DAKSHINA KANNADA
ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವ ಅಪಾಯಕಾರಿ ಪ್ರವೃತ್ತಿಗೆ ಕಡಿವಾಣ ಹಾಕಿ: ಪಿಎಫ್‌ಐ
Published
3 years agoon
By
Adminಮಂಗಳೂರು: ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವ ಬೆಳವಣಿಗೆಗಳು ಕಂಡು ಬರುತ್ತಿದ್ದು, ನಾಗರಿಕರ ಜೀವನೋಪಾಯದ ಮೂಲಭೂತ ಹಕ್ಕನ್ನು ಉಲ್ಲಂಘಿಸುವ ಇಂತಹ ಅಪಾಯಕಾರಿ ಪ್ರವೃತ್ತಿಗೆ ಕಡಿವಾಣ ಹಾಕಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಆಗ್ರಹಿಸಿದ್ದಾರೆ.
ಬಿಜೆಪಿ-ಸಂಘಪರಿವಾರದ ನಾಯಕರ ಒತ್ತಡದಿಂದ ಇತ್ತೀಚಿಗೆ ಕಾಪು ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸುವ ಹೊಸದಾದ ಪ್ರವೃತ್ತಿಗೆ ನಾಂದಿ ಹಾಡಲಾಯಿತು.
ನಂತರ ಇದು ದಕ್ಷಿಣ ಕನ್ನಡ ಜಿಲ್ಲೆಯ ಇತರ ಕಡೆಗಳಿಗೂ ಮೆಲ್ಲನೇ ವ್ಯಾಪಿಸುತ್ತಿದೆ. ಸಂಘಪರಿವಾರವು ಎಲ್ಲೋ ಮೂಲೆಯಲ್ಲಿ ನಡೆಸುತ್ತಿದ್ದ ಇಂತಹ ದುಷ್ಟ ಸಂಚುಗಳನ್ನು ಇದೀಗ ವ್ಯಾಪಕಗೊಳಿಸುವ ಪ್ರಯತ್ನ ನಡೆಸುತ್ತಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದು-ಮುಸ್ಲಿಮರು ತಲೆತಲಾಂತರಗಳಿಂದ ಅನ್ಯೋನ್ಯತೆಯಿಂದ ಜೀವಿಸುತ್ತಾ ಬಂದಿದ್ದಾರೆ. ಪರಸ್ಪರರ ಜಾತ್ರೆ, ಸಮಾರಂಭಗಳಲ್ಲಿ ವ್ಯಾಪಾರ ವಹಿವಾಟುಗಳನ್ನೂ ನಡೆಸುತ್ತಿದ್ದಾರೆ. ಹಿಂದು-ಮುಸ್ಲಿಮರಲ್ಲಿನ ತಳ ವರ್ಗದ ಹಲವಾರು ಕುಟುಂಬಗಳು ಇದೇ ಕಸುಬನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿವೆ.
ಸಂಘಪರಿವಾರವು ಇದೀಗ ಮುಸ್ಲಿಮ್ ವ್ಯಾಪಾರಿಗಳ ಮೇಲೆ ಅಸಹಿಷ್ಣುತೆ ತೋರುತ್ತಾ ತನ್ನ ಕೋಮು ಅಜೆಂಡಾವನ್ನು ಆಳವಾಗಿ ಬಿತ್ತಲು ಪ್ರಯತ್ನಿಸುತ್ತಿದೆ.
ಕೇವಲ ಜಾತ್ರೆ ಸಮಾರಂಭಗಳಲ್ಲದೇ, ಇತರ ವ್ಯಾಪಾರ ವಹಿವಾಟುಗಳಲ್ಲೂ ಉಭಯ ಸಮುದಾಯಗಳು ಪರಸ್ಪರರನ್ನು ನೆಚ್ಚಿಕೊಂಡಿದ್ದಾರೆ. ಇವುಗಳ ಮಧ್ಯೆ ಪ್ರತ್ಯೇಕಿಸಲಾಗದ ಅವಿನಾಭಾವ ಸಂಬಂಧವಿದೆ.
