Connect with us

    LATEST NEWS

    ಬೆಂಗಳೂರಲ್ಲಿ 268 ಮಂದಿಗೆ ಡೆಲ್ಟಾ ವೈರಸ್ ಸೋಂಕು ದೃಢ..!

    Published

    on

    ಬೆಂಗಳೂರು : ಕರ್ನಾಟಕದಲ್ಲಿ ಪರಿಸ್ಥಿತಿಯನ್ನು ಅಲ್ಲೋಲ ಕಲ್ಲೋಲಗೊಳಿಸಿದ್ದ ಕೊರೊನಾ ಸದ್ಯ ನಿಯಂತ್ರಣದಲ್ಲಿದ್ದಂತೆ ಅತ್ತ ಡೆಲ್ಟಾ ವೈರಸ್ ಬೆಂಗಳೂರಿಗರ ನಿದ್ದೆಗೆಡಿಸಿದೆ.

    ಮಹಾನಗರದಲ್ಲಿ ಈವರೆಗೆ 268 ಜನರಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದ್ದು, ಈ ಪೈಕಿ ಇಬ್ಬರಲ್ಲಿ ಕಪ್ಪಾ ವೈರಸ್ 38 ಜನರಲ್ಲಿ ಡೆಲ್ಟಾ ವೈರಾಣುವಿನ ಮತ್ತೊಂದು ಪ್ರಭೇದ ಇರುವುದು ದೃಢಪಟ್ಟಿದೆ.

    ಬಿಬಿಎಂಪಿಯಿಂದ ಮನೆ ಮನೆ ಆರೋಗ್ಯ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ 22,362 ಜನರಿಗೆ ಕೊರೊನಾ ಸೋಂಕು ತಗಲಿರುವುದು ಪತ್ತೆಯಾಗಿದೆ.

    21 ದಿನಗಳಲ್ಲಿ 7,11,648 ಜನರನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 22,362 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಆತಂಕಕಾರಿ ವಿಚಾರವೆಂದರೆ ಸದರಿ ಪರೀಕ್ಷೆಗೆ ಒಳಪಟ್ಟವರೆಲ್ಲರೂ ತಮಗೆ ಸೋಂಕಿಲ್ಲವೆಂದು ಭಾವಿಸಿ ಮನೆಯಲ್ಲೇ ಇದ್ದರು.

    ಜೊತೆಗೆ ಯಾವುದೇ ಮೇಲ್ನೋಟದ ರೋಗ ಲಕ್ಷಣಗಳು ಇರಲಿಲ್ಲ. ಆದರೆ, ಬಿಬಿಎಂಪಿ ವೈದ್ಯರ ತಂಡ ಮನೆಗೆ ಬಂದು ತಪಾಸಣೆ ಮಾಡಿದಾಗಲೇ ಸೋಂಕು ಇರುವುದು ಧೃಡವಾಗಿದೆ.

    ಇದು ಆಘಾತಕಾರಿ ಬೆಳವಣಿಗೆಯ ಮುನ್ಸೂಚನೆಯಾಗಿದ್ದು ಒಂದು ವೇಳೆ ಹೀಗೆ ಲಕ್ಷಣಗಳಿಲ್ಲದೇ ಸೋಂಕು ಹಬ್ಬುತ್ತಾ ಹೋಗಿ ಏಕಾಏಕಿ ಹೆಚ್ಚಳವಾದಲ್ಲಿ ಮೂರನೇ ಅಲೆ ಗಂಭೀರವಾಗಬಹುದು ಎಂದು ಆತಂಕ ವ್ಯಕ್ತವಾಗಿದೆ.

    Click to comment

    Leave a Reply

    Your email address will not be published. Required fields are marked *

    International news

    WWE ಫ್ಯಾನ್ಸ್ ಗೆ ಆಘಾತ: ರೇಯ್ ಮಿಸ್ಟೀರಿಯೋ ನಿಧನ !

