LATEST NEWS
“ನಿಮಗೆ ತಾಕತ್ತು, ಧಮ್ ಇದ್ರೆ ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಮೀಸಲಾತಿ ತೆರವು ಮಾಡಿ”
Published
3 years agoon
By
Adminಮಂಗಳೂರು: ನಿಮಗೆ ತಾಕತ್ತಿದ್ರೆ, ಧಮ್ ಇದ್ರೆ, ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಮೀಸಲಾತಿ ತೆರವು ಮಾಡಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಕಿರಣ್ ಪುಣಚ ಸವಾಲೆಸೆದರು.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ ಇವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರ ತೆಗೆಸಿ ಅವಮಾನ ಮಾಡಿದ ಘಟನೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ದ.ಕ ಜಿಲ್ಲಾ ಶಾಖೆ ಮಂಗಳೂರು ಇದರ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ, 2013ರ ನಂತರ ಈ ದೇಶ ಒಂದು ಧಾರ್ಮಿಕ ಆಫೀನಲ್ಲಿ ಬೆಳೆದಿತ್ತು. ಅದಕ್ಕೂ ಮೊದಲು ಶಿಕ್ಷಣ ಇಲ್ಲದವರು ಮಾತಿನ ಮೋಡಿಗೆ ಒಳಗಾಗುತ್ತಿದ್ದರು.
ಆದರೆ 2013ರ ನಂತರ ಸುಶಿಕ್ಷಿತರು ಸಹ ಭಾವನಾತ್ಮಕ ಲೋಕದಲ್ಲಿ ತೇಲಾಡುತ್ತಿದ್ದಾರೆ. ನಮ್ಮ ದೇಶ ವಿಶ್ವ ಗುರುವಾಗುತ್ತದೆ, ನಾವು ಇಡೀ ಪ್ರಪಂಚಕ್ಕೆ ಮಾದರಿಯಾಗುತ್ತೇವೆ,
ನಮ್ಮ ದೇಶ ಅಭಿವೃದ್ಧಿ ಪಥದತ್ತ ಹೋಗುತ್ತದೆ. ಈ ಹುಚ್ಚ ಸೂಲಿಬೆಲೆ ಹುಡುಗ್ರನ್ನು ಹಾಳು ಮಾಡಿ, ತಲೆಕೆಡಿಸಿದ ಎಂದು ಹೇಳಿದರು.
ಅಂಬೇಡ್ಕರ್‌ನನ್ನು ದೇವರಂಥೆ ಪೂಜೆ ದಲಿತ ಸಮುದಾಯವರಿದ್ದಾರೆ. ಮಾಡುತ್ತಿದ್ದಾರೆ. ಬಂಟರು, ಬಿಲ್ಲವರು ಕ್ರಿಶ್ಚಿಯನ್, ಗೌಡರು, ಮುಸ್ಲಿಂಮರು ಅಂಬೇಡ್ಕರ್‌ನಿಂದ ನಾವು ಏನೂ ಪಡೆದುಕೊಂಡಿಲ್ಲವೇ ಎಂದು ಪ್ರಶ್ನಿಸಿದ ಅವರು ಅಂಬೇಡ್ಕರ್ ಕೊಡುಗೆ ದಲಿತರಿಗೆ ಮಾತ್ರವೇ?.
ನಿಮ್ಮಲ್ಲಿ ಸಂಪೂರ್ಣ ಅಧಿಕಾರ ಇದೆ. ನಿಮಗೆ ಧಮ್ ಇದ್ರೆ, ತಾಕತ್ತಿದ್ರೆ, ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಮೀಸಲಾತಿ ತೆರವು ಮಾಡಿ ಎಂದು ಸವಾಲೆಸೆದರು.
ಬೈಬಲ್, ಖುರಾನ್, ಭವದ್ಗೀತೆಯಂಥಹ ಧರ್ಮಗ್ರಂಥಕ್ಕಿಂತಲೂ ಪವಿತ್ರವಾದ ಸಂವಿಧಾನವನ್ನು ನೀಡಿದ ಪೀತಾಮಹನಿಗೆ ಅವಮಾನ ಮಾಡಿದವರಿಗೆ ತಕ್ಕ ಶಿಕ್ಷೆಯಾಗಲಿ ಎಂದರು.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಸಂವಿಧಾನವನ್ನು ರಚಿಸಿ,ಅದಕ್ಕೊಂದು ಹೊಸ ರೂಪ ಕೊಟ್ಟುವರು ಅಂಬೇಡ್ಕರ್.
