Connect with us

    LATEST NEWS

    ಗ್ಯಾಸ್ ಸ್ಟವ್ ಈ ಬಣ್ಣದಲ್ಲಿ ಉರಿದರೆ ಕೂಡಲೇ ಎಚ್ಚೆತ್ತುಕೊಳ್ಳಿ

    Published

    on

    Gas Stove : ಅಸ್ತಮಾ ಮತ್ತು ತಲೆನೋವು ಇಂದು ಅನೇಕ ಜನರಲ್ಲಿ ಸಾಮಾನ್ಯ ಕಾಯಿಲೆಗಳಾಗಿವೆ. ಈ ರೋಗಗಳು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಇದಕ್ಕೆ ಕಾರಣವನ್ನು ಹುಡುಕುತ್ತಾ ಹೋದರೆ ಅರ್ಧದಷ್ಟು ಮಂದಿ ಅಡುಗೆ ಮನೆಯ ಲಿಂಕ್ ಆಗುತ್ತದೆ. ಏಕೆಂದರೆ, ಅಡುಗೆ ಮನೆಯು ಗೃಹಿಣಿಯರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳ ಮೂಲವಾಗಿದೆ. ಅನೇಕ ಮಹಿಳೆಯರು ಗ್ಯಾಸ್ ಸ್ಟವ್‌ನಲ್ಲಿ ದೀರ್ಘಕಾಲ ಅಡುಗೆ ಮಾಡುತ್ತಾರೆ.

    ಗೃಹಿಣಿಯರು ಗ್ಯಾಸ್ ಸ್ಟವ್‌ಗಳಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ಉಸಿರಾಟದ ತೊಂದರೆ ಮತ್ತು ತಲೆನೋವು ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಗ್ಯಾಸ್ ಸ್ಟವ್ ಅನ್ನು ಉರಿಸುವಾಗ ಜ್ವಾಲೆಯ ಬಣ್ಣ ಬದಲಾವಣೆಯು ಕೂಡ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

    ಸಾಮಾನ್ಯವಾಗಿ, ಸ್ಟವ್ ಉರಿಯುವಾಗ ನೀಲಿ ಜ್ವಾಲೆಗಳು ಉತ್ಪತ್ತಿಯಾದರೆ, ಭಯಪಡುವಂಥದ್ದೇನೂ ಇಲ್ಲ. ಆದರೆ ಜ್ವಾಲೆಗಳು ಕೆಂಪು ಅಥವಾ ಹಳದಿಯಾಗಿದ್ದರೆ, ನೀವು ಜಾಗರೂಕರಾಗಿರಬೇಕು. ಈ ಬಣ್ಣ ಬದಲಾವಣೆಯು ಒಲೆಯಿಂದ ಹೊರಸೂಸುವ ಕಾರ್ಬನ್ ಮಾನಾಕ್ಸೆಡ್ ಅನಿಲದಿಂದ ಉಂಟಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ.

    ಬೆಂಕಿಯು ಕೆಂಪು ಅಥವಾ ಹಳದಿ ಬಣ್ಣದಲ್ಲಿ ಉರಿದರೆ ಕಾರ್ಬನ್ ಮಾನಾಕ್ಸೆಡ್ ಅನಿಲದ ಉಪಸ್ಥಿತಿಯನ್ನು ಸೂಚಿಸುತ್ತದೆ. ಇದು ಶ್ವಾಸಕೋಶ ಸೇರಿದಂತೆ ವಿವಿಧ ಅಂಗಗಳ ಮೇಲೆ ನೇರ ಪರಿಣಾಮ ಬೀರಬಹುದು. ಇದು ಭವಿಷ್ಯದಲ್ಲಿ ಅಸ್ತಮಾ, ತಲೆನೋವು ಮತ್ತು ಹೆಚ್ಚಿನದನ್ನು ಉಂಟುಮಾಡಬಹುದು.