    Published

    on

    ಮಂಗಳೂರು/ಮೆಕ್ಸಿಕೊ: ತನ್ನದೇ ವಿಭಿನ್ನ ಶೈಲಿಯಲ್ಲಿ ಎಂಟ್ರಿ ಕೊಡುತ್ತಿದ್ದ ರೇಯ್ ಮಿಸ್ಟೀರಿಯೋ ಅಬ್ಬರ ನೋಡೋದೇ ಒಂದು ಆನಂದವಾಗಿತ್ತು. 66 ವರ್ಷದ ರೇ ಮಿಸ್ಟೀರಿಯೋ ಸೀನಿಯರ್‌ ಸಾವನ್ನಪ್ಪಿರುವ ಸುದ್ದಿ ವರದಿಯಾಗಿದೆ.

    WWE ಸ್ಟಾರ್ ಗಳ ಸಾವಿನ ಸುದ್ದಿ ಬಗ್ಗೆ ಆಗಾಗ ಸುಳ್ಳು ಸುದ್ದಿ ಕೇಳಿ ಬರುತ್ತಲೇ ಇರುತ್ತದೆ. ಆದರೆ ಈ ಬಾರಿ ರೇ ಮಿಸ್ಟೀರಿಯೋ ಅಭಿಮಾನಿಗಳು ಇದು ಕೂಡ ಸುಳ್ಳಾಗಲಿ ಎಂದು ಬಯಸಿದ್ದರು. ಆದರೆ ಈ ಬಾರಿ ಮಿಸ್ಟೀರಿಯೋ ಕುಟುಂಬಸ್ಥರು ಈ ಶಾಕಿಂಗ್ ಸುದ್ದಿಯನ್ನು ಖಚಿತಪಡಿಸಿದ್ದಾರೆ.

    ರೇಯ್ ಮಿಸ್ಟೀರಿಯೋ, 1990ರ ಮಕ್ಕಳ ಹಾಟ್ ಫೇವರೆಟ್ WWE ಸ್ಟಾರ್. ರೇಯ್ ಮಿಸ್ಟೀರಿಯೋ ಫೈಟಿಂಗ್ ಹಾಗೂ ಪಲ್ಟಿ ಹೊಡೆಯೋ ಸ್ಟೈಲ್‌ ಅಷ್ಟು ರೋಮಾಂಚನಕಾರಿ.

    ಇದನ್ನೂ ಓದಿ: ಮೆಲ್ಬೋರ್ನ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯಾಳುಗಳ ಬರೆ !

    ಸಾಮಾನ್ಯವಾಗಿ WWEನಲ್ಲಿ ದಢೂತಿ ದೇಹ. 6 ಅಡಿಗಿಂತ ಎತ್ತರದ ಕುಸ್ತಿಪಟುಗಳು ಅಖಾಡಕ್ಕೆ ಇಳಿಯುತ್ತಾರೆ. ಆದರೆ ಮಿಸ್ಟೀರಿಯೋ ಸೀನಿಯರ್ WWE ಸೂಪರ್ ಸ್ಟಾರ್‌ಗಳ ಮಧ್ಯೆ ಕುಳ್ಳನಂತೆ ಕಾಣುತ್ತಿದ್ದರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋ ಹಾಗೇ ಮಿಸ್ಟೀರಿಯೋ ಸೀನಿಯರ್‌ ಅನ್ನ ಸೋಲಿಸೋದು ಅಷ್ಟು ಸುಲಭವಲ್ಲ.

    ರೇಯ್ ಮಿಸ್ಟೀರಿಯೋ ಆಡಿದ ಒಂದೊಂದು ಮ್ಯಾಚ್‌ಗಳು ರೋಚಕ ಫಲಿತಾಂಶಗಳನ್ನೇ ಕೊಡುತ್ತಿದ್ದವು. ರೇಯ್ ಮಿಸ್ಟೀರಿಯೋ ಫೈಟಿಂಗ್ ಸ್ಟೈಲ್ ಹಾಗೂ ರೋಚಕ ಟ್ವಿಸ್ಟ್‌ಗಳು ನೋಡುಗರನ್ನ ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಿದ್ದವು.

