Thursday, September 29, 2022

ಬೆಳ್ತಂಗಡಿ: ಅನ್ಯಕೋಮಿನ ಜೋಡಿ ಪತ್ತೆ-ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು

ಬೆಳ್ತಂಗಡಿ: ಅನ್ಯಕೋಮಿನ ಜೋಡಿಯನ್ನು ಹಿಂದೂ ಕಾರ್ಯಕರ್ತರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬೆಳ್ತಂಗಡಿಯ ಕಾಪಿನಬಾಗಿಲು ಎಂಬಲ್ಲಿ ನಡೆದಿದೆ.

ಗದಗ ಮೂಲದ ರಫೀಕ್(21) ಎಂಬಾತ ಹಿಂದೂ ಯುವತಿಯನ್ನು ಧರ್ಮಸ್ಥಳಕ್ಕೆ ಕರೆ ತಂದಿದ್ದು, ಖಾಸಗಿ ಲಾಡ್ಜ್‌ಗೆ ರೂಮ್ ಬುಕ್ಕಿಂಗ್ ಗಾಗಿ ಬಂದಿದ್ದಾರೆ ಎನ್ನಲಾಗಿದೆ.


ನವ ವಿವಾಹಿತ ಅನ್ಯಕೋಮಿನ ಜೋಡಿ ಎಂದು ತಿಳಿಯುತ್ತಲೇ ಲಾಡ್ಜ್ ಸಿಬ್ಬಂದಿ ರೂಮ್ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದ್ದು, ತಕ್ಷಣ ಅವರಿಬ್ಬರು ಅಲ್ಲಿಂದ ಬೆಂಗಳೂರು ಕಡೆಗೆ ತೆರಳಲು ಬಸ್ ಹತ್ತಿದ್ದು, ಈ ಬಗ್ಗೆ ವಿಷಯ ತಿಳಿದ ಕಾರ್ಯಕರ್ತರು ಕೊಕ್ಕಡದಲ್ಲಿ ಅಡ್ಡಗಟ್ಟಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

ತದನಂತರ ಅನ್ಯಕೋಮಿನ ಜೋಡಿಯನ್ನು ಕಾರ್ಯಕರ್ತರು ನೆಲ್ಯಾಡಿ ಪೊಲೀಸರಿಗೆ ಒಪ್ಪಿಸಿದ್ದು, ಯುವತಿಯು ವಿದ್ಯಾಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು ಎನ್ನಲಾಗುತ್ತಿದೆ.

ಜೋಡಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here

Hot Topics

ಪುತ್ತೂರು: PFI ಪ್ರಧಾನ ಕಛೇರಿಗೆ ಬೆಳಿಗ್ಗೆಯಿಂದಲೇ ಬೀಗ-ಗುಪ್ತಸಭೆ ನಡೆಸುತ್ತಿದ್ದ ಆರೋಪ

ಪುತ್ತೂರು: ದೇಶದಾದ್ಯಂತ ಪಿಎಫ್ಐ ಹಾಗೂ ಅದರ ಬೆಂಬಲಿತ ಸಂಘಟನೆಗಳಿಗೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೇರಿರುವ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಪಿಎಫ್ಐ ನ ಪ್ರಧಾನ...

ಬ್ರೇಕಿಂಗ್ ನ್ಯೂಸ್: PFI ಸಂಘಟನೆ ಇನ್ನು 5ವರ್ಷ ಬ್ಯಾನ್-ಕೇಂದ್ರದ ಮಹತ್ವದ ಆದೇಶ

ನವದೆಹಲಿ: ಇಂದಿನಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು ಪಿಎಫ್‌ಐ ಸಂಘಟನೆ ಮತ್ತು ಅದರ ಅಂಗಸಂಸ್ಥೆಗಳನ್ನು ಮುಂದಿನ 5 ವರ್ಷಗಳ ಕಾಲ ನಿಷೇಧ ಮಾಡಿ ಮಹತ್ವದ ಆದೇಶ ಹೊರಡಿಸಿದೆ.ಈ ಸಂಘಟನೆಗಳು ಕಾನೂನುಬಾಹಿರ ಎಂದು ತಕ್ಷಣದಿಂದಲೇ...

ಪುತ್ತೂರಿನಲ್ಲಿ ಜಾಗದ ತಕರಾರು: V.A ಕಚೇರಿಗೆ ನುಗ್ಗಿ ದಾಂಧಲೆ-ಮಾರಕಾಸ್ತ್ರಗಳಿಂದ ಹತ್ಯೆ ಯತ್ನ

ಪುತ್ತೂರು: ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಸವಣೂರು ಕಂದಾಯ ಕಛೇರಿಗೆ ನುಗ್ಗಿ ತಲವಾರಿನಿಂದ ಹಲ್ಲೆಗೆ ಮುಂದಾಗಿ, ಕಲ್ಲು ಎತ್ತುಹಾಕಿ ಕೊಲೆಗೆ ಯತ್ನಿಸಿದ ಘಟನೆ ಪುತ್ತೂರಿನ ಸವಣೂರು ಜಂಕ್ಷನ್ ನಲ್ಲಿ ಇಂದು ನಡೆದಿದೆ.ಸವಣೂರು ಗ್ರಾಮದ...