    ಕೊಳಕಿನಿಂದ ಮುಚ್ಚಿ ಹೋಗಿರುವ ಬರ್ನರ್ ತೂತುಗಳು ಜ್ವಾಲೆಯ ಬಣ್ಣ ಬದಲಾವಣೆಗೆ ಸಾಮಾನ್ಯ ಕಾರಣವಾಗಿದೆ. ಅಡಿಗೆ ಸೋಡಾ ಮತ್ತು ಬ್ರಶ್‌ನಿಂದ ಬರ್ನರ್ ಅನ್ನು ಆಗಾಗ ಸ್ವಚ್ಛಗೊಳಿಸುವ ಮೂಲಕ ಈ ಸಮಸ್ಯೆಯನ್ನು ಸುಲಭವಾಗಿ ಸರಿಪಡಿಸಬಹುದು. ಇಲ್ಲದಿದ್ದರೆ, ನೀವು ವೃತ್ತಿಪರ ಗ್ಯಾಸ್ ಸ್ಟವ್ ರಿಪೇರಿ ತಂತ್ರಜ್ಞರಿಂದ ಸಹಾಯ ಪಡೆಯಬೇಕು.

    Click to comment

    Leave a Reply

    Your email address will not be published. Required fields are marked *

    International news

    ಕಾಟನ್ ಕ್ಯಾಂಡಿ ಸೇವಿಸಿ ವಿಶ್ವ ದಾಖಲೆ ಬರೆದ ಮಹಿಳೆ !

    Published

    on

    ಮಂಗಳೂರು/ಇಂಗ್ಲೆಂಡ್: ಕೇವಲ ಒಂದು ನಿಮಿಷದಲ್ಲಿ 49 ಗ್ರಾಂ. ಕಾಟನ್ ಕ್ಯಾಂಡಿ ತಿನ್ನುವ ಮೂಲಕ ಇಂಗ್ಲೆಂಡ್ ನ ಯೂಟ್ಯೂಬರ್, ಲೀ ಶಟ್ ಕೀವರ್ ಹೊಸ ಗಿನ್ನೆಸ್ ವಿಶ್ವದಾಖಲೆ ಸ್ಥಾಪಿಸಿದ್ದಾರೆ.

     

    ತಿಳಿ ಹಸಿರು ಬಣ್ಣದ ಈ ತಿಂಡಿಯನ್ನು ಲೀ ತಿನ್ನುತ್ತಿರುವ ವೀಡಿಯೋವನ್ನು ಗಿನ್ನೆಸ್ ಸಂಸ್ಥೆಯು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ.

    ಇದನ್ನೂ ಓದಿ: ಕನ್ನಡಿಗ ಕೆ.ಎಲ್ ರಾಹುಲ್ ಗೆ ಬಿಗ್ ಶಾಕ್ !

    ಈ ಮೊದಲು ಕೂಡ ಹಾಟ್ ಡಾಗ್ ಸೇರಿದಂತೆ ವಿವಿಧ ಪದಾರ್ಥಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸೇವಿಸುವ ಮೂಲಕ ಅನೇಕ ದಾಖಲೆಗಳನ್ನು ಲೀ ಶಟ್ ಕೀವರ್ ಸ್ಥಾಪಿದ್ದರು.

     

    Continue Reading

    LATEST NEWS

    ವಾಜಪೇಯಿ ಜನ್ಮಶತಮಾನೋತ್ಸವಕ್ಕೆ ಮೋದಿ ಗಿಫ್ಟ್; ದೇಶದ ಮೊದಲ ನದಿ ಜೋಡಣೆಗೆ ಶಿಲಾನ್ಯಾಸ

    Published

    on

    ಮಂಗಳೂರು/ಭೋಪಾಲ್ : ಇಂದು (ಡಿ.25) ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವ. ಅವರ ಬಹುದೊಡ್ಡ ಕನಸನ್ನು ಈಡೇರಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ  ಮುಂದಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ನದಿಗಳ ಜೋಡಣೆಗೆ ತಯಾರಿ ನಡೆಸಿದೆ. ಇಂದು ಮಧ್ಯಪ್ರದೇಶದ ಖಜ್ರಾಹೋದಲ್ಲಿ ಕೆನ್-ಬೆಟ್ವಾ ನದಿಗಳ ಜೋಡಣೆಗೆ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ.