    ಕುಸ್ತಿ ಪ್ರಪಂಚದ ಮೇಲೆ ರೇ ಮಿಸ್ಟೀರಿಯೋ ಸೀನಿಯರ್ ಅವರ ಪ್ರಭಾವವು ಮುಂದಿನ ಪೀಳಿಗೆಯೂ ಕೂಡ ನೆನಪಿಸುವಂತೆ ಮಾಡುತ್ತದೆ. ಅವರ ವಿಶಿಷ್ಟ ಶೈಲಿಯ ಫೈಟಿಂಗ್ ಗಳು, ರಿಂಗ್ ನಲ್ಲಿ ಆಡುವ ರೀತಿ, ಪಲ್ಟಿ ಹೊಡೆಯೋ ಸ್ಟೈಲ್ ಅಭಿಮಾನಿಗಳನ್ನು ರೋಮಾಂಚನಗೊಳಿಸುತ್ತಿತ್ತು. ಆದರೆ ಇವರ ನಿಧನ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಅತೀವ ದುಃಖ ಉಂಟುಮಾಡಿದೆ.

    Continue Reading

    LATEST NEWS

    ತ್ರಾಸಿ ಬೀಚ್ ನಲ್ಲಿ ಟೂರಿಸ್ಟ್ ಬೋಟ್ ಪ*ಲ್ಟಿ; ರೈಡರ್ ಕ*ಣ್ಮರೆ

    Published

    on

    ಉಡುಪಿ: ಪ್ರವಾಸಿಗನನ್ನು ಕರೆದೊಯ್ಯತಿದ್ದ ಜೆಟ್‌ಸ್ಕೀ ಬೋಟ್ ಮ*ಗುಚಿದ ಪರಿಣಾಮ ಇಬ್ಬರು ಸಮುದ್ರಕ್ಕೆ ಬಿದ್ದು, ಜೆಟ್ ಸ್ಕೀ ರೈಡರ್ ನಾ*ಪತ್ತೆಯಾದ ಘಟನೆ ಉಡುಪಿಯ ತ್ರಾಸಿ ಕಡಲ ಕಿನಾರೆಯಲ್ಲಿ ಶನಿವಾರ (ಡಿ.21) ಸಂಜೆ ಸಂಭವಿಸಿದೆ.

    ಜೆಟ್ ಸ್ಕೀ ರೈಡರ್  ರವಿದಾಸ್ (45) ನಾ*ಪತ್ತೆಯಾಗಿದ್ದು, ಮತ್ತೋರ್ವ ಬೆಂಗಳೂರಿನ ಪ್ರವಾಸಿಗನನ್ನು ರಕ್ಷಿಸಲಾಗಿದೆ.

     

    ಇದನ್ನೂ ಓದಿ :  ದಿ*ಢೀರ್ ಹ*ಚ್ಚಿಕೊಂಡ ಬೆಂ*ಕಿ; ಆರು ಅಂಗಡಿಗಳು ಅ*ಗ್ನಿಗಾ*ಹುತಿ !!

     

    ತ್ರಾಸಿ ಕಡಲ ಕಿನಾರೆಯಲ್ಲಿ ಕಾರ್ಯಾಚರಿಸುತ್ತಿರುವ ಬೆಳುಗಾ ವಾಟರ್ ಸ್ಪೋರ್ಟ್ಸ್‌ನ ಜೆಟ್‌ಸ್ಕೀ ಬೋಟ್‌ನಲ್ಲಿ ಓರ್ವ ಪ್ರವಾಸಿಗನನ್ನು ಕೂರಿಸಿಕೊಂಡು ಸಮುದ್ರದಲ್ಲಿ ವಿಹಾರ ನಡೆಸುತ್ತಿದ್ದ ಸಂದರ್ಭ ರೈಡರ್ ನಿಯಂತ್ರಣ ತಪ್ಪಿ ಜೆಟ್‌ಸ್ಕೀ ಮ*ಗುಚಿ ಬಿದ್ದಿತ್ತು. ರೈಡ್‌ಗೆ ಹೋಗುವ ಮುನ್ನ ಬೆಂಗಳೂರು ಮೂಲದ ಪ್ರವಾಸಿಗ ಪ್ರಶಾಂತ್‌ಗೆ ಲೈಫ್ ಜಾಕೆಟ್ ಹಾಕಿ ಸುರಕ್ಷತಾ ಕ್ರಮ ವಹಿಸಿದ್ದರಿಂದ ಆತನನ್ನು ರಕ್ಷಿಸಲಾಗಿದೆ. ನಾ*ಪತ್ತೆಯಾದ ರೈಡರ್ ಮುರುಡೇಶ್ವರ ಮೂಲದ ರವಿದಾಸ್ ನ ಶೋ*ಧ ಕಾರ್ಯ ನಡೆಯುತ್ತಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    kerala

