ಮಂಗಳೂರು/ಬೆಂಗಳೂರು : ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಚಾರವೇ ಭಾರಿ ಸದ್ದು ಮಾಡುತ್ತಿದೆ. ಇದೀಗ ಅವರ ಹೆಸರು ಹೇಳಿ ಪತಿ ಬ್ಲ್ಯಾಕ್ ಮೇಲ್ ಮಾಡಿದ್ದರಿಂದ ಪತ್ನಿ ಜೀವಾಂ*ತ್ಯಗೊಳಿಸಿರುವ ಘಟನೆ ನಡೆದಿದೆ. ಹುಳಿಮಾವು ವ್ಯಾಪ್ತಿಯ ಅಕ್ಷಯನಗರದಲ್ಲಿ ಗೃಹಿಣಿಯೊಬ್ಬರು ತಮ್ಮ ಮನೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾಳೆ.
ಅನುಷಾ ಮೃ*ತ ಮಹಿಳೆ. ಈಕೆಯ ಪತಿ ಶ್ರೀಹರಿ ಪ್ರತಿದಿನವೂ ಕಿರುಕು*ಳ ನೀಡುತ್ತಿದ್ದನಂತೆ. ದಿನವೂ ಅಶ್ಲೀ*ಲ ವೀಡಿಯೋ ತೋರಿಸಿ, ನಾವೂ ಈ ರೀತಿ ಮಾಡೋಣ ಎಂದು ಕಿರುಕುಳ ನೀಡುತ್ತಿದ್ದ. ಜೊತೆಗೆ ಈತ ಬೇರೆ ಮಹಿಳೆಯರ ಜೊತೆಗೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂದು ಹೇಳಲಾಗಿದೆ.
ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ತೋರಿಸಿ, ಟಾರ್ಚರ್ ಮಾಡುತ್ತಿದ್ದ. ಅಲ್ಲದೇ ಪತ್ನಿಯ ಮುಂದೆಯೇ ಬೇರೆ ಯುವತಿಯ ಜೊತೆ ಸಲುಗೆ ಬೆಳೆಸಿದ್ದ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಈಕೆಗೆ ಟಾರ್ಚ*ರ್ ಮಾಡುತ್ತಿದ್ದ ಎನ್ನಲಾಗಿದೆ.
ಡೈವೋರ್ಸ್ ಪೀಡಿಸುತ್ತಿದ್ದ ಪತಿ :
ಕಿರುಕುಳ ನೀಡುತ್ತಿಲ್ಲ ಪತಿ, ಎರಡು ತಿಂಗಳಿಂದ ಡೈವೋರ್ಸ್ ಕೊಡುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತು ಅನುಷಾ ಆತ್ಮಹ*ತ್ಯೆ ಮಾಡಿಕೊಂಡಿದ್ದಾಳೆ. ಮನೆಯ ವಾಶ್‌ರೂಂನಿಂದಲೇ ಗಂಡನಿಗೆ ವಿಡಿಯೋ ಕಾಲ್ ಮಾಡಿ, ಆತ್ಮಹ*ತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಆದರೂ ಪತಿ ನಿರ್ಲಕ್ಷಿಸಿದ್ದಾನೆ. ಹೀಗಾಗಿ ಈ ದುರಂ*ತ ನಡೆದು ಹೋಗಿದೆ. ಬಳಿಕ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿದರೂ ಚಿಕಿತ್ಸೆ ಫಲಿಸದೆ ಮೃ*ತಪಟ್ಟಿದ್ದಾಳೆ ಎಂದು ವರದಿಯಾಗಿದೆ.
ದರ್ಶನ್ ಉದಾಹರಣೆ ಕೊಡುತ್ತಿದ್ದ ಪತಿ :
ಪತ್ನಿ ಜೊತೆ ಜಗಳ ಆಡುವಾಗ ಪತಿ ನಟ ದರ್ಶನ್ ಅವರನ್ನು ಉದಾಹರಣೆ ನೀಡುತ್ತಿದ್ದನಂತೆ. ನಟ ದರ್ಶನ್ ಎರಡು ಮದುವೆ ಆಗಿದ್ದಾರೆ. ಅವರು ಸಂತೋಷವಾಗಿದ್ದಾರೆ. ನಾನು ಎರಡನೇ ಮದುವೆ ಆದರೆ ಏನ್ ತಪ್ಪು? ಎಂದು ಕೇಳುತ್ತಿದ್ದ ಎಂದು ಮೃ*ತರ ಪೋಷಕರು ಆರೋಪಿಸಿದ್ದಾರೆ.
ಐದು ವರ್ಷಗಳ ಹಿಂದೆ ಇವರಿಬ್ಬರ ಮದುವೆ ನಡೆದಿತ್ತು. ಒಂದು ಮುದ್ದಾದ ಮಗು ಕೂಡ ಇವರಿಗಿದೆ. ಆದರೆ, ಇತ್ತೀಚೆಗೆ ದಂಪತಿ ನಡುವೆ ಹೆಚ್ಚು ಗಲಾಟೆಗಳು ನಡೆದಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಆಸ್ಪತ್ರೆಯ ಶುಲ್ಕ ಪಾವತಿಸಲಾಗದೆ ಮಗುವನ್ನೇ ಮಾರಾಟ ಮಾಡಿದ ತಂದೆ!
ಈ ಹಿಂದೆಯೂ ಆತ ಟಾರ್ಚರ್ ಮಾಡುತ್ತಿದ್ದ ವಿಷಯ ನಮ್ಮ ಗಮನಕ್ಕೆ ಬಂದಿತ್ತು. ಮರ್ಯಾದೆಗೆ ಹೆದರಿ ಪೊಲೀಸ್ ಠಾಣೆ ಮೆಟ್ಟಿಲೇರಲಿಲ್ಲ. ಈತನ ನಡವಳಿಕೆ ಕಂಡು ಕೆಲಸದಿಂದಲೂ ಕಿತ್ತು ಬಿಸಾಡಿದ್ದರು. ಮುದ್ದಾದ ಹೆಂಡತಿ ಇದ್ದರೂ ಆತ ಬೇರೆ ಹುಡುಗಿಯರ ಸಹವಾಸ ಮಾಡಿ ನಮ್ಮ ಮಗಳಿಗೆ ನಿತ್ಯವೂ ಕಿರುಕು*ಳ ನೀಡುತ್ತಿದ್ದ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.
Pingback: ಬುರ್ದುಗೋಳಿಯ ಗುಳಿಗ-ಕೊರಗಜ್ಜ ಕ್ಷೇತ್ರಕ್ಕೆ 'ದ್ವಾಪರ ದಾಟುತ' ಹಾಡಿನ ಖ್ಯಾತಿಯ ಗಾಯಕ ಜಸ್ಕರನ್ ಸಿಂಗ್ ಭೇಟ
Pingback: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ದೀಪಿಕಾ ಪಡುಕೋಣೆ - NAMMAKUDLA NEWS - ನಮ್ಮಕುಡ್ಲ ನ್ಯೂಸ್
Pingback: ಮಲಗಿದ್ದಲ್ಲೇ ಇಹಲೋಕ ತ್ಯಜಿಸಿದ ಖ್ಯಾತ ಕಿರುತೆರೆ ನಟ - NAMMAKUDLA NEWS - ನಮ್ಮಕುಡ್ಲ ನ್ಯೂಸ್