ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿನಿಯ ಸ್ಕೂಟಿಗೆ ಆರ್‌ಟಿಒ ನೀಡಿರುವ ನಂಬರ್ ಪ್ಲೇಟ್‌ನಿಂದ ಆಕೆ ತನ್ನ ಸ್ಕೂಟಿಯನ್ನು ಹೊರಗಡೆ ತೆಗೆದುಕೊಂಡು ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಪಶ್ಚಿಮ ದೆಹಲಿಯಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿ ಮಾನ್ಸಿ. ಆಕೆ ಫ್ಯಾಶನ್ ಡಿಸೈನಿಂಗ್ ಕಲಿಯುತ್ತಿದ್ದು, ಆಕೆಯ ತಂದೆ ಮಗಳ ಹುಟ್ಟುಹಬ್ಬದ ನಿಮಿತ್ತ ಸ್ಕೂಟಿ ಉಡುಗೊರೆ ನೀಡಿದ್ದಾರೆ.
ಆರಂಭದಲ್ಲಿ ತಂದೆಯ ಈ ಉಡುಗೊರೆಯಿಂದ ಮಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಅಲ್ಲಿನ ಆರ್‌ಟಿಒ ಅಧಿಕಾರಿಗಳು ಈ ಸ್ಕೂಟಿಗೆ ನೀಡಿರುವ ಸಂಖ್ಯೆಯಿಂದಾಗಿ ಈ ಗಾಡಿಯ ಸಹವಾಸವೇ ಬೇಡ ಅಂತ ಹೇಳುತ್ತಿದ್ದಾಳೆ.
ಇದಕ್ಕೆ ಕಾರಣ ಆಕೆಗೆ DL3SEX**** ಎಂಬ ಸಂಖ್ಯೆಯನ್ನು ಆರ್‌ಟಿಒ ನೀಡಿರುವುದು. ಸ್ಕೂಟಿ ಸಂಖ್ಯೆಯಲ್ಲಿ ಡಿಎಲ್ ಎಂಬ ಎರಡು ಇಂಗ್ಲಿಷ್ ಅಕ್ಷರಗಳ ಬಳಿಕ ಮುಂದಿನ ವರ್ಣಮಾಲೆಯಲ್ಲಿ ಸೆಕ್ಸ್ ಎಂದು ಬಂದಿದೆ.
ಹೊರಗಡೆ ಸ್ಕೂಟಿ ತೆಗೆದುಕೊಂಡು ಹೋದಾಗ ಗೆಲವರು ಈಕೆಯನ್ನು ಗೇಲಿ ಮಾಡುತ್ತಾರಂತೆ. ಹೀಗಾಗಿ ಸ್ಕೂಟಿ ಸಹವಾಹಸವೇ ಬೇಡ ಎಂಬ ನಿರ್ಧಾರಕ್ಕೆ ವಿದ್ಯಾರ್ಥಿನಿ ಬಂದಿದ್ದಾಳೆ.
ವಿದ್ಯಾರ್ಥಿನಿಯ ಕುಟುಂಬಸ್ಥರು ಈ ನಂಬರ್ ಪ್ಲೇಟ್ ಬದಲಾಯಿಸಲು ಯತ್ನಿಸಿದ್ದಾರೆ.
ಆದರೂ ಪ್ರಯೋಜನವಾಗಲಿಲ್ಲ. ಈಗ ಸಂಖ್ಯೆಯಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಸ್ವತಃ ಸಾರಿಗೆ ಇಲಾಖೆಯ ಅಧಿಕಾರಿಗಳೇ ಹೇಳಿದ್ದಾರಂತೆ.
ಸದ್ಯ ಈಕೆಯ ಸಂತಸಕ್ಕೆ ಕಾರಣವಾಗಿದ್ದ ಸ್ಕೂಟಿ ಮುಜುಗರಕ್ಕೆ ಕಾರಣವಾಗಿರುವುದು ವಿಪರ್ಯಾಸ.