LATEST NEWS
ಮಂಗಳಾದೇವಿ ಸಾನಿಧ್ಯದಲ್ಲಿ ಧರ್ಮ ದೈವ ಪಂಜುರ್ಲಿ ಯಕ್ಷಗಾನದ ಶೀರ್ಷಿಕೆ ಗೀತೆ ರಿಲೀಸ್..
Published
1 year agoon
By
Adminಮಂಗಳೂರು: “ಧರ್ಮ ದೈವ ಪಂಜುರ್ಲಿ” ತುಳು ಯಕ್ಷಗಾನದ ಶೀರ್ಷಿಕೆ ಗೀತೆಯ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಶನಿವಾರ ನಡೆಯಿತು.
ಶೀರ್ಷಿಕೆ ಬಿಡುಗಡೆಗೊಳಿಸಿದ ಲಯನ್ ಕಿಶೋರ್ ಡಿ ಶೆಟ್ಟಿ ಮಾತನಾಡಿ, ಬೆಂಗಳೂರು ವಿಜಯನಗರದ ಬಂಟರ ಭವನದಲ್ಲಿ ಪ್ರಪ್ರಥಮ ಬಾರಿಗೆ ದೊಂದಿ ಬೆಳಕಿನ ಯಕ್ಷಗಾನ ನಡೆಯಲಿದ್ದು, ಹೊಸ ರೀತಿಯಲ್ಲಿ ನಡೆಸಲು ತುಳುನಾಡ ಜವನೆರ್ ಬೆಂಗಳೂರು ಮುಂದಾಗಿದ್ದಾರೆ..ಇಂದು ಬಿಡುಗಡೆಗೊಳಿಸಿದ ಯುವ ಭಾಗವತರಾದ ಧೀರಜ್ ರೈ ಸಂಪಾಜೆಯವರ ಪದ್ಯ ಬಹಳ ಉತ್ತಮವಾಗಿ ಮೂಡಿ ಬಂದಿದ್ದು , ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಕಾಂತಾರದ ಗುರುವ ಖ್ಯಾತಿಯ ಸ್ವರಾಜ್ ಶೆಟ್ಟಿ ಮಾತನಾಡಿ, ಧರ್ಮ ದೈವ ಪಂಜುರ್ಲಿ ಬಹಳ ಕಾರಣಿಕ ದೈವ. ಅಂತಹ ಧರ್ಮದೈವದ ಕಥೆಯನ್ನಾಧರಿಸಿದ ಯಕ್ಷಗಾನದ ಆಡಿಯೋ ರಿಲೀಸ್ ಆಗಿದ್ದು, ಆ ಗೀತೆಯನ್ನು ಕೇಳುವಾಗ ಮೈಪುಳಕಗೊಳ್ಳುತ್ತದೆ..ಯಾರು ಮಿಸ್ ಮಾಡದೇ ಈ ಯಕ್ಷಗಾನವನ್ನು ನೋಡಲೇಬೆಕು ಎಂದರು..
ದಯಾನಂದ ಕತ್ತಲ ಸಾರ್,ತುಳುನಾಡಿನ ಆದಿ ದೈವ ಅಂದರೆ ನಾವೆಲ್ಲ ಸತ್ಯ ಅಂತ ಕರೆಯುವ ಧರ್ಮ ದೈವಪಂಜುರ್ಲಿ.. ಅಂತಹ ಧರ್ಮದೈವ ಪಂಜುರ್ಲಿ ಯಕ್ಷಗಾನವನ್ನು ಕರಾವಳಿ ಕರ್ನಾಟಕದ ತೆಂಕುತಿಟ್ಟಿನ ಕಲಾವಿದರು ಆಡಿತೋರಿಸಲಿಕ್ಕೆ ಮುಂದಾಗಿದ್ದಾರೆ. ಎಲ್ಲಾ ಕಲಾವಿದರಿಗೂ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು..
ನಮ್ಮಕುಡ್ಲದ ಯಕ್ಷ ತೆಲಿಕೆ ಖ್ಯಾತಿಯ ದಿನೇಶ್ ಕೋಡಪದವು ಮಾತನಾಡಿ, ಯಕ್ಷಗಾನದ ಆಡಿಯೋ ರಿಲೀಸ್ ಅನ್ನುವಂತದ್ದು ಇದು ಮೊದಲ ಬಾರಿಗೆ ನಡೆದಿದೆ..ಯಕ್ಷಗಾನ ರಂಗದ ಯುವ ಕಲಾವಿದೆರೆಲ್ಲಾ ಸೇರಿ ಒಂದು ಪ್ರಯತ್ನಕ್ಕೆ ಕೈಹಾಕಿದ್ದೇವೆ..ಪ್ರತೀಯೊಬ್ಬರು ಯಕ್ಷಗಾನ ನೊಡಿ ಧರ್ಮದೈವ ಪಂಜುರ್ಲಿ ಕಥೆಯನ್ನು ಯಶಸ್ವಿಗೊಳಿಸುವುದರೊಂದಿಗೆ ಪಂಜುರ್ಲಿಯ ಅನುಗ್ರಹವನ್ನು ಪಡೆಯಬೇಕು ಎಂದರು..
