Thursday, October 21, 2021

ಪಡುಬಿದ್ರಿಯ ಅನಾಥ ಟಗ್‌ನಲ್ಲಿ ದೆವ್ವದ ಕಾಟ…!?

ಉಡುಪಿ: ಇಲ್ಲಿನ ಪಡುಬಿದ್ರಿಯಲ್ಲಿ ಚಂಡಮಾರುತಕ್ಕೆ ಸಿಲುಕಿ ದುರಂತಕ್ಕೀಡಾಗಿ ಪಡುಬಿದ್ರಿಯ ಕಾಡಿಪಟ್ಣ ಕಡಲ ತೀರದಲ್ಲಿ ಸುಸ್ಥಿತಿಯಲ್ಲಿರಿಸಿದಂತಹ ಟಗ್‌ನೊಳಗಡೆ ಅನಾಮಿಕ ವ್ಯಕ್ತಿಯು ನಡೆದಾಡುವ ಹಾಗೂ ಚಿತ್ರ-ವಿಚಿತ್ರ ಶಬ್ದ ಮಾಡುವ ಮೂಲಕ ಭೀತಿ ಹುಟ್ಟಿಸುತ್ತಿದ್ದು, ಪಡುಬಿದ್ರಿಯ ಜನ ದೆವ್ವದ ಕಾಟ ಎಂದು ಭೀತಿಗೊಳಗಾಗಿದ್ದಾರೆ.


ಕಡಲ ಕಿನಾರೆಗೆ ಆಗಮಿಸುವಂತಹ ಜನ ಟಗ್‌ನ ಮುಂದೆ ನಿಂತು ಸೆಲ್ಫಿ ತೆಗೆಯುವುದು ಸಾಮಾನ್ಯ. ಮಂಗಳವಾರ ಸಾಯಂಕಾಲ ಪಡುಬಿದ್ರಿಯ ಇಬ್ಬರು ಯುವಕರು ಟಗ್‌ಗೆ ಒರಗಿ ನಿಂತು ಮೊಬೈಲ್‌ನಲ್ಲಿ ಚಿತ್ರೀಕರಣವನ್ನು ಮಾಡುತ್ತಿದ್ದರು.

ಆ ಸಂದರ್ಭ ಟಗ್‌ನೊಳಗೆ ವ್ಯಕ್ತಿಯೊಬ್ಬನು ಚಲಿಸಿದಂತೆ ಭಾಸವಾಗಿದೆ. ಅದರಿಂದ ಬೆದರಿದ ಯುವಕರು ಚಿತ್ರವನ್ನು ತೆಗೆದುಕೊಳ್ಳುತ್ತಿದ್ದಾತನ ಬಳಿ ವಿಷಯವನ್ನು ತಿಳಿಸಿದಾಗ ಆತ ಅಲ್ಲಗಳೆದಿದ್ದ, ಮತ್ತೆ ಅನತಿ ದೂರದ ಬಂಡೆಕಲ್ಲಿನಲ್ಲಿ ನಿಂತು ಮತ್ತೊಬ್ಬನ ಚಿತ್ರವನ್ನು ತೆಗೆಯುವಾಗ ಆತನಿಗೂ ಕೂಡ ವ್ಯಕ್ತಿಯೊಬ್ಬ ಟಗ್‌ನೊಳಗೆ ಹಾದುಹೋದ ಹಾಗೆ ಭಾಸವಾಗಿದೆ.

ಯುವಕರಿಬ್ಬರು ಅದಕ್ಕೆ ಮೊದಲು ಟಗ್‌ನಿಂದ ದೂರದ ಸಮುದ್ರ ತೀರದ ಮರಳಲ್ಲಿ ಸತ್ತು ಬಿದ್ದಿರುವ ಮೀನನ್ನು ಗಮನಿಸುತ್ತಿದ್ದಾಗ ಕೂಗಿ ಕರೆಯುತ್ತಿದ್ದ ಶಬ್ದ ಕೇಳಿ ಬಂದಿರುವುದಾಗಿಯೂ ಕೂಡ ವಿವರಿಸಿದ್ದಾರೆ.

ಟಗ್ ದುರಂತಕ್ಕೀಡಾದಾಗ ಎಂಟು ಮಂದಿಯಲ್ಲಿ ಮೂವರು ನಾಪತ್ತೆಯಾಗಿದ್ದು, ಇಬ್ಬರ ಮೃತದೇಹವು ಕಾರ್ಯಾಚರಣೆಯ ವೇಳೆಗೆ ಪತ್ತೆಯಾಗಿತ್ತು. ಇನ್ನೋರ್ವನ ದೇಹವು ಇಲ್ಲಿಯ ತನಕ ಪತ್ತೆಯಾಗಿಲ್ಲ. ಹೀಗಾಗಿ ಯುವಕರಲ್ಲಿ ಪ್ರೇತ ಕಾಟದ ಶಂಕೆಯು ಹುಟ್ಟಿಕೊಂಡಿದೆ.

ಟಗ್ ಮೇಲೆ ಹತ್ತದಂತೆ ಸೂಚನಾ ಫಲಕವನ್ನು ಅಳವಡಿಸಿದ್ದರೂ, ಲೆಕ್ಕಿಸದೆ ಕೆಲವರು ಹತ್ತುತ್ತಿದ್ದಾರೆ ಎನ್ನಲಾಗಿದೆ

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...