Tuesday, October 26, 2021

ಬ್ರೈನ್ ಸ್ಟ್ರೋಕ್ ನಿಂದ ಮೃತಪಟ್ಟ ದಿಲೀಪ್ ಮೃತದೇಹ ತಾಯ್ನಾಡಿಗೆ; ಮಾನವೀಯತೆ ಮೆರೆದ ಅನಿವಾಸಿ ಕನ್ನಡಿಗರು..!

ಬ್ರೈನ್ ಸ್ಟ್ರೋಕ್ ನಿಂದ ಮೃತಪಟ್ಟ ದಿಲೀಪ್ ಮೃತದೇಹ ತಾಯ್ನಾಡಿಗೆ; ಮಾನವೀಯತೆ ಮೆರೆದ ಅನಿವಾಸಿ ಕನ್ನಡಿಗರು..!

ಮಂಗಳೂರು: ಮಂಗಳೂರಿನ ಕಾವೂರು ನಿವಾಸಿ ಹಾಗೇ ಅನಿವಾಸಿ ಕನ್ನಡಿಗ ದಿಲೀಪ್ ದುಬೈಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು 55 ವರ್ಷ ವಯಸ್ಸಾಗಿದ್ದರೂ  ಅವಿವಾಹಿತರಾಗಿದ್ದರು.

ತನ್ನ ತಾಯಿ ಮತ್ತು ಅವಿವಾಹಿತ ಸಹೋದರಿಯರನ್ನು ನೋಡಿಕೊಂಡು ಕುಟುಂಬಕ್ಕೆ ಏಕೈಕ ಆಸರೆಯಾಗಿದ್ದರು. ಕಳೆದ 15 ವರ್ಷಗಳಿಂದ ದುಬೈನಲ್ಲಿ ದುಡಿಯುತ್ತಿದ್ದ  ದಿಲೀಪ್ ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಬ್ರೈನ್ ಸ್ಟ್ರೋಕ್ ಗೆ ಗುರಿಯಾಗಿ  ಕೋಮಾವಸ್ಥೆಗೆ ತಲುಪಿದ್ದರು. ಸತತ ಎಂಟು ತಿಂಗಳಿಂದ ಕೋಮಾದಲ್ಲಿದ್ದ ದಿಲೀಪ್ ಕುಮಾರ್ ಕಳೆದ ಶುಕ್ರವಾರ ನಿಧನರಾಗಿದ್ದಾರೆ. ಇದೀಗ ಅವರ ಮೃತದೇಹವನ್ನು ಇಂಡಿಯನ್ ಕಾನ್ಸುಲೇಟ್ ದುಬೈ, ಕೆ.ಸಿ.ಎಫ್, ಕನ್ನಡಿಗಾಸ್ ಫೆಡರೇಷನ್, ಇಂಡಿಯನ್ ಅಸೋಸಿಯೇಷನ್ ಅಜ್ಮಾನ್ ನೆರವಿನಿಂದ ಕೋವಿಡ್ ಸಂದರ್ಭದಲ್ಲಿ ಪಡೆಯಬೇಕಾದ ಎಲ್ಲಾ ಅನುಮತಿ ಪತ್ರಗಳನ್ನು ಪಡೆದು ತಾಯ್ನಾಡಿಗೆ ಕಳುಹಿಸಲಾಗಿದೆ. ಅಜ್ಮಾನ್ ಇಂಡಿಯನ್ ಅಸೋಸಿಯೇಷನ್ ನ ಛಾಯದೇವಿ ಕೃಷ್ಣಮೂರ್ತಿಯವರು ದಿಲೀಪ್ ವಿಸಾ, ಇಮಿಗ್ರೇಷನ್, ಡೆತ್ ಸರ್ಟಿಫಿಕೇಟ್ ಪಡೆಯಲು ವ್ಯವಸ್ಥೆ ಮಾಡಿ ಸಹಕರಿಸಿದ್ದಾರೆ. ಈ ಕಾರಣದಿಂದಾಗಿ ದಿಲೀಪ್ ಮೃತದೇಹ ದುಬೈನಿಂದ ಮಂಗಳೂರಿಗೆ ತಲುಪಿದೆ. ಹಾಗೂ ಮಂಗಳೂರಿನಲ್ಲೂ ಕೆಸಿಎಫ್ ರವರ ಆಂಬ್ಯುಲೆನ್ಸ್ ಮೂಲಕ ದಿಲೀಪ್ ಮೃತದೇಹ ಮನೆಗೆ ತಲುಪಿಸುವ ವ್ಯವಸ್ಥೆಯೂ ನಡೆಯಿತು.ಇನ್ನೂ ‘ದಿಲೀಪ್ ರವರ ಒಬ್ಬ ಸಹೋದರಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು,  ಡಯಾಲಿಸಿಸ್  ಮಾಡಿಸುತ್ತಿದ್ದಾರೆ.  ದಿಲೀಪ್ ಆದಾಯವನ್ನೆ ನಂಬಿ ಬದುಕುತ್ತಿದ್ದ  ಕುಟುಂಬ, ದಿಲೀಪ್ ಆಸ್ಪತ್ರೆಗೆ ದಾಖಲಾದ ನಂತರ ಹಣದ ಕೊರತೆಯಿಂದ  ಕಿಡ್ನಿ ಡಯಾಲಿಸಿಸ್  ಮಾಡಿಸಲಾಗದೆ ಸಹೋದರಿ ಮೃತಪಟ್ಟಿದ್ದಾರೆ. ಇದೀಗ ತಾಯಿ ಮತ್ತು ಇನ್ನೋರ್ವ ಮದುವೆ ವಯಸ್ಸು ಮೀರಿದ ಸಹೋದರಿಗೆ  ಆಸರೆ ಇಲ್ಲದಾಗಿದೆ.  ಕೆಸಿಎಫ್ ತಂಡ ಈ ಬಡ ಕುಟುಂಬಕ್ಕೆ ಹಲವು ಬಾರಿ ರೇಷನ್ ವ್ಯವಸ್ಥೆ ಮಾಡಿತ್ತು, ಈಗಲೂ ತಮ್ಮಿಂದಾದ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...