ಯಕ್ಷ ಯುವರತ್ನ ಧೀರಜ್ ರೈ ಸಂಪಾಜೆ ಮಾತನಾಡಿ, ಸೆಪ್ಟೆಂಬರ್ 24, ಆದಿತ್ಯವಾರರಂದು ಬೆಂಗಳೂರಿನ ವಿಜಯನಗರದ ಬಂಟರಭವನದಲ್ಲಿ ತುಳುನಾಡ ಜವನೆರ್ ಆಯೋಜಿಸಿದ ಅಷ್ಟೆಮಿದ ಐಸಿರ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ “ಧರ್ಮ ದೈವ ಪಂಜುರ್ಲಿ” ಯಕ್ಷಗಾನ ದೊಂದಿ ಬೆಳಕಿನ ಮೂಲಕ ನಡೆಯಲಿದೆ. ಇದರ ಕಥೆ ಪಾರ್ದನಾಧರಿತವಾಗಿದ್ದು, ಬಪ್ಪನಾಡು ಮೇಳದ ಯಜಮಾನರು, ನನ್ನ ಜೊತೆ ಕಲಾವಿದರೆಲ್ಲರ ಸಹಕಾರದಿಂದ ಶೀರ್ಷಿಕೆ ಗೀತೆ ರಿಲೀಸ್ ಆಗಿದೆ..ಎಲ್ಲರ ಸಹಕಾರ, ಪ್ರೋತ್ಸಾಹ ಚೊಚ್ಚಲ ಪ್ರಯತ್ನಕ್ಕಿರಲಿ ಎಂದರು..
ಶೀರ್ಷಿಕೆ ಗೀತೆ ರಿಲೀಸ್ ಸಂದರ್ಭದಲ್ಲಿ ಚೆಂಡೆಯ ಗಂಡುಗಲಿ ರೋಹಿತ್ ಉಚ್ಚಿಲ, ತೇಜಸ್ ಶೆಟ್ಟಿ ಸೇರಿದಂತೆ ಇನ್ನಿತರರು ಜೊತೆಯಲ್ಲಿದ್ದರು…ಶೀರ್ಷಿಕೆ ಗೀತೆಗೆ ಧೀರಜ್ ರೈ ಸಂಪಾಜೆಯವರ ಗಾಯನ, ದಿನೇಶ್ ಕೋಡಪದವು ಹಿನ್ನಲೆ ಧ್ವನಿ, ರೋಹಿತ್ ಉಚ್ಚಿಲ ಹಿನ್ನಲೆ ಸಂಗೀತ, ದಯಾನಂದ ಕತ್ತಲ್ ಸಾರ್ ಸಾಹಿತ್ಯವಿದೆ.
ತುಳುನಾಡ ದೈವಾರಾಧನೆ ಎಂದರೆ ಅದೊಂದು ವಿಶಾಲ ಕಡಲಿನಂತೆ ವಿಸ್ತಾರವಾದ ಆರಾಧನೆ ಎನ್ನಬಹುದು. ದೇವರಿಗಿಂತಲೂ ಹೆಚ್ಚು ಭಯಭಕ್ತಿಯನ್ನಿರಿಸಿಕೊಂಡಿರುವ ಭಕ್ತರು ಆರಾಧಿಸುವ ಸಾವಿರದೊಂದು ದೈವಗಳಲ್ಲಿ ಮೃಗ ಮತ್ತು ಮನುಷ್ಯ ರೂಪದ ಪ್ರಧಾನ ದೈವಗಳಲ್ಲಿ ಒಂದು ಪಂಜುರ್ಲಿ ಆಗಿದ್ದುಕೊಂಡು, ಕುಟುಂಬ ದೈವ, ಸ್ಥಳದ ದೈವ, ಗ್ರಾಮದ ದೈವ, ಮಾಗಣೆ ದೈವವಾಗಿ ಆರಾಧನೆ ನಡೆಯುತ್ತಿದೆ. ಇದರ ಕಾರಣೀಕದ ಬಗ್ಗೆ ತುಳುನಾಡಿನಲ್ಲಿ ತಿಳಿಯದವರು ಯಾರೂ ಇಲ್ಲ ಎನ್ನಬಹುದು. ದೂರದ ಬೆಂಗಳೂರು ಮತ್ತು ಇನ್ನಿತರ ಪ್ರದೇಶಗಳಿಗೆ ಪಂಜುರ್ಲಿ ಮಹಿಮೆಯನ್ನು ಸಾರಲು ದೈವದ ಕಥನ ಯಕ್ಷಗಾನ ಪ್ರಸಂಗವಾಗಿ ಮೂಡಿ ಬರಲಿದೆ.
