MANGALORE
ಮಂಗಳೂರು : ಮೇಘ ಸ್ಫೋ*ಟದಿಂದ ಅವಾಂತರ; ಮನೆಗೆ ನುಗ್ಗುತ್ತಿರುವ ಮಳೆನೀರು
Published
1 day agoon
ಮಂಗಳೂರು : ಫೆಂಗಲ್ ಚಂಡಮಾರುತ ಮಂಗಳೂರಿನಲ್ಲಿ ವಿಪರೀತ ಪ್ರಭಾವ ಬೀರಿದ್ದು, ನಿನ್ನೆ (ಡಿ.2) ಮಧ್ಯಾಹ್ನದಿಂದ ಬಿಡದೆ ಮಳೆ ಸುರಿಯುತ್ತಿದ್ದು ಹಲವಾರು ಅನಾಹುತಗಳನ್ನು ಸೃಷ್ಠಿಸುತ್ತಿದೆ.
ನಿನ್ನೆ ರಾತ್ರಿಯಿಂದ ಇಂದು (ಡಿ.3) ಮುಂಜಾನೆಯವರೆಗೆ ಪ್ರವಾಹ ರೀತಿ ಉಂಟಾಗುತ್ತಿದ್ದ ಮಳೆಯ ಕಾರಣ ಕರಂಗಲಪಾಡಿ ಡಾ.ಶಿಕಾರಿಪುರ ಕೃಷ್ಣಮೂರ್ತಿಯವರ ಮನೆಯ ಹಿಂದಿನ ಮುಂದಿನ ಕಾಂಪೌಂಡ್ ಪೂರ್ಣ ಒಡೆದು ಹೋಗಿದ್ದು, ಮನೆಯ ಒಳಗೆ ನೀರು ನುಗ್ಗಿದೆ. ಕೆಸರಿನ ಗಲೀಜು ನೀರಿನ ಮನೆಯಲಿ ಆತಂಕದ ವಾತಾವರಣ ಸೃಷ್ಠಿಸಿದೆ. ಮುಂದೇನು ಎಂಬ ಯೋಚನೆ ಕುಂಟುಂಬದಲ್ಲಿ ಮೂಡಿದೆ.
ಕೊಡಿಯಾಲ್ ಬೈಲ್ನ ಕಟ್ಟಡವೊಂದರ ಪಾರ್ಕಿಂಗ್ ಪ್ರದೇಶದಲ್ಲಿ ಸುಮಾರು 2 ಅಡಿಯಷ್ಟು ನೀರು ಸಂಗ್ರಹವಾಗಿ, ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ಪಂಪ್ ಮೂಲಕ ನೀರನ್ನು ಖಾಲಿ ಮಾಡಿದರು.
ಏರ್ಪೋರ್ಟ್ ರೋಡು ಕೂಡ ಮಳೆಯಿಂದ ಕುಸಿದಿದೆ. ಇದರಿಂದ ಸವಾರರು ಪರದಾಡುವಂತಾಯಿತು.
ಇದೇ ರಿತಿಯ ಮತ್ತಷ್ಟೂ ಅವಾಂತರಗಳು ನಗರದ ಹಲವೆಡೆ ಸಂಭವಿಸುತ್ತಿದ್ದು, ಜನಜೀವನ ಅಲ್ಲೋಲ ಕಲ್ಲೋಲವಾಗಿದೆ. ಕೆಲಸಕ್ಕೆ ತೆರಳುವ ಉದ್ಯೋಗಿಗಳಿಗೆ ಭಾರೀ ತೊಂದರೆಯಾಗುತ್ತಿದೆ. ಸರ್ಕಾರವು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿತ್ತಾದರೂ, ಪದವೀದರರಿಗೆ ಯಾವುದೇ ರಜಾ ಸೌಲಭ್ಯಗಳಿಲ್ಲದ ಕಾರಣ ಒದ್ದೆ ಬಟ್ಟೆಯಲ್ಲೇ ತರಗತಿಯಲ್ಲಿ ಕುಳಿತು ಪಾಠ ಕೇಳುವ ಪರಿಸ್ಥಿತಿ ಒದಗಿ ಬಂದಿದೆ.
DAKSHINA KANNADA
ಉಳ್ಳಾಲ: ಯುಐ ಚಿತ್ರದ ಯಶಸ್ಸಿಗೆ ಕೊರಗಜ್ಜನಿಗೆ ಅಡ್ಡಬಿದ್ದ ಉಪೇಂದ್ರ
Published
14 minutes agoon
04/12/2024ಉಳ್ಳಾಲ: ಕುತ್ತಾರಿನಲ್ಲಿರುವ ಕೊರಗಜ್ಜನ ಆದಿ ಕ್ಷೇತ್ರವು ಪ್ರಕೃತಿಗೆ ಹತ್ತಿರವಾಗಿದ್ದು, ದೈವದ ಹೆಸರಲ್ಲಿ ಇಲ್ಲಿ ಪೃಕೃತಿಯ ಆರಾಧನೆಯಾಗುತ್ತಿದೆ ಎಂದು ಸ್ಯಾಂಡಲ್ ವುಡ್‌ನ ರಿಯಲ್ ಸ್ಟಾರ್ ನಟ , ನಿರ್ದೇಶಕ ಉಪೇಂದ್ರ ಹೇಳಿದರು.
ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಆದಿಸ್ಥಳಕ್ಕೆ ಮಂಗಳವಾರದಂದು ಅವರು ಭೇಟಿ ನೀಡಿ ಡಿಸೆಂಬರ್ 20 ರಂದು ತೆರೆ ಕಾಣಲಿರುವ ತನ್ನದೇ ನಟನೆ ಮತ್ತು ನಿರ್ದೇಶನದ ಪ್ಯಾನ್ ಇಂಡಿಯ ಸಿನೆಮಾ ಯುಐ ಸಿನೆಮಾದ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು.
ಚಿತ್ರದ ಪ್ರಮೋಷನ್ ಗಾಗಿ ಮಂಗಳೂರಿಗೆ ಬಂದಿದ್ದೇವೆ. ಕುತ್ತಾರಿನ ಕೊರಗಜ್ಜ ದೈವದ ಕ್ಷೇತ್ರವು ಪ್ರಕೃತಿ ರಮಣೀಯವಾಗಿದೆ. ಕೊರಗಜ್ಜನ ದಯೆಯು ನಮ್ಮ ಮೇಲಿರಲಿ ಎಂದರು. ಚಿತ್ರದ ನಿರ್ಮಾಪಕರಾದ ಕೆ ಪಿ ಶ್ರೀಕಾಂತ್, ಲಹರಿ ವೇಲು, ನವೀನ್ ಮನೋಹರ್ , ರಾಜೇಶ್ ಭಟ್ ಮೊದಲಾದವರಿದ್ದರು. ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಆದಿಸ್ಥಳ ಟ್ರಸ್ಟ್ ನ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಟ್ರಸ್ಟಿಗಳು ನಟ ಉಪೇಂದ್ರ ಅವರನ್ನು ಕ್ಷೇತ್ರದ ಪರವಾಗಿ ಅಭಿನಂದಿಸಿದರು.
ಮಂಗಳೂರು : ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ನವೆಂಬರ್ 30ರಂದು ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಅಕ್ರಮ್ ವೈಖರ್ ಎನ್ನುವ ಇ-ಮೇಲ್ ಐಡಿಯಿಂದ ಬೆದರಿಕೆ ಸಂದೇಶ ಬಂದಿದ್ದು, ಟರ್ಮಿನಲ್‌ನಲ್ಲಿ ಬಾಂಬ್ ಇರಿಸಲಾಗಿದೆ ಎಂದು ಬೆದರಿಕೆ ಒಡ್ಡಲಾಗಿದೆ.
ನಿಲ್ದಾಣದ ಸಿಐಎಸ್‌ಎಫ್ ಸಿಬಂದಿ ಟರ್ಮಿನಲ್‌ನಲ್ಲಿ ಸೇರಿದಂತೆ ನಿಲ್ದಾಣದ ವಿವಿಧೆಡೆ ಶೋಧ ನಡೆಸಿದ್ದು, ಯಾವುದೇ ಬಾಂಬ್ ಸ್ಫೋಟಕಗಳು ಪತ್ತೆಯಾಗಿಲ್ಲ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇ-ಮೇಲ್ ಸಂದೇಶದಲ್ಲಿ ತಮಿಳು ನಾಡಿನಲ್ಲಿ ಬಂಧನಕ್ಕೀಡಾಗಿರುವ ಡ್ರಗ್ ಕಿಂಗ್‌ಪಿನ್ ಎನ್ನಲಾದ ಜಾಫರ್ ಸಾದಿಕ್ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಪತ್ನಿ, ಚಿತ್ರ ನಿರ್ಮಾಪಕಿ ಕೃತಿಗಾ ಉದಯನಿಧಿ ಅವರ ಮೇಲಿರುವ ಪ್ರಕರಣವನ್ನು ವಾಪಸ್ ಪಡೆಯಬೇಕು.
ತಿರುಚ್ಚಿ ಸೆಂಟ್ರಲ್ ಜೈಲಿನಲ್ಲಿರುವ ಟಿಎನ್‌ಎಲ್‌ಎ ಉಗ್ರ ಸಂಘಟನೆಯ ಮುಖ್ಯಸ್ಥ ಎಸ್. ಮಾರನ್‌ನನ್ನು ಬಿಡುಗಡೆ ಮಾಡಬೇಕು ಎನ್ನುವ ಬೇಡಿಕೆ ಇಡಲಾಗಿದೆ ಎಂದು ತಿಳಿದು ಬಂದಿದೆ. ಇದೇ ರೀತಿಯ ಬೆದರಿಕೆ ಸಂದೇಶ ಕಳೆದ ಅ. 25ರಂದು ತಿರುಪತಿಯ ಮೂರು ಹೊಟೇಲ್‌ಗಳಿಗೆ ಬಂದಿತ್ತು. ಅದರಲ್ಲಿಯೂ ಜಾಫರ್ ಸಾದಿಕ್ ಮತ್ತು ಕೃತಿಕಾ ಉದಯನಿಧಿ ಹೆಸರು ಉಲ್ಲೇಖ ಆಗಿತ್ತು. ಈ ಬೆದರಿಕೆ ಸಂದೇಶದಲ್ಲಿ ತಮಿಳುನಾಡಿನ ವಿಚಾರ ಇರುವುದರಿಂದ ಈ ಕೃತ್ಯದಲ್ಲಿ ಅಲ್ಲಿನವರೇ ಇರುವ ಸಾಧ್ಯತೆಯಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಈ ಹಿಂದೆ ಹಲವು ಬಾರಿ ಬಾಂಬ್ ಬೆದರಿಕೆಯ ಇ-ಮೇಲ್‌ಗಳು ಬಂದಿವೆ.