    ಮುಖ್ಯಮಂತ್ರಿ ಡಾ. ಮೋಹನ್ ಯಾದವ್, ಬಿಜೆಪಿ ರಾಜ್ಯಾಧ್ಯಕ್ಷ ವಿ.ಡಿ.ಶರ್ಮಾ, ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ, ಸಚಿವ ಪ್ರಹ್ಲಾದ್ ಪಟೇಲ್, ಉಪಮುಖ್ಯಮಂತ್ರಿ ಜಗದೀಶ್ ದೇವ್ರಾ, ಸಚಿವ ರಾಕೇಶ್ ಸಿಂಗ್, ಜಲಸಂಪನ್ಮೂಲ ಸಚಿವೆ ತುಳಸಿ ಸಿಲಾವತ್, ಕೃಷಿ ಸಚಿವ ಇಂದಲ್ ಸಿಂಗ್ ಕಂಸಾನಾ, ಕೇಂದ್ರ ಕೇಂದ್ರ ಕೃಷಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವರು ಈ  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ ವಾಜಪೇಯಿ ಅವರು ತಮ್ಮ ನದಿಗಳ ಜೋಡಣೆಯ ಯೋಜನೆಯ ಕನಸನ್ನು ಜಾರಿಗೆ ತರಲು ಬಯಸಿದ್ದರು. ಆದರೆ, ಅಗ ಅದು ಸಾಧ್ಯವಾಗಿರಲಿಲ್ಲ. ಈಗ ಅವರ ಕನಸು ಸಾಕಾರಗೊಳ್ಳುತ್ತಿದೆ.

    ಇದನ್ನೂ ಓದಿ : ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ; ವಿಶೇಷ ಲೇಖನ ಬರೆದ ಪ್ರಧಾನಿ ನರೇಂದ್ರ ಮೋದಿ

    ಕೆನ್-ಬೆಟ್ಟಾ ನದಿಗಳ ಜೋಡಣೆ ಯೋಜನೆಯಿಂದ ವಾರ್ಷಿಕ 10.62 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಮಧ್ಯಪ್ರದೇಶದ ಮತ್ತು ಉತ್ತರಪ್ರದೇಶದ ಸುಮಾರು 62 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. 103 ಮೆಗಾವಾಟ್ ಜಲವಿದ್ಯುತ್ ಉತ್ಪಾದನೆಯಾಗುತ್ತದೆ. ಈ ಯೋಜನೆಗೆ ಸುಮಾರು 44,605 ಕೋಟಿ ವೆಚ್ಚವಾಗುತ್ತದೆ ಎಂದು ಹೇಳಲಾಗಿದೆ.

    ಈ ಯೋಜನೆಯು ನೀರಿನ ಅಭಾವದಿಂದ ಬಳಲುತ್ತಿರುವ ಬುಂದೇಲ್ ಖಂಡ್‌ನ ಪ್ರದೇಶಕ್ಕೆ ಅದರಲ್ಲೂ ಪನ್ನಾ, ಟಿಕಮ್‌ಗಡ, ಛತ್ತರ್‌ಪುರ್, ಸಾಗರ್, ದಮೋಹ್, ದಾಟಿಯಾ, ವಿದಿಶಾಮ, ಶಿವಪುರಿ ಮತ್ತು ಮಧ್ಯಪ್ರದೇಶದ ರೈಸನ್, ಉತ್ತರ, ಬಾಂಡಾ, ಮಹೋಬಾ, ಝೂನ್ಸಿ, ಮತ್ತು ಲಲಿತಪುರ ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ ಎನ್ನಲಾಗಿದೆ.

