Connect with us

BANTWAL

ಡಿ. 8ರಂದು ಯಕ್ಷಾವಾಸ್ಯಂ ಕಾರಿಂಜ ಚತುರ್ಥ ವಾರ್ಷಿಕೋತ್ಸವ

Published

on

ಬಂಟ್ವಾಳ: ಯಕ್ಷಾವಾಸ್ಯಂ ಕಾರಿಂಜ ಚತುರ್ಥ ವಾರ್ಷಿಕೋತ್ಸವ ಡಿಸೆಂಬರ್ 8ರಂದು ಕಾಡಬೆಟ್ಟಿನ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಅಪರಾಹ್ನ 2 ಗಂಟೆಗೆ ನಡೆಯಲಿದೆ ಎಂದು ಸಂಚಾಲಕಿ ಸಾಯಿಸುಮಾ ನಾವಡ ಹೇಳಿದ್ದಾರೆ.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 6:30ರ ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಯಕ್ಷಾವಾಸ್ಯಮ್ ಪ್ರಶಸ್ತಿಯನ್ನು ಹಿರಿಯ ಕಲಾವಿದರಾದ ಹರಿನಾರಾಯಣ ಬೈಪಡಿತ್ತಾಯ, ಲೀಲಾವತಿ ಬೈಪಡಿತ್ತಾಯ ದಂಪತಿಗೆ ನೀಡಿ ಗೌರವಿಸಲಾಗುವುದು. ಅಭಿನಂದನಾ ನುಡಿಗಳನ್ನು ಕಲಾವಿದ ಚಂದ್ರಶೇಖರ ಭಟ್ ಕೊಂಕಣಾಜೆ ಆಡಲಿದ್ದಾರೆ ಎಂದರು.

ಅಪರಾಹ್ನ 2 ಗಂಟೆಗೆ ಪಿ.ಜಿನರಾಜ ಆರಿಗ ದೀಪೋಜ್ವಲನ ಮಾಡಲಿದ್ದಾರೆ. ಬಳಿಕ ಯಕ್ಷಗಾನದ ಪೂರ್ವರಂಗವನ್ನು ಕೇಂದ್ರದ ವಿದ್ಯಾರ್ಥಿಗಳು ಶ್ರೀನಿವಾಸ ಬಳ್ಳಮಂಜ ನಿರ್ದೇಶನದಲ್ಲಿ ಮಾಡಲಿದ್ದಾರೆ. ಅದಾದ ನಂತರ, ಮಕ್ಕಳ ಯಕ್ಷಗಾನ ನರಕಾಸುರ, ಮೈಂದ ದ್ವಿವಿದ ಶ್ರೀನಿವಾಸ ಬಳ್ಳಮಂಜ ಮತ್ತು ಸಾಯಿಸುಮಾ ಎಂ. ನಾವಡ ಪ್ರಸ್ತುತಿಯಲ್ಲಿ ವಿದ್ಯಾರ್ಥಿಗಳು ಅಭಿನಯಿಸಲಿದ್ದಾರೆ. ಸಂಜೆ 6:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಹಿಸಲಿದ್ದಾರೆ ಎಂದು ತಿಳಿಸಿದರು.

ಅಭ್ಯಾಗತರಾಗಿ ಮಾಜಿ ಸಚಿವ ಬಿ.ರಮಾನಾಥ ರೈ, ಕಾರಿಂಜೇಶ್ವರ ದೇವಸ್ಥಾನ ವ್ಯವಸ್ಥಾಪಕ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪಪ್ರಾಂಶುಪಾಲರಾದ ಉದಯ ಕುಮಾರ್ ಜೈನ್, ಜೇಸಿ ಮಡಂತ್ಯಾರು ನಿಕಟಪೂರ್ವ ಅಧ್ಯಕ್ಷ ಅಶೋಕ್ ಗುಂಡಿಯಲ್ಕೆ, ಆಲಂಪುರಿಗುತ್ತು ಶ್ರುತಾಂಜನ್ ಜೈನ್, ಶಾರದಾಂಬಾ ಭಜನಾ ಮಂದಿರ ಕಾಡಬೆಟ್ಟು ಗೌರವಾಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾವಳಪಡೂರು ಗ್ರಾಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ, ಕಾವಳಮುಡೂರು ಗ್ರಾಪಂ ಅಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ, ಕಾವಳಪಡೂರು ಗ್ರಾಪಂ ಸದಸ್ಯ ವೀರೇಂದ್ರ ವಗ್ಗ ಭಾಗವಹಿಸುವರು. ವಿದ್ಯಾರ್ಥಿ ಪುರಸ್ಕಾರ, ಬಳಿಕ ಕಿತ್ತೂರು ರಾಣಿ ಚೆನ್ನಪ್ಪ ಪ್ರಶಸ್ತಿ ಪುರಸ್ಕೃತೆ ಪೂರ್ಣಿಮಾ ಯತೀಶ್ ರೈ ನಿರ್ದೇಶನದಲ್ಲಿ ವೀರಮಣಿ ಕಾಳಗ ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಯಕ್ಷಕೂಟ ಮಧ್ವ ಸಂಚಾಲಕ ಭಾಸ್ಕರ ಶೆಟ್ಟಿ ಮಧ್ವ, ಯಕ್ಷಾವಾಸ್ಯಂ ಸದಸ್ಯರಾದ ಸುಮನಾ ಯಳಚಿತ್ತಾಯ, ಪೋಷಕರಾದ ರತ್ನಾ ತುಕಾರಾಮ ಗೌಡ ಉಪಸ್ಥಿತರಿದ್ದರು.

BANTWAL

ಜೋಕಾಲಿಯ ಹಗ್ಗ ತಂದಿತು ಮಗುವಿನ ಪ್ರಾ*ಣಕ್ಕೆ ಕು*ತ್ತು !!

Published

on

ವಿಟ್ಲ : ಜೋಕಾಲಿಯಲ್ಲಿ ಆಟವಾಡುತ್ತಿದ್ದ ಸಂದರ್ಭ ಜೋಕಾಲಿ ಹಗ್ಗ ಕು*ತ್ತಿಗೆಗೆ ಸು*ತ್ತಿ ಬಾಲಕಿಯೋರ್ವಳು ಮೃ*ತಪಟ್ಟ ಹೃ*ದಯವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಮಡಲ ಎಂಬಲ್ಲಿ ಭಾನುವಾರ (ಡಿ.8) ಸಂಜೆ ನಡೆದಿದೆ.

ಬುಡೋಳಿ ಮಡಲ ನಿವಾಸಿ ಕಿಶೋರ್‌ ಅವರ ಪುತ್ರಿ ತೀರ್ಥಶ್ರೀ (8) ಜೋಕಾಲಿ ಆಟದಿಂದ ಸಾ*ವಿಗೀಡಾದ ಬಾಲಕಿ ಎಂದು ಗುರುತಿಸಲಾಗಿದೆ.

ಮೂರನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ಶೇರಾ ಶಾಲೆಯಲ್ಲಿ ಕಲಿಯುತ್ತಿದ್ದಳು. ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕು*ತ್ತಿಗೆಗೆ ಹ*ಗ್ಗ ಸಿಲುಕಿ ಈ ದು*ರ್ಘಟನೆ ಸಂಭವಿಸಿದೆ.

ಕೂಡಲೇ ಘಟನಾ ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

BANTWAL

ಎಬಿವಿಪಿ ಬಂಟ್ವಾಳ ಘಟಕದಿಂದ ಸಾಮಾಜಿಕ ಸಾಮರಸ್ಯ ದಿನಾಚರಣೆ

Published

on

ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ತಾಲೂಕಿನ ವಿವಿದೆಡೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುಣ್ಯ ತಿಥಿ ದಿನವಾದ ಡಿಸೆಂಬರ್ 6 ರಂದು ಸಾಮಾಜಿಕ ಸಾಮರಸ್ಯ ದಿನವನ್ನು ಆಚರಿಸಲಾಯಿತು.

ಎಬಿವಿಪಿ ಬಂಟ್ವಾಳ ನಗರ ತಂಡದ ಪ್ರಮುಖರು ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು ಮತ್ತು ಸಿದ್ಧಕಟ್ಟೆ ನಗರ ಘಟಕ ಕಾರ್ಯಕರ್ತರು ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲೂಕು ಸಹ ಸಂಚಾಲಕ ಮಹೇಶ್, ಬಂಟ್ವಾಳ ನಗರ ಕಾರ್ಯದರ್ಶಿ ಗೌತಮ್, ಸಿದ್ಧಕಟ್ಟೆ ನಗರ ಕಾರ್ಯದರ್ಶಿ ರಂಜಿತ್ ಹಾಗೂ ಶ್ರೇಯಸ್, ಲಿಖಿತ್, ಅಕ್ಷಿತ್, ಗುರುರಾಜ್, ವಿಘ್ನೇಶ್, ಮನೀಶ್, ಹರ್ಷಿತ್, ಆದಿತ್ಯ ಉಪಸ್ಥಿತರಿದ್ದರು.

Continue Reading

BANTWAL

ಬಂಟ್ವಾಳ: ಕೆ.ಎಸ್. ಆರ್.ಟಿ.ಬಸ್ ನಿರ್ವಾಹಕನ ಮೇಲೆ ಪ್ರಯಾಣಿಕನಿಂದ ಹಲ್ಲೆ

Published

on

ಬಂಟ್ವಾಳ: ಸರಕಾರಿ ಬಸ್ ನ ನಿರ್ವಾಹಕನಿಗೆ ಅಪರಿಚಿತ ಪ್ರಯಾಣಿಕನೊರ್ವ ಹಲ್ಲೆ ನಡೆಸಿದ್ದಾನೆ ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆ.ಎಸ್. ಆರ್.ಟಿ.ಬಸ್ ನಿರ್ವಾಹಕ ದೇವಾನಂದ ಎಂಬವರಿಗೆ ಫರಂಗಿಪೇಟೆಯಲ್ಲಿ ಅಪರಿಚಿತ ಪ್ರಯಾಣಿಕ ಹಲ್ಲೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.ಪುತ್ತೂರಿನಿಂದ ಮಂಗಳೂರಿನ ಕಡೆಗೆ ಹೋಗುವ ವೇಳೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ಬಸ್ ಗೆ ಹತ್ತಿದ ಅಪರಿಚಿತ ಪ್ರಯಾಣಿಕನೋರ್ವ ನಿರ್ವಾಹಕನಿಗೆ ಅವ್ಯಾಚ್ಚ ಶಬ್ದಗಳಿಂದ ಬೈದು ಬಳಿಕ ಹಲ್ಲೆ ‌ನಡೆಸಿದ್ದಾನೆ.

ಬಸ್ಸ್ ನಿಲ್ಲಿಸದೆ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಆತ ನಿರ್ವಾಹಕನಿಗೆ ಹಲ್ಲೆ ನಡೆಸಿರುವ ಬಗ್ಗೆ ಯೂ ದೂರಿನಲ್ಲಿ ಉಲ್ಲೇಖವಾಗಿದೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

Trending

Exit mobile version