    ದಿ*ಢೀರ್ ಹ*ಚ್ಚಿಕೊಂಡ ಬೆಂ*ಕಿ; ಆರು ಅಂಗಡಿಗಳು ಅ*ಗ್ನಿಗಾ*ಹುತಿ !!

    Published

    on

    ಕಾಸರಗೋಡು: ಆರು ಅಂಗಡಿಗಳಿಗೆ ದಿ*ಢೀರನೆ ಬೆಂ*ಕಿ ಹೊ*ತ್ತಿಕೊಂಡು ಉ*ರಿದ ಘಟನೆ ಶನಿವಾರ (ಡಿ.21) ತಡರಾತ್ರಿ ಪೆರ್ಲ ಬಳಿ ನಡೆದಿದೆ.

    ಪೆರ್ಲ ಪೇಟೆಯಲ್ಲಿ ಇರುವಂತಹ ಪೂಜಾ ಫ್ಯಾನ್ಸಿ , ಗೋಪಿನಾಥ್ ಪೈ ಕ್ಲೋತ್ ಸೆಂಟರ್, ಪತ್ರಿಕಾ ವಿತರಣಾ ಮಳಿಗೆ, ಪ್ರವೀಣ್ ಆಟೋ ಮೊಬೈಲ್, ಸಾದತ್ ಸ್ಟೋರ್, ಗೌತಮ್ ಕೋಲ್ಡ್ ಹೌಸ್ ಮೊದಲಾದವು ಸಂಪೂರ್ಣ ಅ*ಗ್ನಿಗಾ*ಹುತಿಯಾಗಿರುವ ಅಂಗಡಿಗಳು ಎಂದು ಗುರುತಿಸಲಾಗಿದೆ.

     

    ಇದನ್ನೂ ಒದಿ : ಮೊಹಾಲಿ ಕಟ್ಟಡ ಕು*ಸಿತ ಪ್ರಕರಣ; ಎರಡು ಸಾ*ವು, ಹಲವರು ಕಟ್ಟಡದಡಿ ಇರುವ ಶಂಕೆ !!

     

    ಮೂರು ಗಂಟೆಗೂ ಅಧಿಕ ಸಮಯದ ಬಳಿಕ ಬೆಂ*ಕಿಯನ್ನು ನಂದಿಸಲಾಯಿತು. ಶಾ*ರ್ಟ್ ಸ*ರ್ಕ್ಯೂಟ್ ಬೆಂ*ಕಿ ಅ*ನಾಹುತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ರಾತ್ರಿ 12ಗಂಟೆ ಸುಮಾರಿಗೆ ಘಟನೆ ನಡೆದಿದ್ದು , ಉಪ್ಪಳ ಕಾಸರಗೋಡಿನಿಂದ ಆಗಮಿಸಿದ ಐದು ಅ*ಗ್ನಿಶಾಮಕ ದಳದ ಸಿಬ್ಬಂದಿ‌ ಹಾಗೂ ಸ್ಥಳೀಯರ ಸಹಕಾರದಿಂದ ಬೆಂ*ಕಿಯನ್ನು ನಂದಿಸಿ ಹೆಚ್ಚಿನ ಅ*ನಾಹುತ ತಪ್ಪಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Continue Reading

    LATEST NEWS

    Trending