LATEST NEWS
ಮಗನ ಆ ಒಂದು ನಿರ್ಧಾರದಿಂದ ಸಾ*ವಿಗೆ ಶರಣಾದ ಹೆತ್ತವರು!
Published
5 minutes agoon
26/12/2024By
NEWS DESK4ಮಂಗಳೂರು/ನಂದ್ಯಾಲ್ : ತಮ್ಮ 24 ವರ್ಷದ ಮಗ ತೃತೀಯ ಲಿಂಗಿಯನ್ನು ಮದುವೆಯಾಗಲು ಮುಂದಾಗಿದ್ದನ್ನು ಕೇಳಿ ತಂದೆ – ತಾಯಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ನಡೆದಿದೆ. ಸುಬ್ಬಾ ರಾಯುಡು(45) ಮತ್ತು ಸರಸ್ವತಿ(38) ಮೃ*ತ ದಂಪತಿ.
ಮಗ ಸುನೀಲ್ ಕುಮಾರ್ ಕಳೆದ ಮೂರು ವರ್ಷಗಳಿಂದ ಸ್ಥಳೀಯ ತೃತೀಯ ಲಿಂಗಿ ಸಮುದಾಯದೊಂದಿಗೆ ಒಡನಾಟ ಹೊಂದಿದ್ದನಂತೆ. ಈ ವಿಚಾರ ಗೊತ್ತಾದಾಗ ಸುಬ್ಬಾ ರಾಯುಡು, ಸರಸ್ವತಿ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಗನೊಂದಿಗೆ ಜಗಳವೂ ನಡೆದಿದೆ ಎಂದು ತಿಳಿದು ಬಂದಿದೆ.
ತೃತೀಯಲಿಂಗಿಯೊಂದಿಗೆ ಮೂರು ವರ್ಷಗಳಿಂದ ಸುನೀಲ್ ಕುಮಾರ್ ಸಂಬಂಧ ಹೊಂದಿದ್ದ. ಅವರನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದ. ಈ ಬಗ್ಗೆ ಪೋಷಕರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಇದೇ ವಿಚಾರವಾಗಿ ಈ ಹಿಂದೆ ಸುನೀಲ್ ಆತ್ಮಹ*ತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿರುವ ಬಗ್ಗೆ ವರದಿಯಾಗಿದೆ.
ಇದನ್ನೂ ಓದಿ : ಹೆಚ್ಚು ಮೊಬೈಲ್ ನೋಡ್ಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ವಿಷ ಸೇವಿಸಿ ಯುವತಿ ಆತ್ಮಹತ್ಯೆ
ತೃತೀಯ ಲಿಂಗಿಗಳ 1.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದು, ಪೋಷಕರಿಗೆ ಆ ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ತೃತೀಯ ಲಿಂಗಿ ಸಮುದಾಯದ ಸದಸ್ಯರು ಪೋಷಕರನ್ನು ಸಾರ್ವಜನಿಕವಾಗಿ ನಿಂದಿಸಿದ್ದರು. ಇದರಿಂದ ನೊಂದ ದಂಪತಿ ಸಾ*ವಿನ ದಾರಿ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
LATEST NEWS
ಸ್ವಾಮಿತ್ತ ಕಾರ್ಡ್ ಬಳಸಿ; ಬ್ಯಾಂಕ್‌ನಿಂದ ಸುಲಭವಾಗಿ ಸಾಲ ಪಡೆಯಿರಿ
Published
16 minutes agoon
26/12/2024ಭೂ ಮಾಲೀಕತ್ವದ ಹಕ್ಕುಗಳನ್ನು ಖಚಿತಪಡಿಸಿಕೊಳ್ಳುವುದು, ಭೂ ವಿವಾದಗಳನ್ನು ಕಡಿಮೆ ಮಾಡುವುದು ಹಾಗೂ ಗ್ರಾಮ ಮಟ್ಟದ ಯೋಜನೆಗಳಿಗೆ ಈ ಸ್ವಾಮಿತ್ತ ಕಾರ್ಡ್ ಸಹಕಾರಿಯಾಗಲಿದೆ. ಡಿಸೆಂಬರ್ 27 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್‌ಗಢ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಿಜೋರಾಂ, ಒಡಿಶಾ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಮುಂತಾದ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಪ್ರಗತಿ ತರಲು 2020ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಗ್ರಾಮ ಸಮೀಕ್ಷೆ ಮತ್ತು ಮ್ಯಾಪಿಂಗ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದರು.