ಈ ದೇಶಕ್ಕೆ ಅರ್ಪಿಸಿದರು. ಇವತ್ತು ವಿಧಾನಸೌಧದ, ಪಾರ್ಲಿಮೆಂಟ್‌ನ ಮೆಟ್ಟಿಲು ಹತ್ತಿದ್ದಾರೆಂದರೆ,
ನ್ಯಾಯಾಧೀಶರಾಗಿದ್ದಾರೆಂದರೆ ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಕಾರಣ ಎಂದರು. ಕಮ್ಯುನಿಷ್ಟ್ ನಾಯಕ ಸುನೀಲ್ ಕುಮಾರ್ ಬಜಾಲ್ ಹಾಗೂ ದಲಿತ ಮುಖಂಡರು ಹಾಜರಿದ್ದರು.
LATEST NEWS
ಸ್ಯಾಂಡಲ್‌ವುಡ್ ಸ್ಟಾರ್ ನಟನ ಜೊತೆ ನಟಿಸಲಿರುವ ಮೊನಾಲಿಸಾ
Published
50 seconds agoon
22/01/2025By
NEWS DESK3ಮಂಗಳೂರು : ಮೊದಲೆಲ್ಲಾ ಮೊನಾಲಿಸಾ ಅಂದ್ರೆ ಎಲ್ಲರಿಗೂ ನೆನಪಾಗುವುದು ಲಿಯೊನಾರ್ಡೊ ಡಾ ವಿಂಚಿ ಅವರ ಚಿತ್ರಕಲೆಯ ಹೆಣ್ಣಿನ ಚಿತ್ರ ಕಣ್ಮುಂದೆ ಬರುತ್ತಿತ್ತು. ಗೂಗಲ್‌ನಲ್ಲಿಯೂ ಇದೇ ಪೇಂಟಿಂಗ್ ಕಾಣಿಸುತ್ತಿತ್ತು. ಆದ್ರೆ, ಕಳೆದ ಕೆಲವು ದಿನಗಳಿಂದ ಎಲ್ಲವೂ ಬದಲಾಗಿ ಹೋಗಿದೆ.
ಗೂಗಲ್‌ನಲ್ಲಿ ಕುಂಭಮೇಳ ಎಂದು ಸರ್ಚ್ ಮಾಡಿದ್ರೆ ಮೊದಲಿಗೆ ಕಾಣೋದೇ ಈ ನೀಲಿ ಕಣ್ಗಳ ಚೆಲುವೆ. ಸೋಷಿಯಲ್ ಮೀಡಿಯಾಗಳಲ್ಲಂತೂ ಈಕೆಯದ್ದೇ ಹವಾ.
ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸಾವಿರಾರು ಸಾಧು-ಸಂತರ ನಡುವೆ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಯುವತಿ ತನ್ನ ಸೌಂದರ್ಯ ಮತ್ತು ಕಣ್ಣುಗಳಿಂದ ನೆಟ್ಟಿಗರ ಗಮನ ಸೆಳೆಯುತ್ತಿದ್ದಾಳೆ.
ಅಲ್ಲದೆ, ಈಕೆಗೆ ಇದೀಗ ಬಾಲಿವುಡ್‌ನಲ್ಲೂ ಆಫರ್ ಬರುತ್ತಿದೆ ಎನ್ನುವ ಸುದ್ದಿಗಳು ಪ್ರಸಾರವಾಗುತ್ತಿವೆ. ಇದರ ನಡುವೆ ಸ್ಯಾಂಡಲ್‌ವುಡ್‌ಗೂ ಮೊನಾಲಿಸಾ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ.
