HomeLATEST NEWSಉಡುಪಿ ಮೂಲದ ದಿಶಾ ಸಾಲಿಯಾನ್ ಸಾವಿನ ವಿಚಾರ : ತನಿಖೆಗೆ ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ...

ಉಡುಪಿ ಮೂಲದ ದಿಶಾ ಸಾಲಿಯಾನ್ ಸಾವಿನ ವಿಚಾರ : ತನಿಖೆಗೆ ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಒತ್ತಡ..

ಉಡುಪಿ ಮೂಲದ ದಿಶಾ ಸಾಲಿಯಾನ್ ಸಾವಿನ ವಿಚಾರ : ತನಿಖೆಗೆ ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಒತ್ತಡ..

ಉಡುಪಿ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಇತ್ತೀಚೆಗೆ ದೇಶದೆಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದರ ಜೊತಗೆ.ಸುಶಾಂತ್ ಮ್ಯಾನೇಜರ್ ಆಗಿದ್ದ ಉಡುಪಿ ಮೂಲದ ದಿಶಾ ಸಾಲಿಯಾನ್ ಸಾವಿನ ವಿಚಾರ ಇದೀಗ ಭಾರೀ ಸುದ್ಧಿಯಲ್ಲಿದ್ದು ಈ ಪ್ರಕರಣದ ತನಿಖೆಗೆ ಇದೀಗ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚಿದೆ.  

ಮೂಲತ. ಉಡುಪಿ ಜಿಲ್ಲೆಯವರಾದ ದಿಶಾ ಸಾಲ್ಯಾನ್ ಬೆಳೆದಿದ್ದು ಮುಂಬೈನಲ್ಲಿ. ತಮ್ಮ ತಂದೆ ತಾಯಿಯೊಂದಿಗೆ ಅಲ್ಲೇ ನೆಲೆ ನಿಂತಿದ್ದರು. ತನ್ನ ವಿದ್ಯಾಭ್ಯಾಸದ ಬಳಿಕ ಸ್ಥಳೀಯ ಸುದ್ದಿ ವಾಹಿನಿ, ಪತ್ರಿಕೆಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ದಿಶಾ, ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಆದರೆ ಜೂನ್ 8 ರಂದು ಆಕೆ ಮುಂಬಯಿಯ ಮಲಾಡ್ನ್ ನಲ್ಲಿರುವ ತನ್ನ ಗೆಳೆಯನ 14 ಮಹಡಿಯಲ್ಲಿರುವ ಫ್ಲಾಟ್ ನಿಂದ ಬಿದ್ದು ಸಾವನ್ನಪ್ಪಿದ್ದರು.ಮುಂಬಯಿ ಪೋಲೀಸರು ಇದನ್ನು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

ದಿಶಾ ಸಾವಿನ ಬಳಿಕ ಕೆಲವೇ ದಿನಗಳಲ್ಲಿ ಆಕೆಯ ಬಾಸ್ ಆಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ಕೂಡಾ ಅನುಮಾನಾಸ್ಪದ ರೀತಿಯಲ್ಲೇ ಸಾವನ್ನಪ್ಪಿದ್ದರು. ಸುಶಾಂತ್ ಸಾವು ಆತ್ಮಹತ್ಯೆಯಲ್ಲ, ಕೊಲೆ ಎನ್ನುವ ಆರೋಪ ಕೇಳಿಬರುತ್ತಿರುವ ನಡುವೆಯೇ ದಿಶಾ ಸಾಲಿಯಾನ್ ಸಾವೂ ಕೊಲೆ ಎನ್ನುವ ಆರೋಪ ಇದೀಗ ಕೇಳಿ ಬರಲಾರಂಭಿಸಿದೆ.

ದಿಶಾ ಸಾವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎನ್ನುವ ಕೂಗೂ ಇದೀಗ ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದೆ. ಜಸ್ಟೀಸ್ ಫಾರ್ ದಿಶಾ ಎನ್ನುವ ಹ್ಯಾಶ್ ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿವೆ.

