Connect with us

LATEST NEWS

ಬಾಯ್ ಫ್ರೆಂಡ್ ಜೊತೆ ಮಾತನಾಡಲು ತಾಯಿಗೆ 3 ತಿಂಗಳು ನಿದ್ರೆ ಮಾತ್ರೆ ಹಾಕಿದ ಅಪ್ರಾಪ್ತ ಮಗಳು.!

Published

on

ಲಕ್ನೋ : ಲಕ್ನೋದ ಕೃಷ್ಣನಗರದಲ್ಲಿರುವ 15 ವರ್ಷದ ಬಾಲಕಿ ಬಾಯ್ ಫ್ರೆಂಡ್ ಜೊತೆಗೆ ಮಾತನಾಡಲು ತನ್ನ ತಾಯಿಗೆ ಮೂರು ತಿಂಗಳ ಕಾಲ ತನ್ನ ಆಹಾರಕ್ಕೆ ನಿದ್ರೆ ಮಾತ್ರೆಗಳೊಂದಿಗೆ ಮಾದಕ ದ್ರವ್ಯವನ್ನು ನೀಡಿರುವ ಘಟನೆ ನಡೆದಿದೆ.

ಹೌದು, 15 ವರ್ಷದ ಅಪ್ತಾಪ್ತೆ ಮಗಳು ತಡರಾತ್ರಿವರೆಗೆ ಗೆಳೆಯ ಜೊತೆಗೆ ಮಾತನಾಡಲು ತಾಯಿ ಅಡ್ಡಿಯಾಗುತ್ತಾಳೆ ಅಂತ ಸತತ 3 ತಿಂಗಳಿನಿಂದ ಆಹಾರದಲ್ಲಿ ನಿದ್ರೆ ಮಾತ್ರೆ ಬೆರೆಸಿ ತಾಯಿಗೆ ನೀಡಿದ್ದಾಳೆ. ತಾಯಿಯ ಆರೋಗ್ಯ ಹದಗೆಟ್ಟ ನಂತರ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದಾಗ ತಾಯಿಯ ದೇಹದಲ್ಲಿ ನಿದ್ರೆ ಮಾತ್ರೆಯ ಅಂಶ ಪತ್ತೆಯಾಗಿದೆ.

ತನ್ನ ತಾಯಿ ಇನ್‌ಸ್ಟಾಗ್ರಾಮ್‌ನಲ್ಲಿ ಹುಡುಗನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಾಗ ಮತ್ತು ಅವಳ ಮೊಬೈಲ್ ಫೋನ್ ಬಳಕೆಯನ್ನು ನಿರ್ಬಂಧಿಸಿದಾಗ, ಅವಳು ತನ್ನ ತಾಯಿಗೆ ನಿದ್ರೆ ಮಾತ್ರೆಗಳನ್ನು ನೀಡಲು ಪ್ರಾರಂಭಿಸಿದೆ ಎಂದು ಬಾಲಕಿ ವಿವರಿಸಿದ್ದಾಳೆ. ಅವಳು ತನ್ನ ತಾಯಿಯ ಆಹಾರಕ್ಕೆ ಪ್ರತಿದಿನ ಮೂರರಿಂದ ನಾಲ್ಕು ಮಾತ್ರೆಗಳನ್ನು ಹಾಕಿರುತ್ತಾಳೆ. ಇದು ಆಳವಾದ ನಿದ್ರೆಯನ್ನು ಉಂಟುಮಾಡುತ್ತದೆ. ಹಾಗೆಯೇ ಇದರಿಂದ ದೌರ್ಬಲ್ಯ, ಆಯಾಸ ಮತ್ತು ಅತಿಯಾದ ನಿದ್ರೆಯಿಂದ ಮಹಿಳೆಯ ಆರೋಗ್ಯವು ನಿರಂತರವಾಗಿ ಹದಗೆಟ್ಟಾಗ, ಕುಟುಂಬದವರು ವೈದ್ಯರನ್ನು ಸಂಪರ್ಕಿಸಿದರು. ಮನೆಯವರು ಬಾಲಕಿಯನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ.

