ದಾವಣಗೆರೆ: ಕಾರೊಂದು ಲಾರಿ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಕುಂದಾಪುರ ಛಾಯಾಗ್ರಾಹಕ ಮತ್ತು ಎಸ್.ಕೆ.ಪಿ.ಎ ಜಿಲ್ಲಾ ಸಲಹಾ ಸಮಿತಿಯ ಸಂಚಾಲಕರಾದ ಅಶೋಕ್ ಕುಮಾರ್ ಶೆಟ್ಟಿ ಅವರು ಸಮಾರಂಭ ಮುಗಿಸಿಕೊಂಡು ಬರುವಾಗ ದಾವಣಗೆರೆಯಲ್ಲಿ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ.
ಈ ವೇಳೆ ಅಶೋಕ್ ಕುಮಾರ್ ಅವರ ಮಗ ಕಾರು ಚಲಾಯಿಸುತ್ತಿದ್ದರು. ಕಾರು ಹೊಡೆದ ರಭಸಕ್ಕೆ ಅಶೋಕ್ ಕುಮಾರ್ ಮತ್ತು ಮಗನಿಗೆ ಗಂಭೀರ ಗಾಯವಾಗಿದೆ. ದಾವಣಗೆರೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.