Wednesday, May 18, 2022

ಮಲಗಿದ್ದ ಅತ್ತೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಸೊಸೆ

ಚಿತ್ರದುರ್ಗ: ಅತ್ತೆ-ಸೊಸೆ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ನಡೆದಿದೆ.


ರುದ್ರಮ್ಮ(60) ಹತ್ಯೆಗೀಡಾದ ದುರ್ದೈವಿಯಾಗಿದ್ದು, ಆರೋಪಿ ಸೊಸೆ ಮುದ್ದಕ್ಕ (38)ಳನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ.
ಅತ್ತೆ-ಸೊಸೆ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಆರಂಭದಿಂದಲೂ ನಿರಂತರ ಜಗಳ ನಡೆಯುತ್ತಿತ್ತಂತೆ. ಇದರ ಮುಂದುವರಿದ ಭಾಗವಾಗಿ ಅತ್ತೆ ರುದ್ರಮ್ಮ ರಾತ್ರಿ ಮಲಗಿದ್ದ ವೇಳೆಯಲ್ಲಿ ಸೊಸೆ ಮುದ್ದಕ್ಕೆ ಸುತ್ತಿಗೆಯಿಂದ ಅತ್ತೆಯ ತಲೆ‌ಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾಳೆ. ಘಟನೆ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics

ರಾಜ್ಯ ಸರ್ಕಾರ ನಮ್ಮ ಅಧಿಕಾರ ಕಸಿದುಕೊಂಡಿದೆ: ಹೈಕೋರ್ಟ್‌ ಮುಂದೆ ಚುನಾವಣಾ ಆಯೋಗ ಅಳಲು

ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ಸಾಧ್ಯವಾಗದ ರೀತಿಯಲ್ಲಿ ರಾಜ್ಯ ಸರ್ಕಾರ ನಮ್ಮ ಅಧಿಕಾರ ಕಸಿದುಕೊಂಡಿದೆ ಎಂದು ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‌ ಮುಂದೆ ತನ್ನ ಅಸಹಾಯಕತೆ...

ಬಂಟ್ವಾಳ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು

ಬಂಟ್ವಾಳ: 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದಾಗಿ ಸಾವನ್ನಪ್ಪಿದ ಘಟನೆ ವಿಟ್ಲ ಸಮೀಪದ ಅಳಿಕೆ ಎಂಬಲ್ಲಿ ಇಂದು ನಡೆದಿದೆ.ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.ಮೃತಳನ್ನು ವಿಠಲ್ ಜೇಸೀಸ್ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ...

ಕಿನ್ನಿಗೋಳಿ: ಗಾಳಿಮಳೆಗೆ ರಸ್ತೆಗೆ ಉರುಳಿದ ಮರ

ಕಿನ್ನಿಗೋಳಿ: ಮುಂಜಾನೆಯಿಂದಲೇ ಸುರಿಯುತ್ತಿರುವ ಧಾರಾಕಾರ ಗಾಳಿ ಮಳೆಯಿಂದಾಗಿ ಮರವೊಂದು ರಸ್ತೆಗೆ ಅಡ್ಡವಾಗಿ ಉರುಳಿದ ಘಟನೆ ಕಿನ್ನಿಗೋಳಿಯ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಳಿಂಜೆ ಮುತ್ತಾಯಕೆರೆಯ ಬಳಿ ನಡೆದಿದೆ.ಬೆಳ್ಳಂಬೆಳಗ್ಗೆ ನಡೆದ ಘಟನೆಯಿಂದಾಗಿ ಮರವು ವಿದ್ಯುತ್...