ಡ್ರೋನ್ಗಳ ಮೂಲಕ ಭೂಮಿಯನ್ನು ಸಮೀಕ್ಷೆ ಮಾಡುವುದು ಮತ್ತು ಜಿಐಎಸ್ ತಂತ್ರಜ್ಞಾನದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಭೂಮಿಗಳನ್ನು ಗುರುತಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಡಿಸೆಂಬರ್ 27 ರಂದು 10 ರಾಜ್ಯಗಳ 50 ಸಾವಿರ ಹಳ್ಳಿಗಳ 58 ಲಕ್ಷ ಜನರಿಗೆ ಸ್ವಾಮಿತ್ವ ಆಸ್ತಿ ಕಾರ್ಡ್ ವಿತರಿಸಲಾಗುವುದು. ಗ್ರಾಮೀಣ ಪ್ರದೇಶದ ಭೂ ಮಾಲೀಕರಿಗೆ ಮಾಲೀಕತ್ವದ ಕಾರ್ಡ್ ನೀಡಲು ಕೇಂದ್ರ ಸರ್ಕಾರ ಯೋಜಿಸಿತ್ತು. ಇದಕ್ಕಾಗಿ, ಭೂ ಮಾಲೀಕರಿಗೆ ಮಾಲೀಕತ್ವದ ಹಕ್ಕುಗಳನ್ನು ಹೊಂದಿರುವ ಕಾರ್ಡ್ ಅನ್ನು ನೀಡಲಾಗುತ್ತದೆ. ಅದರ ಸಹಾಯದಿಂದ ಬ್ಯಾಂಕ್‌ಗಳಿಂದ ಸಾಲ ಪಡೆಯುವುದು ಸುಲಭವಾಗುತ್ತದೆ. ಈ ಕಾರ್ಡ್‌ನಲ್ಲಿ ಜನರ ಭೂಮಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ.
ಸಚಿವಾಲಯದ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಮಾತನಾಡಿ, ಸ್ವಾಮಿತ್ವ ಯೋಜನೆಯಡಿ 3.17 ಗ್ರಾಮಗಳಲ್ಲಿ ಡ್ರೋನ್ ಸಮೀಕ್ಷೆ ಪೂರ್ಣಗೊಂಡಿದೆ. ಈ ಹಿಂದೆ ಹಲವು ರಾಜ್ಯಗಳಲ್ಲಿ ಹಳ್ಳಿಗಳ ವಸತಿ ಪ್ರದೇಶಗಳ ನಕ್ಷೆ ಇರಲಿಲ್ಲ ಎಂದು ಪಂಚಾಯತ್ ರಾಜ್ ಸಚಿವಾಲಯ ತಿಳಿಸಿದೆ. ಇದರಿಂದ ಬ್ಯಾಂಕ್‌ಗಳಿಂದ ಸಾಲ ಪಡೆಯಲು ತೊಂದರೆಯಾಗುತ್ತಿತ್ತು. ಹೊಸ ಪ್ರಯತ್ನದ ನಂತರ, ಅನೇಕ ಆಸ್ತಿ ಮಾಲೀಕರು ತಮ್ಮ ಆಸ್ತಿ ಕಾರ್ಡ್‌ಗಳ ಮೂಲಕ ಬ್ಯಾಂಕ್ ಸಾಲವನ್ನು ಪಡೆಯಲು ಸಮರ್ಥರಾಗಿದ್ದಾರೆ, ಅದು ಈಗ ಕಾನೂನು ಮಾನ್ಯತೆಯನ್ನೂ ಹೊಂದಿದೆ.ಜನವಸತಿ ಮತ್ತು ಜನವಸತಿ ಇಲ್ಲದ ಪ್ರದೇಶಗಳ ಡ್ರೋನ್ ಸಮೀಕ್ಷೆಯು ಈ ಯೋಜನೆಯ ಮೊದಲ ಹಂತವಾಗಿದೆ. ಇದುವರೆಗೆ 1.49 ಲಕ್ಷ ಗ್ರಾಮಗಳಲ್ಲಿ 2.19 ಕೋಟಿಗೂ ಹೆಚ್ಚು ಆಸ್ತಿ ಕಾರ್ಡ್‌ಗಳನ್ನು ಸೃಷ್ಟಿಸಲಾಗಿದೆ. ಈ ಯೋಜನೆಯಡಿ ಮಾರ್ಚ್ 2026 ರೊಳಗೆ ಎಲ್ಲಾ ಫಲಾನುಭವಿಗಳಿಗೆ ಕಾರ್ಡ್‌ಗಳು ಲಭ್ಯವಾಗುವಂತೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
LATEST NEWS
ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ ಬಳಸಬೇಡಿ: UGC ಸೂಚನೆ
Published
27 minutes agoon
26/12/2024By