ಕುಂಭಮೇಳ ಸುಂದರಿಗೆ ಬಾಲಿವುಡ್‌ನಿಂದ ಆಫರ್
ಮಹಾಕುಂಭ ಮೇಳದಲ್ಲಿ ನೋಡುಗರ ಕಣ್ಮನ ಸೆಳೆದ ಮೊನಾಲಿಸಾಗೆ ಬಾಲಿವುಡ್‌ನಿಂದ ಆಫರ್‌ವೊಂದು ಬಂದಿದೆಯಂತೆ. ಬಾಲಿವುಡ್ ಸ್ಟಾರ್ ಡೈರೆಕ್ಟರ್ ಸಿನಿಮಾದಲ್ಲಿ ನಟಿಸಲು ಆಫರ್ ಬಂದಿದೆ.
ಮೊನಾಲಿಸಾ ಮುಂದಿನ ದಿನಗಳಲ್ಲಿ ಬಾಲಿವುಡ್ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರಂತೆ. ಡೈರೆಕ್ಟರ್ ಸನೋಜ್ ಮಿಶ್ರಾರಿಂದ ಮೊನಾಲಿಸಾ ಆಫರ್ ಹೋಗಿದೆಯಂತೆ.
ಇದನ್ನೂ ಓದಿ: ಹೊಸ ಲುಕ್‌ನಲ್ಲಿ ಮಹಾಕುಂಭಮೇಳದ ಸುಂದರಿ ‘ಮೊನಾಲಿಸಾ’
ಇನ್ನೂ, ಸನೋಜ್ ಮಿಶ್ರಾರ ಬಹು ನಿರೀಕ್ಷಿತ ಚಿತ್ರ ‘ಡೈರಿ ಆಫ್ ಮಣಿಪುರ’. ಈ ಸಿನಿಮಾಗಾಗಿ ಮುಗ್ದೆಯ ಪಾತ್ರಕ್ಕಾಗಿ ನಟಿಯನ್ನ ಹುಡುಕುತ್ತಿದ್ದಾರಂತೆ. ಇಂದೋರ್‌ಗೆ ತೆರಳಿ ಮೊನಾಲಿಸಾ ಜೊತೆ ಚರ್ಚಿಸಲಿದ್ದಾರಂತೆ. ಆಕೆಗೆ ಆ್ಯಕ್ಟಿಂಗ್ ಕ್ಲಾಸ್ ಕೊಡಿಸಿ, ಚಿತ್ರದಲ್ಲಿ ಚಾನ್ಸ್ ನೀಡುವ ಸಾಧ್ಯತೆ ಇದೆಯಂತೆ. ಶೀಘ್ರದಲ್ಲೇ ಡೈರೆಕ್ಟರ್ ಮೊನಾಲಿಸಾ ಅವರನ್ನು ಭೇಟಿಯಾಗಲಿದ್ದಾರಂತೆ. ಇನ್ನು ಮೊನಾಲಿಸಾಗೆ ಕನ್ನಡ ಸಿನಿಮಾದಲ್ಲೂ ಅವಕಾಶ ಸಿಕ್ಕಿದೆ ಎನ್ನಲಾಗಿದೆ.
ಸ್ಯಾಂಡಲ್‌ವುಡ್‌ಗೂ ಮೊನಾಲಿಸಾ ಎಂಟ್ರಿ
ಮೊನಾಲಿಸಾಗೆ ಕನ್ನಡ ಸಿನಿಮಾದಲ್ಲೂ ಆಫರ್‌ಗಳು ಬರುತ್ತಿವೆ ಎಂದು ಹೇಳಲಾಗಿದೆ. ಡಾ. ಶಿವರಾಜ್‌ಕುಮಾರ್ ಅವರ ಮುಂಬರುವ ಸಿನಿಮಾದಲ್ಲಿ ನೈಜ ಸುಂದರಿ, ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಬುಚ್ಚಿ ಬಾಬು ಸನಾ ನಿರ್ದೇಶನದ ‘ಆರ್‌ಸಿ 16’ ಎಂಬ ತೆಲುಗು ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್ ಹಾಗೂ ರಾಮ್ ಚರಣ್ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ನಾಯಕಿಯಾಗಿ ಜಾನ್ವಿ ಕಪೂರ್ ಫಿಕ್ಸ್ ಆಗಿದ್ದಾರೆ. ಇದೀಗ ಮಧ್ಯಪ್ರದೇಶದ ಇಂದೋರ್‌ನ ಮೊನಾಲಿಸಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಿನಿಮಾದ ಎರಡನೇ ಶೆಡ್ಯೂಲ್ ಜನವರಿ 27ರಿಂದ ಪ್ರಾರಂಭವಾಗಲಿದ್ದು, ದಸರಾಗೆ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಇದೇ ಚಿತ್ರದಲ್ಲಿ ಮೊನಾಲಿಸಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಮೊನ್ನೆ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಲು ಬಂದಿದ್ದ ಮೊನಾಲಿಸಾ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಇದೇ ಅಲ್ವಾ ಲಕ್ ಅಂದ್ರೆ. ಯಾರ್ಯಾರ ಜೀವನ ಯಾವಾಗ ಚೇಂಜ್ ಆಗುತ್ತೆ ಅಂತ ಯಾರಿಗೂ ಹೇಳೋದಕ್ಕೆ ಆಗೋದಿಲ್ಲ.