LATEST NEWS

ಛತ್ತೀಸ್‌ಗಢದಲ್ಲಿ ಎನ್*ಕೌಂಟರ್; ನಾಲ್ವರು ನಕ್ಸಲರ ಹ*ತ್ಯೆ, ಓರ್ವ ಪೊಲೀಸ್ ಸಿಬ್ಬಂದಿ ಸಾ*ವು

Published

on

ಮಂಗಳೂರು/ದಂತೇವಾಡ : ಛತ್ತೀಸಗಢದ ಬಸ್ತಾರ್ ಪ್ರದೇಶದಲ್ಲಿ ನಕ್ಸಲ್ ಎನ್ಕೌಂ*ಟರ್ ನಡೆದಿದೆ.  ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂ*ಡಿನ ಕಾಳಗದಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ನಾಲ್ಕು ಮಂದಿ ನಕ್ಸಲರು ಸಾ*ವನ್ನಪ್ಪಿದ್ದಾರೆ. ಸನ್ನು ಕರಮ್ ಮೃ*ತ ಪೊಲೀಸ್ ಸಿಬ್ಬಂದಿ.

ಛತ್ತೀಸಗಢದ ಬಸ್ತಾರ್‌ ಪ್ರದೇಶದ ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ದಕ್ಷಿಣ ಅಬುಜ್‌ಮದ್‌ ಅರಣ್ಯದಲ್ಲಿ ಶನಿವಾರ(ಜ.4) ಸಂಜೆ ಭದ್ರತಾ ಸಿಬ್ಬಂದಿ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಕ್ಸಲರೊಂದಿಗೆ ಗುಂ*ಡಿನ ಚಕಮಕಿ ನಡೆಯಿತು. ಈ ವೇಳೆ ನಾಲ್ವರು ನಕ್ಸಲರು ಹ*ತ್ಯೆಯಾಗಿದ್ದು, ಒಬ್ಬ ಪೊಲೀಸ್‌ ಹೆಡ್‌ ಕಾನ್‌ಸ್ಟೇಬಲ್ ಮೃ*ತಪಟ್ಟಿರುವ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ : ಗುಜರಾತ್ ನಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಪತನ

ಘಟನಾ ಸ್ಥಳದಿಂದ ನಾಲ್ವರು ನಕ್ಸಲರ ಮೃ*ತದೇಹಗಳು, ಎಕೆ-47 ರೈಫಲ್ ಮತ್ತು ಸ್ವಯಂ ಲೋಡಿಂಗ್ ರೈಫಲ್ (SLR) ಸೇರಿದಂತೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

 

Continue Reading

LATEST NEWS

ಟೆಕ್ಸಾಸ್ ಮಾಲ್ ನಲ್ಲಿ ಬೆಂಕಿ: 500ಕ್ಕೂ ಹೆಚ್ಚು ಪ್ರಾಣಿಗಳ ಸಾವು

Published

on

ಟೆಕ್ಸಾಸ್: ಡಲ್ಲಾಸ್ ಶಾಪಿಂಗ್ ಮಾಲ್ನಲ್ಲಿ ಸಂಭವಿಸಿದ ಬೆಂಕಿಯಲ್ಲಿ 500 ಕ್ಕೂ ಹೆಚ್ಚು ಪ್ರಾಣಿಗಳು, ಹೆಚ್ಚಾಗಿ ಸಣ್ಣ ಪಕ್ಷಿಗಳು ಸಾವನ್ನಪ್ಪಿವೆ.

ವರದಿಗಳ ಪ್ರಕಾರ, ಬೆಂಕಿಯಿಂದ ಯಾವುದೇ ಮನುಷ್ಯನಿಗೆ ಗಾಯಗಳಾಗಿಲ್ಲ ಮತ್ತು ಬೆಂಕಿಯ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪ್ಲಾಜಾ ಲ್ಯಾಟಿನಾ ಶಾಪಿಂಗ್ ಸೆಂಟರ್ನ ಸಾಕುಪ್ರಾಣಿಗಳ ಅಂಗಡಿಯಲ್ಲಿ 579 ಪ್ರಾಣಿಗಳಿದ್ದವು. ಹೆಚ್ಚಾಗಿ ಸಣ್ಣ ಪಕ್ಷಿಗಳು ಹೊಗೆ ಉಸಿರಾಟದಿಂದಾಗಿ ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವ ಹೊತ್ತಿಗೆ ಕಟ್ಟಡವು ಬೆಂಕಿಗೆ ಆಹುತಿಯಾಗಿದ್ದು, ದಟ್ಟವಾದ ಹೊಗೆ ಗೋಚರಿಸುತ್ತಿದೆ ಎಂದು ಡಲ್ಲಾಸ್ ಅಗ್ನಿಶಾಮಕ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಡಲ್ಲಾಸ್ ಅಗ್ನಿಶಾಮಕ ದಳದ ವಕ್ತಾರ ಜೇಸನ್ ಇವಾನ್ಸ್, “ಸಾಕುಪ್ರಾಣಿಗಳ ಅಂಗಡಿಗೆ ಬೆಂಕಿ ತಲುಪದಿದ್ದರೂ, ಹೆಚ್ಚಿನ ಪ್ರಮಾಣದ ಹೊಗೆ ಪ್ರವೇಶಿಸಿತು. ಡಿಎಫ್ಆರ್ ಸಿಬ್ಬಂದಿ ಶೋಧ ಮತ್ತು ರಕ್ಷಣೆಗೆ ಪ್ರಯತ್ನಿಸಿದರೆ, ದುರದೃಷ್ಟವಶಾತ್ ಅಂಗಡಿಯಲ್ಲಿದ್ದ ಎಲ್ಲಾ ಪ್ರಾಣಿಗಳು ಹೊಗೆ ಉಸಿರಾಟದಿಂದಾಗಿ ನಾಶವಾದವು” ಎಂದು ಎನ್ಬಿಸಿ ನ್ಯೂಸ್ ವರದಿ ಮಾಡಿದೆ.

