾಡಿದೆ. ಜಿತೇಂದ್ರ ಕುಮಾರ್ ಸಿಂಗ್ ಅವರಿಗೆ ಶಿಕ್ಷಣ ಇಲಾಖೆಯ ಪೋರ್ಟಲ್ ಇ-ಶಿಕ್ಷಾ ಕೋಶ್‌ನಲ್ಲಿ ಹೆರಿಗೆ ರಜೆ ನೀಡಲಾಗಿದೆ. ಶಿಕ್ಷಣ ಇಲಾಖೆಯ ದೃಷ್ಟಿಯಲ್ಲಿ ಮತ್ತು ಅಧಿಕೃತ ವೆಬ್‌ಸೈಟ್ ಪ್ರಕಾರ, ಶಿಕ್ಷಕ ಜಿತೇಂದ್ರ ಕುಮಾರ್ ಸಿಂಗ್ ಗರ್ಭಿಣಿಯಾಗಿದ್ದು, ರಜೆಯಲ್ಲಿದ್ದಾರೆ ಎಂದು ನಮೂದಾಗಿದೆ.

ಹೆರಿಗೆ ರಜೆ ಮಹಿಳಾ ಶಿಕ್ಷಕರಿಗೆ ಮಾತ್ರ ಎಂಬುದು ಗಮನಿಸಬೇಕಾದ ಸಂಗತಿ. ಮಹಿಳಾ ಶಿಕ್ಷಕರು ಗರ್ಭಿಣಿಯಾಗಿದ್ದಾಗ ಮತ್ತು ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಈ ರಜೆಯನ್ನು ಪಡೆಯುತ್ತಾರೆ. ಆದರೆ ಹಾಜಿಪುರದಲ್ಲಿ ಪರಿಸ್ಥಿತಿ ಬದಲಾಗಿದೆ. ಇಲ್ಲಿ ಪುರುಷ ಶಿಕ್ಷಕರಿಗೂ ಹೆರಿಗೆ ರಜೆ ನೀಡಿ ಶಿಕ್ಷಣ ಇಲಾಖೆ ಎಡವಟ್ಟು ಮಾಡಿಕೊಂಡಿದೆ.

ಈ ವಿಚಾರದಲ್ಲಿ ಬ್ಲಾಕ್ ಶಿಕ್ಷಣಾಧಿಕಾರಿ ಅರ್ಚನಾ ಕುಮಾರಿ ಅವರು ಇಲಾಖೆಯ ತಪ್ಪನ್ನು ಒಪ್ಪಿಕೊಂಡು ಪೋರ್ಟಲ್‌ನಲ್ಲಿನ ದೋಷದಿಂದ ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಪುರುಷ ಶಿಕ್ಷಕರಿಗೆ ಈ ರೀತಿಯ ರಜೆ ನೀಡುವುದಿಲ್ಲ. ಇದನ್ನು ಶೀಘ್ರದಲ್ಲೇ ಸುಧಾರಿಸಲಾಗುವುದು. ಶಿಕ್ಷಕಿಯೊಬ್ಬರು ಮಹಿಳೆಯರಿಗೆ ರಜೆ ನೀಡಿರುವ ರೀತಿ ಜಿಲ್ಲೆಯ ಪುರುಷ ಶಿಕ್ಷಕರನ್ನು ಕೆರಳಿಸಿದ್ದು ವಿಶಿಷ್ಟ ನಗೆಪಾಟಲಿಗೀಡಾಗಿದೆ.

Continue Reading

LATEST NEWS

ಗ್ಯಾಸ್ ಸ್ಟವ್ ಈ ಬಣ್ಣದಲ್ಲಿ ಉರಿದರೆ ಕೂಡಲೇ ಎಚ್ಚೆತ್ತುಕೊಳ್ಳಿ

Published

on

Gas Stove : ಅಸ್ತಮಾ ಮತ್ತು ತಲೆನೋವು ಇಂದು ಅನೇಕ ಜನರಲ್ಲಿ ಸಾಮಾನ್ಯ ಕಾಯಿಲೆಗಳಾಗಿವೆ. ಈ ರೋಗಗಳು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಇದಕ್ಕೆ ಕಾರಣವನ್ನು ಹುಡುಕುತ್ತಾ ಹೋದರೆ ಅರ್ಧದಷ್ಟು ಮಂದಿ ಅಡುಗೆ ಮನೆಯ ಲಿಂಕ್ ಆಗುತ್ತದೆ. ಏಕೆಂದರೆ, ಅಡುಗೆ ಮನೆಯು ಗೃಹಿಣಿಯರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳ ಮೂಲವಾಗಿದೆ. ಅನೇಕ ಮಹಿಳೆಯರು ಗ್ಯಾಸ್ ಸ್ಟವ್‌ನಲ್ಲಿ ದೀರ್ಘಕಾಲ ಅಡುಗೆ ಮಾಡುತ್ತಾರೆ.

ಗೃಹಿಣಿಯರು ಗ್ಯಾಸ್ ಸ್ಟವ್‌ಗಳಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ಉಸಿರಾಟದ ತೊಂದರೆ ಮತ್ತು ತಲೆನೋವು ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಗ್ಯಾಸ್ ಸ್ಟವ್ ಅನ್ನು ಉರಿಸುವಾಗ ಜ್ವಾಲೆಯ ಬಣ್ಣ ಬದಲಾವಣೆಯು ಕೂಡ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಸಾಮಾನ್ಯವಾಗಿ, ಸ್ಟವ್ ಉರಿಯುವಾಗ ನೀಲಿ ಜ್ವಾಲೆಗಳು ಉತ್ಪತ್ತಿಯಾದರೆ, ಭಯಪಡುವಂಥದ್ದೇನೂ ಇಲ್ಲ. ಆದರೆ ಜ್ವಾಲೆಗಳು ಕೆಂಪು ಅಥವಾ ಹಳದಿಯಾಗಿದ್ದರೆ, ನೀವು ಜಾಗರೂಕರಾಗಿರಬೇಕು. ಈ ಬಣ್ಣ ಬದಲಾವಣೆಯು ಒಲೆಯಿಂದ ಹೊರಸೂಸುವ ಕಾರ್ಬನ್ ಮಾನಾಕ್ಸೆಡ್ ಅನಿಲದಿಂದ ಉಂಟಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ.

ಬೆಂಕಿಯು ಕೆಂಪು ಅಥವಾ ಹಳದಿ ಬಣ್ಣದಲ್ಲಿ ಉರಿದರೆ ಕಾರ್ಬನ್ ಮಾನಾಕ್ಸೆಡ್ ಅನಿಲದ ಉಪಸ್ಥಿತಿಯನ್ನು ಸೂಚಿಸುತ್ತದೆ. ಇದು ಶ್ವಾಸಕೋಶ ಸೇರಿದಂತೆ ವಿವಿಧ ಅಂಗಗಳ ಮೇಲೆ ನೇರ ಪರಿಣಾಮ ಬೀರಬಹುದು. ಇದು ಭವಿಷ್ಯದಲ್ಲಿ ಅಸ್ತಮಾ, ತಲೆನೋವು ಮತ್ತು ಹೆಚ್ಚಿನದನ್ನು ಉಂಟುಮಾಡಬಹುದು.

ಕೊಳಕಿನಿಂದ ಮುಚ್ಚಿ ಹೋಗಿರುವ ಬರ್ನರ್ ತೂತುಗಳು ಜ್ವಾಲೆಯ ಬಣ್ಣ ಬದಲಾವಣೆಗೆ ಸಾಮಾನ್ಯ ಕಾರಣವಾಗಿದೆ. ಅಡಿಗೆ ಸೋಡಾ ಮತ್ತು ಬ್ರಶ್‌ನಿಂದ ಬರ್ನರ್ ಅನ್ನು ಆಗಾಗ ಸ್ವಚ್ಛಗೊಳಿಸುವ ಮೂಲಕ ಈ ಸಮಸ್ಯೆಯನ್ನು ಸುಲಭವಾಗಿ ಸರಿಪಡಿಸಬಹುದು. ಇಲ್ಲದಿದ್ದರೆ, ನೀವು ವೃತ್ತಿಪರ ಗ್ಯಾಸ್ ಸ್ಟವ್ ರಿಪೇರಿ ತಂತ್ರಜ್ಞರಿಂದ ಸಹಾಯ ಪಡೆಯಬೇಕು.

Continue Reading

LATEST NEWS

Trending

Exit mobile version