ವಿಟ್ಲ: ಕೃಷಿ ಫಾರ್ಮ್‌ಹೌಸ್‌ನ ಕೆರೆಗೆ ಬಿದ್ದು ವೈದ್ಯೆ ಸಾವು

ವಿಟ್ಲ: ಇಲ್ಲಿನ ಅಡ್ಯನಡ್ಕದ ಫಾರ್ಮ್‌ವೊಂದಕ್ಕೆ ಅತಿಥಿಯಾಗಿ ಬಂದ ಮಹಿಳೆಯೊಬ್ಬಳು ಏಕಾಂಗಿಯಾಗಿ ಸಾಹಸಕ್ರೀಡೆಗಳನ್ನು ಆಡುವ ಕೆರೆಗೆ ಬಿದ್ದು, ಗಂಭೀರ ಸ್ಥಿತಿಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ. ಮಂಗಳೂರು ಮೂಲದ ವೈದ್ಯೆ ನೇಝೀ ಫೆರ್ನಾಂಡೀಸ್ (32) ಸಾವನ್ನಪ್ಪಿದ್ದಾರೆ. ಎರಡು ದಿನಗಳ ಹಿಂದೆ ಫಾರ್ಮ್‌ಗೆ ಆಗಮಿಸಿದ ಈಕೆ ಕೆರೆಯ ಸಮೀಪಕ್ಕೆ ಒಂಟಿಯಾಗಿ ಹೋಗಿದ್ದಾರೆನ್ನಲಾಗಿದೆ. ತುಂಬಾ ಸಮಯವಾದರೂ ಬಾರದ ಹಿನ್ನೆಲೆ ಕೆರೆಯಲ್ಲಿ ಹುಡುಕಾಡಿ ನೀರಿನಡಿಗೆ ಹೋಗಿದ್ದ ಈಕೆಯ ದೇಹವನ್ನು ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು. ವಿಟ್ಲ ಪೊಲೀಸ್ … Continue reading ವಿಟ್ಲ: ಕೃಷಿ ಫಾರ್ಮ್‌ಹೌಸ್‌ನ ಕೆರೆಗೆ ಬಿದ್ದು ವೈದ್ಯೆ ಸಾವು