Home ಪ್ರಮುಖ ಸುದ್ದಿ ಪರಲೋಕ ಸೇರಿದವರಿಗೆ ಸಾರಾಯಿ ಇಡಲೇ ಬೇಕಾ..? ದಯಾನಂದ್ ಕತ್ತಲಸಾರ್ ಪ್ರಶ್ನೆ

ಪರಲೋಕ ಸೇರಿದವರಿಗೆ ಸಾರಾಯಿ ಇಡಲೇ ಬೇಕಾ..? ದಯಾನಂದ್ ಕತ್ತಲಸಾರ್ ಪ್ರಶ್ನೆ

ಪರಲೋಕ ಸೇರಿದವರಿಗೆ ಸಾರಾಯಿ ಇಡಲೇ ಬೇಕಾ..? ದಯಾನಂದ್ ಕತ್ತಲಸಾರ್ ಪ್ರಶ್ನೆ

ಮಂಗಳೂರು: ನಮ್ಮದು ತುಳುನಾಡು. ಇಲ್ಲಿ ಧೈವಾರಾಧನೆ, ನಾಗಾರಾಧನೆ ಸೇರಿದಂತೆ ಅನೇಕ ಆಚರಣೆಗಳು ನಡೆಯುತ್ತದೆ. ಇದಕ್ಕೆ ಹಿರಿಯರ ಆರಾಧನೆ ಕೂಡ ಹೊರತಾಗಿಲ್ಲ.

ಹಿರಿಯರ ಆರಾಧನೆ ಅಂದ್ರೆ, ಸತ್ತು ಪರಲೋಕ ಸೇರಿದ ನಮ್ಮ ಹಿರಿಯರಿಗೆ ಮನೆಯಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸಿ ಬಡಿಸುವ ಕ್ರಮವಿದೆ. ಈ ಸಂದರ್ಭದಲ್ಲಿ ಸಾರಾಯಿ, ಮದ್ಯ ಇಡುವ ಸಂಪ್ರದಾಯವಿದೆ. ಅದ್ರಲ್ಲೂ ನಮ್ಮ ತುಳುನಾಡಿನಲ್ಲಿ ಇದು ಅತ್ಯಂತ ಹೆಚ್ಚು ಆಚರಣೆಯಲ್ಲಿದೆ. ಆದ್ರೆ ಇದೀಗ ಹಿರಿಯರಿಗೆ ಸಾರಾಯಿ ಇಡುವುದು ಸರಿಯಲ್ಲ ಎಂಬ ತರ್ಕವನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಕತ್ತಲಸಾರ್ ಅವರು ಮಂಡಿಸಿದ್ದಾರೆ.

ಹೌದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಿರಿಯರಿಗೆ ಬಡಿಸುವ ಕ್ರಮದಲ್ಲಿ ಸಾರಾಯಿ ಇಡಬೇಡಿ. ಯಾಕೆಂದರೆ ಅವರು ಬದುಕಿರುವಾಗ ಮದ್ಯಪಾನ ಮಾಡಿ ಪ್ರಾಣ ಕಳೆದುಕೊಂಡಿರುತ್ತಾರೆ. ಹಾಗಾಗಿ ಪರಲೋಕ ಸೇರಿದ ಮೇಲಾದ್ರೂ ಮದ್ಯ ಸೇವಿಸದೇ ಆರಾಮವಾಗಿ ಇರಲಿ, ಅಂತ ಜನರಿಗಿರೋ ಮೂಢನಂಬಿಕೆಯನ್ನು ಹೋಗಲಾಡಿಸಿದ್ದಾರೆ.

ಮನುಷ್ಯ ಹುಟ್ಟುವಾಗ ತಾಯಿ ಹಾಲು ಕುಡಿಯುತ್ತಾ, ಬೆಳೆಯುತ್ತಾ ಗೋವಿನ ಹಾಲು ಕುಡಿಯುತ್ತಾನೆ. ಆದ್ರೆ ಬುದ್ದಿ ಬೆಳೆದ ಮೇಲೆ ದುಶ್ಚಟಗಳಿಗೆ ಬಲಿಯಾಗಿ ಸಾಯುತ್ತಾನೆ. ಅದೇ ಆತ ಜೀವಂತವಿರುವಾಗ ಕುಡಿಯುತ್ತಿದ್ದ ಅಂತ ಸತ್ತ ಮೇಲೆ ಸಾರಾಯಿ ಇಟ್ರೆ ಏನು ಪ್ರಯೋಜನವಿಲ್ಲ. ಹಾಗಾಗಿ ಈ ತಪ್ಪು ಕಲ್ಪನೆಯನ್ನು ನಿಮ್ಮ ಮುಂಬರುವ ಪೀಳಿಗೆಯಿಂದ ಕೂಡ ಹೋಗಲಾಡಿಸಿ ಅಂತ ಕತ್ತಲಸಾರ್ ಕಳಕಳಿಯ ಮನವಿ ಮಾಡಿಕೊಂಡರು.

- Advertisment -

RECENT NEWS

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ ಬಂಟ್ವಾಳ : ಲಾಕ್ ಡೌನ್ ಹೆಸರಿನಲ್ಲಿ ಪೆರುವಾಯಿ ವ್ಯವಸಾಯ ಸಹಕಾರಿ ಸಂಘದ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ...

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!? ಮಂಗಳೂರು : ಕೇರಳ ಗಡಿ ತೆರವಿನಿಂದ ಮಂಗಳೂರಿಗರಿಗೆ ಮತ್ತೆ ಆತಂಕ ಶುರುವಾಗಿದೆ. ಕಾಸರಗೋಡಿನಿಂದ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯಲ್ಲಿ...

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್ ನವದೆಹಲಿ : ಇನ್ನು ಮುಂದೆ ಕೊರೋನಾ ಸೋಂಕಿಗೆ ಸಂಬಂಧಿಸಿದ ಪರೀಕ್ಷೆಗಳು ಸಂಪೂರ್ಣ ಉಚಿತ. ಹೀಗೆಂತಾ ಸರ್ವೋಚ್ಚಾ ನ್ಯಾಯಾಲಯದ ಮಹತ್ವದ...

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..!

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..! ಬಂಟ್ವಾಳ : ಲಾಕ್ ಡೌನ್ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳರ ಕೈಚಳ ಮುಂದುವರೆದಿದೆ.ಬಂಟ್ವಾಳದ ಚರ್ಚ್ ಒಂದಕ್ಕೆ ನುಗ್ಗಿದ...