NEWS DESK2ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗವು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದು, ವಿದ್ಯಾರ್ಥಿಗಳು ಸಾರ್ವಜನಿಕ ವೈ-ಫೈ ಬಳಸಿ ಇ-ಮೇಲ್ ಖಾತೆ ತೆರೆಯಬಾರದು ಎಂದು ಯುಜಿಸಿ ಹೇಳಿದೆ. ಅಲ್ಲದೆ ನೆಟ್ ಬ್ಯಾಂಕಿಂಗ್ ಬಳಸಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿರುವ ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್‌ಗಳಿಂದ ಮೊಬೈಲ್ ಚಾರ್ಜ್ ಮಾಡುವ ಮೂಲಕ ಖಾತೆಯನ್ನ ಹ್ಯಾಕ್ ಮಾಡಬಹುದು ಎಂದಿದೆ.
ಇಷ್ಟಕ್ಕೂ ವಿದ್ಯಾರ್ಥಿಗಳಿಗೆ UGC ಈ ಎಚ್ಚರಿಕೆಯನ್ನ ನೀಡಿದ್ದು ಯಾಕೆ.!
ಸೈಬರ್ ಅಪರಾಧವನ್ನ ತಡೆಯುವ ಅಭಿಯಾನದಲ್ಲಿ ಕೇಂದ್ರ ಗೃಹ ಸಚಿವಾಲಯವು ದೇಶಾದ್ಯಂತದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನ ಸಹ ತೊಡಗಿಸಿಕೊಳ್ಳುತ್ತಿದೆ. ಅದೇ ಸಮಯದಲ್ಲಿ, ಸೈಬರ್ ಅಪರಾಧದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಯುಜಿಸಿ ಎಲ್ಲಾ ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳನ್ನ ಕೇಳಿದೆ. ಮೇಲ್ ಮತ್ತು ಅದಕ್ಕೆ ಲಗತ್ತಿಸಲಾದ ಫೈಲ್’ಗಳನ್ನ ಎಚ್ಚರಿಕೆಯಿಂದ ತೆರೆಯಬೇಕು ಎಂದು ಆಯೋಗ ಹೇಳಿದೆ. ವಿದ್ಯಾರ್ಥಿಗಳು ಯಾವುದೇ ಸಾಫ್ಟ್‌ವೇರ್’ನ್ನ ಅಧಿಕೃತ ವೆಬ್‌ಸೈಟ್’ನಿಂದ ಮಾತ್ರ ಡೌನ್‌ಲೋಡ್ ಮಾಡಬೇಕು. ಕಾಲಕಾಲಕ್ಕೆ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ನವೀಕರಿಸುತ್ತೀರಿ.
UGC NET ಪ್ರವೇಶ ಕಾರ್ಡ್ ಯಾವಾಗ ಬಿಡುಗಡೆ ಮಾಡಲಾಗುತ್ತದೆ.?
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಯುಜಿಸಿ ನೆಟ್ 2024 ಡಿಸೆಂಬರ್ ಸೆಷನ್ ಪರೀಕ್ಷೆಗಾಗಿ ಪರೀಕ್ಷಾ ನಗರ ಸ್ಲಿಪ್ ಬಿಡುಗಡೆ ಮಾಡಿದೆ. ಈಗ ಪ್ರವೇಶ ಪತ್ರಗಳನ್ನ ನೀಡಲಾಗುವುದು. ಮಾಧ್ಯಮ ವರದಿಗಳ ಪ್ರಕಾರ, ಈ ತಿಂಗಳ ಅಂತ್ಯದ ವೇಳೆಗೆ ಹಾಲ್ ಟಿಕೆಟ್ ಬಿಡುಗಡೆಯಾಗಲಿದ್ದು, ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಪರೀಕ್ಷೆಯನ್ನು CBT ಮೋಡ್‌ನಲ್ಲಿ ಜನವರಿ 3ರಿಂದ ಜನವರಿ 16, 2024 ರವರೆಗೆ ನಡೆಸಲಾಗುತ್ತದೆ.