ಹೀಗಿರುವಾಗ ಸಂಘಪರಿವಾರದ ಶಕ್ತಿಗಳು ಕೋಮು ಧ್ರುವೀಕರಣದ ಭಾಗವಾಗಿ ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವ ಮೂಲಕ ಪರಸ್ಪರರನ್ನು ವಿಭಜಿಸುವ ಪಿತೂರಿಯಲ್ಲಿ ತೊಡಗಿದ್ದಾರೆ.
ಸಂವಿಧಾನದ ವಿಧಿ 19 ಜೀವನೋಪಾಯಕ್ಕೆ ಸಂಬಂಧಿಸಿದ ವಿಚಾರವನ್ನು ಹೇಳುತ್ತದೆ. ಇದರ ಪ್ರಕಾರ, ಭಾರತ ಪ್ರತಿಯೋರ್ವ ನಾಗರಿಕನು ಯಾವುದೇ ಕಾನೂನುಬದ್ಧ ವೃತ್ತಿ, ವ್ಯಾಪಾರ ಅಥವಾ ಉದ್ಯಮ ನಡೆಸುವ ಮೂಲಭೂತ ಹಕ್ಕನ್ನು ಹೊಂದಿರುತ್ತಾನೆ.
ಅಂದರೆ ವ್ಯಕ್ತಿಯ ಜೀವನೋಪಾಯದ ವೃತ್ತಿಗೆ ಅಡ್ಡಿ ಆತಂಕ ಉಂಟು ಮಾಡುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಜಿಲ್ಲಾಡಳಿತವು ಕೂಡಲೇ ಮಧ್ಯ ಪ್ರವೇಶಿಸಿ ವ್ಯಾಪಾರಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕು.
ವ್ಯಾಪಾರಿಗಳ ಸಾಂವಿಧಾನಿಕ ಹಕ್ಕನ್ನು ಕಸಿಯುವ ಷಡ್ಯಂತ್ರಗಳಿಗೆ ಪೊಲೀಸ್ ಇಲಾಖೆ ಕೂಡಲೇ ಕಡಿವಾಣ ಹಾಕಬೇಕು. ಹಕ್ಕಿನ ಉಲ್ಲಂಘನೆಗೆ ಪ್ರಚೋದನೆ ನೀಡುವ ಮತ್ತು ವ್ಯಾಪಾರಿಗಳಿಗೆ ಬೆದರಿಕೆ ನೀಡುವ ಸಂಘಪರಿವಾರದ ನಾಯಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕೆಂದು ಇಜಾಝ್ ಅಹ್ಮದ್ ಒತ್ತಾಯಿಸಿದ್ದಾರೆ.
bangalore
ಕ್ರಿಸ್ಮಸ್ ಸ್ಪೆಷಲ್ ಆಫರ್; ಮಂಗಳೂರು – ಬೆಂಗಳೂರು ವಿಶೇಷ ರೈಲು ಸಂಚಾರ
Published
7 hours agoon
22/12/2024ಮಂಗಳೂರು : ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬೆಂಗಳುರು – ಮಂಗಳೂರು ನಡುವೆ ಡಿಸೆಂಬರ್ 23 ಹಾಗೂ 27 ರಂದು ವಿಶೇಷ ರೈಲು ಸಂಚರಿಸಲಿದೆ. ಮತ್ತೆ ಪುನಃ ಅದೇ ರೈಲು (06506) ಡಿಸೆಂಬರ್ 24 ಮತ್ತು 28 ರಂದು ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಮಧ್ಯಾಹ್ನ 1:00 ಗಂಟೆಗೆ ಹೊರಟು, ಅದೇ ದಿನ ರಾತ್ರಿ 10.30 ಕ್ಕೆ ಯಶವಂತಪುರ ತಲುಪಲಿದೆ.
