ಉಡುಪಿ: ರಿಷಬ್ ಶೆಟ್ಟಿ ಅಭಿನಯದ ಭೂತರಾಧನೆಯ ಕಥಾ ಹಂದರವುಳ್ಳ ಚಲನಚಿತ್ರ ಸೂಪರ್ ಹಿಟ್ ಏನೋ ಆಯಿತು. ಆದರೆ ಈ ಚಿತ್ರ ನಮ್ಮ ತುಳುನಾಡಿನ ದೈವಾರಾಧನೆಯನ್ನೇ ಬೀದಿಗೆ ತಂದು ನಿಲ್ಲಿಸಿದಂತಾಗಿದೆ. ಇದೀಗ ಮೊನ್ನೆ ನಡೆದ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಬರುವ ಸಾಂತಕ್ಲಾಸ್ ವೇಷಧಾರಿ ದೈವವನ್ನು ಅಣಕಿಸುವ ವಿಡಿಯೋ ವೈರಲ್ ಆಗಿದೆ.
ಕ್ರಿಸ್ಮಸ್ ಹಿನ್ನಲೆಯಲ್ಲಿ ಮನೆಮನೆಗೆ ಸಾಂತಾಕ್ಲಾಸ್ ವೇಷದಲ್ಲಿ ಭೇಟಿ ನೀಡುವ ಸಂದರ್ಭದ ವಿಡಿಯೋ ಇದಾಗಿದ್ದು, ಕಾಂತಾರ ಚಲನಚಿತ್ರದಲ್ಲಿನ ದೃಶ್ಯದಂತೆಯೇ ದೈವದ ಅನುಕರಣೆ ಮಾಡಿರುವ ಸಾಂತಾಕ್ಲಾಸ್ ವೇಷಧಾರಿ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಧಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಚಲನಚಿತ್ರ ಬಿಡುಗಡೆ ಸಂದರ್ಭದಲ್ಲಿ ಚಿತ್ರದಲ್ಲಿ ದೈವದ ಆವೇಶದ ಸಂದರ್ಭದಲ್ಲಿ ಓ ಎಂದು ಕೂಗುವುದು ಸೇರಿದಂತೆ ಯಾವುದೇ ವಿಚಾರವನ್ನು ಅನುಕರಣೆ ಮಾಡಬೇಡಿರಿ ಎಂದು ರಿಷಬ್ ಶೆಟ್ಟಿ ಮನವಿ ಮಾಡಿದ್ದರೂ ಕೂಡಾ ಇದೀಗ ಎಲ್ಲೆಡೆ ಕಾಂತಾರ ಚಿತ್ರದ ದೈವದ ಆವೇಶವನ್ನೇ ಎಲ್ಲರೂ ಅನುಕರಣೆ ಮಾಡತೊಡಗಿದ್ದಾರೆ.
ಶಾಲಾ, ಕಾಲೇಜುಗಳಲ್ಲಿನ ವೇದಿಕೆಗಳಲ್ಲಿ ಕಂಡು ಬಂದರೆ, ಪ್ರಾಥಮಿಕ ಶಾಲೆಯ ಸ್ಪರ್ಧೆಯಲ್ಲಿ ಕೂಡಾ ಪುಟ್ಟ ಬಾಲಕನೊಬ್ಬ ಪಂಜುರ್ಲಿ ವೇಷ ಹಾಕಿ ಕುಣಿದಿದ್ದ.
ಸಾಂತಾಕ್ಲಾಸ್ ವೇಷದಲ್ಲಿ ದೈವ ನಿಂದನೆ ಮಾಡಲಾಗಿದೆ ಎಂದು ನೆಟ್ಟಿಗರೂ ತೀವ್ರ ಗರಂ ಆಗಿದ್ದಾರೆ. ದೈವವನ್ನು ಅಣಕಿಸುವ ವಿಡಿಯೋ ಮಾಡುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸಂಘಟನೆಗಳು ಆಗ್ರಹಿಸಿವೆ.
Ok