ಮಂಗಳೂರು : ಶ್ವೇತಾ ಜ್ಯುವೆಲರ್ಸ್‌ನ ಮಾಲಿಕರಾಗಿರುವ ಎಂ. ಅಶೋಕ್ ಶೇಟ್ ಇಂದು ಬೆಳಿಗ್ಗೆ (ಜ,22) ಸುಮಾರು 10 ಗಂಟೆಗೆ ಸ್ವ ಗೃಹದಲ್ಲಿ ನಿ*ಧನರಾಗಿದ್ದಾರೆ.
ಪಡೀಲ್ ಕಂಕನಾಡಿ ಲಯನ್ಸ್ ಕ್ಲಬ್‌ನ ಕ್ರಿಯಾಶೀಲ ವ್ಯಕ್ತಿ, ಸದಾ ಮುಖದಲ್ಲಿ ಮುಗುಳ್ನಗು ಹೊಂದಿದ್ದ ಮಂಗಳೂರಿನ ವಿ.ಟಿ. ರೋಡ್ ನಿವಾಸಿ 64 ವರ್ಷದ ಅಶೋಕ್ ಶೇಟ್ ಹೃ*ದಯಾಘಾತದಿಂದ ಮೃತಪಟ್ಟಿದ್ದಾರೆ.
ಇದನ್ನೂ ಓದಿ : ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬಿಗ್ ಬಾಸ್ ಸ್ಪರ್ಧಿ ಕೀರ್ತಿ ಮತ್ತು ಜೈತ್ರಾ ಕುಂದಾಪುರ: ಆಶೀಶ್ ಮೈಕಾಲ
ಪ್ರಸ್ತುತ ಮಂಗಳೂರು ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಹಾಲಿ ಅಧ್ಯಕ್ಷರಾಗಿದ್ದ ಅಶೋಕ್ ಶೇಟ್ ಈ ಹಿಂದೆ ಅನೇಕ ಸಂಘ- ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ದೈವಜ್ಞ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿಯ ಮುಖ್ಯ ಪ್ರವರ್ತಕರಾಗಿದ್ದ ಅವರು ದೈವಜ್ಞ ಸೌರಭ ಪತ್ರಿಕೆಯ ಸಂಸ್ಥಾಪಕ ಪ್ರಕಾಶಕರಾಗಿ ಸಮಾಜಕ್ಕಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯ.