ವಾಟ್ಸ್ ಅಪ್ ಗ್ರೂಪ್ ಗಳೂ ಇದೇ ಕಾರಣಕ್ಕಾಗಿ ರೂಪುಗೊಂಡಿದ್ದು, ಕರ್ನಾಟಕ ಮೂಲದ ದಿಶಾಗೆ ಕರ್ನಾಟಕ ಸರಕಾರ ನ್ಯಾಯ ಕೊಡಬೇಕು ಎನ್ನುವ ಒತ್ತಾಯವೂ ಹೆಚ್ಚಾಗಲಾರಂಭಿಸಿದೆ.

ಉಡುಪಿ ಮೂಲದ ದಿಶಾ ಸಾವನ್ನು ಕರ್ನಾಟಕ ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎನ್ನುವ ಒತ್ತಡವೂ ಇದ್ದು, ಸರಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎನ್ನುವ ಕೂಗು ಕೇಳಿ ಬರಲಾರಂಭಿಸಿದೆ.

ಆದರೆ, ಸರ್ಕಾರ ಈ ಕುರಿತು ಯಾವ ನಿರ್ಧಾರ ತೆಗೆದುಕೊಳ್ಳಲಿದೆ? ಎಂಬುದನ್ನು ಕಾದುನೋಡಬೇಕಿದೆ.

Latest articles

ಮಂಗಳೂರು: ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ಮಂಗಳೂರಿನಲ್ಲಿ ಪ್ರತಿಭಟನೆ-ಬೃಜ್‌ ಭೂಷಣ್‌ ಬಂಧನಕ್ಕೆ ಆಗ್ರಹ

ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅರೋಪ ಹೊತ್ತ ಎಸಗಿದ ಉತ್ತರ ಪ್ರದೇಶದ ಬಿಜೆಪಿ ಸಂಸದ...

ಮಂಗಳೂರು: ಬೀದಿಬದಿ ವ್ಯಾಪಾರಿಗಳ ಮೇಲಿನ ಕಿರುಕುಳ, ಕೇಸುಗಳಿಗೆ ಖಂಡನೆ – ಸುಳ್ಳು ಮೊಕದ್ದಮೆ ವಾಪಾಸ್ ಪಡೆಯಲು ಒತ್ತಾಯಿಸಿ ಪ್ರತಿಭಟನೆ

ಜನಪರ ಹೋರಾಟಗಾರ, ಬೀದಿ ವ್ಯಾಪಾರಿಗಳ ಮುಂದಾಳು ಬಿ ಕೆ ಇಮ್ತಿಯಾಝ್‌ ಮತ್ತು ಮುಖಂಡರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ವಾಪಾಸ್...

ರಾಮನಗರ: ಟೋಲ್ ವಿಚಾರಕ್ಕೆ ಸಂಬಂಧಿಸಿ ಗಲಾಟೆ- ಯುವಕರ ತಂಡದಿಂದ ಸಿಬಂದಿ ಹತ್ಯೆ..!

ಟೋಲ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಯುವಕರ ತಂಡವೊಂದು ಗಲಾಟೆ ಮಾಡಿದ ಹಿನ್ನಲೆಯಲ್ಲಿ ಟೋಲ್ ಸಿಬ್ಬಂದಿಯ ಕೊಲೆಯಾಗಿದೆ. ಈ ಘಟನೆ...

ಊರಿಗೆ ಹೋಗಲು ನಿಲ್ದಾಣದಲ್ಲಿ ಕಾದು ಸುಸ್ತಾಗಿ ತಾನೇ ಸರ್ಕಾರಿ ಬಸ್ ಚಲಾಯಿಸಿದ ಭೂಪನ ಮೇಲೆ ಪೊಲೀಸ್ ಕೋಪ..!

ವ್ಯಕ್ತಿಯೊಬ್ಬ ತನ್ನ ಊರಿಗೆ ಬಸ್ ಇಲ್ಲವೆಂದು ನಿಲ್ದಾಣದಲ್ಲಿ ನಿಲ್ಲಿಸಿದ್ದ ಸಾರಿಗೆ ಸಂಸ್ಥೆಯ ಬಸ್ಸನ್ನೇ ಚಲಾಯಿಸಿ ನಿಲ್ದಾಣದಿಂದ ಹೊರಗಿರುವ ಡಿವೈಡರ್...