DAKSHINA KANNADA
ನಿವೃತ್ತರಾದ ಪುತ್ತೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಅಡುಗೆ ಸಿಬ್ಬಂದಿಗೆ ಸನ್ಮಾನ
Published
20 hours agoon
03/12/2024By
NEWS DESK4ಪುತ್ತೂರು : ಪುತ್ತೂರಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 28 ವರ್ಷಗಳಿಂದ ಅಡುಗೆ ಸಹಾಯರಾಗಿ ಕೆಲಸ ನಿರ್ವಹಿಸುತ್ತಿದ್ದ ಹೊನ್ನಪ್ಪ ಸಿ.ಎಚ್. ಅವರು ನ.30ರಂದು ನಿವೃತ್ತರಾದರು.
ವೈದ್ಯಾಧಿಕಾರಿಗಳು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರೊಂದಿಗೆ ಉತ್ತಮ ರೀತಿಯಲ್ಲಿ ಒಡನಾಟ ಇಟ್ಟುಕೊಂಡಿದ್ದ ಅವರು, ಸರ್ಕಾರಿ ನೌಕರರಾಗಿ ನಿಷ್ಠೆ, ಜವಾಬ್ದಾರಿಯುತವಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಸಾರ್ವಜನಿಕ ಜೀವನದಲ್ಲೂ ಎಲ್ಲರ ಪ್ರೀತಿ ಪಾತ್ರರಾಗಿದ್ದರು. ಹೊನ್ನಪ್ಪ ಸಿ.ಎಚ್ ಚಿಕ್ಕಪುತ್ತೂರಿನ ಸಿ.ಬಾಬು ಹಾಗೂ ಚಿನ್ನು ದಂಪತಿಯ ಮೂರನೇ ಪುತ್ರ.
ಇದನ್ನೂ ಓದಿ : ದೇಶದ ಅತಿ ಕಿರಿಯ, ಕರ್ನಾಟಕ ಮೂಲದ ಈ ಪೈಲಟ್ ಯಾರು ಗೊತ್ತಾ ??
ನಿವೃತ್ತರಾದ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯ ಆಡಳಿತ ವರ್ಗ ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ. ವೇಳೆ ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಕೆ., ಸಹಾಯಕ ಆಡಳಿತಾಧಿಕಾರಿ ಯೋಗಾನಂದ, ಡಾ. ಪ್ರಶಾಂತ್, ಡಾ.ಜಯ ಕುಮಾರಿ, ಡಾ.ಯದುರಾಜ್, ಡಾ.ಝೈನಾಬ ಮತ್ತಿತರರು ಉಪಸ್ಥಿತರಿದ್ದರು.
LATEST NEWS
ಕ್ರೂರ ವ್ಯಾಘ್ರನೊಂದಿಗೆ ಹೋರಾಡಿ ಪತಿಯನ್ನು ರಕ್ಷಿಸಿದ ಪತ್ನಿ…
ಶಬರಿಮಲೆ ಯಾತ್ರಿಕರಿದ್ದ ಬಸ್ ಅ*ಪಘಾತ; 19 ಮಂದಿಗೆ ಗಾ*ಯ, ಒಂದು ಸಾ*ವು
ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ !!
ಇಸ್ರೊದಿಂದ ಇಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಪ್ರೊಬಾ-3 ಮಿಷನ್ ಉಡಾವಣೆ
ವಿಟ್ಲ: ಬಾಡಿಗೆಗೆಂದು ಹೋದ ಅಟೋ ಚಾಲಕ ನಾಪತ್ತೆ
ರೋಹಿತ್ ಬಿಟ್ಟು, ಕೊಹ್ಲಿ ಆಟೋಗ್ರಾಫ್ ಪಡೆದಿದ್ದೇಕೆ ಆಸ್ಟ್ರೇಲಿಯಾ ಪ್ರಧಾನಿ ?
Trending
- BANTWAL6 days ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- FILM5 days ago
ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ
- Ancient Mangaluru7 days ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು
- LATEST NEWS6 days ago
ನಾನ್ ವೆಜ್ ತಿನ್ನಬೇಡ ಎಂದ ಪ್ರಿಯತಮ: ಆ*ತ್ಮಹತ್ಯೆಗೆ ಶರಣಾದ ಏರ್ ಇಂಡಿಯಾ ಪೈಲಟ್ !