ಬೆಂಗಳೂರು: ರೇಣುಕಾಸ್ವಾಮಿ ಹ*ತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಜೈಲು ಸೇರಿದೆ. ತನಿಖೆಯನ್ನು ಪೂರ್ಣಗೊಳಿಸಲಿರುವ ಅಧಿಕಾರಿಗಳು ಸದ್ಯದಲ್ಲಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ.
ಚಾರ್ಜ್ಶೀಟ್ ಸಲ್ಲಿಕೆ ಆದಮೇಲೆ ದರ್ಶನ್ಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ. ಈ ವಿಚಾರ ಚಿತ್ರರಂಗಕ್ಕೂ ಕೂಡ ಆಘಾತಕಾರಿ ಎಂದು ಹೇಳಲಾಗುತ್ತಿದೆ. ಮುಂದೆ ದರ್ಶನ್ ಅವರನ್ನು ಹಾಕಿಕೊಂಡು ಚಿತ್ರ ಮಾಡೋರು ಇನ್ಮೇಲೆ ಇದನ್ನು ಗಮನಿಸಲೇಬೇಕು.
ಚಾರ್ಜ್ ಶೀಟ್ ಬಳಿಕ ಪಾಸ್ ಪೋರ್ಟ್ ರದ್ದಾಗಲಿದೆ. ಕೊ*ಲೆ ಆರೋಪಿ ಪ್ರಭಾವಿ ಆಗಿರುವ ಕಾರಣ ಪಾಸ್ ಪೋರ್ಟ್ ರದ್ಧತಿಗೆ ಪತ್ರ ಬರೆಯಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಕೊ*ಲೆ ಆರೋಪಿ ಬೇರೆ ದೇಶಗಳಿಗೆ ಎಸ್ಕೇಪ್ ಆಗಬಹುದು ಎಂಬ ಕಾರಣದಿಂದ ಪಾಸ್ ಪೋರ್ಟ್ ರದ್ದು ಮಾಡಲು ಪತ್ರ ಬರೆಯುತ್ತಾರೆ ಎನ್ನಲಾಗಿದೆ.
ಆತ ಎಷ್ಟೇ ಪ್ರಭಾವಿ, ಗಣ್ಯನಾಗಿದ್ದರೂ ಪೊಲೀಸರಿಗೆ ಹಾಗೂ ಕಾನೂನಿಗೆ ಆತ ಆರೋಪಿಯಷ್ಟೇ. ಒಂದು ವೇಳೆ ದರ್ಶನ್ ಜೈಲಿನಿಂದ ರಿಲೀಸ್ ಆದ ಬಳಿಕ ಯಾರಾದರೂ ಸಿನಿಮಾ ಮಾಡಬೇಕು ಅಂದರೆ ದೇಶದಲ್ಲಿಯೇ ಮಾಡಬೇಕಿದೆ. ವಿದೇಶದಲ್ಲಿ ಚಿತ್ರೀಕರಣ ಮಾಡುವಂತಿಲ್ಲ.
ಸದ್ಯ ವಿದೇಶದಲ್ಲಿ ಚಿತ್ರೀಕರಣ ಮಾಡುವ ಟ್ರೆಂಡ್ ಇದೆ. ಪೂರ್ತಿ ಆಗದಿದ್ರೂ ಒಂದು ಹಾಡನ್ನಾದರೂ ವಿದೇಶದಲ್ಲಿ ಚಿತ್ರೀಕರಣ ಮಾಡುವ ಟ್ರೆಂಡ್ ಚಿತ್ರರಂಗದಲ್ಲಿದೆ. ಮುಂದಿನ ದಿನಗಳಲ್ಲಿ ವಿದೇಶಿ ಚಿತ್ರೀಕರಣ ಮಾಡಿದರೆ ಅದಕ್ಕೆ ನ್ಯಾಯಾಲಯದ ಅನುಮತಿ ಅಗತ್ಯ ಇದೆ. ನ್ಯಾಯಾಲಯ ಅನುಮತಿ ನೀಡಿದರೆ ಮಾತ್ರ ವಿದೇಶಕ್ಕೆ ತೆರಳಬಹುದು. ಆದರೆ ಪಾಸ್ ಪೋರ್ಟ್ ರದ್ದು ಮಾಡಿದರೆ ವಿದೇಶಿ ಕನಸೂ ಭಗ್ನ ಆಗಲಿದೆ.
Pingback: ಚಿಕ್ಕಮಗಳೂರಿನತ್ತ ಪ್ರವಾಸ ಕೈಗೊಂಡಿದ್ದೀರಾ...ಹಾಗಾದ್ರೆ ಇತ್ತ ಗಮನಿಸಿ - NAMMAKUDLA NEWS - ನಮ್ಮಕುಡ್ಲ ನ್ಯೂಸ್
Pingback: WATCH : ಅಬ್ಬಬ್ಬಾ...! ಚಲಿಸುತ್ತಿರುವ ಬಸ್ಸಿನ ಕೆಳಗೆ ಮಲಗಿ ಯುವಕನ ರೀಲ್ಸ್; ಅಸಲಿ ಕಥೆ ಏನು? - NAMMAKUDLA NEWS - ನಮ್ಮಕುಡ್ಲ ನ್ಯೂಸ
Pingback: ಬೆಂಗಳೂರಿನಲ್ಲಿ ದರ್ಶನ್ ಅಭಿಮಾನಿಯ ಬಂಧನ - NAMMAKUDLA NEWS - ನಮ್ಮಕುಡ್ಲ ನ್ಯೂಸ್