ಕೆಲಸದ ನಿಮಿತ್ತ ಮಂಗಳೂರಿನ ಹಲವು ಜನ ಬೆಂಗಳೂರಿನಲ್ಲಿ ವಾಸವಿದ್ದಾರೆ. ಇದೀಗ ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿದ್ದು, ಊರಿಗೆ ಮರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಅವರಿಗೆಲ್ಲಾ ಅನುಕೂಲವಾಗಲೆಂದು ಈ ವಿಶೇಷ ರೈಲು ಸಂಚಾರವನ್ನು ಅಳವಡಿಸಿದ್ದು, ಹಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇದರ ಫಲಾನುಭವಿಗಳಾಗಲಿದ್ದಾರೆ.
ಈ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಪ್ರಯಾಣಿಕರು ಅಧಿಕೃತ (www.enquiry.indianrail.gov.in) ವೆಬ್ಸೈಟ್ಗೆ ಭೇಟಿ ನೀಡಿ. NTES ಅಪ್ಲಿಕೇಶನ್ ಬಿಳಸಿ ಅಥವಾ 139 ನಂಬರಗೆ ಡಯಲ್ ಮಾಡುವ ಮೂಲಕ ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ/ನಿರ್ಗಮನ ಸಮಯ ಮತ್ತು ಇತರ ಮಾಹಿತಿಯನ್ನು ವಡೆದುಕೊಳ್ಳಬಹುದು.
DAKSHINA KANNADA
ಮೂಲ್ಕಿ: ವಿವಿಧ ರಂಗಗಳ ಸಾಧಕರಿಗೆ ‘ಅರಸು ಕಂಬಳ’ ಪ್ರಶಸ್ತಿ ಪ್ರದಾನ
Published
1 day agoon
21/12/2024ಮೂಲ್ಕಿ: ಮೂಲ್ಕಿ ಅರಸು ಕಂಬಳ ಸಂದರ್ಭ ಮೂಲ್ಕಿ ಸೀಮೆ ವ್ಯಾಪ್ತಿಯ ವಿವಿಧ ರಂಗಗಳ 14 ಮಂದಿ ಸಾಧಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಅರಮನೆಯ ಧರ್ಮ ಚಾವಡಿಯಲ್ಲಿ ಅರಸು ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮ ಡಿ. 22ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ ಎಂದು ಅರಸರಾದ ದುಗ್ಗಣ್ಣ ಸಾವಂತರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂಲ್ಕಿ ಅರಮನೆ ಟ್ರಸ್ಟ್ ಮತ್ತು ಹಳೆಯಂಗಡಿಯ ಪ್ರಿಯ ದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಸಹಭಾಗಿತ್ವದಲ್ಲಿ ಕಾಠ್ಯಕ್ರಮ ನಡೆ. ಯಲಿದೆ. ಶ್ರೀ ಅರುಣಾನಂದ ತೀರ್ಥ ಸ್ವಾಮೀ ಜಿ (ಸಾಧನಾ ಪ್ರಶಸ್ತಿ) ದಿ। ಎಚ್. ನಾರಾಯಣ ಸನಿಲ್ (ಮರಣೋತ್ತರ-ಸಮಾಜ ಸೇವೆ ಮತ್ತು ಶಿಕ್ಷಣ, ಸಹಕಾರಿ) ದಿ। ಎನ್. ಬಾಬು ಶೆಟ್ಟಿ (ಮರಣೋತ್ತರ-ಸಮಾಜ ಸೇವೆ), ಮೀರಾ ಬಾಯಿ ಕೆ. (ಶಿಕ್ಷಣ), ಎಚ್. ಶಕುಂತಳಾ ಭಟ್ (ಸಾಹಿತ್ಯ) ವಾಲ್ಟರ್ ಡಿ’ಸೋಜಾ (ಕೃಷಿ ಮತ್ತು ಪರಿಸರ), ಡಾ। ಹಸನ್ ಮುಬಾರಕ್ (ವೈದ್ಯಕೀಯ), ಸೀತಾರಾಮ್ ಕುಮಾರ್ ಕಟೀಲು (ಯಕ್ಷಗಾನ), ಪರಮಾನಂದ ಸಾಲ್ಯಾನ್ (ಸಾಹಿತ್ಯ), ಶಿವ ಸಂಜೀವಿನಿ ಸುರಗಿರಿ (ಸಂಘ ಸಂಸ್ಥೆ), ಮಾಧವ ಶೆಟ್ಟಿಗಾರ್ ಮತ್ತು ಚಂದ್ರಕುಮಾರ್ (ಸಾಮಾಜಿಕ ಕ್ಷೇತ್ರ) ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು (ಸಂಘಸಂಸ್ಥೆ) ವಿನಾಯಕಯಕ್ಷಗಾನ ಫೌಂಡೇಶನ್ ಕೆರೆಕಾಡು (ಯಕ್ಷಗಾನ ತಂಡ) ಇವರಿಗೆ ಪ್ರಶಸ್ತಿ ನೀಡಲಾಗುವುದು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಆಳದಂಗಡಿ ಅರಮನೆಯ ತಿಮ್ಮಣ್ಣ ಅರಸರಾದ ಡಾ। ಪದ್ಮಪ್ರಸಾದ್ ಅಜಿಲರು, ದ.ಕ. ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿವೃತ್ತ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ಪಿ. ಮುಂತಾದವರು ಉಪಸ್ಥಿತರಿರುವರು ಎಂದರು. ಅರಮನೆಟ್ರಸ್ಟ್‌ನ ಗೌತಮ್ ಜೈನ್, ಪ್ರಿಯದರ್ಶಿನಿ ಸೊಸೈಟಿಯ ಅಧ್ಯಕ್ಷ ವಸಂತ್ ಬೆರ್ನಾಡ್ ಹಾಗೂ ಸಿಇಒ ಸುದರ್ಶನ್ ಉಪಸ್ಥಿತರಿದ್ದರು.
DAKSHINA KANNADA
ಅತಿ ವೇಗ ತಂದಿಟ್ಟ ಪ್ರಾ*ಣಾಪಾಯ; ಬಸ್‌ಗೆ ಡಿ*ಕ್ಕಿ ಹೊ*ಡೆದು ಬೈಕ್ ಸವಾರ ಸಾ*ವು
Published
1 day agoon
21/12/2024ಮಂಗಳೂರು: ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರೊಬ್ಬರು ರಸ್ತೆ ಅ*ಪಘಾ*ತದಲ್ಲಿ ಮೃ*ತಪಟ್ಟ ಘಟನೆ ಕಾನ ಕುಳಾಯಿ ಗುಡ್ಡೆ ಜಂಕ್ಷನ್‌ನಲ್ಲಿ ನನ್ನೆ (ಡಿ.20) ರಾತ್ರಿ ನಡೆದಿದೆ.
ಮೃ*ತರನ್ನು ಕಾನ ನಿವಾಸಿ ರೆಮ್ಮಿ (38) ಎಂದು ಗುರುತಿಸಲಾಗಿದೆ.
