Friday, July 1, 2022

ನಮ್ಮ ಕುಡ್ಲ ವಾಹಿನಿಯಲ್ಲಿ ಅದ್ಧೂರಿ ದೀಪಾವಳಿ ಸಂಭ್ರಮ;ದಾಮೋದರ ನಿಸರ್ಗರಿಗೆ ನಮ್ಮ ತುಳುವೆರ್ ಪ್ರಶಸ್ತಿ 

ನಮ್ಮ ಕುಡ್ಲ ವಾಹಿನಿಯಲ್ಲಿ ಅದ್ಧೂರಿ ದೀಪಾವಳಿ ಸಂಭ್ರಮ;ದಾಮೋದರ ನಿಸರ್ಗರಿಗೆ ನಮ್ಮ ತುಳುವೆರ್ ಪ್ರಶಸ್ತಿ 

ಮಂಗಳೂರು: ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ. ಹಬ್ಬದ ಪ್ರಯುಕ್ತ ನಮ್ಮ ಕುಡ್ಲ ವಾಹಿನಿಯು ಆಯೋಜಿಸಿದ್ದ ನಮ್ಮ ಕುಡ್ಲ ದೀಪಾವಳಿ ಸಂಭ್ರಮ 2020ರ ವಿಶೇಷ ಕಾರ್ಯಕ್ರಮ.ಈ ಸಂದರ್ಭ ನಡೆದ  ಸಭಾ ಕಾರ್ಯಕ್ರಮದಲ್ಲಿ ತುಳು ಭಾಷೆ- ಸಂಸ್ಕೃತಿಗಾಗಿ ದುಡಿದು ಸಾಧನೆ ಮಾಡಿದ ತುಳುವ ಮಹನೀಯರಿಗೆ ವಾಹಿನಿ ನೀಡುವ ನಮ್ಮ ತುಳುವೆರ್ ಪ್ರಶಸ್ತಿಯನ್ನು  ತುಳುಕೂಟ (ರಿ) ಕುಡ್ಲ ದ ಅಧ್ಯಕ್ಷರಾದ ದಾಮೋದರ ನಿಸರ್ಗ ಅವರಿಗೆ ನೀಡಿ ಗೌರವಿಸಲಾಯಿತು.ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್  ವಾದಿರಾಜ ಕೆ.ಎ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಅಗರಿ ಎಂಟರ್ ಪ್ರೈಸಸ್ ನ ಮಾಲಕರಾದ ಅಗರಿ ರಾಘವೇಂದ್ರ ರಾವ್ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿದರು.

ಎ.ಜೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಪ್ರಶಾಂತ್ ಮಾರ್ಲ ದೀಪಾವಳಿ ವಿಶೇಷ ಕಾರ್ಯಕ್ರಮದ ಪ್ರೋಮೋ ಬಿಡುಗಡೆಗೊಳಿಸಿದರು.

ಇದೇ ವೇಳೆ  ನಮ್ಮ ಕುಡ್ಲ ವಾಹಿನಿಯ ನಿರ್ದೇಶಕರಾದ ಲೀಲಾಕ್ಷ  ಕರ್ಕೇರ, ಕದ್ರಿ ನವನೀತ್ ಶೆಟ್ಟಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್. ಜಿ, ಶ್ರೇಯ ಸ್ಟೀಟ್ಸ್ ನ ಎಂ.ಡಿ ಎನ್. ರಮೇಶ್ ಮಲ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ಕುಂದಾಪುರ: ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ಕುಸಿದು ಕೃಷಿಕ ಜೀವಾಂತ್ಯ…

ಕುಂದಾಪುರ: ಭತ್ತದ ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗಲೇ ಕೃಷಿಕರೋರ್ವರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಕುಂದಾಪುರದ ಕೆರಾಡಿ ಗ್ರಾಮದ ದೀಟಿ ಎಂಬಲ್ಲಿ ನಿನ್ನೆ ನಡೆದಿದೆ.ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ನಿವಾಸಿ ಪ್ರಸ್ತುತ ಕುಂದಾಪುರ...

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸರ್ಪಸಂಸ್ಕಾರ ಸೇವೆಗೆ ರಾಜ್ಯಪಾಲರಿಂದ ಸಂಕಲ್ಪ..!

ಕಡಬ : ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ದ.ಕ ಜಿಲ್ಲೆಯ ಕಡಬ ತಾಲೂಕಿನ ಇತಿಹಾಸ ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ಧಾರೆ.ಕ್ಷೇತ್ರದಲ್ಲಿ ಶ್ರೀ ದೇವರ ದರುಶನ ಪಡೆದು ದೇವಸ್ಥಾನದಲ್ಲಿ...

ಸುಳ್ಯ: ಲೈಸೆನ್ಸ್‌ ಇಲ್ಲದೆ ಕಾರ್ಯಾಚರಿಸುತ್ತಿದ್ದ ಕ್ಲಿನಿಕ್‌ಗೆ ಬೀಗ ಜಡಿದ ಇಲಾಖೆ

ಸುಳ್ಯ: ಲೈಸೆನ್ಸ್‌ ಇಲ್ಲದೆ ಕಾರ್ಯಾಚರಿಸುತ್ತಿದ್ದ ಕ್ಲಿನಿಕ್‌ಗೆ ಆರೋಗ್ಯ ಇಲಾಖೆ ಬೀಗ ಜಡಿದು, ಕ್ಲಿನಿಕ್‌ ನಡೆಸುತ್ತಿದ್ದವರ ಮೇಲೆ ಕೇಸು ದಾಖಲಿಸಿದ ಘಟನೆ ಸುಳ್ಯದ ಕಲ್ಲುಗುಂಡಿಯಲ್ಲಿ ನಡೆದಿದೆ.ಕ್ಲಿನಿಕ್‌ನ ವಸ್ತುಗಳನ್ನು ಕೂಡಾ ಮುಟ್ಟುಗೋಲು ಹಾಕಲಾಗಿದೆ.ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ...