ಒಂದಂಕಿಗಿಳಿದ ಕೊರೋನಾ ವೈರಸ್: ಚೀನಾದ ಎಲ್ಲೆಡೆ ಹರ್ಷಾಚರಣೆ
ಬೀಜಿಂಗ್: ಮಾರಣಂತಿಕ ಕೋರೋನಾ ಆರಂಭವಾಗಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಚೀನಾದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಅಲ್ಲಿನ ಜನತೆ ನಿಟ್ಟುಸಿರು ಬಿಟ್ಟಿದೆ.
ಕೊರೋನ ವೈರಸ್ 2019ರಲ್ಲಿ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು, ನೂರಾರು ಜನರನ್ನು ಬಲಿ ಪಡೆದಂತಹ ಚೀನಾದ ವೂಹಾನ್ ನಗರದಲ್ಲಿ ಸೋಂಕು ಪೀಡಿತರ ಸಂಖ್ಯೆ ಈ ಒಂದಂಕಿಗಿಳಿದಿದೆ. ಶುಕ್ರವಾರ ಕೇವಲ 5 ಹೊಸ ಪ್ರಕರಣಗಳಷ್ಟೇ ವರದಿಯಾಗಿದೆ. ಸತತ ಎರಡನೆ ದಿನವೂ ವುಹಾನ್‌ನಲ್ಲ್ಲಿ ಸೋಂಕು ಪೀಡಿತರ ಸಂಖ್ಯೆ ಹತ್ತಕ್ಕಿಂತ ಕೆಳಗೆ ಇಳಿದಿದೆ.
ಗುರುವಾರ ಕೇವಲ 8 ಮಂದಿಗೆ ಹೊಸದಾಗಿ ಸೋಂಕು ತಗಲಿತ್ತು. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ಬಿಡುಗಡೆಗೊಳಿಸಿರುವ ಅಂಕಿಅಂಶಗಳ ಪ್ರಕಾರ ಸತತ ಎಂಟು ದಿನಗಳಿಂದ ವೂಹಾನ್‌ನಗರವನ್ನು ಹೊರತುಪಡಿಸಿ ಚೀನಾದ ಹುಬೈ ಪ್ರಾಂತದಲ್ಲಿ ಸತತ ಎಂಟು ದಿನಗಳಿಂದ ಒಂದೇ ಒಂದು ಹೊಸ ಸೋಂಕಿನ ಪ್ರಕರಣ ವರದಿಯಾಗಿಲ್ಲ.