ಮಂಗಳೂರು: ನಗರದ ಮುಕ್ಕ ಬೀಚ್ ಬಳಿ ಸುಮಾರು ಅಪರಿಚಿತ ವ್ಯಕ್ತಿಯೊಬ್ಬರು (30) ಅಸ್ವಸ್ಥವಾಗಿ ಬಿದ್ದಿದ್ದು, ಚಿಕಿತ್ಸೆಗಾಗಿ ಅವನನ್ನು ಸಾರ್ವಜನಿಕರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆ ವ್ಯಕ್ತಿಯು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ ಇಂತಿದೆ:
ಎಣ್ಣೆ ಕಪ್ಪು ಮೈಬಣ್ಣ, ಧೃಡಕಾಯ ಶರೀರ, ಗುಂಗುರು ಗಡ್ಡ ಹೊಂದಿರುವ ಇವರು ನೀಲಿ ಬಣ್ಣದ ಟೀ ಶರ್ಟ್ ಮತ್ತು ನೀಲಿ ಪ್ಯಾಂಟ್ ಧರಿಸಿರುತ್ತಾನೆ.
ಈ ವ್ಯಕ್ತಿಯ ಕುಟುಂಬಸ್ಥರು ಹಾಗೂ ಪರಿಚಯಸ್ಥರು ಇದ್ದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ದೂ.ಸಂ:0824-2220540, ಮೊ.ಸಂಖ್ಯೆ: 9480805360, 9480802345, ಕಂಟ್ರೋಲ್ ರೂಂ.ನಂ:0824-2220800
ಅಥವಾ ಸುರತ್ಕಲ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸುರತ್ಕಲ್ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.