ಕುಳಾಯಿಯಲ್ಲಿ ಟ್ಯೂಶನ್‌ಗೆ ತೆರಳಿದ್ದ ಮಗಳನ್ನು ಕರೆತರಲೆಂದು ರೆಮ್ಮಿ ತನ್ನ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ. ಕುಳಾಯಿಗುಡ್ಡೆ ಜಂಕ್ಷನ್ ಬಳಿ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದ ಮಂಗಳೂರು ಉತ್ತರ ಸಂಚಾರ ಪೊಲೀಸರು ರೆಮ್ಮಿಯನ್ನು ಎಚ್ಚರಿಸಿದ್ದರೂ ಗಮನಿಸದ ರೆಮ್ಮಿ ಸುರತ್ಕಲ್ ಕಡೆಗೆ ಅತಿ ವೇಗದಿಂದ ತನ್ನ ದ್ವಿಚಕ್ರ ವಾಹನವನ್ನು ತಿರುಗಿಸಿದಾಗ ಎದುರುರಿನಿಂದ ಬರುತ್ತಿದ್ದ ಖಾಸಗಿ ಸಿಟಿ ಬಸ್ ಡಿ*ಕ್ಕಿ ಹೊಡೆದಿತ್ತು.
ಇದನ್ನೂ ಓದಿ : ಪುತ್ತೂರು: ಬಸ್-ಬೈಕ್ ಅಪಘಾತ, ಬೈಕ್ ಸವಾರ ಸಾ*ವು
ಅ*ಪಘಾ*ತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ರೆಮ್ಮಿ ಗಂ*ಭೀರ ಗಾ*ಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃ*ತಪಟ್ಟಿದ್ದಾರೆ. ಅ*ಪಘಾ*ತ ನಡೆದ ಬೆನ್ನಲ್ಲೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಪೊಲೀಸರ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
LATEST NEWS
ಮೊಹಾಲಿ ಕಟ್ಟಡ ಕು*ಸಿತ ಪ್ರಕರಣ; ಎರಡು ಸಾ*ವು, ಹಲವರು ಕಟ್ಟಡದಡಿ ಇರುವ ಶಂಕೆ !!
ಮೆಲ್ಬೋರ್ನ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯಾಳುಗಳ ಬರೆ !
ಮಹಾರಾಷ್ಟ್ರ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ ?
ಬಾಂಗ್ಲಾ ಹಿಂದೂಗಳ ಮೇಲೆ ದಾ*ಳಿ ; ಭಾರತೀಯರ ಮುಗಿಸಲು ಉ*ಗ್ರರ ಸಂಚು!
ಮಹತ್ವದ ನಿರ್ಧಾರ ಕೈಗೊಂಡ ಬೈಡನ್: 4.3 ಶತಕೋಟಿ ಡಾಲರ್ ವಿದ್ಯಾರ್ಥಿ ಸಾಲ ಮನ್ನಾ
ಅರೆಸ್ಟ್ ವಾರೆಂಟ್ ಬೆನ್ನಲ್ಲೇ ಮಾಜಿ ಕ್ರಿಕೆಟರ್ ರಾಬಿನ್ ಉತ್ತಪ್ಪ ಸ್ಪಷ್ಟನೆ !
Trending
- BIG BOSS6 days ago
ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ; ವಿಚಾರಣೆಯಲ್ಲಿ ಪೊಲೀಸರಿಗೆ ಸಿಕ್ತು ಮಹತ್ವದ ಮಾಹಿತಿ
- DAKSHINA KANNADA7 days ago
ಕ್ಯಾಟ್ಕದ ನೂತನ ಅಧ್ಯಕ್ಷರಾಗಿ ಲಂಚುಲಾಲ್ ಅವಿರೋಧವಾಗಿ ಆಯ್ಕೆ
- LATEST NEWS4 days ago
ದಹಿ ಪುರಿ ಚಾಟ್ಸ್ ಬದಲು ಪೂರಿ, ಮೊಸರು ಕಳುಹಿಸಿಕೊಟ್ಟ ರೆಸ್ಟೋರೆಂಟ್
- DAKSHINA KANNADA7 days ago
ಉಳ್ಳಾಲ: ಜೀಪ್ ಮತ್ತು ಬೈಕ್ ಭೀ*ಕರ ಅ*ಪಘಾತ; ಹೊಟೇಲ್ ಕಾರ್ಮಿಕ ಸಾ*ವು