ಮೃ*ತರು ಪತ್ನಿ ಸಂಧ್ಯಾ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ
BIG BOSS
ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬಿಗ್ ಬಾಸ್ ಸ್ಪರ್ಧಿ ಕೀರ್ತಿ ಮತ್ತು ಜೈತ್ರಾ ಕುಂದಾಪುರ: ಆಶೀಶ್ ಮೈಕಾಲ
Published
3 hours agoon
22/01/2025ಬಿಗ್ ಬಾಸ್ ಕಾರ್ಯಕ್ರಮ, ಸ್ಪರ್ಧಿಗಳ ವಯಕ್ತಿಕ ಮಾಹಿತಿ ಕುರಿತು ಸಾಕಷ್ಟು ಪೋಸ್ಟ್‌ಗಳು ವೈರಲ್, ಟ್ರೋಲ್ ಆಗುತ್ತವೆ. ಅಂತೆಯೇ ಇದೀಗ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ, ಹಿಂದೂಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹಾಗೂ ಮತ್ತೊಬ್ಬ ಬಿಗ್‌ಬಾಸ್ ಮಾಜಿ ಸ್ಪರ್ಧಿ ಕಿರಿಕ್ ಕೀರ್ತಿ ಮದುವೆಯಾಗುತ್ತಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದ, ಹಿಂದುತ್ವದ ಫೈಯರ್ ಬ್ರಾಂಡ್, ಮಾತಿನ ಮಲ್ಲಿ ಚೈತ್ರ ಕುಂದಾಪುರ ನಾಡಿನ ಜನಕ್ಕೆ ಚಿರಪರಿಚಿತರು. ಈ ಬೆನ್ನಲ್ಲೇ ಚೈತ್ರ ಕುಂದಾಪುರ ಮತ್ತು ಕಿರಿಕ್ ಕೀರ್ತಿಯವರು ಮದುವೆಯಾಗುತ್ತಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಆಶೀಶ್ ಮೈಕಾಲ ಎಂಬ ಫೇಸ್‌ಬುಕ್ ಬಳಕೆದಾರು ಚೈತ್ರಾ ಕುಂದಾಪುರ ಹಾಗೂ ಕಿರಿಕ್ ಕೀರ್ತಿ ಜತೆಗೆ ನಿಂತಿರುವ ಫೋಟೋ ಹಾಕಿ “BREAKING NEWS ಅತೀ ಶೀಘ್ರದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬಿಗ್ ಬಾಸ್ ಸ್ಪರ್ಧಿಗಳು: ಕೀರ್ತಿ ಮತ್ತು ಜೈತ್ರಾ ಕುಂದಾಪುರ” ಎಂದು ಬರೆದುಕೊಂಡಿದ್ದಾರೆ. ಆದರೆ ಇದು ಸುಳ್ಳು ಸುದ್ದಿ ಎಂಬುದು ಇದೀಗ ಸಾಬೀತಾಗಿದೆ.
ನಿಜವಾಗಿಯೂ ನಡೆದ ಘಟನೆಯಾದರೂ ಏನು ?
ಈ ವೈರಲ್ ಪೋಸ್ಟ್ ಬಗ್ಗೆ ಸಜಗ್ ತಂಡವು ತನಿಖೆ ನಡೆಸಿದ್ದು ವೈರಲ್ ಆದ ಚೈತ್ರಾ ಕುಂದಾಪುರ ಹಾಗೂ ಕಿರಿಕ್ ಕೀರ್ತಿ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿದಾಗ ಇತ್ತೀಚೆಗೆ ಕಿರಿಕ್ ಕೀರ್ತಿಯವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಫೋಟೋ ಲಭ್ಯವಾಗಿದೆ. ಆ ಬಳಿಕ ಕಿರಿಕ್ ಕೀರ್ತಿ ಅವರ ಫೇಸ್‌ಬುಕ್ ಖಾತೆಯನ್ನು ಪರಿಶೀಲನೆ ನಡೆಸಿದಾಗ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್‌ನಿಂದ ಹೊರಬಂದ ಬಳಿಕ ಸಂದರ್ಶನ ನಡೆಸಿರುವುದಾಗಿ ಕಿರಿಕ್ ಕೀರ್ತಿ ಬರೆದುಕೊಂಡಿದ್ದಾರೆ. ಆದರೆ ಇಲ್ಲಿ ಯಾವುದೇ ಮದುವೆಯ ಪ್ರಸ್ತಾಪ ಸುದ್ದಿಯೇ ಇಲ್ಲ.