ಬೆಂಕಿ ಪ್ರಾರಂಭವಾದಾಗ ಪ್ಲಾಜಾ ಲ್ಯಾಟಿನಾ ಶಾಪಿಂಗ್ ಸೆಂಟರ್ ಕಟ್ಟಡದಲ್ಲಿ ಮೂವರು ಇದ್ದರು. ಆದರೆ ಅಗ್ನಿಶಾಮಕ ದಳ ಎಚ್ಚರಿಕೆ ನೀಡಿದ ನಂತರ ಅವರೆಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಇವಾನ್ಸ್ ಹೇಳಿದ್ದಾರೆ.

Continue Reading

LATEST NEWS

ಗುಜರಾತ್ ನಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಪತನ

Published

on

ಭಾರತೀಯ ಕೋಸ್ಟ್ ಗಾರ್ಡ್‌ಗೆ ಸೇರಿದ ಅಡ್ವಾನ್ಸ್ಡ್‌ ಲೈಟ್ ಹೆಲಿಕಾಪ್ಟರ್ (ALH) ಧ್ರುವ್ ಭಾನುವಾರ ಅಪಘಾತಕ್ಕೀಡಾಗಿದೆ. ಗುಜರಾತ್‌ನ ಪೋರಬಂದರ್‌ನಲ್ಲಿ ತರಬೇತಿ ಸಮಯದಲ್ಲಿ ಈ ಹೆಲಿಕಾಪ್ಟರ್ ಪತನಗೊಂಡಿದ್ದು, ಹಲಿಕಾಪ್ಟರ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಮೂವರು ಯೋಧರ ಸಹಿತ ಐವರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಹೆಲಿಕಾಪ್ಟರ್ ಪತನದ ಬಗ್ಗೆ ANI ವರದಿ ಮಾಡಿದ್ದು, ಪೋರಬಂದರ್‌ನ ಕೋಸ್ಟ್ ಗಾರ್ಡ್‌ ಏರ್ ಎನ್‌ಕ್ಲೇವ್‌ನಲ್ಲಿ ಈ ಘಟನೆ ನಡೆದಿ ಎಂದು ಹೇಳಿದೆ. ಅಧಿಕಾರಿಗಳ ಪ್ರಕಾರ ಹೆಲಿಕಾಪ್ಟರ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪತನವಾಗಿದೆ.

ಭಾರತೀಯ ಕೋಸ್ಟ್ ಗಾರ್ಡ್‌ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ. ಈ ಹಿಂದೆ ಕೂಡ ಸೆಪ್ಟೆಂಬರ್‌ನಲ್ಲಿ ಇದೇ ಮಾದರಿಯ ಹೆಲಿಕಾಫ್ಟರ್‌ ಒಂದು ಕೋರಬಂದರ್‌ನ ಸಮುದ್ರಕ್ಕೆ ಬಿದ್ದಿತ್ತು. ಇದು ಬೆಂಗಳೂರಿನ ಹೆಚ್‌ಎಲ್‌ಎ ಅಲ್ಲಿ ವಿನ್ಯಾಸಗೊಳಿಸಿದ ಹೆಲಿಕಾಫ್ಟರ್‌ ಆಗಿದೆ.

Continue Reading

LATEST NEWS

Trending

Exit mobile version