     

    Continue Reading

    LATEST NEWS

    SESIPL ಸಂಸ್ಥೆಗೆ ಗೂಗಲ್‌ನಿಂದ ಪಿನಾಕಲ್ ಪ್ರಶಸ್ತಿ

    Published

    on

    ಮಂಗಳೂರು/ಬೆಂಗಳೂರು : ಗೂಗಲ್‌ ತಂಡದಿಂದ APAC ಮೂಲಕ ಪ್ರತಿಷ್ಠಿತ ವೆಂಡರ್ ಟಾಕ್ಸ್ ಸರಣಿಗೆ SESIPL ಸಂಸ್ಥೆ ಆಯ್ಕೆಯಾಗಲು ಅವಕಾಶ ಪಡೆದುಕೊಂಡಿದೆ. ಈ ಮೂಲಕ ಏಷ್ಯಾ , ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನ್ನು ಒಳಗೊಂಡಿರುವ ಪ್ರದೇಶದಲ್ಲಿ ಸಂಸ್ಥೆಯ ಅತ್ಯಾಧುನಿಕ ತಂತ್ರಜ್ಞಾನದ ಪರಿಹಾರಗಳನ್ನು ಪ್ರದರ್ಶಿಸಲು ಅವಕಾಶ ಸಿಕ್ಕಿದೆ.

    ಕಳೆದ ವರ್ಷದ ತ್ರೈಮಾಸಿಕ ಸರಣಿಯ ಭಾಗವಾಗಿ SESIPLನ ಕೊಡುಗೆಗಳು ಮತ್ತು ಸಂಸ್ಥೆಯ ಶ್ರೇಷ್ಠ ನಿರ್ವಹಣೆಗಾಗಿ ಗುರುತಿಸಿಕೊಂಡಿದೆ. ಈ ಕೊಡುಗೆಗಾಗಿ ಗೂಗಲ್ ತಂಡದ APAC ನೀಡುವ ಪಿನಾಕಲ್ ಪ್ರಶಸ್ತಿಯನ್ನು SESIPL ಸಂಸ್ಥೆ ಪಡೆದುಕೊಂಡಿದೆ.

    APAC ನೀಡಿರುವ ಈ ಗೌರವ ಪ್ರಶಸ್ತಿಯ ಸಂಸ್ಥೆಯ ಸ್ಟೇಕ್‌ ಹೋಲ್ಡರ್‌ಗಳಿಗೆ ಹೊಸ ಹಾಗೂ ಸುಸ್ಥಿರ ತಾಂತ್ರಿಕ ಪರಿಹಾರ ಒದಗಿಸಲು SESIPL ಸಂಸ್ಥೆಗೆ ಇನ್ನಷ್ಟು ಅವಕಾಶ ಸಿಕ್ಕಂತಾಗಿದೆ ಎಂದು ಸಂಸ್ಥೆಯ ಸಿಎಂಡಿ ರಾಜೇಶ್ ಶೆಟ್ಟಿ ಅವರು ಸಂತಸ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ : ಕನ್ನಡಿಗ ಕೆ.ಎಲ್ ರಾಹುಲ್ ಗೆ ಬಿಗ್ ಶಾಕ್ !

    SESIPL ಸಂಸ್ಥೆಯು ಪ್ರಮುಖ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಗುತ್ತಿಗೆದಾರರು ಮತ್ತು ಎಲ್ಲಾ ವಿದ್ಯುತ್ ಕೆಲಸಗಳಲ್ಲಿ ವ್ಯಾಪಕ ಜ್ಞಾನವನ್ನು ಹೊಂದಿರುವ ಸಲಹೆಗಾರರಾಗಿದ್ದಾರೆ. ದೇಶದ ಸುಮಾರು 500 ಕ್ಕೂ ಹೆಚ್ಚಿನ ಕಂಪೆನಿಗಳಿಗೆ ಹಲವಾರು ಎಲೆಕ್ಟ್ರಿಕಲ್ ಇಪಿಸಿ ಯೋಜನೆಯನ್ನು ಈ ಸಂಸ್ಥೆ ಮಾಡಿಕೊಟ್ಟಿದೆ.

    Continue Reading

    LATEST NEWS

    Trending