ಇನ್ನು ಈ ಬಗ್ಗೆ ಸಜಗ್ ತಂಡವು ನೇರವಾಗಿ ಚೈತ್ರಾ ಕುಂದಾಪುರ ಅವರನ್ನು ಸಂಪರ್ಕಿಸಿದಾಗ ಇದೊಂದು ಸುಳ್ಳು ಮಾಹಿತಿ ಎಂದು ತಿಳಿದುಬಂದಿದೆ. ಸ್ವತಃ ಚೈತ್ರಾ ಕುಂದಾಪುರ ಅವರೇ ಮಾತನಾಡಿದ್ದು, “ನನ್ನ ಮದುವೆಯ ಬಗ್ಗೆ ಈ ತರ ಸಾಕಷ್ಟು ಸುಳ್ಳು ಫೋಸ್ಟ್‌ಗಳು ಹರಿದಾಡುತ್ತಿವೆ. ಈ ಹಿಂದೆ ಶೈನ್‌ಶೆಟ್ಟಿ ಅವರನ್ನು ಮದುವೆಯಾಗುತ್ತಿದ್ದೇನೆ ಎಂದು ಸುಳ್ಳು ಮಾಹಿತಿ ವೈರಲ್ ಆಗಿತ್ತು. ಈಗ ಕಿರಿಕ್ ಕೀರ್ತಿ ಅವರ ಜತೆ ಮದುವೆ ಎಂದು ಸುಳ್ಳು ಮಾಹಿತಿ ಹರಿದಾಡುತ್ತಿದೆ. ಕೀರ್ತಿ ಅವರು ನನಗೆ ಸಹೋದರನ ಸಮಾನ” ಎಂದು ಹೇಳಿದ್ದಾರೆ.
LATEST NEWS
ಡಾಲಿ ಚಾಯ್ ವಾಲಾ ಮಂಗಳೂರಿನವನಲ್ಲ, ಇಲ್ಲದಿದ್ದರೆ ಅವನ ಅಂಗಡಿ ಮೇಲೆ ಬುಲ್ಢೋಝರ್ ಹೋಗ್ತಿತ್ತು-ರಾಜ್ ಬಿ ಶೆಟ್ಟಿ
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಇನ್ಮುಂದೆ ಹಾಯಾಗಿ ಕಳೆಬಹುದು ನಿವೃತ್ತಿ ಜೀವನ
ಟರ್ಕಿಯ ಸ್ಕಿ ರೆಸಾರ್ಟ್ನಲ್ಲಿ ಅಗ್ನಿ ಅವಘಡ; ಮೃತರ ಸಂಖ್ಯೆ 76ಕ್ಕೆ ಏರಿಕೆ
ಪ್ರವೀಣ್ ನೆಟ್ಟಾರು ಕೊ*ಲೆ ಪ್ರಕರಣ: 21ನೇ ಆರೋಪಿಯನ್ನು ಬಂಧಿಸಿದ ಎನ್ಐಎ ಅಧಿಕಾರಿಗಳ ತಂಡ
ಉಡುಪಿ : ಲಾಡ್ಜ್ನಲ್ಲಿ ವೇ*ಶ್ಯವಾಟಿಕೆ ನಡೆಸುತ್ತಿದ್ದ ಓರ್ವ ಅರೆಸ್ಟ್
ವೈದ್ಯಕೀಯ ಸೀಟು ಕೊಡಿಸುವುದಾಗಿ ಹೇಳಿ ವಂಚನೆ; ಮೂವರು ಆರೋಪಿಗಳ ಬಂಧನ
Trending
- BIG BOSS2 days ago
ಬಿಗ್ ಬಾಸ್ ತೊರೆಯುವ ಬಗ್ಗೆ ಮತ್ತೊಮ್ಮೆ ಘೋಷಣೆ ಮಾಡಿದ ಕಿಚ್ಚ
- FILM2 days ago
ಕಾಂತಾರ ಚಿತ್ರತಂಡಕ್ಕೆ ಎಚ್ಚರಿಕೆ ಕೊಟ್ಟ ಗ್ರಾಮಸ್ಥರು
- DAKSHINA KANNADA21 hours ago
ತಪ್ಪಿಸಿಕೊಳ್ಳಲು ಯತ್ನಿಸಿದ ಬ್ಯಾಂಕ್ ದರೋಡೆ ಆರೋಪಿ ಕಾಲಿಗೆ ಗುಂಡು..!
- DAKSHINA KANNADA6 days ago
ತುಳು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ‘ಗೋಲ್ಡನ್ ಮೂವೀಸ್’; ಕುದ್ರೋಳಿ ಕ್ಷೇತ್ರದಲ್ಲಿ ‘ಪ್ರೊಡಕ್ಷನ್ ನಂ 1’ಗೆ ಅದ್ದೂರಿ ಚಾಲನೆ