Sunday, November 27, 2022

ಮಲ್ಪೆಯ ಮೀನುಗಾರಿಕಾ ಬೋಟು ಸಮುದ್ರದಲ್ಲಿ ಮುಳುಗಡೆ : ಮೀನುಗಾರರ ರಕ್ಷಣೆ..!

ಮಂಗಳೂರು : ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿಯೊಂದು ಅಪಘಾತಕ್ಕೀಡಾಗಿ ಸಮುದ್ರದಲ್ಲೇ ಮುಳುಗಿದ ಘಟನೆ ವರದಿಯಾಗಿದೆ.

ಮಲ್ಪೆಯಿಂದ ಮೀನುಗಾರಿಗೆ ತೆರಳಿದ್ದ ದೋಣಿ ಪ್ರತಿಕೂಲ ಹವಮಾನದಿಂದ ಬೋಟು ತಳಭಾಗದಲ್ಲಿ ತೂತಾಗಿ ನೀರು ಒಳ ಬರಲಾರಂಭಿಸಿದೆ. ಕೂಡಲೇ ಸನಿಹದಲ್ಲಿದ್ದ ಬೋಟುಗಳಿಗೆ ರಕ್ಷಣೆಗಾಗಿ ಮೊರೆ ಹೋಗಿದ್ದಾರೆ,

ಮಂಗಳೂರಿನ ಮೋಹನ್ ಬೆಂಗ್ರೆ ಮಾಲಕತ್ವದ  ಬೋಟು ರಕ್ಷಣೆಗೆ ಧಾವಿಸಿ ಬೋಟುನಲ್ಲಿದ್ದ 10 ಜನರನ್ನು ರಕ್ಷಣೆ ಮಾಡಿ  ಮುಳುಗುತ್ತಿದ್ದ ದೋಣಿಯನ್ನು ಉಳಿಸುವ ಸಲುವಾಗಿ ತಮ್ಮ ದೋಣಿಗೆ ಕಟ್ಟಿ 30 ನಾಟಿಕಲ್ ಮೈಲ್ ದೂರ ಮಂಗಳೂರು ಬಂದರು ಕಡೆಗೆ ಎಳದುಕೊಂಡು ಬರುವ ಪ್ರಯತ್ನ ಮಾಡಿದರೂ ಯಶಸ್ಸು ಸಿಗದೇ 7 ನಾಟಿಕಲ್ ಮೈಲು ದೂರಲ್ಲಿ ಸಮುದ್ರದಲ್ಲಿ  ಮುಳುಗಡೆಯಾಗಿದೆ,

ಇದರಿಂದ ಲಕ್ಷಾಂತರ ಮೌಲ್ಯದ ಬಲೆ, ಬೋಟ್ ಸಮುದ್ರದಲ್ಲಿ ಮುಳುಗಿ ಹೋಗಿ ಅಪಾರ ನಷ್ಟ ಸಂಭವಿಸಿದೆ. ಬೋಟಿನಲ್ಲಿದವರೆಲ್ಲರೂ ಕೂಡಾ ಮುಳುಗಡೆಯಾಗಿದ್ದು ಅವರನ್ನು ಮಂಗಳೂರಿಗೆ ಕರೆತರಲಾಗಿದೆ.

ಅಪಾರ ನಷ್ಟ ಸಂಭವಿಸಿದೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಬೆಳ್ಮ ಬೋಲ್ದನ್‌ ಕುಟುಂಬಿಕರ ನಿವಾಸದಲ್ಲಿ ಕೋಲೋತ್ಸವ

ಮಂಗಳೂರು: ಮಂಗಳೂರು ನಗರ ಹೊರವಲಯದ ದೇರಳಕಟ್ಟೆ ಅಡ್ಕರಮಜಲು ಬೆಳ್ಮದ ಬೋಲ್ದನ್‌ ಕುಟುಂಬಿಕರ ತರವಾಡಿನ ಮನೆಯಲ್ಲಿ ಪಂಜುರ್ಲಿ, ಕಲ್ಲುರ್ಟಿ , ಗುಳಿಗ ದೈವಗಳ ನರ್ತನ ಸೇವೆ ವೈಭವದಿಂದ ಜರುಗಿತು.ನವೆಂಬರ್‌ 24ರಂದು ಬೆಳಿಗ್ಗೆ ತರವಾಡು ಮನೆಯಲ್ಲಿ...

ಸುಳ್ಯ: ಸಚಿವ ಅಂಗಾರ ಅವರಿಗೆ ಡೆಂಗ್ಯೂ ದೃಢ-ಆಸ್ಪತ್ರೆಗೆ ದಾಖಲು

ಸುಳ್ಯ: ಶಾಸಕ, ಬಂದರು, ಮೀನುಗಾರಿಕೆ ಹಾಗೂ ಒಳ ನಾಡು ಜಲ ಸಾರಿಗೆ ಸಚಿವ ಎಸ್‌. ಅಂಗಾರ ಅವರಿಗೆ ಡೆಂಗ್ಯೂ ದೃಢಪಟ್ಟ ಕಾರಣ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.  ಈ ಹಿನ್ನೆಲೆ ಅವರು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಾಗಿರುವುದಾಗಿ...

ಇನ್ಮುಂದೆ ಬಾಡಿಗೆ ಮನೆ ಪಡೆಯಲು ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಅಗತ್ಯ-ಮೈಸೂರು ನಗರ ಪೊಲೀಸ್ ಕಮಿಷನರ್ ಹೊಸ ಸುತ್ತೋಲೆ

ಮಂಗಳೂರು: ಮಂಗಳೂರಿನಲ್ಲಿ ಬಾಂಬ್‌ ಬ್ಲಾಸ್ಟ್ ಆಗಿರುವ ಘಟನೆ ಬೆನ್ನಲ್ಲೇ ಆರೋಪಿ ವಾಸವಾಗಿದ್ದ ಮೈಸೂರಿನ ಬಾಡಿಗೆ ಮನೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈ ನಡುವೆ ಬಾಡಿಗೆ ಮನೆ ನೀಡುವ ಮಾಲಕರು ಯಾರೂ ಗುರುತು ಪರಿಚಯ...